POLICE BHAVAN KALABURAGI

POLICE BHAVAN KALABURAGI

06 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸಂಚಾರಿ ಪೊಲೀಸ್ ಠಾಣೆ: ದಿನಾಂಕ 05-02-2012 ರಂದು ಮಧ್ಯಾಹ್ನ 1-30 ಗಂಟೆಗೆ ಹುಮನಾಬಾದ ರೋಡಿಗೆ ಇರುವ ರವಿರಾಜ ದಾಲ ಮಿಲ್ ಮುಂದಿನ ರೋಡನ ಮೇಲೆ ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜು 60 ವರ್ಷ ಇತನು ಕೆ.ಎಮ್.ಎಪ್ ಡೈರಿ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಕ್ರೋಜರ ಜೀಪ ನಂ. ಕೆ.ಎ 25 ಎ 8630 ನೇದ್ದರ ಚಾಲಕನು ಗಂಜ ಕಡೆಯಿಂದ ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ಮನುಷ್ಯನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಲೆಗೆ ಭಾರಿಗಾಯಗೊಳಿಸಿ ತನ್ನ ಜೀಪ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶ್ರೀ ಅಶೋಕ ಸಿಪಿ.ಸಿ 1134 ಸಂಚಾರಿ ಪೊಲೀಸ ಠಾಣೆ ಗುಲಬರ್ಗಾರವರು ವರದಿ ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಗುನ್ನೆ ನಂ. 7/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಸದರ ಗಾಯಾಳು ಅಪಘಾತದಲ್ಲಿ ಆದ ಭಾರಿ ಗಾಯಗಳಿಂದ ಚೇತರಿಸಿಕೊಳ್ಳದೇ ದಿನಾಂಕ 05-02-2012 ರಂದು ರಾತ್ರಿ 10-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಆತನ ಮಗನಾದ ಮನೋಹರ ತಂದೆ ಲಕ್ಷ್ಮಣ ಮಾನೆ ಇತನು ಆಸ್ಪತ್ರೆಗೆ ಭೇಟಿ ಕೊಟ್ಟು ತನ್ನ ತಂದೆಯನ್ನು ನೋಡಿ ಮೃತ ದೇಹವನ್ನು ಗುರ್ತಿಸಿದ್ದರಿಂದ ಆತನ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣದಲ್ಲಿ ಕಲಂ 304 (ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ನಾನು ಶ್ರೀ ಮಾಂತೇಶ ತಂದೆ ಬಾಬು ಜಾದವ ಸಾ:ಭೈರಾಮಾಡಗಿ ತಾಂಡಾ ತಾ||ಅಫಜಲಪೂರ ರವರು ನಾನು ಮತ್ತು ಇನ್ನೂ ಕೆಲವರು ಈ ಮೂರು ತಿಂಗಳ ದಿಂದ ಆಳಂದ ಸಕ್ಕರೆ ಕಾರ್ಖಾನೆಗೆ ರೈತರ ಕಬ್ಬು ಕಡಿದು ಸಾಗಿಸುತ್ತಾ ಬಂದಿರುತ್ತೆವೆ. ನಮ್ಮದು ಒಟ್ಟು 18 ಜನರ ಟೋಳಿ ಇದ್ದು ನಮ್ಮ ಮೇಲೆ ಮಕಾದಮ್ ತುಕ್ಕರಾಮ ತಂದೆ ಪಾಂಡು ಚವ್ಹಾಣ ಸಾ:ನೇಹರು ನಗರ ತಾಂಡಾ ಆಳಂದ ಇತನು ಇದ್ದು ಅವನ್ನು ಯಾರ ಹೊಲಕ್ಕೆ ಕಬ್ಬು ಕಡೆಯಲು ಹಚ್ಚುತ್ತಾನೋ ಅವರ ಹೊಲಕ್ಕೆ ಹೋಗಿ ಕಬ್ಬು ಕಡಿದು ಸಾಗಿಸುತ್ತಾ ಬಂದಿರುತ್ತೆವೆ. ದಿನಾಂಕ 05/02/2012 ರಂದು ಶಿವಾರಾಜ ಪಾಟೀಲ ಸಾ: ಬೂಸನೂರ ಇವರ ತೋಟದ ಹೋಲದಲ್ಲಿ ಧನ್ನು ರಾಠೋಡ ಇತನು ಮಕಾದಮನ ಸಂಗಡ ಕಬ್ಬು ತುಂಬಿದ ರೊಕ್ಕ ನಾನು ಜಗಳವಾಡಿ ಕೇಳಿ ಖೊಟ್ಟಿಯಾಗಬೇಕು ನೀವು ಹಾಗೆ ಇರಬೇಕೆನು ಅಂದಾಗ ನಾವು ಹೇಳುತ್ತೆವೆ. ಅಂತಾ ಹೇಳಿ ಕಬ್ಬಿನ ಹೊಲಕ್ಕೆ ಬಂದೆವು ರಾತ್ರಿ ಸುಮಾರಿಗೆ ಧನ್ನು ರಾಠೋಡ ಈತನು ಒಂದೆ ಸವನೆ ಅವಾಚ್ಯವಾಗಿ ಬೈಯುತ್ತಿದ್ದನು ಪೂಲಚಂದ ಇತನು ಸುಮ್ಮನೆ ಯಾಕೆ ಬೈಯುತ್ತಿ ಸುಮ್ಮನೆ ಕೂಡು ಅಂತಾ ಅನ್ನುತಾ ಅವನ ಹತ್ತಿರ ಹೋದಾಗ ಧನ್ನು ರಾಠೋಡ ಈತನು ನನಗೆ ಹೇಳುತ್ತಿ ಬೋಸಿಡಿ ಮಗನೆ ಎಂದು ನಮ್ಮ ಭಾಷೆಯ ಮಾತಿನಲ್ಲಿ ಬೈಯ್ದು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ತಗೆದುಕೊಂಡು ಅವನ ತಲೆಯ ಮೇಲೆ ಜೋರಾಗಿ ಹೊಡೆದಾಗ ಅವನು ನೆಲಕ್ಕೆ ಬಿದ್ದನು ಅದರಿಂದ ಅವನ 2 ಕಿವಿಯಿಂದ ರಕ್ತ ಬರುತ್ತಿತು ಅವನು ಮಾತನಾಡು ಸ್ಥಿತಿಯಲ್ಲಿ ಇರಲಿಲ್ಲ ಅವನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸುವಾಗ ವೈದ್ಯರು ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು ಕಾರಣ ಅವಾಚ್ಯವಾಗಿ ಬೈಯ್ದು ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಧನ್ನು ತಂದೆ ಥೌವರು ರಾಠೋಡ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 504, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ : ಶ್ರೀ ಸಿದ್ದಣ್ಣಾ ತಂದೆ ಮಲ್ಲಪ್ಪಾ ಝಳ್ಳಿ ಸಾಃ ರಾಜೇಶ್ವರ ತಾಃ ಬಸವಕಲ್ಯಾಣ ಜಿಃ ಬೀದರರವರು ನಾವು ದಿನಾಂಕ:06/02/2012 ರಂದು ನಮ್ಮ ಗ್ರಾಮದ ರಾಮಣ್ಣಾ ಕಿಟ್ಟದ ಇವರ ಮಗನಾದ ನಾಗರಾಜ ಎಂಬುವನ ಕುಂಕುಮ ಕಾರ್ಯಕ್ರಮ ಕುರಿತು ಆಂದ್ರ ಪ್ರದೇಶದ ನಾರಾಯಣ ಪೇಠ ಹತ್ತಿರ ಊಟ್ಕೂರ ಗ್ರಾಮಕ್ಕೆ ನಿನ್ನೆ ದಿನಾಂಕ: 05/02/12 ರಂದು ಕ್ರೋಜರ ಜೀಪ ನಂ.ಕೆಎ:29,ಎಂ:2866 ನೇದ್ದರಲ್ಲಿ ನಾನು, ನನ್ನ ಮಗ ನಾಗರಾಜ ಹಾಗು ನಮ್ಮೂರಿನವರಾದ ರುಕ್ಮೀಣಿ ಗಂಡ ಜಗನ್ನಾಥ @ ಬಾಬುರಾವ ಕಿಟ್ಟದ, ಅಂಬಾದಾಸ ತಂದೆ ಹಣಮಂತಪ್ಪಾ ಕುಲಕರ್ಣಿ,ಗೀತಾ ತಂದೆ ಬಾಬುರಾವ @ ಜಗನ್ನಾಥ ಕಿಟ್ಟದ, ಮಾಣಿಕ ತಂದೆ ಹಣಮಂತರಾಯ ಝಳ್ಳಿ,ಗೀತಾ ತಂದೆ ನಾಗಣ್ಣಾ ಗುರುಮಿಠಕಲ್, ರತ್ನಮ್ಮಾ ಗಂಡ ಹಣಮಂತಪ್ಪಾ ಗೋಟುರ, ಈರಣ್ಣಾ ತಂದೆ ಮಾರುತಪ್ಪಾ ಹೊನಗುಂಟಿ, ಭೀಮಾಶಂಕರ ತಂದೆ ಬಾಬು ಘಸ್ನೆ, ಸುಶೀಲಾಬಾಯಿ ಗಂಡ ಪಂಚಯ್ಯಾ ಮಠಪತಿ, ಬಾಬು ತಂದೆ ತಿಪ್ಪಣ್ಣಾ ಭಲ್ಕಿ ಹಾಗು ಇತರರೊಂದಿಗೆ ಕೂಡಿಕೊಂಡು ಹೋಗಿ ಕುಂಕುಮ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಬರುತ್ತಿರುವಾಗ ನಾವು ಕುಳಿತಿರುವ ಕ್ರೋಜರ ಜೀಪನ್ನು ಶಿವಪುತ್ರ ತಂದೆ ಪಂಡಿತ ಸಿಂಧೆ ಸಾಃ ಮೊಳಕೇರಾ ಈತನು ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ನೇದ್ದರ ಕಮಲಾಪೂರ ದಾಟುತ್ತಿದ್ದಂತೆ ಬೆಳಿಗ್ಗೆ 4-30 ಗಂಟೆ ಸುಮಾರಿಗೆ ಕಮಲಾಪೂರ ಚಿಂದಿ ಬಸವಣ್ಣನ ಗುಡಿ ಸ್ವಲ್ಪ ಮುಂದೆ ಇರುವಾಗಲೇ ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ರೋಡಿನ ಎಡಗಡೆ ಇರುವ ರೋಡಗಾರ್ಡ ಕಲ್ಲಿಗೆ ಡಿಕ್ಕಿ ಹೊಡೆದು ರೋಡಿನ ಎಡಬದಿ ತಗ್ಗಿನಲ್ಲಿ ಪಲ್ಟಿ ಆಗಿದ್ದರಿಂದ ನನಗೆ & ಪಿನಲ್ಲಿರುವವರಿಗೆ ಅಲ್ಲದೇ ಜೀಪ ಚಾಲಕನಿಗೂ ಕೂಡಾ ಅಲ್ಲಲ್ಲಿ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯ ಹಾಗು ಒಳ್ಳಪೆಟ್ಟಾಗಿ ಗುಪ್ತಗಾಯಗಳಾಗಿದ್ದು. ರುಕ್ಮೀಣಿ ಗಂಡ ಜಗನ್ನಾಥ @ ಬಾಬುರಾವ ಕಿಟ್ಟದ ಇವಳು ಜೀಪಿನ ಕೆಳಗೆ ಸಿಕ್ಕಿ ಬಿದ್ದಿರುವದನ್ನು ನೋಡಿ ಹೊರಗೆ ತೆಗೆದು ನೋಡಲಾಗಿ, ಅವಳಿಗೆ ಹಣೆಗೆ, ಬಲಭುಜಕ್ಕೆ, ಎಡಪಕ್ಕಿಗೆ ಭಾರಿ ರಕ್ತಗಾಯ & ಅಲ್ಲಲ್ಲಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಹೇಳಿ ಬರೆಯಿಸಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 10/2012 ಕಲಂ. 279, 337, 338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: