POLICE BHAVAN KALABURAGI

POLICE BHAVAN KALABURAGI

07 March 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಅಬ್ದುಲ ರವೂಫ ತಂದೆ ಅಬ್ದುಲ ರಹೀಮ ಸಾ: ಮೋಮಿನಪೂರ ಗುಲಬರ್ಗಾರವರು ನಾನು ಮತ್ತು ನನ್ನ ಮಗ ದಿನಾಂಕ: 04-03-2012 ರಂದು ಮುಂಜಾನೆ ಸುಮಾರಿಗೆ ಸಿ.ಟಿ.ಬಸ್ ನಿಲ್ದಾಣ ದಿಂದ ಜನತಾ ಬಜಾರ ರೊಡಿನಲ್ಲಿ ಬರುವ ಟಾಂಗಾ ಸ್ಟ್ಯಾಂಡ ಹತ್ತಿರ ರೋಡಿನ ಮೇಲೆ ಹೋರಟಾಗ ಮೋಟಾರ ಸೈಕಲ್ ನಂ:ಕೆಎ 32 ಆರ್ 2327 ನೇದ್ದರ ಸವಾರ ಜನತಾ ಬಜಾರ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:30/2012 ಕಲಂ: 279,338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:
ಶ್ರೀ ಭಾಗಪ್ಪಾ ತಂದೆ ಭೀಮರಾಯ ಸಾ: ಕೊಲ್ಲುರ ರವರ ಹೇಳಿಕೆ ಪಡೆದುಕೊಂಡಿದ್ದರ ಸಂಕ್ಷಿಪ್ತ ಸಾರಾಂಶವೆನೆಂದರೆ, ದಿನಾಂಕ 06-03-2012 ರಂದು ಪಿರ್ಯಾದಿಯ ಮಗ ಅಂಬೆರೆಷ ತಂದೆ ಭಾಗಪ್ಪಾ ಹಾಗು ತಮ್ಮ ಗ್ರಾಮದ ವಿಣಾ, ಬಸವರಾಜ ಮತ್ತು ಹುಳಂಡಗೆರಾದ ಗೌಸ, ಅಯ್ಯೂಬ ಖಾನ ಮಾರಡಗಿ ಗ್ರಾಮದ ಭಾಗ್ಯಶ್ರೀ, ಇವರೆಲ್ಲರೂ ಕೂಡಿಕೊಂಡು ನಾಲವಾರ ಸ್ಟೆಶನದಿಂದ ಕೊಲ್ಲುರ ಗ್ರಾಮದ ನಿಂಗಪ್ಪಾ ಇತನ ಟಂ ಟಂ ನಂ ಕೆಎ-33 1972 ನೆದ್ದರಲ್ಲಿ ಕುಳಿತುಕೊಂಡು ನಾಲವಾರ ಸ್ಟೇಶನ ಕಡೆಯಿಂದ ಬರುವಾಗ ರಾತ್ರಿ 8-30 ಗಂಟೆಯ ಸುಮಾರು ಕೊಲ್ಲುರಿನ ರಸ್ತೆ ಮದ್ಯದಲ್ಲಿ ಎದುರುಗಡೆಯಿಂದ ಯಾವುದೊ ಒಂದು ಟ್ಯಾಕ್ಟರ ಚಾಲಕನು ಅತಿವೆಗ ಹಾಗು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ಟಂಟಂಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಟಂಟಂ ಪಲ್ಟಿಯಾಗಿ ಅದರಲ್ಲಿ ಕೂಳಿತ ಅಂಬ್ರೆಷ ಇತನಿಗೆ ಭಾರಿಗಾಯವಾಗಿದ್ದು ಉಳಿದವರಿಗೂಸಹ ಮೈಕೈಗೆ ಅಲ್ಲಲ್ಲಿ ಭಾರಿ ರಕ್ತ ಹಾಗು ಗುಪ್ತಗಾಯವಾಗಿದ್ದು ಸದರಿಯವರಿಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ತಂದು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೆರಿಕೆ ಮಾಡಿದ್ದು ಉಪಚಾರ ಹೊಂದುವ ಕಾಲಕ್ಕೆ ರಾತ್ರಿ 10-45 ಪಿ,ಎಮ್, ಸುಮಾರು ಅಂಬ್ರೆಷ ಇತನು ಮೃತ ಪಟ್ಟಿರುತ್ತಾನೆ. ಸದರಿ ಟ್ಯಾಕ್ಟರ ಚಾಲಕನು ವಿರುದ್ದ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 38/2012 ಕಲಂ 279,337.338,304(ಎ) ಐಪಿಸಿ ಸಂಗಡ 187 ಐ.ಎಂ.ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅತ್ಯಾಚಾರ ಮತ್ತು ಕೊಲೆಗೆ ಪ್ರಯತ್ನ :

ಮಹಿಳಾ ಪೊಲೀಸ್ ಠಾಣೆ: ನನ್ನ ಅಕ್ಕ ಶ್ರೀದೇವಿಗೆ ದನ್ವಂತರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ನನ್ನ ತಂದೆ ತಾಯಿಯೊಂದಿಗೆ ಆಸ್ಪತ್ರೆ ಬಂದಿದ್ದು ದಿನಾಂಕ:06.0312 ರಂದು ರಾತ್ರಿ 9.3 ಗಂಟೆಗೆ ಅಕ್ಕ ನೀರು ಕೇಳಿದಾಗ ನೀರು ಕೊಟ್ಟು ನಮ್ಮ ತಂದೆಯವರು ಹೊರಗಡೆ ಊಟಕ್ಕೆ ಕುಳಿತಿದ್ದು ಅವರ ಹತ್ತಿರ ಹೋಗುವಾಗ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ರೋಶನ ಜಮೀಲ್ ತಂದೆ ಚಾಂದ ಸಾಹೇಬ ಸಾ ಹಳೆ ಜೇವರ್ಗಿ ರೋಡ ಗುಲಬರ್ಗಾ ಇತನು ಕರೆದು ನಿನಗೆ ಹಾರ್ಟ ಚೆಕ್ಕ ಮಾಡುವ ರೂಂ ತೋರಿಸುತ್ತೆನೆಂದು ಕರೆದುಕೊಂಡು ಹೋಗಿದ್ದು ನಾನು ಬೇಡ ಅಂದರು ಅವನು ನನ್ನ ಎರಡೂ ಕೈಗಳು ಹಿಡಿದು ರೂಮ ನಲ್ಲಿ ಎಳೆದುಕೊಂಡು ಹೋಗಿ ಸಂಭೋಗ ಮಾಡಲು ಪ್ರಯತ್ನಿಸಿದಾಗ ನಾನು ಬೆಡಾ ಅಂತಾ ಚಿರಾಡುತ್ತಿದ್ದರಿಂದ ಅವನ್ನು ನನ್ನ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನಿಸುತ್ತಿದ್ದಾಗ ಅವನ ಕೈಗೆ ಹೊಡೆದು ಅಲ್ಲಿಂದ ಓಡಿ ಬಂದು ನನ್ನ ತಂದೆಗೆ ವಿಷಯ ತಿಳಿಸಿರುತ್ತೆನೆ ಅಂತಾ ನೊಂದ ಹುಡಗಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 22/12ಕಲಂ 354.307.376 ಡಿ&ಎಪ,.511 ಐಪಿಸಿ ಮತ್ತು 3(2)3(3),3(10),3(11),3(12) ಎಸ,ಸಿ,ಎಸ,ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: