ಅಶೋಕ ನಗರ ಠಾಣೆ : ಶ್ರೀ ಶಂಕರ ತಂದೆ ವೀರಣ್ಣಾ ಪೂಜಾರಿ ಉ: ಬಸ ಕಂಡಕ್ಟರ ಡಿ.ಸಿ ನಂ. 164 ಬಸ ಘಟಕ ನಂ.3 ಗುಲಬರ್ಗಾ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು, ದಿನಾಂಕ 21-10/2011 ರಂದು ಮದ್ಯಾಹ್ನ 1:30 ಗಂಟೆಗೆ ಸುಪರ ಮಾರ್ಕೆಟ ಬಸ ಸ್ಟ್ಯಾಂಡದಲ್ಲಿ ಸಿತನೂರಕ್ಕೆ ಹೊಗಲು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 32-ಎಫ್-1319 ನೇದ್ದನ್ನು ನಿಲ್ಲಿಸಿದಾಗ ಒಬ್ಬ ಪ್ರಯಾಣಿಕ ಮಹಿಳೆಯರ ಸೀಟ ಮೇಲೆ ಕುಳಿತಿರುವಾಗ ಬೇರೆ ಸೀಟಿನ ಮೇಲೆ ಹೊಗುವಂತೆ ಹೇಳಿದಾಗ ಆ ವ್ಯಕ್ತಿ ನನ್ನೊಂದಿಗೆ ತಕರಾರು ಮಾಡಿದನು. ಆಗ ಅಲ್ಲಿ ಪೊಲೀಸರು ಇದ್ದುದ್ದರಿಂದ ಕೆಳಗಡೆ ಇಳಿದನು. ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಿತನೂರಕ್ಕೆ ಹೊಗಿ, ಮರಳಿ ಸುಪರ ಮಾರ್ಕೆಟಕ್ಕೆ ಬರುತ್ತಿರುವಾಗ ಮದ್ಯಾಹ್ನ 2:45 ಗಂಟೆ ಸುಮಾರಿಗೆ ಕರುಣೇಶ್ವರ ನಗರ ಬಸ ಸ್ಟಾಪ್ ಹತ್ತಿರ 5 ಜನ ಪ್ರಯಾಣಿಕರು ಕೈ ಮಾಡಿದ್ದರಿಂದ ಬಸ ಡ್ರೈವರ ರವಿ ರವರು ಬಸ ನಿಲ್ಲಿಸಿದ್ದು ಆಗ ಆ 5 ಜನ ಪ್ರಯಾಣಿಕರು ಒಮ್ಮೇಲೆ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಈ ಕಂಡಕ್ಟರ ನನಗೆ ಮಾರ್ಕೆಟದಲ್ಲಿ ಬಸ್ಸಿನಿಂದ ಇಳಿಸಿದಾನೆ ಅಂತಾ ಹೇಳಿ ಮಾರ್ಕೆಟ ಬಸಸ್ಟ್ಯಾಂಡದಲ್ಲಿ ತಕರಾರು ಮಾಡಿದ ವ್ಯಕ್ತಿ ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು ಮತ್ತು ಜೊತೆಗಿದ್ದ 4 ಜನ ಹೊಡೆಬಡೆ ಮಾಡಿರುತ್ತಾರೆ. ಆಗ ನಮ್ಮ ಬಸ ಚಾಲಕ ರವಿ ಹಾಗು ಕೆಲವು ಪ್ರಯಾಣಿಕರು ಜಗಳ ಬಿಡಿಸಿರುತ್ತಾರೆ. ಪಾಣೆಗಾಂವದವರು ಎಂದು ತಿಳಿದು ಬಂದಿದ್ದು ಓಡಿ ಹೊಗಿರುತ್ತಾರೆ. ನನಗೆ ಗಾಯಗಳಾಗಿರುತ್ತವೆ. ಸದರಿ ಜಗಳದಲ್ಲಿ ನನ್ನ ಹತ್ತಿರ ಇದ್ದ ಬಸ ಟಿಕೇಟ ಹಣ 535/- ರೂಪಾಯಿ ಎಲ್ಲೊ ಬಿದ್ದು ಕಳೆದಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಗುನ್ನೆ ನಂ:ನ 113/2011 ಕಲಂ:323, 353, 504 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕರ ಕಾಂಬಳೆ ಸಾತಿಲಕ ನಗರ ಜಿಡಿಎ ಕಾಲನಿ ಗುಲಬರ್ಗಾ ರವರು,ನನ್ನ ಮಗನಾದ ಜಗನ್ನಾಥ ತಂದೆ ಶಂಕರ ಕಾಂಬಳೆ ವಯ ಇತನು ಇನಾಮದಾರ ಪ್ರೀ.ಯುನಿವರ್ಸಿಟಿ ಕಾಲೇಜನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಸೈನ್ಸ ಓದುತ್ತಿದ್ದು. ದಿನಾಂಕ 15-10-2011 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಯಿಂದ ಕೈಯಲ್ಲಿ ಒಂದು ಕಾಪಿ ಹಿಡಿದುಕೊಂಡು ಹೋದವನು ಸಾಯಂಕಾಲವಾದರೂ ಮನಗೆ ಬರದೆ ಇದ್ದುದರಿಂದ ಇಲ್ಲಿಯವರೆಗೆ ನಮ್ಮ ಸಂಭಂದಿಕರಿಗೆ ಮತ್ತು ಆತನ ಮಿತ್ರರಿಗೆ ವಿಚಾರಿಸಿದರು ಮತ್ತು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗ ಜಗನ್ನಾಥನನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆ ಗುನ್ನೆ ನಂ. 240/2011 ಕಲಂ. ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪುಟ್ಟ ಸ್ವಾಮಿ ತಂದೆ ರಂಗ ಸ್ವಾಮಿ ಸಾ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ದಿನಾಂಕ 21.10.11 ರಂದು ನಾನುಬ ನಂ ಕೆ.ಎ 34 ಹೆಚ 2549 ನೇದ್ದರ ಮೇಲೆ ಹಳೇ ಜೇವರ್ಗಿ ರೋಡಿನಲ್ಲಿ ಬರುವ ಮೇಡಿಪ್ಲಸ್ ಅಂಗಡಿ ಎದುರುಗಡೆ ರೋಡಿನ ಮೇಲೆ ಜೇವರ್ಗಿ ರಿಂಗ ರೋಡ ಕಡೆ ಹೋಗುತ್ತಿದಾಗ ಮೋಟರ್ ಸೈಕಲ್ ನಂ ಕೆ.ಎ 32 ಎಸ 1812 ನೇದ್ದರ ಚಾಲಕ ಅಕ್ಬರ ಇತನು ರೇಲ್ವೆ ಅಂಡರ ಬ್ರೀಜ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ವಾಹನಕ್ಕೆ ಅಪಘಾತ ಪಡಿಸಿ ಗಾಯಗೂಳಿಸಿ ತನ್ನ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 134/11 ಕಲಂ: 279, 337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment