POLICE BHAVAN KALABURAGI

POLICE BHAVAN KALABURAGI

30 July 2012

GULBARGA DIST REPORTED CRIME


ಗುಲಬರ್ಗಾ ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಚರಣೆ
ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಲಿಂಗಣ್ಣ ಸತ್ಯಂಪೇಟ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳ ಬಂದನ .
ಮಾನ್ಯ ಐಜಿಪಿ ಈಶಾನ್ಯ ವಲಯ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಗುಲಬರ್ಗಾ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರ ಮಾರ್ಗದರ್ಶನದಲ್ಲಿ  ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಭೂಷಣ ಭೋರಸೆ ಎ.ಎಸ್.ಪಿ, (ಎ) ಉಪ-ವಿಭಾಗ, ಶ್ರೀ ಚಂದ್ರಶೇಖರ ಬಿಪಿ ಸಿಪಿಐ ಎಮ್.ಬಿ ನಗರ, ಸಿಪಿಐಗಳಾದ ಶ್ರೀ ಶರಣಬಸವೇಶ್ವರ, ವಿಶ್ವನಾಥ ಕುಲಕರ್ಣಿ, ಪಿಐಗಳಾದ ಜೆ.ಹೆಚ್ ಇನಾಮದಾರ, ಬಸೀರ ಪಟೇಲ, ಅಸ್ಲಾಮ ಬಾಷ, ಪಿ.ಎಸ್.ಐ ಗಳಾದ ಶ್ರೀ ರಾಜಶೇಖರ ಹಳಿಗೋದಿ, ಶಾಂತಿನಾಥ ಬಿ.ಪಿ, ಪಂಡಿತ ಸಗರ, ಬಸವರಾಜ ತೇಲಿ, ಸಂತೋಷಕುಮಾರ, ಹಾಗೂ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಶಂಕರಲಿಂಗ, ತುಕಾರಾಮ, ಸುಭಾಷ, ಕಾಳಪ್ಪ, ದೇವಿಂದ್ರ, ಅರ್ಜುನ, ಅಶೋಕ ಹಳಗೋದಿ, ಮಶಾಕ, ಪ್ರಭಾಕರ, ಶಿವಪ್ರಕಾಶ, ರಪಿಕ, ರಾಮು ಪವಾರ, ಗಂಗಯ್ಯ, ಚನ್ನವೀರೇಶ, ಅಶೋಕ ಗಣಕಯಂತ್ರ ವಿಭಾಗ, ಅಣ್ಣಪ್ಪ, ಬಸವರಾಜ ಪಾಟೀಲ, ಶಿವಶರಣಪ್ಪ, ಶರಣಬಸಪ್ಪ, ರಾಜಕುಮಾರ ರವರು ದಿನಾಂಕ:29-07-2012 ರ ರಾತ್ರಿ ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಖಚಿತ ಮಾಹಿತಿಯಂತೆ ಹಠಾತ್ ದಾಳಿ ಮಾಡಿ ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟ್ ಕೊಲೆ ಪ್ರಕರಣದ ಆರೋಪಿತರಾದ ದಯಾನಂದ ತಂದೆ ಬೀರಪ್ಪಾ ಪೂಜಾರಿ ವಃ38  ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ, ಸಾ|| ಸಮತಾ ಕಾಲೋನಿ ಬ್ರಹ್ಮಪುರ ಗುಲಬರ್ಗಾ, ಶಾಮರಾವ @ ಶಾಮ ತಂದೆ ಶರಣಪ್ಪ ಪೂಜಾರಿ ವಃ38 ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ ಸಾ|| ಕನಕ ನಗರ ಬ್ರಹ್ಮಪುರ ಗುಲಬರ್ಗಾರವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳ ಪಡಿಸಿ ತನಿಖೆ ಕಾಲಕ್ಕೆ ಆರೋಪಿತರ ತಾಬಾದಿಂದ ಮೃತ ಲಿಂಗಣ್ಣ ರವರ ಸುಲಿಗೆಗೊಳಗಾದ ಮೊಬಾಯಿಲ್ ಪೊನ್, ನಗದು ಹಣ, ಬಸ್ ಪಾಸ್, ಹ್ಯಾಂಡಬ್ಯಾಗ, ಶಾಲು, ಪುಸ್ತಕ, ಬಸವ ಮಾರ್ಗ ಪತ್ರಿಕೆ ವಗೈರೆ ವಸ್ತುಗಳನ್ನು ಆರೋಪಿತರ ತಾಬಾದಿಂದ ವಶ ಪಡಿಸಿಕೊಂಡಿದ್ದು, ಹಿರಿಯ ಪತ್ರಕರ್ತ ಮೃತ ಲಿಂಗಣ್ಣ ಸತ್ಯಂಪೇಟ್ ರವರ ಶವವನ್ನು ಸಾಕ್ಷಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹದ ಮೇಲಿನ  ಧೋತಿ ಮತ್ತು ಶರ್ಟಗಳನ್ನು ತೆಗೆದು ದೇವಸ್ಥಾನದ ಆವರಣದ ಎದುರಿನ ತೆಂಗಿನ ಕಾಯಿ ಮಾರಾಟ ಮಾಡುವ  ಅಂಗಡಿಯ ಕೆಳಗಿನ ಒಳ ಚರಂಡಿಯಲ್ಲಿ ಬಿಸಾಕಿದ ಬಗ್ಗೆ ತಿಳಿಸಿರುತ್ತಾರೆ. ಸದರಿ ಲಿಂಗಣ್ಣ ಸತ್ಯಂಪೇಟ ರವರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರವಚನ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿತರಾಗಿ ಬಂದಿದ್ದರು. ಐದು ಬೇರೆ ಬೇರೆ ತಂಡದ ವಿಶೇಷ ತನಿಖಾಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡಿ ವಿಶ್ಲೇಷಣೆಗೆ ಒಳ ಪಡಿಸಿ ರಾಜ್ಯದ ಗಮನ ಸೆಳದ ಸತ್ಯಂಪೇಟ್ ರವರ ಕೊಲೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಚಾಕಚಕ್ಯತೆಯಿಂದ ಬೇಧಿಸಿ ಸತ್ಯಂಪೇಟ್ ರವರ ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಿರುತ್ತಾರೆ. ಬಂದಿತ ಎರಡು ಜನ ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು.  
ಸದರಿ ಆರೋಪಿತರಾದ ದಯಾನಂದ ಹಾಗೂ ಶಾಮರಾವ ರವರನ್ನು ಪುನಃ ಪೊಲೀಸ ಕಷ್ಟಡಿಗೆ ಪಡೆದು ತನಿಖೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ರವರು ಕುತೂಹಲ ಕೆರಳಿಸಿದ ಕೊಲೆ ಪ್ರಕರಣವನ್ನು ಬೇಧಿಸಿದ ತಂಡವನ್ನು ಶ್ಲಾಘಿಸಿ 25,000/- ರೂಪಾಯಿಗಳ ನಗದು  ಬಹುಮಾನವನ್ನು ಘೋಷಿಸಿರುತ್ತಾರೆ.   
ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಲಿಂಗಣ್ಣ ಸತ್ಯಂಪೇಟ ರವರ ಕೊಲೆ ಪ್ರಕರಣದ ಇಬ್ಬರೂ ಆರೋಪಿತರನ್ನು ಹಾಗೂ ಸುಲಿಗೆಗೆ ಒಳಗಾದ ಲಿಂಗಣ್ಣ ಸತ್ಯಂ ಪೇಟ ರವರ ಮೊಬಾಯಿಲ್ ಪೊನ್, ನಗದು ಹಣ, ಹ್ಯಾಂಡ ಬ್ಯಾಗ, ಶಾಲು, ಅವರಿಂದ ರಚಿತವಾದ ಕೃತಿಗಳು, ಬಸವ ಮಾರ್ಗ ಪತ್ರಿಕೆಯ ಚಂದಾ ರಸೀದಿ ಪುಸ್ತಕ, ಬಸ್ ಪಾಸ ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. 

No comments: