ಹಣದ ಬ್ಯಾಗ್ ಕಳ್ಳತನ ಮಾಡಿದ ಬಗ್ಗೆ:
ಸ್ಟೇಶನ ಬಜಾರ ಠಾಣೆ: ಶ್ರೀ ಸಯದ್ ಅಲಿಉಲ್ಲಾ ತಂದೆ ಸಯದ್ ಖುದ್ರತುಲ್ಲಾ ಸಾ:ಮ.ನಂ.11-1041/49/74 ಖದೀರ ಫಂಕ್ಷನ ಹಾಲ್ ಎದುರುಗಡೆ ಎಂ.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ಇಂದು ದಿನಾಂಕ:28.01.2012 ರಂದು ಮಧ್ಯಾಹ್ನ 1240 ಪಿ.ಎಮ್.ಕ್ಕೆ ಐ.ಡಿ.ಬಿ.ಎಸ್. ಬ್ಯಾಂಕಿನಿಂದ 50,000/- ರೂಪಾಯಿ ಡ್ರಾ ಮಾಡಿಕೊಂಡು ಕೋರ್ಟ ರೋಡ ಮುಖಾಂತರ ಭೀಮಳ್ಳಿ ಪೆಟ್ರೋಲ ಪಂಪ್ ಹತ್ತಿರ ಬರುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಪಂಪ ಹತ್ತಿರ ನಿಂತಿದ್ದು ಅದರಲ್ಲಿ ಒಬ್ಬನು ಬಂದು ನಿಮ್ಮ ಬೈಕಿನ ಇಂಧನ ಸೋರುತ್ತಿದೆ ಅಂತಾ ಹೇಳಿದನು ನನ್ನ ಗಮನ ಬೇರೆ ಕಡೆಗೆ ಸೆಳೆದು ಇನ್ನೊಬ್ಬ ವ್ಯಕ್ತಿ ಹಣವಿರುವ ಕೆಂಪು & ಗ್ರೇ ಕಲರ್ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.9/2012 ಕಲಂ.379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment