POLICE BHAVAN KALABURAGI

POLICE BHAVAN KALABURAGI

15 April 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸೇಡಂ ಪೊಲೀಸ ಠಾಣೆ:ಶ್ರೀ ಅಬ್ದುಲ್ ರಹೀಂ ತಂದೆ ಶೇಖಚಾಂದಸಾಬ ನಾಡೆಪಲ್ಲಿ ಸಾ:ಮಸ್ಜಿದ್-ಎ-ಮಹೆಲ್ ಸೇಡಂರವರು ನಾನು ದಿನಾಂಕ: 14-04-2012 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ರಮೇಶ ತಾಪಾಡಿಯಾ ಸೇಠ ರವರು ನನಗೆ ದೂರವಾಣಿ ಮುಖಾಂತರ ತಿಳಿಸಿದ್ದೇನೆಂದರೆ, ನಿಮ್ಮ ಅಣ್ಣನ ಮಗ ಮಹ್ಮದ್ ಎಜಾಜ ನಾಡೆಪಲ್ಲಿ ಇತನು ಮೋಟಾರು ಸೈಕಲ್ ನಂ-ಕೆ.ಎ-32-ಯು-3755 ನೇದ್ದರ ಮೇಲೆ ಸೇಡಂದಿಂದ ಮಳಖೇಡ ಕಡೆಗೆ ಹೋಗುತ್ತಿದ್ದಾಗ ಸೇಡಂ-ಗುಲಬರ್ಗಾ ಮುಖ್ಯ ರಸ್ತೆಯ ಕೊಂಕನಳ್ಳಿ-ಹೊಸಳ್ಳಿ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿರುತ್ತಾನೆ ನಾನು ಮತ್ತು ನನ್ನ ಮಗನಾದ ಮಹ್ಮದ್ ಸಲೀಂ ಇಬ್ಬರೂ ಕೂಡಿ ಹೊಸಳ್ಳಿ-ಕೊಂಕನಳ್ಳಿ ಗೇಟ್ ಹತ್ತಿರ ಹೋಗಿ ನೋಡಲಾಗಿ ಮಹ್ಮದ್ ಎಜಾಜ ಇತನು ಸೇಡಂದಿಂದ ಮಳಖೇಡಕ್ಕೆ ರೈಲ್ವೆ ಟಿಕೆಟ್ ರಿಜರ್ವರೆಸನ್ ಮಾಡಿಕೊಂಡು ಬರಲು ಅಂತ ಹೋಗುತ್ತಿರುವಾಗ ತನ್ನ ಮೋಟಾರು ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಹೊಸಳ್ಳಿ ಗೇಟ್ ಹತ್ತಿರ ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಟ್ರಾಕ್ಟರ್ ಟ್ರಾಲಿಗೆ ಡಿಕ್ಕಿ ಪಡಿಸಿ ಎಡಮಗ್ಗಲಿಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ ಮತ್ತು ಎರಡೂ ಕೈಗಳಿಗೆ ಭಾರಿ ಗುಪ್ತಗಾಯಗಳಾಗಿ ಎರಡೂ ಕೈಗಳು ಮುರಿದಿರುತ್ತವೆ. ಎಡಗಾಲಿಗೆ ತರಚಿದಗಾಯ ಮತ್ತು ಎಡಕಿವಿಯಿಂದ ರಕ್ತ ಸೋರಿರುತ್ತದೆ. ನಾನು ಮತ್ತು ನನ್ನ ಮಗ ಖಾಸಗಿ ಜೀಪಿನಲ್ಲಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ ಮಹ್ಮದ್ ಎಜಾಜ ಇತನು ಮೃತಪಟ್ಟಿರುತ್ತಾನೆ ಅಂತ ತಿಳಿಸಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,

ಕೊಲೆ ಪ್ರಕರಣ:

ಮುಧೋಳ ಪೊಲೀಸ್ ಠಾಣೆ: ಶ್ರೀಮತಿ ಕಾಶಮ್ಮಾ ಗಂಡ ಕಿಸ್ಟಪ್ಪಾ ದಾಮರಗಿದ್ದಾ ಸಾ|| ಮುಧೋಳ ರವರು ನಮ್ಮ ತಂದೆಗೆ 2 ಗಂಡು ನಾನೊಬ್ಬಳು ಹೆಣ್ಣು ಮಗಳಿದ್ದು, ನನಗೆ ಮುಧೋಳ ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಈಗ 6 ವರ್ಷಗಳ ಹಿಂದೆ ನಮ್ಮ ತಮ್ಮಂದಿರಾದ ಶರಣಪ್ಪಾ ಹಾಗೂ ಅಂಜಲಪ್ಪಾ ಇವರು ಹೊಲಮನೆ ಹಂಚಿಕೊಂಡಿರುತ್ತಾರೆ. ಈಗ 3 ತಿಂಗಳ ಹಿಂದಿನಿಂದ ಮುಧೋಳ ಸೀಮೆಯಲ್ಲಿರುವ ಶರಣಪ್ಪಾ ಹಾಗೂ ಅಂಜಲಪ್ಪಾ ಇವರ ನಡುವೆ ಇರುವ ಹೊಲದ ಬಾಂದಾರಿ ನಡುವೆ ಇರುವ ಗಿಡಗಳು ಕಡಿಯುವ ಸಂಬಂದ ಇವರ ನಡುವೆ ತಕರಾರು ನಡೆದಿತ್ತು. ದಿನಾಂಕಃ 14-04-2012 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಿನ್ನ ತಮ್ಮ ಶರಣಪ್ಪನಿಗೆ ಭಾರಿ ಗಾಯಗಳಿಂದ ಮುಧೋಳ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತಾರೆ ಅಂತಾ ಹೇಳಿದ್ದರಿಂದ, ನಾನು ಆಸ್ಪತ್ರೆಗೆ ಬಂದು ನೋಡಿದಾಗ ನನ್ನ ತಮ್ಮ ಶರಣಪ್ಪಾ ಅಲ್ಪ ಸ್ವಲ್ಪ ಮಾತನಾಡುತ್ತಿದ್ದನು ಅವನಿಗೆ ವಿಚಾರಿಸಲಾಗಿ ಮುಂಜಾನೆ 8 ಗಂಟೆಯ ಸುಮಾರಿಗೆ ಹೊಲದಲ್ಲಿದ್ದ ಗಿಡಗಳು ಕಡಿಯುವ ಕಾಲಕ್ಕೆ ಅಣ್ಣನಾದ ಅಂಜಲಪ್ಪಾ ಹಾಗೂ ಅವನ ಮಗ ಅಶೋಕ ನನ್ನ ಸಂಗಡ ಜಗಳ ತೆಗೆದು ಕೊಡಲಿಯಿಂದ ತಲೆಗೆ, ಬಲಗಾಲ ಮೊಣಕಾಳಿಗೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ತಿಳಿಸಿದನು. ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ 37/2012 ಕಲಂ 302, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರೇಖು ತಂದೆ ದಾನು @ ದಾವುಜಿ ಚವ್ಹಾಣ ಸಾ:ಭೀಮನಾಳ ತಾಂಡಾ ತಾ:ಜಿ:ಗುಲಬರ್ಗಾ ರವರು ನಾನು ನಿನ್ನೆ ದಿನಾಂಕ:13-04-2012 ರಂದು ಕಮಲಾಪೂರದಲ್ಲಿ ಖಾಸಗಿ ಕೆಲಸವಿದ್ದ ಪ್ರಯಕ್ತ ಬೆಳಿಗ್ಗೆ 11-00 ಗಂಟೆಗೆ ಭೀಮನಾಳ ಕ್ರಾಸ ಹತ್ತಿರ ಬಂದು ಕಮಲಾಪೂರ ಕಡೆಗೆ ಹೋಗುವ ವಾಹನಗಳಿಗೆ ಕೈ ಮಾಡುತ್ತಾ ನಿಂತುಕೊಂಡಾಗ ಅಂದಾಜು 11-30 ಗಂಟೆಗೆ ಹುಮನಾಬಾದ ಕಡೆಯಿಂದ ಒಬ್ಬ ಹಿರೋ ಹೊಂಡಾ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ನನಗೆ ಕಣ್ಣಿಗೆ ಕತ್ತಲು ಬಂದು ನೆಲದ ಮೇಲೆ ಬಿದ್ದಿದ್ದು. ಸ್ವಲ್ಪ ಸಮಯದ ನಂತರ ನನಗೆ ಪ್ರಜ್ಞೆ ಬಂದಿದ್ದು ಎದ್ದು ನೋಡಲಾಗಿ ನನ್ನ ಎಡಕಾಲಿನ ಮೊಳಕಾಲ ಕೆಳಗೆ ಕಪ್ಪಗಂಡಿಗೆ ಒಳಪೆಟ್ಟಾಗಿ ಗುಪ್ತಗಾಯವಾಗಿದ್ದು. ನಾನು ನರಳಾಡುತ್ತಿರುವ ಸಪ್ಪಳ ಕೇಳಿ ನಮ್ಮ ತಾಂಡಾದ ಮುನ್ನು ತಂದೆ ಡಾಕು ಚವ್ಹಾಣ ವಯ:55 ವಿಚಾರಿಸಲಾಗಿ, ನನಗೆ ಯಾವುದೋ ಒಬ್ಬ ಮೋಟಾರ ಸೈಕಲ ಸವಾರನು ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಆತನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ. ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿರುತ್ತೆನೆ . ಕಾರಣ ನನಗೆ ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನ ಮೇಲೆ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:44/2012 ಕಲಂ 279, 337 ಐಪಿಸಿ ಸಂ 187 ಐಮೆವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: