ಕೊಲೆ ಆರೋಪಿ ಬಂದನ:
ಬ್ರಹ್ಮಪೂರ ಠಾಣೆ: ಶ್ರೀಮತಿ,ಸುಲೋಚನಾ ಗಂಡ ಮನೋಹರ ತೆಗನೂರ ಸಾ|| ಜಗತ ಗುಲಬರ್ಗಾ ಇವರನ್ನು ದಿನಾಂಕ:06/02/2012 ರಂದು ನಗರದ ಟೌನ ಹಾಲ ಎದುರುಗಡೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಮೊದಲು ಗುನ್ನೆ ನಂ: 12/2012 ಕಲಂ 498 (ಎ) 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿತ್ತು. ಸದರಿ ಗುನ್ನೆಯ ತನಿಖೆ ಕೈಕೊಂಡು ದಿನಾಂಕ:15-03-2012 ರಂದು ಮಾನ್ಯ ಎಸ.ಪಿ ಗುಲಬರ್ಗಾ ಮತ್ತು ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗು ಎ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಶರಣಬಸಪ್ಪಾ ಪಿಐ ಬ್ರಹ್ಮಪೂರ ಪೊಲೀಸ್ ಠಾಣೆ ಮತ್ತು ಅವರ ಸಿಬ್ಬಂದಿ ವರ್ಗದವರಾದ ಮಹಮದ ರಪೀಕ, ದೇವಿಂದ್ರ, ರಾಮು ಪವಾರ, ಶಿವಪ್ರಕಾರ ರವರು ಆರೋಪಿ (ಆಕೆಯ ಗಂಡನಾದ) ಮನೋಹರ ತಂದೆ ನಾಗಿಂದ್ರಪ್ಪಾ ತೆಗನೂರ ಕಾರು ಚಾಲಕ ಸಾ|| ಜಗತ ಗುಲಬರ್ಗಾ ಇತನು ತನ್ನ ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದರಿಂದ ಸದರಿಯವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
No comments:
Post a Comment