POLICE BHAVAN KALABURAGI

POLICE BHAVAN KALABURAGI

16 December 2011

Gulbarga Dist Reported Crimes

ಸಾರ್ವಜನಿಕರಿಗೆ ಮೋಸ ಮಾಡಿದ ಬಗ್ಗೆ:
ಬ್ರಹ್ಮಪೂರ ಠಾಣೆ:
ಶ್ರೀ .ಎ.ಟಿ ಜಯಪ್ಪ ಉಪನಿರ್ದೇಶಕರು ಆಹಾರ ನಾಗರಿಕ ಸರಬಾರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಗುಲಬರ್ಗಾ ರವರು ನಾನು ದಿನಾಂಕ: 16/12/2011 ರಂದು 12:30 ಗಂಟೆಗೆ ನಾನು ಮಿನಿ ವಿಧಾನ ಸೌಧದಲ್ಲಿರುವ ನಮ್ಮ ಕಚೇರಿಯಲ್ಲಿ ಇರುವಾಗ ಶ್ರೀ.ರಾಮು ರಘೋಜಿ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ಶರಣಯ್ಯ ತಂದೆ ನೀಲಕಂಠಯ್ಯ ಹಿರೇಮಠ ಇವರು ಆಹಾರ ಇಲಾಖೆಯ ನೌಕರ ಅಂತಾ ಹೇಳಿ ನಮ್ಮ ಮನೆಗೆ ಬಂದು ನನಗೆ 6500/- ರೂಪಾಯಿ ಕೊಟ್ಟರೆ ನಿಮಗೆ 2 ಗ್ಯಾಸ ಸಿಲೇಂಡರ ಮತ್ತು ಒಂದು ಸ್ಟೋವ ಕೊಡುವದಾಗಿ ಹೇಳುತ್ತಾ ಬಂದಿರುತ್ತಾನೆ. ಈ ಬಗ್ಗೆ ತಮ್ಮ ಇಲಾಖೆಯಿಂದ ಆದೇಶ ನೀಡಿರುವಿರಿ ಎಂದು ಕೇಳಿರುತ್ತಾರೆ. ಆಗ ನಾನು ರಘೋಜಿರವರಿಗೆ ಮಾತನಾಡಿ ನಮ್ಮ ಇಲಾಖೆಯಿಂದ ಯಾರಿಗೂ ಆದೇಶ ಮಾಡಿರುವದಿಲ್ಲ. ನೀವು ಶರಣಯ್ಯ ಹಿರೇಮಠ ಅವರನ್ನು ಅಲ್ಲಿಯೆ ಕುಡಿಸಿಕೊಳ್ಳಿ ನಾನು ತಕ್ಷಣ ಅಲ್ಲಿಗೆ ಬರುತ್ತೇನೆ ಅಂತಾ ಹೇಳಿ ತಕ್ಷಣ ನಮ್ಮ ಕಾರ್ಯಲಯದ ಸಿಬ್ಬಂದಿಯವರಾದ ವಿಠಲ ಚವ್ಹಾಣ ಶಿರಸ್ತೆದಾರರು ಆಹಾರ ಇಲಾಖೆ, ಮತ್ತು ಶಂಕರ ಸಿಂಗ ಠಾಕೂರ ಆಹಾರ ನಿರೀಕ್ಷಕರು (ಫುಡ ಇನ್ಸಪೆಕ್ಟರ್) ಇವರೊಂದಿಗೆ ವಿಠಲ ನಗರದಲ್ಲಿರುವ ರಘೋಜಿರವರ ಮನೆಗೆ ಹೋಗಿ ನೋಡಲು ರಘೋಜಿರವರು ಒಬ್ಬ ವ್ಯಕ್ತಿಯನ್ನು ಹಿಡಿದು ಕುಡಿಸಿದ್ದು, ಅವರಿಗೆ ಹೆಸರು ವಿಚಾರಿಸಲು ಶರಣಯ್ಯ ತಂದೆ ನೀಲಕಂಠಯ್ಯ ಹಿರೇಮಠ ಸಾ ಸ್ವಂತ ಅಂತ ಹೇಳಿ ಆಹಾರ ಇಲಾಖೆಯ ನೌಕರ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಡುಗೆ ಅನಿಲ ಸಿಲೆಂಡರ ಮತ್ತು ಸ್ಟೋ & ಅಕ್ಕಿ ಕೊಡಿಸುವದಾಗಿ ಅಂತಾ ಹೇಳಿದ್ದು, ಅಲ್ಲದೆ 2-3 ದಿವಸಗಳ ಹಿಂದೆ ಹರೀಶ ತಂದೆ ಜನಾರ್ಧನ ಎಂಬುವವರಿಂದ ಗ್ಯಾಸ ಮತ್ತು ಸಿಲೇಂಡರ ಕೊಡಿಸುವದಾಗಿ ಹೇಳಿ ಅವರಿಂದ 5500/- ರೂಪಾಯಿ ಪಡೆದುಕೊಂಡಿದ್ದು ಆ ಹಣವನ್ನು ನನ್ನ ಸ್ವಂತಕ್ಕಾಗಿ ಖರ್ಚ ಮಾಡಿರುವದಾಗಿ ತಿಳಿಸಿದ್ದು, ಈ ಬಗ್ಗೆ ಹರೀಶ ಇವರು ಆಹಾರ ಮತ್ತು ನಾಗರಿಕ ಇಲಾಖೆಗೆ ಬರೆದ ಪತ್ರ ಸಹ ತೋರಿಸಿರುತ್ತಾನೆ. ನಮ್ಮ ಇಲಾಖೆಯಿಂದ ಅಡುಗೆ ಅನಿಲ ಸಿಲೆಂಡರಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರುವದಿಲ್ಲ. ಸಂಬಂಧಪಟ್ಟ ಗ್ಯಾಸ ಕಂಪನಿಯ ಅನಿಲ ವಿತರಕರಿಂದ ಮಾತ್ರ ಸರಬರಾಜು ಮಾಡುವ ವ್ಯವಸ್ಥೆ ಇರುತ್ತದೆ. ಕಾರಣ ನಮ್ಮ ಇಲಾಖೆಯ ಹೆಸರು ಉಪಯೋಗಿಸಿ ಸರಕಾರಿ ನೌಕರನಂತೆ ನಟಿಸಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಡುಗೆ ಅನಿಲ ಮತ್ತು ಸ್ಟೋ ಹಾಗೂ ಅಕ್ಕಿ ಕೊಡಿಸುವದಾಗಿ ಹೇಳಿ ಮೋಸ ಮಾಡುತ್ತಿರುವನನ್ನು ಹಿಡಿದುಕೊಂಡು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 225/2011 ಕಲಂ 170, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: