POLICE BHAVAN KALABURAGI

POLICE BHAVAN KALABURAGI

05 May 2012

GULBARGA DIST REPORTED CRIMES


ಕೊಲೆಗೆ ಪ್ರಯತ್ನ :
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ ಭಾಗಣ್ಣ ತಂದೆ ಸೊಮಣ್ಣ ಕೋಳಿ ಸಾ|| ದುದನಿ ತಾ|| ಅಕ್ಕಲಕೊಟ ಮಹಾರಾಷ್ಟ್ರ ರಾಜ್ಯ  ದವರು ನನ್ನ ಮಗಳಾದ ಬಸಮ್ಮ ಇವಳಿಗೆ ಗೋಳನೂರ ಗ್ರಾಮದ ಸಿದ್ದು ತಂದೆ ನಾಗಪ್ಪ ಬಿದನೂರ ಇವನೊಂದಿಗೆ ಮದುವೆ ಮಾಡಿದ್ದು, ಮದುವೆಯ ಕಾಲಕ್ಕೆ 5 ತೋಲಿ ಬಂಗಾರ  ಐವತ್ತು ಸಾವಿರ ವರದಕ್ಷಣೆ ಅಂತಾ ಮಾತಾಡಿದ್ದು, ಅದರಲ್ಲಿ 5 ತೋಲಿ ಬಂಗಾರ 40 ಸಾವಿರ ರೂಪಾಯಿ ಕೊಟ್ಟು ಒಂದು ವರ್ಷದ ಹಿಂದೆ ಘತ್ತರಗಿ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಆದ 4 ತಿಂಗಳ ನಂತರ ಅವಳ ಗಂಡ, ಅತ್ತೆ ಪಾರ್ವತಿ, ಆಯಿ ಸುಮಿತ್ರಾ, ಅವರ ಸಂಬಂಧಿ ದತ್ತು ಕುಲಕರ್ಣಿ ಇವರೆಲ್ಲರೂ ಕೂಡಿಕೊಂಡು 10 ಸಾವಿರ ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದು ದಿನಾಂಕ: 04-05-2012 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಬಸಮ್ಮ ಇವಳ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ. 44/2012 ಕಲಂ 498[ಎ], 307, 504  ಸಂ. 34 ಐಪಿಸಿ ಮತ್ತು 3, 4 ಡಿ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ  ಶಾಂತಪ್ಪ ತಂದೆ ಬಸವಂತರಾಯ ಬಿರದಾರ ಸಾ: ವೆಂಕಟೇಶ್ವರ ಲಾಡ್ಜ  ಹಿಂದುಗಡೆ ಸಿರಗಾಪೂರ ಬಿಲ್ಡಿಂಗ ರೇಲ್ವೆ ಸ್ಟೇಷನ ಏರಿಯಾ  ಗುಲಬರ್ಗಾರವರು ನಾನು ದಿನಾಂಕ 05-05-12 ರಂದು ಜಗತ ಸರ್ಕಲದಿಂದ ಎಸ್.ವಿ.ಪಿ ಸರ್ಕಲ ಮೇನ ರೋಡಿನಲ್ಲಿ ಬರುವ ಅನ್ನಪೂರ್ಣ ಕ್ರಾಸ್ ಹತ್ತಿರ ರೋಡ ದಾಟಿ ಬಸವೇಶ್ವರ ಆಸ್ಪತ್ರೆಗೆ ಹೋಗಲು ಬರುತ್ತಿದ್ದಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32 ಇಎ-9517 ನೇದ್ದರ ಚಾಲಕನು ಅತೀವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ  ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ   ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:54/2012  ಕಲಂ: 279,338  ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಪಾಂಡುರಂಗ ತಂದೆ ವೀರಭದ್ರಪ್ಪ ವಾರದ ಉ|| ಸೆಕ್ಯೂರಿಟಿ ಗಾರ್ಡ, ಸಾ|| ರಾಮ ನಗರ ರಿಂಗ್ ರೋಡ ಗುಲಬರ್ಗಾ ರವರು ನಾನು ದಿನಾಂಕ 29-04-2012 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದ ಗೇಟ್ ಹತ್ತಿರ, ಅಂದಾಜು 40 – 45 ವರ್ಷದ ಅಪರಿಚಿತ ಗಂಡು ಮನುಷ್ಯನು ಯಾವುದೋ ಕಾಯಿಲೆಯಿಂದ ಬಳಲುತ್ತಾ ಅಸ್ವಸ್ಥನಾಗಿ ಬಿದ್ದಿದ್ದನು. ಆಗ ಅಂಬುಲೆನ್ಸ್ ವಾಹನ 108 ಕ್ಕೆ ಫೋನ್ ಮಾಡಿದಾಗ ವಾಹನ ಬಂದು ಸದರಿ ವ್ಯಕ್ತಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಸೇರಿಕೆ ಮಾಡಿತ್ತು. ಆ ಮನುಷ್ಯನು ಆಸ್ಪತ್ರೆಯಲ್ಲಿ ದಿನಾಂಕ 30-04-2012ರಂದು ಮೃತಪಟ್ಟಿರುತ್ತಾನೆಂದು ತಿಳಿದುಬಂದಿರುತ್ತದೆ. ಮೃತನ ವಿಳಾಸ ಪತ್ತೆ ಹಚ್ಚುದಕ್ಕಾಗಿ ನಾನು ಹಾಗು ನನ್ನಂತೆ ದೇವಸ್ಥಾನದಲ್ಲಿ ಕರ್ತವ್ಯ ಮಾಡುವ ಶಾಮ ತಂದೆ ಶರಣಪ್ಪ ಬಬಲಾದ ಎಷ್ಟು ತಿರುಗಾಡಿದರು ಮೃತನ ವಿಳಾಸ ಪತ್ತೆಯಾಗಿರುವದಿಲ್ಲಾ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 4/12 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀ ನರೇಶ ತಂದೆ ಸಾಯಪ್ಪಾ ತಲಾರಿ ಜಾ|| ಕಬ್ಬಲಿಗೇರ ಸಾ|| ಖಂಡೆರಾಯನಪಲ್ಲಿ ಗ್ರಾಮ  ತಾ|| ಸೇಡಂ ರವರು ನಮ್ಮ ಹೊಲದಲ್ಲಿ ನಿನ್ನೆ ದಿನಾಂಕ 04-05-2012 ರಂದು ನಾನು ಬೊರಿಂಗದ ಪೈಪುಗಳು ತೆಗೆದು ಕೆಸರು ಸ್ವಚ್ಚ್ ಮಾಡಿ ರಾತ್ರಿಯಾಗಿದ್ದರಿಂದ ಹೊಲದಲ್ಲಿ ಮಲಗಿದಾಗ ನಮ್ಮ ಪಕ್ಕದ ಹೊಲದವರಾದ ದೇವಿಂದ್ರಪ್ಪಾ ತಂದೆ ಫಕೀರಪ್ಪ ಹಾಗು ರಾಮುಲು. ನರಸೀಂಹಲು ಮತ್ತು ನಂದಪ್ಪಾ ನಾಲ್ಕು ಜನರು ಕೂಡಿ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಅವಾಚ್ಯವಾಗಿ ಬೈದು ನನಗೆ ಕೊಲೆ ಮಾಡುವ ಉದೇಶದಿಂದ ದೇವಿಂದ್ರಪನು ಕೊಡಲಿಯಿಂದ ತೆಲೆಗೆ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅತನ ಸಂಗಡಿಗರು ಕೈಯಿಂದ ಹಾಗು ಬಡಿಗೆಯಿಂದ ಹೊಡೆಬಡೆ ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ 447.323.324.504.ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: