ಗುಲಬರ್ಗಾ ನಗರದ ಚೌಕ ಠಾಣೆ ವ್ಯಾಪ್ತಿಯಲ್ಲಿ ಹಾಡು ಹಗಲೆ ಬರ್ಬರ ಹತ್ಯೆ ಮಾಡಿದ ಕೊಲೆ ಆರೋಪಿಯ ಬಂದನ:
ಗುಲಬರ್ಗಾ ನಗರದಲ್ಲಿ ದಿನಾಂಕ: 02-04-2012 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯ ನೇತಾಜಿ ಚೌಕ ಶಾಂತೇಶ್ವರ ಅಂಗಿಡಯ ಮುಂದೆ ಪಂಡಿತ ತಂದೆ ಶರಣಪ್ಪಾ ನರೋಣಿ ಸಾ|| ಕಡಗಂಚಿ ಇವರನ್ನು ಆಸ್ತಿ ವಿಷಯದಲ್ಲಿ ಹಾಡು ಹಗಲೆ ಜನನಿಬಿಡ ಪ್ರದೇಶದಲ್ಲಿ ಮಚ್ಚಿನಿಂದ ಕುತ್ತಿಗೆಯ ಎಡ ಮತ್ತು ಬಲ, ಬಲಗೈ ತೋರು ಬೆರಳಿನ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಭಾರಿಗಾಯ ಪಡಿಸಿ ಬರ್ಬರ ಹತ್ತೆ ಮಾಡಿ ಪರಾರಿಯಾಗಿದ್ದರಿಂದ ಚೌಕ ಠಾಣೆ ಗುನ್ನೆ ನಂ:54/2012 ಕಲಂ 143, 147, 148, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆ ಕುರಿತು ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು, ಗುಲಬರ್ಗಾ. ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮತ್ತು ಶ್ರೀ ಎ.ಡಿ ಬಸಣ್ಣನವರ್ ಪೊಲೀಸ್ ಉಪಾಧೀಕ್ಷಕರು, ಬಿ-ಉಪವಿಭಾಗ ರವರ ಮಾರ್ಗ ದರ್ಶನದಲ್ಲಿ ಶ್ರೀ ಡಿ.ಜಿ ರಾಜಣ್ಣ ಪಿಐ ರೋಜಾ ಠಾಣೆ, ಚೌಕ ಠಾಣೆಯ ಪಿ.ಎಸ.ಐ ಸಂಗಪ್ಪಾ ಮತ್ತು ಸಿಬ್ಬಂದಿಯವರಾದ ಸಿದ್ರಾಮಪ್ಪಾ, ಶಿವಾನಂದ, ಮಹಿಬೂಬಸಾಬ, ಮಕ್ತುಮಸಾಬ ಪಿಸಿ ರವರು ಕೂಡಿಕೊಂಡು ದಿನಾಂಕ: 03-04-2012 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ನಗರದ ರಿಂಗ ರೋಡಿನ ರಾಮನಗರ ಹತ್ತಿರ ಕಾರ್ಯಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಶಾಂತಪ್ಪಾ ಬಸಟ್ಟಿ ಹುಮನಬಾದ ವ|| 30 ವರ್ಷ ಉ|| ದರ್ಬಾರ ಹೋಟೆಲದಲ್ಲಿ ಕೆಲಸ ಸಾ|| ಹೊಳಕೇರಾ ತಾ|| ಚಿತ್ತಾಪೂರ ಹಾ||ವ|| ದರ್ಬಾರ ಹೋಟೆಲ್ ಗುಲಬರ್ಗಾ ಅಂತಾ ತಿಳಿಸಿದ್ದರಿಂದ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.
No comments:
Post a Comment