POLICE BHAVAN KALABURAGI

POLICE BHAVAN KALABURAGI

02 April 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:
ಶ್ರೀ ಪಾಪಣ್ಣಾ ತಂದೆ ಸೋಮಯ್ಯಾ ಗದ್ವಾಲ ಸಾಆರಾಧನಾ ಶಾಲೆ ಹತ್ತಿರ ಶಹಾ ಬಜಾರ ಗುಲಬರ್ಗಾರವರು ನಾನು ಮತ್ತು ನನ್ನ ಮಗಳಾದ ಶರಣಮ್ಮಾ ವಃ 11 ವರ್ಷ ಇಬ್ಬರು ಕೂಡಿ ಆಳಂದ ಚೆಕ್ ಪೊಸ್ಟ ಹತ್ತಿರ ದಿನಾಂಕ: 02-04-2012 ರಂದು ಕಲ್ಲು ಒಡೆಯುವ ಕೆಲಸ ಕುರಿತು ಟ್ರಾಕ್ಟರ ನಂ. ಕೆ.ಎ 32 8254, ಟ್ರಾಲಿ ನಂ. 8255 ನೇದ್ದರಲ್ಲಿ ಹೋಗುತ್ತಿದ್ದಾಗ ಶರಣಮ್ಮಾ ಇವಳು ಮುಂದೆ ಟ್ರಾಕ್ಟರ ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದು ನಾನು ಹಿಂದೆ ಟ್ರಾಲಿಯಲ್ಲಿ ಕುಳಿತು ಹೋಗುತ್ತಿದ್ದಾಗ ಬೆಳಿಗ್ಗೆ 11-30 ಗಂಟೆಗೆ ಸುಮಾರಿಗೆ ಮುಂದೆ ಶೇಖ ರೋಜಾ ಏರಿಯಾದಲ್ಲಿ ಬರುವ ಜಿನಿಯಸ್ ಶಾಲೆಯ ಹತ್ತಿರ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮಲೆ ಕಟ್ ಹೊಡೆದಾಗ ಶರಣಮ್ಮಾ ಇವಳು ಟ್ರಾಕ್ಟರ ಇಂಜಿನ ಮೇಲಿಂದ ಕೆಳಗೆ ಬಿದ್ದು ಟ್ರಾಕ್ಟರ ಟ್ರಾಲಿಯ ಎಡಭಾಗದ ಟೈರ ಹಾಯ್ದು ಎದೆಗೆ ಮತ್ತು ಕುತ್ತಿಗಿಗೆ, ಗದ್ದಕ್ಕೆ ಭಾರಿ ಗಾಯವಾಗಿರುತ್ತದೆ.ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮದ್ಯದಲ್ಲಿ ಶರಣಮ್ಮಾ ಇವಳು ಮೃತ ಪಟ್ಟಿರುತ್ತಾಳೆ, ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ,279 , 304(ಎ) ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಮಳಖೇಡ ಪೊಲೀಸ ಠಾಣೆ.
ಶ್ರೀ ಮಹಿಬೂಬ ತಂದೆ ಬಾಬುಮಿಯಾ ನದಾಪ ಸಾ:ಯಡಗಾ ತಾ:ಸೇಡಂರವರು ನಾನು ಮತ್ತು ಮೋಹಿನ ಇಬ್ಬರು ದಿನಾಂಕ 01-04-2012 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಮ್ಮೂರ ಮಲಿಕಸಾಬ ದರ್ಗಾದ ಹತ್ತಿರ ರೋಡಿನ ಪಕ್ಕ ಕುಳಿತಾಗ ಹಣಮಂತ ತಂದೆ ರಾಮಲು, ಗಂಗಾಧರ ತಂದೆ ಸಾಬಣ್ಣ, ಸಾಬಣ್ಣ ತಂದೆ ರಾಜಪ್ಪ, ರಾಜಪ್ಪ ತಂದೆ ಸಾಬಣ್ಣ, ಮಲ್ಲಪ್ಪ ತಂದೆ ಸಾಬಣ್ಣ, ಪ್ರಕಾಶ ತಂದೆ ಸುಭಾಶ ಇವರುಗಳು ಬಂದು, ದಿನಾಂಕ 01-04-2012 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಮ್ಮೂರ ಮೋಹಿನ ಇವನ ಅಣ್ಣನ ಮಗಳಿಗೆ ಗಂಗಾಧರ ಇವನು ಬೈದು ಹೋಗಿದ್ದರಿಂದ ಗಂಗಾಧರ ಇವನಿಗೆ ಬೈದು ಕೈಯಿಂದ ಹೊಡೆದದ್ದನ್ನು ವೈಷಮ್ಯ ಬೆಳಸಿ ನಮಗೆ ಕೋಲೆ ಮಾಡುವ ಉದ್ದೇಶದಿಂದ ಮೋಹಿನ ಇವನಿಗೆ ಹೊಡೆದಿದ್ದು, ನನಗೆ ತಲವಾರದಿಂದ ತಲೆಗೆ ಹೋಡೆದು ಭಾರಿ ಗಾಯಗೊಳಿಸಿ ಕಾಲಿನಿಂದ ಒದ್ದು ಕೋಲೆ ಮಾಡಲು ಪ್ರಯತ್ನಿಸಿ ಸ್ಥಳದಲ್ಲಿಯೇ ತಲವಾರ ಮತ್ತು ಮೋಟಾರ ಸೈಕಲ ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 25/2012ಕಲಂ 143.147.148.323.324. 307.504.506.ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸುಲೆಪೇಟ ಪೊಲೀಸ್ ಠಾಣೆ:
ಶ್ರೀ ಶ್ಯಾಮರಾವ ತಂದೆ ಗುಂಡಪ್ಪ ಗಂಗನಪಳ್ಳಿ [ರಾಮತೀರ್ಥ]ಸಾಃ ಹಲಚೇರಾರವರು ನಾನು ದಿನಾಂಕಃ 29/03/2012 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ನನ್ನ ಪಾಲಿಗೆ ಬಂದ ಬಯಲು ಜಾಗೆಯಲ್ಲಿ ಕಟ್ಟಿಗೆ ಗುಂಜಿಯನ್ನು ನೆಡುತ್ತಿದ್ದಾಗ ಜಾಗೆಯ ವೈಮನಸ್ಸಿನಿಂದ ನನ್ನ ತಮ್ಮನಾದ ಚಂದ್ರಕಾಂತ ಗಂಗನಪಳ್ಳಿ ಮತ್ತು ಲಕ್ಷ್ಮೀಬಾಯಿ ಗಂಗನಪಳ್ಳಿ ಇಬ್ಬರೂ ಸೇರಿಕೊಂಡು ಅವಾಚ್ಯವಾಗಿ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2012 ಕಲಂ. 341, 324, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀಮತಿ ನಜಿಮಾ ಬೆಗಂ ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಹಿರಿಯ ಮತ್ತು ವಿಳಾದ ಪ್ರಾಥಮಿಕ ಉರ್ದು ಶಾಲೆ ಕಲವಗಾ (ಬಿ) ರವರು ನಾನು ಮತ್ತು ಸಹ ಪಾಠಿ ಶಿಕ್ಷಕರು ದಿನಾಂಕ:31-03-2012 ರಂದು ಎಂದಿನಂತೆ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಬಂದಿರುತ್ತೆವೆ, ದಿನಾಂಕ:02-04-2012 ರಂದು ಬೆಳಗ್ಗೆ 9-15 ಗಂಟೆಯ ಸುಮಾರಿಗೆ ಎಂದಿನಂತೆ ಕರ್ತವ್ಯ ನಿರ್ವಹಿಸಲು ನಾನು ಮತ್ತು ನನ್ನ ಸಹಪಾಠಿಗಳು ಹಾಜರಾದಾಗ, ನಮ್ಮ ಶಾಲೆಯ ಕೊಣೆಯ ರೂಮಿನ ಬೀಗ ಮುರಿದಿದ್ದ, ನಾನು ಮತ್ತು ನಮ್ಮ ಇತರೆ ಶಿಕ್ಷಕರು ಕೂಡಿಕೊಂಡು ಶಾಲೆಯ ಕೊಣೆಯ ಒಳಗೆ ಹೋಗಿ ನೋಡಲಾಗಿ ಕೊಣೆಯಲ್ಲಿದ್ದ ಒಂದು ಟಿವಿ 29 ಇಂಚಿನ ಸ್ಯಾಮಸಂಗ ಕಂಪನಿಯದು ಇರಲಿಲ್ಲ ಯಾರೋ ಕಳ್ಳರು ದಿನಾಂಕ:31-03-2012 ರಿಂದ ದಿನಾಂಕ:02-04-2012 ರ ಮಧ್ಯದ ಅವಧಿಯಲ್ಲಿ ಶಾಲೆಯ ಬೀಗ ಮುರಿದು ಕೊಣೆಯಲ್ಲಿದ್ದ ಸಾಮ್‌‌ಸಾಂಗ ಟಿವಿ ಅ.ಕಿ.15,000-00 ರೂ. ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:41/12 ಕಲಂ:457, 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: