ದ್ವಿ-ಚಕ್ರ ವಾಹನಕ್ಕೆ ಬೆಂಕಿ ಹಚ್ಚಿ, ಮನೆಯ ಭಾಗಿಲಗೆ ಕಲ್ಲು ತೂರಾಟ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ: ದಿನಾಂಕ : 12/03/2012 ರಂದು ರಾತ್ರಿ 9.30 ರಿಂದ ಮೋಬೈಲ್ ನಂಬರ 8951823133 ದಿಂದ ಮೊಬೈಲ್ ನಂ 9448778586 ನೇದ್ದಕ್ಕೆ ಜೀವ ಬೇದರಿಕೆ ಕರೆಗಳು ಬಂದಿದ್ದು, ಹಾಗೂ ಅವಾಚ್ಯವಾಗಿ ಮೊಬೈಲ್ ನಲ್ಲಿ ಬೈದಿದ್ದು, ಅಲ್ಲದೆ ಮೋಹನರಾಜ ತಂದೆ ಮರೆಪ್ಪ ಸುಗಂದಿ ಸಂಗಡ 8 ಜನರು ಹಾಗೂ 4 ಜನ ಅಪರಿಚಿತ ವ್ಯಕ್ತಿಗಳು ಕೂಡಿಕೊಂಡು ಪಿ.ಡಬ್ಲೂಡಿ ಕ್ವಾಟರ್ಸ ನಂ 33/ಬಿ ನೇದ್ದರ ಭಾಗಿಲಿಗೆ ಕಲ್ಲುಗಳು ತೂರಾಟ ಮಾಡಿದ್ದು ಮತ್ತು ಆ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ದ್ವಿಚಕ್ರ ವಾಹನ ನಂ ಕೆಎ 32 ಎಕ್ಸ 6 ನೇದ್ದಕ್ಕೆ ಪೆಟ್ರೊಲ್ ಹಾಕಿ ಬೆಂಕಿ ಹಚ್ಚಿ ಓಡಿ ಹೋಗಿರುತ್ತಾರೆ. ಈ ಘಟನೆಗೆ ದಿಲೀಪ, ಶಿವಕುಮಾರ, ಆನಂದ, ಮರೇಪ್ಪ, ಮಹಾದೇವಿ ಸಾ|| ರಾಜಾಪೂರ ಮತ್ತು ಸುಧೀರ ಸಾ|| ಬಾಪು ನಗರ ಇವರುಗಳ ಪ್ರಚೋದನೆಯಿಂದ ಜರುಗಿರುತ್ತದೆ ಅಂತಾ ಶ್ರಿಮತಿ ಸಾವಿತ್ರಿ ಗಂಡ ವಿನೋದ ಕುಮಾರ ಸಾ|| ಪಿ.ಡಬ್ಲೂಡಿ ಕ್ವಾಟರ್ಸ ನಂ 33/ಬಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 28/2012 ಕಲಂ 147,504,506,336,435,109, ಸಂ 149 ಐ.ಪಿ.ಸಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ: ಶ್ರೀಮತಿ ಮಾಹದೇವಮ್ಮಾ ಗಂಡ ನಾಗೀಂದ್ರಪ್ಪ ಬೆಲ್ಲದವರ (ಹಯ್ಯಾಳ) ಸಾ|| ಗರಗಪಳ್ಳಿ ರವರು ನಿನ್ನೆ ದಿನಾಂಕ 12.03.2012 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಹಾಲು ತರುವ ಕುರಿತು ಶಿವಶರಣಪ್ಪಾ ಬೆಲ್ಲದ ಇವರ ಮನೆಗೆ ಹೋದಾಗ ಅಂಗಳದಲ್ಲಿ ಬಸವರಾಜ, ಚಂದ್ರಶೇಖರ ಮತ್ತು ಮಲ್ಲಿಕಾರ್ಜುನ ಬೆಲ್ಲದ ಇವರು ಜಗಳ ಮಾಡಿಕೊಳ್ಳುತ್ತಿರುವಾಗ ನಾನು ಬಿಡಿಸಲು ಹೋಗಿದ್ದಕ್ಕೆ ಬಸವರಾಜ ಬೆಲ್ಲದ ಮತ್ತು ಇನ್ನೂ 3 ಜನರು ಸೇರಿಕೊಂಡು ನೀನು ಮಲ್ಲಿಕಾರ್ಜುನ ಬೆಲ್ಲದ ಮತ್ತು ಚಂದ್ರ ಶೇಖರ ಬೇಲ್ಲದನ ಪರವಾಗಿ ಬಂದಿದ್ದಿ ಅಂತಾ ಅವಾಚ್ಯವಾಗಿ ಬೈದು ಬಡಿಗೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೈಯಿಂದ ಹೋಡೆ ಬಡೆಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಹನ ಚಾಲಕನಿಂದ ನಿಂದನೆ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಗೋಪಾಲ ವಾಹನ ಚಾಲಕ ಇತನು ಓ.ಓ.ಡಿ ಆಧಾರದ ಮೇಲೆ ಉಪ-ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ ಗುಲಬರ್ಗಾ ಕಛೇರಿಯಿಂದ ತಹಶಿಲ್ದಾರ ಪ್ರಾಧೇಶಿಕ ಆಯುಕ್ತರು ಗುಲಬರ್ಗಾ ಇವರ ಕಛೇರಿಯಲ್ಲಿ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ದಿನಾಂಕ: 13/03/2012 ರಂದು ಇತನು ಸರಕಾರಿ ವಾಹನ ಸಂಖ್ಯೆ ಕೆಎ 32 ಜಿ 439 ವಾಹನವನ್ನು ತೆಗೆದುಕೊಂಡು ಗುಲಬರ್ಗಾ ಅರಣ್ಯ ವೃತ್ತ ಕಛೇರಿಯ ಆವರಣದಲ್ಲಿ ಬಂದು ನಿಲ್ಲಿಸಿ ಬೆಳಿಗ್ಗೆ 10.30 ರಿಂದ ಒಂದು ಗಂಟೆಗೆ ವರೆಗೆ ವಿನಾ:ಕಾರಣ ಅವಾಚ್ಯ ಶಬ್ದಗಳಿಂದ ಬೈದು ವೃತ ಕಛೇರಿಯಲ್ಲಿ ಗಲಾಟೆ ಮಾಡಿರುತ್ತಾನೆ. ಮತ್ತು ಗುಲಬರ್ಗಾ ಅರಣ್ಯ ವೃತ ಕಛೇರಿಯ ಆವರಣದಿಂದ ಅತಿವೇಗದಿಂದ ವಾಹನವನ್ನು ಚೆಲಾಯಿಸಿಕೊಂಡು ಕಛೇರಿಯ ಆವರಣದ ವರೆಗೆ ಹೋಗಿರುತ್ತಾನೆ. ಇತನು ಮಧ್ಯ ಸೇವನೆ ಮಾಡಿದ್ದಿರಬಹುದು. ಈ ಪ್ರಯುಕ್ತವಾಗಿ ನೆಶೆಯಲ್ಲಿ ಈ ಕೃತ್ಯ ಎಸಗಿರುತ್ತಾನೆ. ಕಾರಣ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಎ. ರಾಧಾದೇವಿ ಭಾರತೀಯ ಅರಣ್ಯ ಸೇವೆ ಅರಣ್ಯ ಸಂರಕ್ಷಣಾಧಿಕಾರಿಗಳು ಗುಲಬರ್ಗಾ ವೃತ್ತ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 29/2012 ಕಲಂ 504,506,354,279 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.
No comments:
Post a Comment