POLICE BHAVAN KALABURAGI

POLICE BHAVAN KALABURAGI

12 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ದಿನೇಶ ತಂದೆ ಚಂದ್ರಕಾಂತ ಜಾಡ ಮುಖಿ  ಸಾ|| ನೇತಾಜಿ ನಗರ ಗುಲಬರ್ಗಾ ರವರು  ನಾನು ದಿನಾಂಕ 08-10-2012 ರಂದು ಸಾಯಂಕಾಲ 6-30  ಗಂಟೆ ಸುಮಾರಿಗೆ ನನ್ನ ಗೆಳೆಯ ಸುಧೀಂದ್ರ ಆಟೋದಲ್ಲಿ ಕುಳಿತುಕೊಂಡು ಮೂರು ಜನ ಪ್ಯಾಂಸೀಜರ  ಜನರನ್ನು ಕಪನೂರಕ್ಕೆ ಬಿಡಲು ಹೋಗಿದ್ದು, ಪ್ಯಾಂಸೀಜರ  ಕಪನೂರ ಪಾಟೀಲ್ ಆಸ್ಪತ್ರೆ ಎದುರು ಇಳಿದಿದ್ದು, ನಾನು ಸಹ ಇಳಿದಾಗ ಸುಧೀರ ಈತನು ಸ್ವಲ್ಪ ಮುಂದೆ ಆಟೋ ತಿರುಗಿಸಿಕೊಂಡು ಬರುತ್ತೇನೆ ಅಂತಾ ಹೇಳಿದನು ನಾನು  ಅಟೋ ನಿಲ್ಲಿಸಿದ ಕಡೆ  ರೋಡ ಕ್ರಾಸ ಮಾಡುತ್ತಿದ್ದಾಗ ಕ್ರೂಜರ್ ಜೀಪ ನಂ: ಎಪಿ 23 ಡಬ್ಲೂ 0751 ನೇದ್ದರ ಚಾಲಕ   ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಹಾರ್ನ ವಗೈರೇ ಹಾಕದೇ ನಡೆಸುತ್ತಾ  ಬಂದವನೇ ರೋಡ ಕ್ರಾಸ ಮಾಡುತ್ತಿದ್ದ ನನಗೆ ಡಿಕ್ಕಿ ಹೊಡೆದಿರುತ್ತಾನೆ ಟಿಕ್ಕಿ ಪಡಿಸಿದ ಪರಿಣಾಮ ನನಗೆ ಬಾಯಿಗೆ,  ತುಟಿಗೆ ರಕ್ತಗಾಯವಾಗಿ ಬಾಯಿ ಮೇಲಿನ ನಾಲ್ಕು  ಹಲ್ಲುಗಳಿಗೆ ಭಾರಿ ರಕ್ತಗಾಯವಾಗಿ ಎದುರಿನ ಎರಡು ಹಲ್ಲುಗಳು ಬಿದ್ದಿರುತ್ತೇವೆ.ರಡು ಹಲ್ಲುಗಳು ಅಲಗಾಡುತ್ತಿವೆ. ಎಡ ಎದೆಗೆ,  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 324/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಮಾಡಲು ಪ್ರಯತ್ನ :
ಗ್ರಾಮೀಣ ಪೊಲೀಸ ಠಾಣೆ: ಶಂಕರ ತಂದೆ ಬಾಬುರಾವ ಜಮದಾರ ಸಾ; ತಾಜಸುಲ್ತಾನಪೂರ ತಾ;ಜಿ;ಗುಲಬರ್ಗಾ ಹಾವ. ರಾಜೀವ ಗಾಂಧಿನಗರ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ಮಲ್ಲಿಕಾರ್ಜುನ @ ಕೋಳಿ ಮಲ್ಲು, ನಾಗರಾಜು ಬೆಂಗಳೂರೆ ಮತ್ತು ಪಟ್ರೀ ಶಿವ್ಯಾನ ಮರ್ಡರ ಕೇಸಿನಲ್ಲಿ  ನಾವು ಆರೋಪಿತರಾಗಿದ್ದು , ನಾನು ಜೇಲಿನಿಂದ ಹೊರಗಡೆ ಬಂದ ನಂತರ ಕೆಲಸ ಮಾಡಿಕೊಂಡಿದ್ದು , ಅಲ್ಲದೆ ಕೆಲವು ಗೆಳೆಯರೊಂದಿಗೆ ಚನ್ನಾಗಿ ಓಡಾಡಿಕೊಂಡು ಇರುವದನ್ನು ನೋಡಿ ಸಹಿಸಕ್ಕೆ ಆಗದೆ ಸದರಿ ಮಲ್ಲಿಕಾರ್ಜುನ @ ಕೋಳಿ ಮಲ್ಲು ಆಗಾಗ ನನಗೆ ಸರಾಯಿ ಕುಡಿಯಲು ಬರುವದಕ್ಕೆ  ಹೇಳುತ್ತಿದ್ದ ನಾನು ಹೋಗುತ್ತಿರಲಿಲ್ಲಾ. ಹೀಗಾಗಿ ಕೆಲವು ತಿಂಗಳಿಂದ ಅವರು ನನ್ನ  ಮೇಲೆ ದ್ವೇಷ ಸಾದಿಸುತ್ತಿದ್ದರು , ಅದೇ ವೈಮನಸ್ಸಿನಿಂದ ದಿನಾಂಕ11-10-2012 ರಂದು ಸಾಯಂಕಾಲ ಕೆಲಸ ಮುಗಿಸಿಕೊಂಡು ಮನೆಗೆ ಬಂದು ರಾತ್ರಿ 8-30 ಗಂಟೆಯ ಸುಮಾರಿಗೆ ರಾಮನಗರ ರಿಂಗರೋಡ ಹತ್ತಿರ ಸಮರ್ಥ ವೈನಶಾಪಗೆ ಸರಾಯಿ ಕುಡಿಯಲು ಹೋಗಿದ್ದು ಹೊಂಚು ಹಾಕಿ ಮಲ್ಲಿಕಾರ್ಜುನ @ ಕೋಳಿ ಮಲ್ಲು ಇತನ ಸಂಗಡ ಇದ್ದ ಗೌತಮ್ಮ ಪುಟಗಿ ,ಚನ್ನಪ್ಪ ಡ್ರೈವರ , ಶಿವು @ ಶಿವು ಪೊಲೀಸ್ ಹಾಗೂ ನಾಗರಾಜ ಬೆಂಗಳೂರ ಇವರು  ಮತ್ತು ಇವರ ಸಂಗಡ ಇನ್ನೂ 3-4 ಜನರು ಕೂಡಿಕೊಂಡು  ನನಗೆ  ಮಚ್ಚದಿಂದ ಹೊಡೆದು ಕೋಲೆ ಮಾಡಲು ಪ್ರಯತ್ನಿಸಿರುತ್ತಾರೆ. ನನಗೆ ಯಾವುದೇ ರೀತಿಯ ಗಾಯ ವಗೈರೆ ಆಗಿರುವದಿಲ್ಲಾ ಆಸ್ಪತ್ರೆಗೆ ಹೋಗುವದಿಲ್ಲಾ , ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 326/2012 ಕಲಂ. 143, 147, 148, 504,307 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: