POLICE BHAVAN KALABURAGI

POLICE BHAVAN KALABURAGI

20 April 2012

GULBARGA DIST REPORTED CRIMES

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೇವಿಂದ್ರ ಕುಮಾರ ತಂದೆ ಶರಣಪ್ಪಾ ನಗನೂರ ಸಾ:ಹನುಮಾನ ನಗರ ಶಹಾಬಾದ ರವರು ನನ್ನ ಅಣ್ಣನ ಮಗಳಾದ ಪ್ರೇಮಾ ಇವಳು ಮನೆಯ ಹಿಂದೆ ಆಟ ಆಡುತ್ತಿರುವಾಗ ರವಿ ಇತನು ಅವಳನ್ನು ಚುಡಾಯಿಸಿ ಅವಾಚ್ಯವಾಗಿ ಬೈಯುತ್ತಿದ್ದರಿಂದ ಅತನನ್ನು ಗದರಿಸಿ ಕಳುಹಿಸಿರುತ್ತೆನೆ.ನಂತರ ರವಿ ತಂದೆ ರಾಮಸ್ವಾಮಿ, ರಾಜು ತಂದೆ ಗಂಗಾರಾಮ, ರಮೇಶ ತಂದೆ ಶಿವಾಜಿ, ಶಿವಕುಮಾರ ತಂದೆ ರಾಮಸ್ವಮಿ, ಸೂರ್ಯಕಾಂತ ಕುಂಬಾ, ಬಾಬು ವಡ್ಡರ, ಅರ್ಜುನ, ಕೊಳ್ಳಪ್ಪಾ ಸಾ|| ಎಲ್ಲರೂ ವಡ್ಡರ ರವ ರು ನನ್ನ ಕರೆದು ಅವಾಚ್ಯವಾಗಿ ಬೈದು ಪೈಪನಿಂದ ಹೊಡೆದಿರುತ್ತಾರೆ. ನನ್ನ ಹೆಂಡತಿಯಾದ ರೇಣುಕಾ, ತಾಯಿಯಾದ ತಾರಬಾಯಿ ಮತ್ತು ಮಗಳು ಪ್ರಿತಿ ಇವರಿಗೂ ಸಹ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ: 147 341 323 324 504 ಸಂ;149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಸೇಡಂ ಪೊಲೀಸ ಠಾಣೆ:ಶ್ರೀಮತಿ ತುಳಜಮ್ಮ ಗಂಡ ಚಂದಪ್ಪ ಭಗವಂತನೋರ ಸಾ|| ಮೀನ ಹಾಬಾಳ ಸೇಡಂರವರು ನನ್ನ ಗಂಡನಾ ಚಂದಪ್ಪಾ ಇತನು ದಿನಾಂಕ:19-04-2012 ರಂದು ಮುಂಜಾನೆ 0800 ಗಂಟೆ ಸುಮಾರಿಗೆ ಟಂಟಂ ತಗೆದುಕೊಂಡು ಹೋಗಿ ಊಟಕ್ಕೆ ಬರದೆ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನನ್ನ ಮಗನಾದ ಚನ್ನಬಸಪ್ಪ ಇತನು ತಿಳಿಸಿದ್ದೇನೆಂದರೆ ನಮ್ಮ ಬಾಬ ಚಂದಪ್ಪ ಭಗವಂತನೂರ ಇವನು ಸಂಜೆಯವರೆಗೆ ಸೇಡಂದಲ್ಲಿ ಆಟೋ ಬಾಡಿಗೆ ಹೊಡೆದು ಟಂಟಂ ತಗೆದುಕೊಂಡು ನಮ್ಮೂರಿಗೆ ರಾತ್ರಿ 9-30 ಗಂಟೆ ಸುಮಾರಿಗೆ ಬರುವಾಗ ಸೇಡಂ ಗುಲಬರ್ಗಾದ ಮುಖ್ಯ ರಸ್ತೆಯ ಮೇಲೆ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಂದು ಬಿಳಿ ಬಣ್ಣದ ಕಾರು ಸಂಖ್ಯೆ ಕೆಎ-24 ಎಮ್-1616 ನ್ನೇದ್ದರ ಕಾರ ಚಾಲಕನಾದ ದತ್ತಾತ್ರಯ @ ದತ್ತು ತಂದೆ ಶೇಷಯ್ಯ ಐನಾಪೂರ ಸಾ: ಕೊಮಟಿಗಲ್ಲಿ ಸೇಡಂ ಇವನು ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದು ಟಂಟಂಗೆ ಡಿಕ್ಕಿ ಡಿಕ್ಕಿಪಡಿಸಿ ನನ್ನ ಗಂಡನನ್ನು ಮೃತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 87/2012 ಕಲಂ,279,337,304[ಎ]ಐಪಿಸಿ ಸಂಗಡ ,187 ಐ,ಎಂ,ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಬೆಂಕಿ ಅಪಘಾತ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಶಿವಮೂರ್ತಿ ತಂದೆ ಮಾಂತಯ್ಯಾ ಹಿರೇಮಠ ಉ|| ಹೋಟೆಲ್ ಶ್ರೀದೇವಿಯಲ್ಲಿ ಮ್ಯಾನೇಜರ್ ಕೆಲಸ ಜ್ಯಾ|| ಜಂಗಮ ಸಾ|| ಮನೆ ನಂ 71/1+2 ಉದಯ ನಗರ ಗುಲಬರ್ಗಾ ರವರು ದಿನಾಂಕ: 19/04/2012 ರ ನಸುಕಿನ ವೇಳೆ 4.00 ಗಂಟೆಯಿಂದ 5.00 ಗಂಟೆಯ ಅವಧಿಯಲ್ಲಿ ಆಕಸ್ಮಿಕವಾಗಿ ವಿಧ್ಯುತ ಶಾರ್ಟ ಸಕ್ಯೂರ್ಟದಿಂದ ಮನೆಯಲ್ಲಿಟ್ಟಿದ್ದ ವಸ್ತುಗಳು ನಗದು ಹಣ ಇತ್ಯಾದಿ ಮನೆ ಬಳಕೆಯ ವಸ್ತುಗಳಿಗೆ ಬೆಂಕಿ ಹತ್ತಿ ಸುಮಾರು 1,54,760=00 ರೂಪಾಯಿಗಳ ಕಿಮ್ಮತ್ತಿನವು ಸುಟ್ಟಿರುತ್ತವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

No comments: