POLICE BHAVAN KALABURAGI

POLICE BHAVAN KALABURAGI

18 March 2012

GULBARGA DIST REPORTED CRIME

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ಶಿವಶರಣಪ್ಪಾ ತಂದೆ ಅಪ್ಪರಾವ ತೊರಣೆ ಸಾ: ಹೆಡಗಾಪೂರ ತಾ:ಅವರಾದ ಜಿ:ಬೀದರ ರವರು ನಾನು ಮತ್ತು ಮತ್ತು ಇಸ್ಮಾಯಿಲ ಖಾನ ಕೂಡಿಕೊಂಡು ದಿನಾಂಕ 18/3/12 ರಂದು ಬೆಳಿಗ್ಗೆ 11-30 ಗಂಟೆಗೆ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ-02 ಇವಾಯ-4007 ನೇದ್ದರ ಮೇಲೆ ಹೊಲ ಸರ್ವೇ ಮಾಡಿಕೊಂಡು ಬಂಕೂರ ಕಡೆಗೆ ಬರುತ್ತಿರುವಾಗ ಎದುರಗಡೆಯಿಂದ ಟವೇರಾ ನಂಬರ ಕೆಎ-19 ಪಿ-3647 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ನನಗೆ ಭಾರಿ ರಕ್ತಗಾಯವಾಗಿದ್ದು, ಮತ್ತು ಇಸ್ಮಾಯಿಲ ಖಾನಗೆ ಬಲಗಡೆ ಎದೆಗೆ ಮತ್ತು ಎಡ ತೊಡೆಗೆ ಒಳಪೆಟ್ಟಾಗಿದ್ದು ಮತ್ತು ತರಚೀದ ಗಾಯವಾಗಿದೆ. ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ 279,337,338 ಐಪಿಸಿ ಸಂ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ
ದಿನಾಂಕ: 18/03/12 ರಂದು 11.00 ಠಾಣೆಯ ಶ್ರೀ.ಬಸವರಾಜ ಹೆಚ್.ಸಿ ಮತ್ತು ರಾಜಕುಮಾರ ಸಿ.ಪಿ.ಸಿ ಬ್ರಹ್ಮಪೂರ ಠಾಣೆರವರು ರವರು ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ 1030 ಗಂಟೆಗೆ ಸುಮಾರಿಗೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಮಹೇಶ ತಂದೆ ಹುಸೆನಯ್ಯ ಇಳಗೇರ ಸಾ ಸ್ಟೇಶನ ಗಾಣಗಪೂರ ತಾ ಅಫಜಪೂರ ಜಿ ಗುಲಬರ್ಗಾ ಅಂತಾ ತಿಳಿಸಿದ್ದು, ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡದೆ ಇರುವದರಿಂದ ಆತನನ್ನು ಹಾಗೇಯೆ ಸ್ಥಳದಲ್ಲಿ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 36/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾನೆ.

No comments: