ಕೊಲೆಗೆ
ಯತ್ನ ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ:ಶ್ರೀಮತಿ ಮಮ್ತಾಜ ಬೇಗಂ ಗಂಡ ಮೆಹತಾಬಖಾನ ಸಾ||ಮಾಹಾಗಾಂವ ಕ್ರಾಸ ತಾ||ಜಿ||ಗುಲಬರ್ಗಾ ಹಾ|| ವ||ಟಿಪ್ಪು ಸುಲ್ತಾನ ಕಾಲೇಜ ಹಿಂದುಗಡೆ
ಮಿಲ್ಲತ್ ನಗರ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:22-09-2012
ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ
ಶಬ್ಬಿರನ್ನು ನಮ್ಮ ಮನೆಗೆ ಬಂದು “ ಆಜ ಬಾಹಾರ ಜಾಯೆಂಗೆ ಮೇರಿ ಸಾತ ಆನಾ ಅಂತಾ ಹೇಳಿದನು ಆಗ ನಾನು ನನ್ನ ಗಂಡ, ಮಕ್ಕಳು ಇರುತ್ತಾರೆ. ನಿನ್ನೊಂದಿಗೆ ಬರುವದಿಲ್ಲಾ ವಿನಾಕಾರಣ
ಮನೆಗೆ ಬಂದು ನನಗೆ ಸತಾಯಿಸಬೇಡಾ ಅಂತಾ ಹೇಳಿದಾಗ “ಸಾಲಿ ರಾಂಡ ಅಬ್ ನಾಟಕ ಕರರಹಿ ಹಯೇ ಕ್ಯಾ , ತೋಡೀ ದೇರಕೆ ಬಾದ ಆತೂ ಮೇರೆ ಸಾತ ಆನಾ ನಹಿತೋ ತೆರಕೋ ಚಾಕುಸೆ ಮಾರಕ್ಕೆ ಜಿಂದ ನಹಿ ಜೋಡುಂಗಾ ಅಂತಾ ಬೆದರಿಸಿ ಹೋದನು.
ರಾತ್ರಿ 11-30 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ
ನಾನು ನನ್ನ ಗಂಡ ಮೆಹತಾಬಖಾನ , ಮಗಳು ಫರಹಾ ಮತ್ತು ಇನ್ನೊಬಳು ಸಣ್ಣ ಮಗಳೊಂದಿಗೆ ಮನೆಯಲ್ಲಿ ಕುಳಿತಿರುವಾಗ ಶಬ್ಬಿರನ್ನು
ಮನೆಯೊಳಗೆ ಬಂದು “ ಚಲ್ಲಗೆ ರಾಂಡ ಆಜ ಮೇರೆ ಸಾತ ಚಲೋ “ ಅಂತಾ
ಹೇಳಿದನು ಆಗ ನಾನು ಮನೆಯಲ್ಲಿ ನನ್ನ ಗಂಡ ಮಕ್ಕಳು
ಇರುತ್ತಾರೆ. ಬರುವದಿಲ್ಲಾ ಅಂತಾ ಅಂದೇನು ಆಗ ಸದರಿ ಶಬ್ಬಿರ ಮಕ್ಕಾ ಕಾಲೂನಿ ಗುಲಬರ್ಗಾ ಇತನು “ಮೇರಾ ಸಾತ ನಹಿ ಆಯತೂ ಬೋಲತೇ ರಾಂಡ ಆಜ ತೇರಿಕೂ ಖಲಾಸ ಕರತೂ ಅಂತಾ
ಕೋಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ತೆಗೆದುಕೊಂಡು
ಬಂದ ಖಂಜರ ದಿಂದ ನನಗೆ ದೇಹದ ಮೇಲೆಲ್ಲಾ ಹೊಡೆದು ರಕ್ತಸ್ರಾವ ಮಾಡಿದ್ದು, ಬಿಡಿಸಲು ಬಂದ ನನ್ನ ಗಂಡ ಮಹೆತಾಬ
ಖಾನನಿಗೆ ಎಡಗೈ ಅಂಗೈಯಲ್ಲಿ , ಬಲಗೈ ರಿಷ್ಟ ಹತ್ತಿರ
ಚಾಕು ಖಂಜರದಿಂದ ಹೊಡೆದು ರಕ್ತಗಾಯ ಗೊಳಿಸಿದನು ಮತ್ತು ನನ್ನ ಮಗಳು ಫರಹಾ ಇವಳಿಗೆ ಕೂಡಾ ಅವಾಚ್ಯವಾಗಿ
ಬೈಯ್ದು ಜೋರಾಗಿ ನೂಕಿಕೊಟ್ಟನು ಆಗ ನಾನು ಚೀರಾಡುವ ಶಬ್ದ ಕೇಳಿ ಕಾಲೋನಿಯಲ್ಲಿದ್ದ ಇರಫಾನ ತಂದೆ ದಸ್ತಗೀರ , ಮೋಯಿನ ತಂದೆ ಫೈಯಾಜೊದ್ದಿನ ಹಾಗೂ ಮಹಮ್ಮದ ನೂರ ಇವರು ಓಡುತ್ತಾ ಬಂದು ಘಟನೆಯನ್ನು ನೋಡಿ ಬಿಡಿಸಿಕೊಳ್ಳುವಾಗ ಶಬ್ಬಿರನ್ನು ಅವರಿಂದ ತಪ್ಪಿಸಿಕೊಂಡು ಖಂಜರನ್ನು ಅಲ್ಲಿ ಬಿಸಾಡಿಓಡಿ ಹೋದನು. ಉಪಚಾರ ಕುರಿತು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ತಂದು
ಸೇರಿಕೆ ಮಾಡಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ. 304/2012 ಕಲಂ.448, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್.
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ :ಶ್ರೀ ಮಹಮ್ಮದ ಹಾಜಿಪಾಶಾ ತಂದೆ ಮಹಮ್ಮದ ಜಿಲಾನಿ ಮಿಯಾ ಉ||ಕಾರಪೆಂಟರ
ಸಾ||ಹಾಗರಗಾ ಕ್ರಾಸ ರಿಂಗ ರೋಡ ಗುಲಬರ್ಗಾರವರು ನಾನು ಕಾರಪೆಂಟರ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ 21/9/12 ರಂದು ರಾತ್ರಿ 9-00 ರಿಂದ ದಿನಾಂಕ:22/09/12 ರಂದು ಮುಂಜಾನೆ 9-00 ಗಂಟೆಯ ಅವಧಿಯಲ್ಲಿ ನನ್ನ ಅಂಗಡಿಯ
ಎದುರುಗಡೆ ಬೇವಿನ ಗಿಡದ ಕೆಳಗಡೆ ಆಪರಿಚಿತ
ಹೆಣ್ಣು ಮಗಳು ಮಲಗಿದ್ದಳು, ಬೆಳಿಗ್ಗೆ
ಬಂದು ನೋಡಲಾಗಿ ಸದರಿ ಹೆಣ್ಣು ಮಗಳು
ಮಲಗಿಕೊಂಡಿದಲ್ಲೆ ಮೃತ ಪಟ್ಟಿದಳು, ಸದರಿ ಮೃತಳ ವಯಸ್ಸು 50-60 ವರ್ಷ, ಎತ್ತರ 4 , ಫೀಟ 5
ಇಂಚು , ದುಂಡು ಮುಖ ಇದ್ದು, ಮೈ ಮೇಲೆ ಹಸಿರು ಬಣ್ಣದ
ಸೀರೆ , ಬೂದು ಬಣ್ಣದ ಕುಪ್ಪಸ ಧರಿಸಿರುತ್ತಾಳೆ ಮೃತಳ ಮರಣದಲ್ಲಿ ಯಾರ ಮೇಲೆ ಯಾವುದೇ
ರೀತಿಯ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012
ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆಗೆ ಕಿರಕುಳ, ಮೈಮೇಲೆ ಸೀಮೆ
ಎಣ್ಣೆ
ಸುರಿದುಕೊಂಡು
ಆತ್ಮಹತ್ಯೆ ಮಾಡಿಕೊಂಡ ಬಗ್ಗೆ:
ಚಿಂಚೋಳಿ
ಪೊಲೀಸ್ ಠಾಣೆ: ಶ್ರೀಮತಿ ಏಹ್ಮದಿಬೇಗಂ ಗಂಡ ಮಹ್ಮದ ಫೈಯಿಮ ವ||
19 ಸಾ|| ಐನೋಳ್ಳಿ ರವರು ಒಂದು ವರ್ಷದ ಹಿಂದೆ ನನಗೆ ಐನೋಳ್ಳಿ ಗ್ರಾಮದ ಮಹ್ಮದ್ ಪೈಯಿಮ್ ತಂದೆ ಮೈನೋದ್ದಿನ
ಏಂಬುವವನಿಗೆ ಮದುವೆ ಮಾಡಿಕೊಟ್ಟಿದ್ದೆವು,
ರಂಜಾನ ಸಂದರ್ಭದಲ್ಲಿ
ನನ್ನ ತಂದೆಗೆ ಆರಾಮವಿಲ್ಲದ
ಕಾರಣ ಮಾತನಾಡಿಸಲು ಅಂತಾ ಐನೋಳ್ಳಿ ಗ್ರಾಮದಿಂದ ಚಿಂಚೋಳಿಗೆ ಬಂದಿದ್ದು ನನ್ನ ಗಂಡ ಬಂದು ಐನೊಳ್ಳಿ ಗ್ರಾಮಕ್ಕೆ
ಕರೆದುಕೊಂಡು ಹೋಗಿದ್ದರು, ನನ್ನ ಮಾವ ನಿನ್ನ ಗುಣ ಸರಿಯಿಲ್ಲಾ ವಡ್ಡರ ಹುಡುಗನೊಂದಿಗೆ ನಿನ್ನ ಅನೈತಿಕ ಸಂಭಂದವಿದೆ ಮತ್ತು ನನ್ನ
ಗಂಡನು ಸಹ ನೀನು
ನಮ್ಮ ಮನೆಯಲ್ಲಿರಬೇಡ ಅಂತಾ ಮನೆಯಿಂದ ಹೊರಗೆ ಹಾಕಿ ಕೈಯಿಂದ ಹೊಡೆ ಬಡೆಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು
ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು ಇರುತ್ತದೆ. ದಿನಾಂಕ 18/09/2012 ರಂದು ಬೆಳಿಗ್ಗೆ 9-30 ಗಂಟೆಗೆ ಹಿರಿಯ ನಾದಿನಿಯಾದ ನಸ್ರೀನಬೇಗಂ
ಎಂಬುವವಳು ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡಿ ಸಾಯಲು ಪ್ರಚೋದನೇ ನೀಡಿದ್ದರಿಂದ
ಮನೆಯಲ್ಲಿದ್ದ ಸೀಮೆ
ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಇರುತ್ತದೆ
ಅಂತಾ ಹೇಳಿಕೆ ನೀಡಿದ್ದಳು, ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ
ಮಾಡಿದ್ದರು. ಉಪಚಾರ ಫಲಕಾರಿಯಾಗದೆ ದಿನಾಂಕ: 22-09-2012 ಮಧ್ಯರಾತ್ರಿ 2-10 ಗಂಟೆಗೆ ಮೃತ
ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 85/2012 ಕಲಂ:498 (ಎ) 323,504, ಸಂಗಡ 34 ಐ.ಪಿ.ಸಿ. ಮತ್ತು
306 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment