ಅನಧಿಕೃತವಾಗಿ ಸೀಮೆ ಎಣ್ಣೆ ಸಾಗುಸುತ್ತಿದ್ದ ಬಗ್ಗೆ:
ಸೇಡಂ ಪೊಲೀಸ ಠಾಣೆ:ದಿನಾಂಕ:- 01-02-2012 ರಂದು ರಾತ್ರಿ 11-20 ಪಿ.ಎಮ್.ಕ್ಕೆ ಸೇಡಂ ಪಟ್ಟಣದ ಉಡಗಿ ರಸ್ತೆಯಲ್ಲಿ ಅನಧಿಕೃತವಾಗಿ ಸಿಮೇ ಎಣ್ಣೆ ತಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ.ಬಿ.ಬನ್ನಟಿ ಸಿಪಿಐ ಸೇಡಂ ರವರು ಮತ್ತು ಸಿಬ್ಬಂದಿಯವರೊಂದಿಗೆ 00-05 ಎ.ಎಮ್.ಕ್ಕೆ ಸೇಡಂ ಕಡೆಯಿಂದ ಅತಿವೇಗವಾಗಿ ಹೋಗುತ್ತಿದ್ದ ಬುಲೋರೊ ಪಿಕ್ ಅಪ. ವ್ಯಾನ ನಂ ಕೆ-ಎ-33-7414 ನೇದ್ದಕ್ಕೆ ಉಡಗಿ ಗ್ರಾಮದ ಉರ್ದು ಸರಕಾರಿ ಶಾಲೆಯ ಮುಂದೆ ಹಿಡಿದು ಪರಿಶೀಲಿಸಲು ವಾಹನ ಚಾಲಕನು ತನ್ನ ಹೆಸರು ಚನ್ನಪ್ಪ ತಂದೆ ಶಿವನಾಗಪ್ಪ ಸಾ:ಹಂಗನಳ್ಳಿ ಆತನ ಪಕ್ಕದಲ್ಲಿ ಸಿಮೇ ಎಣ್ಣೆ ಮಾಲಿಕ ಶಾಂತಕುಮಾರ ತಂದೆ ಭೀಮರಾವ ಚವ್ಹಾಣ ಸಾ: ಸ್ಟೇಶನ ತಾಂಡ ಮಳಖೇಡ ಅಂತಾ ತಿಳಿಸಿದರು ಸದರಿ ಸುಮಾರು 600 ಲೀಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 12000-00 ರೂ. ಗಳ ಸಿಮೇ ಎಣ್ಣೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಅವರು ಇರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಸರಕಾರ ಸಾರ್ವಜನಿಕರ ಪಡಿತರ ಚೀಟಿಯ ಮೇಲೆ ಹಂಚಿಕೆ ಮಾಡಲು ಪೊರೈಯಿಸಿದ ನೀಲಿ ಸಿಮೇ ಎಣ್ಣೆಯನ್ನು ಅನಧಿಕೃತ ಕಳ್ಳ ಸಂತೆಯಲ್ಲಿ ಮಾರಲು ಹೋಗುತ್ತಿದ್ದಾಗ ಹಿಡಿದು ಜಪ್ತಿ ಪಂಚನಾಮೆ ಮುಖಾಂತರ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಕೊಳ್ಳಲು ಜ್ಞಾಪನ ಪತ್ರದ ಮೂಲಕ ಸೂಚಿಸಿದ ಮೇರೆಗೆ ಸೇಡಂ ಠಾಣೆ ಗುನ್ನೆ ನಂ 25/2012 ಕಲಂ 7 ಇ.ಸಿ Essential Commodity Act ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
POLICE BHAVAN KALABURAGI

02 February 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment