ನಿಧಿಗಾಗಿ ಆಸೆಗಾಗಿ
ಮಹಾವೀರ ಜೈನ ತಿರ್ಥಂಕರ್ ಮೂರ್ತಿಯನ್ನು ದ್ವಂಸ ಮಾಡಿದ ಆರೋಪಿತರ ಬಂದನ:
ಮಾನ್ಯ ಜಿಲ್ಲಾ ಪೊಲೀಸ ಅಧೀಕ್ಷಕರಾದ ಶ್ರೀ ಪ್ರವೀಣ ಪಧುಕರ ಪವಾರ
ಐಪಿಎಸ್ ಗುಲಬರ್ಗಾ ರವರು ಮತ್ತು ಅಪರ ಜಿಲ್ಲಾ ಪೊಲೀಸ ಅಪರ್ ಪೊಲೀ್ಸ ಅಧೀಕ್ಷಕರಾದ ಶ್ರೀ ಕಾಶೀನಾಥ
ತಳಕೇರಿ ರವರು ಹಾಗು ಶಹಾಬಾದ ಪೊಲೀಸ ಉಪಾಧೀಕ್ಷಕರಾದ ಶ್ರೀ,ಎಂ.ವಿ.ಸೂರ್ಯವಂಶಿರವರ
ಮೇಲ್ವಿಚಾರಣೆಯಲ್ಲಿ ಚಿತ್ತಾಪೂರ ಸಿಪಿಐ ಶ್ರೀ ಚಂದ್ರಕಾಂತ ಪೂಜಾರಿ ಮತ್ತು ಪಿ.ಎಸ್.ಐ ರವರುಗಳಾದ
ಶ್ರೀ ಸೋಮಶೇಖರ ಕೆಂಚರಡ್ಡಿ ಮತ್ತು ವಾಡಿ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ಶ್ರೀಮಂತ ಇಲ್ಲಾಳ ಹಾಗು
ಸಿಬ್ಬಂದಿರವರೊನ್ನೊಳಗೊಂಡ ತಂಡವನ್ನು ರಚಿಸಿ, ಚಿತ್ತಾಪುರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ದಿ.25/26-07-2012 ರಂದು
ರಾತ್ರಿ ಚಿತ್ತಾಪೂರ ತಾಲೂಕಿನ ಅಲ್ಲುರ(ಬಿ) ಗ್ರಾಮದ ಜೈನ ಸಮುದಾಯಕ್ಕೆ ಸೇರಿದ ಪಾರ್ಶ್ವನಾಥ
ಬಸದಿಯಲ್ಲಿನ ಮಹಾವಿರ ಜೈನರವರ ಕಲ್ಲಿನ ಮೂರ್ತಿಯನ್ನು ಅಪರಿಚಿತ ನಿಧಿಗಳ್ಳರು ನಿಧಿ ಆಸೆಗಾಗಿ
ಒಡೆದು ದ್ವಂಸಗೊಳಿಸಿದ್ದರಿಂದ ಶ್ರೀ ರಾಮಣ್ಣ ಕೆ.ನಾಟೀಕರ ಗ್ರಾಮ ಪಂಚಾಯತ ಅಧ್ಯಕ್ಷರು
ಅಲ್ಲೂರ(ಬಿ) ರವರು ದೂರು ಸಲ್ಲಿಸಿದ ಮೇರೆಗೆ ಚಿತ್ತಾಪೂರ ಠಾಣೆ ಗುನ್ನೆ ನಂ.72/2012 ಕಲಂ.295
ಐಪಿಸಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಯ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣದಲ್ಲಿ
ಭಾಗಿಯಾದ ಇನ್ನೂಳಿದ ಆರೋಪಿತರಾದ ರಾಮಕೃಷ್ಣ ತಂದೆ ಶಿವಶಂಕರ ನಾಯ್ಡು ವ||28 ಉ||ಹೊಟೆಲ ಕೆಲಸ ಸಾ||ಕಾಕಲವಾರ ತಾ||ಗದ್ವಾಲ
ಜಿ||ಮಹೆಬೂಬನಗರ,ರಾದಾಕೃಷ್ಣ ತಂದೆ ಹನುಮಂತ ಗಂಗಾಪುತ್ರ ವ||28 ಉ|ವ್ಯಪಾರ ಸಾ||ಸಂಗಾಲ
ತಾ||ಗದ್ವಾಲ ಜಿ||ಮಹೆಬೂಬನಗರ,ಬಲರಾಮ ತಂದೆ ಕೃಷ್ಣ ವ||26 ಉ||ಒಕ್ಕಲುತನ ಜಾ||ಮಾದರ ಸಾ||
ಮರವಾಯಿ ತಾ||ಗದ್ವಾಲ ಜಿ||ಮಹೆಬೂಬನಗರ,ಚನ್ನಮಲ್ಲಪ್ಪ ತಂದೆ ಮಲ್ಲಪ್ಪ ತಳವಾರ ವ||28
ಉ||ಒಕ್ಕಲುತನ ಜಾ||ಕಬ್ಬಲಿಗ ಸಾ||ಡೊಣಗಾಂವ ತಾ||ಚಿತ್ತಾಪೂರ ರವರನ್ನು ಆಂದ್ರ ಪ್ರದೇಶ ಗದ್ವಾಲ
ಜಿಲ್ಲಾ|| ಮಹೆಬೂಬ ನಗರದಿಂದ ದಿ.10-08-2012 ರಂದು ಬಂಧಿಸಿ ಆರೋಪಿತರಿಂದ ಅಪರಾಧಕ್ಕೆ ಬಳಸಿದ ಒಂದು
ಹಿರೋ ಹೊಂಡಾ ಮೋಟಾರ ಸೈಕಲ ಸಿಬಿಝಡ್ ನಂ.ಎಪಿ-10 ಎಟಿ-0152 ಅಂದಾಜು ಕಿಮ್ಮತ್ತು 25000/- 4
ಮೊಬೈಲ ಹ್ಯಾಂಡಸೆಟ್ ಅ.ಕಿ.2000/- ಹಾಗು ಅಪರಾಧಕ್ಕೆ ಬಳಸಿದ ಖಾರಾದ ಪುಡಿ ವಶಪಡಿಸಿಕೊಂಡು ಮಾನ್ಯ
ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ದರೋಡೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ಸಂಗನಬಸಯ್ಯ ತಂದೆ ಶಿವಲಿಂಗಯ್ಯ ಗಣಾಚಾರಿ, ವಯ|| 29, ಉ|| ಸಮೃದ್ದ ಜೀವನದಲ್ಲಿ ಎಜೆಂಟ ಕೆಲಸ, ಸಾ|| ನರೋಣಾ, ಹಾ||ವ|| ಬೋರಾಬಾಯಿ ಸ್ಕೂಲ್ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನಮ್ಮ ಮಾವನವರಾದ ಸೋಮಯ್ಯ ಮಠ ನಮ್ಮ ಸಂಬಂಧಿಕರಾದ ನಾಗಯ್ಯ ಸ್ವಾಮಿ ಇವರ ಮನೆಯಲ್ಲಿ ದಿನಾಂಕ: 09/08/2012 ರಂದು ರಾತ್ರಿ 11:30 ಹೋಗುವಾಗ ಕೆರೆ ಗಾರ್ಡನದ
ಗಣೇಶ ವಿಸರ್ಜನೆ ಬಾವಿ ಹತ್ತಿರ ಮಧ್ಯರಾತ್ರಿ 00:30 ಗಂಟೆಯ ಸುಮಾರಿಗೆ ಹಿಂದಿನಿಂದ ಒಂದು ಆಟೋ
ಬಂದಾಗ ಆಟೋವನ್ನು ನಿಲ್ಲಿಸಿ ಚಾಣುಕ್ಯ ಬಾರದ ವರೆಗೆ ಬರಲು ಕೇಳಿದಾಗ ಅವನು 30/- ರೂಪಾಯಿ ಕಿರಾಯಿ ಕೊಡಿರಿ ಅಂತಾ ಕೇಳಿದಾಗ ಅದಕ್ಕೆ ಬೇಡ
ಅಂತಾ ಹೇಳಿ ನಡೆದುಕೊಂಡು ಹೋಗುತ್ತಿರುವಾಗ, ಅದೇ ಸಮಯಕ್ಕೆ ಆಟೋದಲ್ಲಿ ಮುಂಚಿತವಾಗಿ ಕುಳಿತ 3
ಜನರು ಆಟೋ ನಿಲ್ಲಿಸಿ ಮತ್ತು ಆಟೋವನ್ನು ಹೋಗಲು ಹೇಳಿ ನಮ್ಮ ಹತ್ತಿರ ಬಂದವರೆ ಏ ಬೋಸಡಿ ಮಕ್ಕಳೆ
ನಮ್ಮನ್ನು ಬೈಯುತ್ತಿರಾ, ಅಂತಾ ನನ್ನ ಎದೆಯ ಮೇಲಿನ ಅಂಗಿ
ಹಿಡಿದು, ಮುಖದ ಮೇಲೆ ಕಿವಿಯ ಮೇಲೆ
ಹೊಡೆದಿದ್ದು ಅಲ್ಲದೆ ಬಿಡಿಸಲು ಬಂದ ನಮ್ಮ ಮಾವನಾದ ಸೋಮಯ್ಯ ಇವರಿಗು ಮೂರು ಜನ ಸೇರಿಕೊಂಡು ಮುಖ
ಹಾಗೂ ಹೊಟ್ಟೆಯಲ್ಲಿ ಕೈಯಿಂದ, ಕಾಲಿನಿಂದ ಒದ್ದು, ಗುಪ್ತಗಾಯ ಪಡಿಸಿ ಶರ್ಟಿನ ಜೇಬಿನಲ್ಲಿದ್ದ 200/- ಜಬರ ದಸ್ತಿಯಿಂದ
ಕಸಿದುಕೊಂಡು ಮತ್ತು ಯಾರಿಗಾದರು ಹೇಳಿದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಮತ್ತೆ
ಹೊಡೆಯುತ್ತಿರುವಾಗ ಅದೇ ಸಮಯಕ್ಕೆ ರಾತ್ರಿ ಗಸ್ತಿನಲ್ಲಿದ್ದ ಒಬ್ಬರು ಪಿ.ಎಸ್.ಐ ಮತ್ತು ಒಬ್ಬರು
ಪೊಲೀಸರು ಮೋಟರ ಸೈಕಲ ಮೇಲೆ ಬರುವದನ್ನು ನೋಡಿ ಓಡಿ ಹೋಗುತ್ತಿರುವಾಗ ಅವರನ್ನು ಹಾಗೂ ನಮ್ಮನ್ನು
ಪೊಲೀಸರು ಕರೆದುಕೊಂಡು ಬಂದಾಗ ಅವರ ಹೆಸರು ಶ್ರೀನಾಥ ತಂದೆ ಹಣಮಂತ ಕಾಂಬಳೆ, ಸತೀಷ ತಂದೆ ರಾಜು ಚೌಕಿ, ಶರಣು ತಂದೆ ಪ್ರಕಾಶ ಐಗೋಳ ಅಂತಾ ಪೊಲಿಸರಿಂದ ತಿಳಿದು ಬಂದಿರುತ್ತದೆ.
ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2012 ಕಲಂ:
394 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾಡಬೂಳ ಪೊಲೀಸ್ ಠಾಣೆ: ಶ್ರೀ ಸಾಯಬಣ್ಣಾ ತಂದೆ ನಾಗಣ್ಣಾ ಬೇಡರ ಸಾ||ಇಟಗಾ ತಾ:ಚಿತ್ತಾಪೂರ ರವರು ನಾನು ಮತ್ತು ನಮ್ಮ
ಮಾವ ಕೂಡಿಕೊಂಡು ದಿನಾಂಕ 10/08/2012 ರಂದು ಟಿ.ವಿ.ಎಸ್ ಮೋಟಾರ ಸೈಕಲ್ ನಂ:ಕೆಎ-32 ಎಕ್ಸ್-2986
ನೇದ್ದರ ಮೇಲೆ ಇಟಗಾ ಗ್ರಾಮದಿಂದ ತಮ್ಮ ಸಂಬಂದಿಗೆ ಮಾತನಾಡಿಸಲು ಗುಲಬರ್ಗಾಕ್ಕೆ ಹೋಗುತ್ತಿರುವಾಗ
ಗುಲಬರ್ಗಾ-ಸೇಡಂ ರಸ್ತೆಯ ಗುಂಡಗುರ್ತಿ ಸಿಮಾಂತರದ ಮೆಹಬೂಬಸಾಬ ರಸ್ತೆ ಇವರ ಹೊಲದ ಬಳಿ ಮದ್ಯಾಹ್ನ 1-00
ಗಂಟೆಗೆ ಎದುರಿನಿಂದ ಕ್ರೂಸರ ನಂ:ಕೆಎ-23/9261 ನೇದ್ದರ ಚಾಲಕನು ಅತಿವೇಗ ಮತ್ತು
ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ ಪಡಿಸಿದನು. ಮೋಟಾರ ಸೈಕಲ್ ಹಿಂಬದಿ ಸವಾರ ಭೀಮರಾಯ ತಂದೆ ನಾಗಚಕ್ರಪ್ಪ
ಇತನ ತಲೆ ಒಡೆದು ಭಾರಿ ರಕ್ತಗಾಯವಾಗಿ ಮಿದಳು ಹೊರಗೆ ಬಂದು ಮತ್ತು ಎರಡು ಕಾಲುಗಳ ಮೊಳಕಾಲಿನ
ಹತ್ತಿರ ಕಾಲು ಮುರಿದು ಹಾಗು ಅಲ್ಲಲ್ಲಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಮತ್ತು ನನಗೆ ಬಲಗಾಲ ಮೊಳಕಾಲ ಮೇಲೆ, ಕೇಳಗೆ ಕಾಲು ಮುರಿದು ಮತ್ತು ಬಲಗಾಲ
ಚಪ್ಪೆ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಅಪಘಾತವಾದ ಕೂಡಲೆ ಕ್ರೂಸರ ಚಾಲಕ ತನ್ನ
ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ: 61/12 ಕಲಂ::279,338,304(ಎ) ಐ.ಪಿ.ಸಿ. ಸಂ. 187 ಐ.ಎಮ್.ವಿ.ಅಕ್ಟ್ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment