ಕಳ್ಳತನ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ ಮಹ್ಮದ್ ಲಾಲಅಹ್ಮದ್ ಮಸಲದಾರ ಸಾ:ನಿಡಗುಂದಾ ತಾ:ಚಿಂಚೋಳಿ ರವರು ನಾನು ದಿನಾಂಕ;11-03-2012 ರಂದು ರಾತ್ರಿ 9-30 ಪಿ.ಎಮ್.ಕ್ಕೆ ನಮ್ಮ ಸಂಬಂಧಿಕರಿಗೆ ಸೇಡಂಕ್ಕೆ ಬಿಟ್ಟು ಬರಲು ನಮ್ಮೂರಲ್ಲಿ ಮದುವೆಗಾಗಿ ಬಂದ ಅಲ್ಲಾವುದ್ದಿನ್ ತಂದೆ ಮೈನೊದ್ದಿನಖಾನ ಸಾ:ಆಡಕಿ ಹುಡಾ ಇವರ ಮೋಟಾರ ಸೈಕಲ್ ನಂ-KA-02 ET-4892 ತೆಗೆದುಕೊಂಡು ಸೇಡಂಕ್ಕೆ ಬರುವಾಗ ಯಡ್ಡಳ್ಳಿ ಕ್ರಾಸ್ ಹತ್ತಿರ ಮೋಟಾರು ಸೈಕಲನ ಹಿಂದಿನ ಟಾಯರ್ ಪಂಕ್ಚರ ಆಗಿದ್ದು, ಮೋಟಾರು ಸೈಕಲಗೆ ಹ್ಯಾಂಡ ಲಾಕ ಮಾಡಿ ಯಡ್ಡಳ್ಳಿ ಕ್ರಾಸದಲ್ಲಿಟ್ಟು ಬೇರೆ ಜೀಪಿನಲ್ಲಿ ನಾವು ಸೇಡಂಕ್ಕೆ ಬಂದು ಕೆಲಸ ಮುಗಿಸಿಕೊಂಡು ನಂತರ ದಿನಾಂಕ:12-03-2012 ರಂದು ಬೆಳಗ್ಗೆ 8-00 ಗಂಟೆಗೆ ಹೋಗಿ ನೋಡಲಾಗಿ ಯಡ್ಡಳ್ಳಿ ಕ್ರಾಸ್ ದಲ್ಲಿಟ್ಟಿದ್ದ ಮೋಟಾರು ಸೈಕಲ್ ಇದ್ದಿರುವದಿಲ್ಲ ಮೋಟಾರು ಸೈಕಲ್ ನಂ-KA02ET4892 ಚೆಸ್ಸಿ ನಂ-05N16C02319 ಇಂಜೆನ್ ನಂ-05N15M57029, 2005 ಮಾಡಲ್, ಕಪ್ಪು ಬಣ್ಣ ಹೀರೊ ಹೊಂಡಾ ಸ್ಪಲೆಂಡರ್ ಪ್ಲಸ್ ಅಂ.ಕಿ 20,000/- ಇದ್ದು ಇದರ ಪೆಟ್ರೊಲ್ ಟ್ಯಾಂಕ ಮೇಲೆ ಪಾಕೀಟ್ ದಲ್ಲಿ ಒಂದು ಮೋಬೈಲ್ ನೋಕಿಯಾ ಕಂಪನಿದ್ದು 1200 ನೇದ್ದು ಅದರ ಸಿಮ್ ನಂ-8095309242 ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ-57/2012 ಕಲಂ- 379 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ: ಶ್ರೀ ರಾಯಪ್ಪ ತಂದೆ ಮಲ್ಲಪ್ಪ ದಂಡಗುಂಡ ಸಾ: ಕೊಂಚೂರ ಹಾ:ವ: ನೀಲಾಬಾಯಿ ರವರ ಪ್ಲಾಟದ ಒಂದು ರೂಂ ದಲ್ಲಿ ವಾಸ ಸಾ:ಊದನೂರ ರೋಡ ಯಶವಂತ ನಗರ ಗುಲಬರ್ಗಾ ರವರು ದಿನಾಂಕ: 13-03-2012 ರಂದು ರಾತ್ರಿ ರೂಂನಲ್ಲಿ ಮಲಗಿಕೊಂಡಿದ್ದಾಗ ಮಧ್ಯರಾತ್ರಿ ದಿನಾಂಕ:14-03-2012 ರಂದು 2-00 ಗಂಟೆಗೆ ಎದ್ದಾಗ ಮನೆಯಲ್ಲಿ ಒಬ್ಬ ಕಳ್ಳ ಹೊಕ್ಕಿ ಕೊಂಡಿದ್ದನ್ನು ಗಮನಿಸಿ "ಯಾರೋ ಮನೆಯಲ್ಲಿ ಹೊಕ್ಕಿಕೊಂಡಿದ್ದಿ ಆಂತಾ ಕೇಳಿದಾಗ ತಪ್ಪಿಸಿಕೊಂಡು ಓಡಿ ಹೋದನು. ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ 10,000 ರೂ ಮತ್ತು ಚಾರ್ಜಿಂಗ ಹಚ್ಚಿದ ಆರ್ಮೋ ಕಂಪನಿಯ ಮೋಬೈಲ್ ಅದರ ಸಿಮ್ ನಂ 1 :9632911757 ಸಿಮ್ 2 9738911757 ಅ.ಕಿ.500 ರೂ ಹೀಗೆ ಒಟ್ಟು 73000 ರೂ ಕಿಮ್ಮತ್ತಿನ ಬೆಲೆಬಾಳುವ ಬಂಗಾರದ ಅಭರಣಗಳು, ನಗದುಹಣ ಮತ್ತು ಮೋಬೈಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment