ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದಿನಾಂಕ 06-08-12 ರಂದು ಬೆಳಗ್ಗೆ 9-30 ಗಂಟೆಗೆ ಶಹಾ ಬಜಾರ ದಿಂದ ಆಳಂದ ಚೆಕ್ ಪೊಸ್ಟ ಮೇನ ರೋಡಿನಲ್ಲಿ ಬರುವ ಶೆಟ್ಟಿ ಶಾಲೆಯ ಎದುರು ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ವಾಯ್-6291 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಆಳಂದ ಚೆಕ್ಕಪೊಸ್ಟ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನವೀನ ಈತನಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಸವಾರ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಶರಣಬಸಪ್ಪ ತಂದೆ ಗುಂಡಪ್ಪಾ ಪುಟಪಾಕ ಉ:ದಿನಗೂಲಿ ನೌಕರ ಸಾ:ಆರಾಧನ ಕಾಲೇಜ ಹತ್ತಿರ ಆಳಂದ ರೋಡ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 80/2012 ಕಲಂ 279, 337 ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ಥಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಬಾಬು ತಂದೆ ಪೀರಪ್ಪ ಸಿಂಗೆ ಸಾ: ಅಶೋಕ ನಗರ ಗುಲಬರ್ಗಾ ರವರು ನಾನು ಕರ್ನಾಟಕ ಗೃಹ ಮಂಡಳಿ ಗುಲಬರ್ಗಾ ವತಿಯಿಂದ ಕೆ.ಎಚ್.ಬಿ ಪ್ಲಾಜಾ ಶಾಪಿಂಗ ಕಾಂಪ್ಲೇಕ್ಸ ಕೇಂದ್ರ ಬಸ್ಸ ನಿಲ್ದಾಣ ಎದುರುಗಡೆ ದಿನಾಂಕ: 04/03/2004 ರಂದು ಕೆಳ ಭಾಗದ ಒಂದು ಮಳಿಗೆ ಸಂಖ್ಯೆ : ಸಿ.ಎಫ್ 20 ಕೆ.ಹೆಚ್.ಬಿ ಪ್ಲಾಜಾ ಶಾಪಿಂಗ್ ಕಾಂಪ್ಲೇಕ್ಸ್ 15’ 9’’ Xx 18’ 6’’ ಅನ್ನು ರೂಪಾಯಿ 4,38,225/- ಗಳಿಗೆ ನನ್ನ ಮಗನಾದ ರವಿಕುಮಾರ ತಂದೆ ಬಾಬು ಸಿಂಗೆ ಹೆಸರಿಗೆ ಖರೀಸಿದ್ದೇನೆ. ಸದರಿ ಖರೀದಿ ಪತ್ರವು ದಿನಾಂಕ 085/03/20114 ರಂದು ಗುಲಬರ್ಗಾ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ದಸ್ತಾವೇಜ ಸಂಖ್ಯೆ :8513/2004 ಎಂದು ಇರುತ್ತದೆ. ದಿನಾಂಕ 29/03/2010 ರಂದು ಮೊಹ್ಮದ ತನವೀರ ತಂದೆ ಮೊಹ್ಮದ ಹನೀಫ್ ಸಾ: ಜೀಲಾನಾಬಾದ ಎಮ್.ಎಸ್.ಕೆ ಮಿಲ್ ಗುಲಬರ್ಗಾ ಇವರಿಗೆ ನನ್ನ ಮಕ್ಕಳಾದ ರವಿಕುಮಾರ ಮತ್ತು ಲಕ್ಷ್ಮಿಕಾಂತ ಸಿಂಗೆ ಇವರು ರೂ 7100/- ರಂತೆ 1 ತಿಂಗಳ ಬಾಡಿಗೆ ಮತ್ತು 1,00,000/- ಗಳು ಮುಂಗಡ ಹಣವನ್ನು ಕೊಡುವಂತೆ ಗುಲಬರ್ಗಾ ನ್ಯಾಯಾಲಯದಲ್ಲಿ ನೋಟರಿ ಮಾಡಿಸಿಕೊಂಡು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ನಿಜವಿರುತ್ತದೆ. ಆದರೆ ಮೊಹ್ಮದ ತನ್ವೀರ ತಂದೆ ಮೊಹ್ಮದ ಹನೀಫ್ ಇವರು ಒಪ್ಪಂದ ಪತ್ರದ ಪ್ರಕಾರ ರೂ 1,00,000/- ಗಳು ಮುಂಗಡ ಹಣ ನೀಡದೇ ಇದ್ದುದ್ದರಿಂದ ನಾವು ಅವನಿಗೆ ಮೂಲ ದಾಖಲೆ ಪತ್ರವನ್ನು ನೀಡಿರುವುದಿಲ್ಲಾ. ನಮ್ಮ ಅಂಗಡಿ (ಮಳಿಗೆ)ಯನ್ನು ಖಾಲಿ ಮಾಡಿಕೊಡುವಂತೆ ಹಲವು ಬಾರಿ ವಿನಂತಿಸಿಕೊಂಡಿರುತ್ತೇವೆ.ಆದರೆ ತಾವಾಗಿಯೇ ಮಾನ್ಯ ಸಿವಿಲ್ ನ್ಯಾಯಾಲಯ ಗುಲಬರ್ಗಾದಲ್ಲಿ ನಮ್ಮ ವಿರುದ್ದ ನಾವೆ ಅಂಗಡಿ ಮಾಲಿಕರು ಅಂತಾ ದಾವೆ ಹೂಡಿದರು ಮಾನ್ಯ ನ್ಯಾಯಾಲಯವು (ಅರ್ಜಿ ಸಂಖ್ಯೆ : 361/2010 ) ಅವರ ಅರ್ಜಿಯನ್ನು ಪುರಸ್ಕರಿಸದೇ ದಿನಾಂಕ 21/06/2012 ರಂದು ಅವರ ಬೇಡಿಕೆಯನ್ನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿರುತ್ತಾರೆ. ದಿನಾಂಕ 06/08/2012 ರಂದು ಸುಮಾರು ಮಧ್ಯಾಹ್ನ 1-30 ಗಂಟೆಗೆ ನಾನು ಮತ್ತು ನನ್ನ ಮಕ್ಕಳಾದ ಲಕ್ಷ್ಮಿಕಾಂತ ಮತ್ತು ಯೊಗೇಂದ್ರ ಸಿಂಗೆ ಜೊತೆಗೂಡಿ ಅಂಗಡಿಗೆ ಹೋಗಿ ಮೊಹ್ಮದ ತನ್ವಿರನಿಗೆ ಅಂಗಡಿ ಖಾಲಿ ಮಾಡುವಂತೆ ವಿನಂತಿಸಿಕೊಂಡೇವು. ವಾದ-ವಿವಾದಗಳಿಂದ ರೊಚ್ಚಿಗೆದ್ದ ಮೊಹ್ಮದ ತನವೀರ ಮತ್ತು ಆತನ ಸಹೋದರರಾದ ಮುಕ್ತಾದೀರ, ಬಜ್ಜು, ಪಾಶಾ ಮನ್ನನ್ ಮತ್ತು ಸುಮಾರು 15-20 ಜನರನ್ನು ಕರೆಯಿಸಿಕೊಂಡು ನನ್ನ ಮೇಲೆ ಹಲ್ಲೆ ಮಾಡಿ ಹೊಟ್ಟೆಗೆ ಕೈ ಮುತ್ತಿಗೆಯಿಂದ ಗುದ್ದಿ, ಹೊಡೆದು ಎದೆಯ ಮೇಲಿನ ಅಂಗಿ ಹಿಡಿದು ‘’ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಅಂಗಡಿಯ ಶಟ್ಟರನ್ನು (ಬಾಗಿಲು) ಮುಚ್ಚಿ ಕೀಲಿ ಹಾಕಿಕೊಂಡು ಹೋಗುವ ದೃಶ್ಯಾವಳಿಯನ್ನು ನನ್ನ ಮಗ ಯೊಗೇಂದ್ರ ಮೊಬೈಲ್ ( 9901085408) ಸೇರೆ ಹಿಡಿದದ್ದನ್ನು ನೋಡಿ ಬಜ್ಜು ಎಂಬಾತನ್ನು ನನ್ನ ಮಗನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡು ನೆಲಕ್ಕೆ ಬಡಿದು ಅದರಲ್ಲಿದ್ದ ಮೆಮೋರಿ ಕಾರ್ಡನ್ನು ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ 143, 147, 323, 504, 506, ಸಂ:149 ಐಪಿಸಿ ಮತ್ತು 3(1) (10) ಎಸ್.ಸಿ ಎಸ್.ಟಿ 1989 ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀನಿವಾಸ ತಂದೆ ಭೀಮಾಶಂಕರ ಏಕಬೋಟೆ ಮು|| ಬಾಹೇರಪೇಠ ಆಳಂದ ರವರು ನಾನು ದಿನಾಂಕ: 06/08/2012 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗನಾದ ವಿಶಾಲ ತಂದೆ ಶ್ರೀನಿವಾಸ ಏಕಬೋಟೆ ನನ್ನ ಕುಟುಂಬ ಪರಿವಾರ ಸಮೇತ ಹಸ್ತ ಮಲ್ಲಿಕೇಶ್ವರ ದೇವಿಸ್ತಾಲಕ್ಕೆ ಶ್ರಾವಣ ಸೋಮಾವಾರ ನಿಮೀತ್ಯ ದರ್ಶನಕ್ಕಾಗಿ ಆಳಂದ – ಉಮರ್ಗಾ ರೋಡಿನಂದ ಹೋರಟಿದ್ದು ಹಸ್ತ ಮಲ್ಲಿಕಾ ದೇವಾಲಯಕ್ಕೆ ಹೋಗುವ ದಾರಿ ತಪ್ಪಿ ನನ್ನ ಮಗ ಆಳಂದ –ಉಮರ್ಗಾ ರೋಡನಲ್ಲಿರುವ ಬ್ರಿಡ್ಜ್ ದಾಟಿ ಸ್ವಲ್ಪು ಮುಂದೆ ಹೋಗಿ ತೆಲೆಕುಣಿ ಹೊಡ್ಡಿನ ಕೆಳಭಾಗದಲ್ಲಿರುವ ನೀಲಕಾಯಿ ಹಣ್ಣಿನ ಮರದ ಕೆಳಗೆ ಹಣ್ಣನ್ನು ತರಲು ಗೀಡದ ಕೆಳಗೆ ನಿಂತಾಗ ಉಮರ್ಗಾ ಕಡೆಯಿಂದ ಆಳಂದಕ್ಕೆ ಬರುತ್ತಿದ್ದ ಬಸ್ಸ ನಂ ಕೆ.ಎ 32 ಎಫ್ 995 ನೇದ್ದರ ಚಾಲಕನು ತನ್ನ ಬಸ್ಸನು ಅತೀವೇಗದಿಂದ ಮತ್ತು ಅಜಾಗರಕತೆಯಿಂದ ಅಡ್ಡಾತ್ತಿಡಿಯಾಗಿ ನಡೆಸಿಕೊಂಡು ರಸ್ತೆ ಕೆಳಭಾಗದಲ್ಲಿರುವ ಗಿಡದ ಕೆಳಗೆ ನಿಂತಿರುವ ನನ್ನ ಮಗ ವಿಶಾಲ ಇತನಿಗೆ ಭಲವಾಗಿ ವೇಗದಿಂದ ಡಿಕ್ಕಿ ಹೊಡೆದು ಬಸ್ಸಿನ ನಡುಭಾಗಕ್ಕೆ ಸಿಲುಕಿ ಎಳದುಕೊಂಡು ಹೋಗಿರುವದರಿಂದ ನನ್ನ ಮಗ ಸ್ಥಳದಲ್ಲಿಯೇ ಮೃತ್ತ ಪಟಿರುತ್ತಾನೆ. ಹಿಂದೆ ಬರುತ್ತಿದ್ದ ನಾನು ನನ್ನ ಹೆಂಡತಿ ವರ್ಷಾ ಓಡಿಬಂದು ನೋಡಲಾಗಿ ನನ್ನ ಮಗ ಮೃತ್ತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 164/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment