ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮಡಿವಾಳಪ್ಪ ತಂದೆ ಬಸಪ್ಪ ಲಕ್ಕಣಗಾಂವ ಸಾ:ಸಿದ್ರಾಮೇಶ್ವರ
ನಗರ ಬಿಜಾಪೂರ ರವರು ನಾನು ಮತ್ತು ನನ್ನ ಮಗ ಅರವಿಂದ ಸೊಸೆಯಾದ ಕಾಂಚನಾ ಮೊಮ್ಮಕ್ಕಳಾದ ಅನುಪ,
ಅಂಕಿತ ಐದು ಜನರು ಕೂಡಿಕೊಂಡು ನಮ್ಮ ಹೊಸ ಕಾರ ಟಿಆರ್ ನಂ, ಕೆಎ-29-ಟಿಸಿಆರ್-06 ನೇದ್ದರಲ್ಲಿ ಬಿಜಾಫೂರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದಾಗ
ಬೆಳಿಗ್ಗೆ 8-30 ಗಂಟೆಯ ಸಮಾರಿಗೆ ಜೇವರ್ಗಿ ಸಮೀಪದ ಲಕ್ಷ್ಮೀ ಗುಡಿ ಹತ್ತಿರ ನನ್ನ ಮಗ ಅರವಿಂದನು
ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಮುಂದೆ ಹೋಗುತ್ತಿದ್ದ ಲಾರಿಗೆ ಓವರ ಟೆಕ್
ಮಾಡಲು ಹೋಗಿ ಒಮ್ಮೇಲೆ ಕಟ್ ಹೊಡೆದುದಕ್ಕೆ ಕಾರ ಪಲ್ಟಿಯಾಗಿ ಅರವಿಂದ ಭಾರಿ ಗಾಯಗೊಂಡು
ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ಸೊಸೆ ಹಾಗು ಮೊಮ್ಮಕ್ಕಳಿಗೆ ಸಣ್ಣ ಪುಟ್ಟ
ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 159/2012 ಕಲಂ
279,337,304(ಎ) ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment