POLICE BHAVAN KALABURAGI

POLICE BHAVAN KALABURAGI

09 January 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸುರೇಶ ತಂದೆ ಡಂಬಯ್ಯ ಪೂಜಾರಿ ಸಾ: ಆನಂದ ನಗರ ಗುಲಬರ್ಗಾ ರವರು ದಿನಾಂಕ 10/04/2010 ರಂದು ನಾನು ನಾಗಾರ್ಜುನ ಲಾಡ್ಜ ಎದುರುಗಡೆ ಇಟ್ಟ ಮೋಟರ ಸೈಕಲ್ ನಂ ಕೆ.ಎ 25 ಡಬ್ಲೂ 5758 ಅ.ಕಿ 30,000=00 ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲಿಂದ ಇಂದಿನವರೆಗೆ ಹುಡಕಾಡಿದರೂ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 04/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲಗಾಣಗಾಪುರ ಪೊಲೀಸ ಠಾಣೆ
: ಎಮ್.ರವೀಂದ್ರ ತಂದೆ ಎಮ್, ಲಕ್ಷ್ಮಾ ಸಾ ಮನೆ. ನಂ. 6-9/1 ಬಿಸೈಡ ಭಾರತ ಗಾರ್ಡನ ಚಂಪಾ ಪೇಠೆ ಸಾಗರ ರೋಡ ಹೈದ್ರಾಬಾದ ರವರು ನಾನು ದಿನಾಂಕ 09-01-2012 ರಂದು ನಾನು ತನ್ನ ಮತ್ತು ಗೆಳೆಯರಾದ ಸಂಪತಕುಮಾರ, ಮಲೇಶ್ವರ, ನರಸಿಂಹರಾವ, ಓಂ ಪ್ರಕಾಶ ರವರೆಲ್ಲರೂ ಕೂಡಿ ದೇವಲಗಾಣಗಾಪೂರಕ್ಕೆ ಬಂದು ಮುಂಜಾನೆ 5;45 ಗಂಟೆಗೆ ಸಂಗಮದಲ್ಲಿ ಸ್ನಾನ ಮಾಡಲು ಪ್ಯಾಂಟ, ಶರ್ಟ ಕಳೆದು ಅದರಲ್ಲಿ ಒಂದು ಕೈ ಗಡಿಯಾರ ಐಡಿ ಕಾರ್ಡ, ಎ.ಟಿ.ಎಂ ಕಾರ್ಡ, 31,000=00 ನಗದು ಹಣ ಇಟ್ಟು ನದಿಯಲ್ಲಿ ಸ್ನಾನ ಮಾಡಿ ಬರುವಷ್ಟರಲ್ಲಿ ಯಾರೋ ಕಳ್ಳರು ಪ್ಯಾಂಟಿನಲ್ಲಿ ಇಟ್ಟಿದ್ದ ಕೈ ಗಡಿಯಾರ, ಐಡಿ ಕಾರ್ಡ, ಎಟಿಎಂ ಕಾರ್ಡ, ನಗದು ಹಣ 31,000=00 ರೂಪಾಯಿ ಹೀಗೆ ಒಟ್ಟು 31,800=00 ರೂಪಾಯಿ ಪ್ಯಾಂಟ ಸಮೇತ ಕಳುಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 01/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ:
ಸೇಡಂ ಠಾಣೆ:
ಶ್ರೀ. ಶಿವಾಜಿ ತಂದೆ ಪುಂಡಲಿಕರಾವ ಪತಂಗೆ ನಾನು ದಿನಾಂಕ:09-01-2012 ರಂದು ಬೆಳಗ್ಗೆ 5-00 ಗಂಟೆಗೆ ನಮ್ಮ ಸಮಾಜದ ದೇವಸ್ಥಾನದಲ್ಲಿ ಕಸಗುಡಿಸಲೆಂದು ಶಾಂತಬಾಯಿ ಇವಳು ಹಿಂಗುಲಾಂಬಿಕಾ ಗುಡಿಗೆ ಬಂದಿದ್ದು, ಗುಡಿಯ ಬಾಗಿಲು ಕೀಲಿಯು ಮುರಿದಿದ್ದು ಕಂಡು ನನಗೆ ಬಂದು ತಿಳಿಸಿದ್ದರಿಂದ ನಾನು ನಿತೀಶ ಪ್ರೇಮಕುಮಾರ ಗಡಾಳೆ ರವರು ಕೂಡಿಕೊಂಡು ನೋಡಲಾಗಿ ದೇವಸ್ಥಾನದಲ್ಲಿರುವ ದೇವಿಯ ಬೆಳ್ಳಿಯ ಕಿರಿಟ 250 ಗ್ರಾಮ ತೂಕದ್ದು ಅಂ.ಕಿ 11,000/- ರೂಪಾಯಿ, ಬಂಗಾರದ ಆಭರಣಗಳು ಹೀಗೆ ಒಟ್ಟು 24,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಹಾಗು ಬೆಳ್ಳಿಯ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ.13/2012 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:
ಆಳಂದ ಪೊಲೀಸ ಠಾಣೆ:
ವಿಜಯ ಕುಮಾರ ಪಿಎಸ್ಐ [ಕಾ.ಸು] ಆಳಂದ ಠಾಣೆ ರವರು ನಾನು ಮತ್ತು ಸಿಬ್ಬಂದಿ ಜನರಾದ ಉಮಾಕಾಂತ. ಬಾಬು ಇವರೊಂದಿಗೆ ಪೇಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಟಕಿ ರೋಡಿನ ಹಳಯ ಧನಗರ್ ಗಲ್ಲಿ ಹಿರೆಮಠದ ಹತ್ತಿರ ಒಬ್ಬ ಮನುಷ್ಯ ಅವಾಚ್ಯವಾಗಿ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು ಸದರಿವನನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದು ಅವನ ಹೆಸರು ವಿಚಾರಿಸಲು ಹೀರಾಚಂದ ತಂದೆ ಪದ್ಮರಾಜ ದುರ್ಗೆ ಸಾ: ಧನಗರ್ ಗಲ್ಲಿ ಆಳಂದ ಅಂತಾ ತಿಳಿಸಿದನು. ಸದರಿಯವನು ಸಾರ್ವಜನಿಕರ ಶಾಂತತೆ ಭಂಗವನ್ನುಂಟು ಮಾಡುತ್ತಿದ್ದರಿಂದ ಮುಂಜಾಗ್ರತಾ ಕ್ರಮ ಕುರಿತು ಠಾಣೆ ಗುನ್ನೆ 08/2012 ಕಲಂ 151.110 (ಈ) & (ಜಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,

No comments: