POLICE BHAVAN KALABURAGI

POLICE BHAVAN KALABURAGI

25 February 2012

GULBARGA DIST REPORTED CRIME

ಅಕ್ಕಿ ಮೂಟೆಗಳು ದರೋಡೆ ಮಾಡಿದ ಬಗ್ಗೆ ಪ್ರಕರಣ:
ಕಮಲಾಪೂರ ಠಾಣೆ :
ಶ್ರೀ. ರಾಮ ತಂದೆ ಮಾಧವ ಡಂಡರೆ ಉ: ಲಾರಿ ನಂ: ಎಂ.ಹೆಚ್: 25-ಬಿ-9854 ನೇದ್ದರ ಚಾಲಕ ಸಾ: ಬಲಸೂರ ಗ್ರಾಮ ತಾ:ಉಮ್ಮರ್ಗಾ ಜಿ:ಉಸ್ಮಾನಾಬಾದ ಮಹಾರಾಷ್ಟ್ರ ರವರು ನಾನು ಯಾದಗಿರಿಯಲ್ಲಿ ಎಸ್.ಎಂ.ಎ ಟ್ರಾನ್ಸಪೊರ್ಟ ರವರಿಗೆ ಸಂಪರ್ಕಿಸಲಾಗಿ ಪೂನಾದ ಗುಲಟೇಕಡಿ ಮಾರ್ಕೆಟ ಯಾರ್ಡಿಗೆ ಸೋನಮಸೂರಿ ಅಕ್ಕಿಯ ಲೋಡ ತೆಗೆದುಕೊಂಡು ಹೋಗುವುದು ಇದೆ ಅಂತಾ ಹೇಳಿದ್ದರಿಂದ ಬಾಡಿಗೆ ಮುಗಿಸಿಕೊಂಡು ದಿನಾಂಕ: 23/02/2012 ರಂದು ಸಾಯಂಕಾಲ ಲಾರಿಯಲ್ಲಿ 25 ಕೆ.ಜಿ.ಯ 680 ಅಕ್ಕಿ ಪಾಕೇಟಗಳು ಅ.ಕಿ. 3,75,000/- ರೂಪಾಯಿ ಗಳದ್ದು ಮಾಲನ್ನು ಲೋಡ ಮಾಡಿಕೊಂಡು ಯಾದಗಿರಿಯಿಂದ ಹೊರಟು ಗುಲಬರ್ಗಾ ನಗರದ ಹೊರವಲಯದಲ್ಲಿರುವ ಹುಮನಾಬಾದ ರಿಂಗರೋಡ ಸೇಲ್ಸ ಟ್ಯಾಕ್ಸ್ ಚೆಕ್ ಪೊಸ್ಟ ಹತ್ತಿರ ರಾತ್ರಿ 12-30 ಗಂಟೆ ಸುಮಾರಿಗೆ ಟಪಾಲ ತೋರಿಸಿ ಮಧ್ಯರಾತ್ರಿ ಕಮಲಾಪೂರ ದಾಟಿ ಕುದುರೆಮುಖ ಹೊಡ್ಡು ಏರುತ್ತಿರುವಾಗ ರಾತ್ರಿ ಅಂದಾಜು 3-00 ಗಂಟೆ ಸುಮಾರಿಗೆ ನನ್ನ ಲಾರಿಯ ಹಿಂದಿನಿಂದ ಒಂದು ಮೋಟರ ಸೈಕಲ ಮೇಲೆ ನಾಲ್ಕು ಜನರು ಬಂದು ನಿಧಾನವಾಗಿ ಚಲಿಸುತ್ತಿದ್ದ ನನ್ನ ಲಾರಿಯಲ್ಲಿ ಮೂರು ಜನರು ಕ್ಲೀನರ್ ಕಡೆ ಬಾಗಿಲಿನಿಂದ ಒಳಗೆ ಏರಿ ಬಂದು ನನಗೆ ಲಾರಿ ನಿಲ್ಲಿಸು ಅಂತಾ ಹೆದರಿಸಿ ಲಾರಿ ನಿಲ್ಲಿಸಿ ನನ್ನನ್ನು ಸ್ಟೇರಿಂಗದಿಂದ ಪಕ್ಕಕ್ಕೆ ಸರಿಸಿ ಲ್ಯಾರಿಯ ಕ್ಯಾಬೀನದಲ್ಲಿ ನನಗೆ ಅಡ್ಡವಾಗಿ ಮಲಗಿಸಿ ನನ್ನ ಕಣ್ಣೀಗೆ ಬಟ್ಟೆ ಕಟ್ಟಿ ಕೈಗಳಿಗೆ ಶಾಲಿನಿಂದ ಹಿಂದುಗಡೆ ಕಟ್ಟಿ ನನ್ನ ಬೆನ್ನಿನ ಮೇಲೆ ಒಬ್ಬನು ಕುಳಿತುಕೊಂಡು ನನಗೆ ಕೈಯಿಂದ ಮುಖಕ್ಕೆ, ಬೆನ್ನಗೆ ಹೊಡೆದಿದ್ದು, ಚಿರಾಡಿದರೆ ಜೀವ ತೆಗೆಯುತ್ತೇವೆ ಅಂತಾ ಹಿಂದಿ ಭಾಷೆಯಲ್ಲಿ ಹೆದರಿಸಿ ನನ್ನ ಲಾರಿಯನ್ನು ತಾವೇ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ತೆಗೆದುಕೊಂಡು ಬಂದು ಸ್ವಲ್ಪ ದೂರ ಹೋದ ನಂತರ ಎಡಕ್ಕೆ ತಿರುಗಿ ಅಂದಾಜು 15-20 ಕಿಲೋ ಮಿಟರ್ ದೂರ ಹೋದ ನಂತರ ಲಾರಿಯನ್ನು ನಿಲ್ಲಿಸಿ ನನ್ನ ಲಾರಿಯಲ್ಲಿದ್ದ ಅಕ್ಕಿಯ ಪಾಕೇಟಗಳನ್ನು ಕೆಳಗೆ ಯಾವುದೋ ಹೊಲದಲ್ಲಿ ಅನಲೋಡ ಮಾಡಿ ನಂತರ ನನ್ನ ಲಾರಿಯನ್ನು ಅವರೇ ಚಲಾಯಿಸಿಕೊಂಡು ಹುಮನಾಬಾದ ಹತ್ತಿರದ ಹುಡಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೆಳೆಗ್ಗೆ ಅಂದಾಜು 7-00 ಗಂಟೆ ಸುಮಾರಿಗೆ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿಯವರನ್ನು ನೋಡಿದಲ್ಲಿ ಗುರ್ತಿಸುತ್ತೇನೆ ಹಾಗೂ ಅವರ ವಯಸ್ಸು ಸುಮಾರು 30-35 ವರ್ಷ ದವರಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಿದ್ದರು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 394. 506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: