ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 15-4-2012 ರಂದು ಮಧ್ಯಾಹ್ನ ತಾಜಸುಲ್ತಾನಪೂರ ಗ್ರಾಮ ಸೀಮಾಂತರದ ರಾಜು ನಂದಗಾವ್ ಇವರ ಹೊಲದ ಬೇವಿನ ಗಿಡದ ಕೆಳಗಡೆ ಮಹೇಂದ್ರ ತಂದೆ ಆನಂದಪ್ಪಾ ಅಟ್ಟೂರ , ದರ್ಮಣ್ಣ ತಂದೆ ಮರಪ್ಪಾ ಕುಮಸಿ , ರಾಜು ತಂದೆ ಬಾಬುರಾವ ಸುಲ್ತಾನಪೂರ, ಅಂಬರಾಯ ತಂದೆ ಹಣಮಂತರಾಯ ಸುಲ್ತಾನಪೂರ, ಮತ್ತು ಶರಣಪ್ಪಾ ತಂದೆ ಪೀರಪ್ಪಾ ಸುಲ್ತಾನಪೂರ ರವರು ಅಂದರ ಬಾಹರ ಇಸ್ಪೇಟ ಆಡುತ್ತಿರುವಾಗ ಪಂಚರ ಸಮಕ್ಷಮ ಪಿ.ಎಸ.ಐ ಪ್ರದೀಪ ಕೊಳ್ಳಾ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಹಣ 1935/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 113/2012 ಕಲಂ. 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 15-04-12 ರಂದು ಸಾಯಂಕಾಲ ಸುಮಾರಿಗೆ ಸೈಯ್ಯದ ಚಿಂಚೋಳಿ ಸೀಮೆಯಲ್ಲಿ ಬರುವ ಶರಣಪ್ಪ ಹೋಳಕುಂದಿ ಇವರ ಹೊಲದಲ್ಲಿ ಶರಣಬಸಪ್ಪಾ ತಂದೆ ನಾಗೇಂದ್ರ ಅಣಕಲ್ ಸಾ|| ಬ್ಯಾಂಕ ಕಾಲೋನಿ , ಪ್ರವೀಣ ತಂದೆ ಗಜಾನನ ಲುಮಟೆ ಸಾ|| ಶಹಾ ಬಜಾರ, ಮಹೇಶ ತಂದೆ ದತ್ತಾತ್ರೆಯ ಪಿಂಪಳೆ ಸಾ|| ಶಹಾ ಬಜಾರ, ಮಂಜು @ ಮಂಜುನಾಥ ತಂದೆ ಮಲ್ಲಣ್ಣ ಪಾಟೀಲ ಸಾ|| ಶಹಾ ಬಜಾರ , ಅವಿನಾಶ ತಂದೆ ಅಂಬದಾಸ ಸಾ|| ಶಹಾಬಜಾರ, ಪ್ರಶಾಂತ ತಂದೆ ಶರಣಪ್ಪಾ ದಂಡಪಗೊಳ, ವಿನಾಯಕ ತಂದೆ ವಿಠಲ್ ಶಾಲಗಾರ ಮತ್ತು ಕಿರಣ ತಂದೆ ಶಂಕರ ಬೇಲಿ ಸಾ|| ಶಹಾಬಜಾರ ರವರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಡಿ.ಎಸ್.ಪಿ.ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮತ್ತು ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಮತ್ತು ಠಾಣೆಯ ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3070/- ರೂ. ಮತ್ತು ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರ ಮೇರೆಗೆ ಠಾಣೆ ಗುನ್ನೆ ನಂ: 114/2012 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment