ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀಮತಿ ಶಿವಗಂಗಮ್ಮ ಗಂಡ ದಿ|| ಬಸವರಡ್ಡಿ ಸೂಗುರ ವಯ|| 55 ವರ್ಷ ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು ಮನೆ ಕೆಲಸ ಮಾಡಿಕೊಂಡು ಮಕ್ಕಳು ಹಾಗು
ಮೊಮ್ಮಕ್ಕಳೊಂದಿಗೆ ವಾಸವಾಗಿದ್ದು ಸುಲೋಚನಾ ಗಂಡ ಮಲಕರಡ್ಡಿ ಇವಳು ನಮ್ಮ ಸಂಭಂದಿಕಳಾಗಿದ್ದು ಇವಳು
ಸಹ ನಾವು ವಾಸವಾಗಿರುವ ಬಿಲ್ಡಿಂಗದಲ್ಲಿ ತನ್ನ ಗಂಡ ಹಾಗು ಮಕ್ಕಳೊಂದಿಗೆ ವಾಸವಾಗಿರುತ್ತಾಳೆ.
ನಾವೆಲ್ಲರೂ ಒಂದೆ ಬಿಲ್ಡಿಂಗದಲ್ಲಿ ವಾಸವಾಗಿರುವದರಿಂದ ಬಟ್ಟೆ ಒಗೆಯುವದು. ಬಾಂಡೆ ತೋಳೆಯುವದು.
ಮಾಡುತ್ತಾ ಬಂದಿರುತ್ತೇವೆ. ದಿನಾಂಕ:16/10/2012 ರಂದು
ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕುಳುತಿರುವಾಗ ಸುಲೋಚನಾ ಇವಳು ನನ್ನ
ಹತ್ತಿರ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ನಮ್ಮ ಮನೆಯಲ್ಲಿಯ ಕೆಲವು ಬಾಂಡೆ ಸಾಮಾನುಗಳು
ಕಾಣುತ್ತಿಲ್ಲಾ, ಅವುಗಳನ್ನು ನೀನೆ ಕಳುವು ಮಾಡಿಕೊಂಡು ಹೋಗಿರುತ್ತಿ ಮರ್ಯಾದೆಯಿಂದ ಆ
ಸಾಮಾನುಗಳನ್ನು ತಂದು ಕೊಡು ಅಂತಾ ಬೈಯುತ್ತಿದ್ದಳು ಆಗ ನಾನು ನಾನೇಕೆ ನಿಮ್ಮ ಸಾಮಾನುಗಳು ಕಳುವು ಮಾಡಲಿ
ನಮ್ಮ ಹತ್ತಿರ ಸಾಮಾನು ಇಲ್ಲವೇನು ಅಂತಾ ಅಂದಿದಕ್ಕೆ,ಕೈಯಿಂದ ಅಲ್ಲದೆ ಬಡಿಗೆಯಿಂದ ಹೊಡೆದಿರುತ್ತಾಲೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2012 ಕಲಂ:323, 324, 504, ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅರವಿಂದ ತಂದೆ ಬಸವರಾಜ ಜಮಾದಾರ ವ:21 ವರ್ಷ ಉ:ವಿಧ್ಯಾರ್ಥಿ ಸಾ|| ಗಂಗಾ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಪರಿಚಯದವನಾದ ಮಹಾಂತೇಶ ತಂದೆ ಶರಣಪ್ಪ ಸಜ್ಜನ ಸಾ: ತಡಕಲ್ ಇತನ ಬಜಾಜ ಡಿಸ್ಕವರಿ ಮೋಟಾರ
ಸೈಕಲ ಕೆಎ-32 ಡಬ್ಲು-3703 ನೇದ್ದರ ಮೇಲೆ ದಿನಾಂಕ:-16/10/2012 ರಂದು ಗುಲ್ಬರ್ಗಾಕ್ಕೆ
ಬರುವಾಗ ಪಟ್ಟಣ್ಣ ಕ್ರಾಸ ಹತ್ತಿರ ಮಹಾಂತೇಶ ಇತನು ಕೆರೆಬೋಸ್ಗಾ ಕ್ರಾಸದಲ್ಲಿ ಮೋಟಾರ ಸೈಕಲ ವೇಗದ
ಆಯ ತಪ್ಪಿ ರೂಡಿನ ಬದಿಗೆ ಇರುವ ಗೂಟದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ನನಗೆ ಮತ್ತು ಮಹಾಂತೇಶ
ಇತನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 335/2012
ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾನಭಂಗ ಮತ್ತು ಹಲ್ಲೆ ಪ್ರಕರಣ::
ಆಳಂದ ಪೊಲೀಸ್ ಠಾಣೆ : ಶ್ರೀ ಮಿಥುನ ತಂದೆ ಶಂಕರ ರಾಠೋಡ ಸಾ|| ನಾಯಕ ನಗರ ಆಳಂದ ರವರು ನನ್ನ ಹೆಂಡತಿಯಾದ ರಾಣಿ
ಇವಳಿಗೆ ಮೈಯಲ್ಲಿ ಆರಾಮವಿಲ್ಲದ ಕಾರಣ ದಿನಾಂಕ 16/10/2012 ರಂದು ಸಾಯಾಂಕಾಲ ನನ್ನ ಹೆಂಡತಿ ಜೊತೆಯಲ್ಲಿ
ನನ್ನ ತಂಗಿ ಶಿಲ್ಪಾ ಕೂಡಿ ಬಾಬ್ರೆಸ್ ಕ್ಲಿನಿಕ್ ಆಳಂದ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಮರಳಿ
ನಾವು 3 ಜನರು ನಮ್ಮ ಮೋಟರ ಸೈಕಲ ಮೇಲೆ ಬಸ್ ನಿಲ್ದಾಣ ಕಡೆಗೆ ಬರುವಾಗ ಬಾಳೇನ ಗಲ್ಲಿ ಕ್ರಾಸದ
ಅಣ್ಣಪ್ಪ ನಂದಗಾಂವ ಇವರ ಪಾನ್ ಡಬ್ಬದ ಹತ್ತಿರ ರೋಡಿನ ಮೇಲೆ ಬಂದಾಗ ಸಾಯಾಂಕಾಲ 5.30 ಗಂಟೆಗೆ
ಸುಮಾರಿಗೆ ನಮ್ಮ ಹಿಂದಿನಿಂದ ಮೋಟರ ಸೈಕಲ ಮೇಲೆ ಇಬ್ಬರು ಬಂದು ಅವರಲ್ಲಿ ಒಬ್ಬನು ಸಬ್ದಾರ ತಂದೆ
ಶಕೀಬ ಕಾರಬಾರಿ ಇನ್ನೊಬ್ಬ ಅಹ್ಮೀದ್ ತಂದೆ ಮಹಿಬೂಬ ಅನ್ಸಾರಿ ಇಬ್ಬರು ಅನ್ಸಾರಿ ಮೋಹಲಾ
ಆಳಂದದವರಿದ್ದು ನಮ್ಮ ಮೋಟರ ಸೈಕಲಿಗೆ ಅಡ್ಡಗಟ್ಟಿ ನನ್ನ ಮೈಮೇಲೆ ಅಹ್ಮದ ಉಗುಳಿದ್ದರಿಂದ ನಾನು ಯಾಕೆ ? ಉಗಳಿದ್ದಿ ಅಂತಾ ಕೇಳಿದಕ್ಕೆ
ಅವರು ಜಾತಿ ಎತ್ತಿ ಬೈದು ನನ್ನ
ಹೆಂಡತಿ ಕೈ ಹಿಡಿದು ಜಗ್ಗಾಡಿ ಸಾರ್ವನಿಕ ರಸ್ತೆಯಲ್ಲಿ ನನ್ನ ಹೆಂಡತಿಗೆ ಮಾನಭಂಗ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ ನಂ: 202/2012 ಕಲಂ 341, 323, 354, 355, 504, 506 ಸಂಗಡ 34 ಐಪಿಸಿ ಮತ್ತು 3
(1) (10) ಪಿಎ ಎಸಸಿ ಎಸಟಿ ಪಿಎ ಆಕ್ಟ 1989
ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment