ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.ರಾಮಚಂದ್ರ ತಂದೆ ಧೂಪಸಿಂಗ ಬಿರ್ಲಾ, ಸಾ|| ಗಾಜಿಪುರ ಗುಲಬರ್ಗಾ ರವರು ನಾನು ಹಾಗೂ ನನ್ನ ಹೆಂಡತಿ ಇಬ್ಬರು ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತ್ತಿರುವಾಗ ನಮ್ಮ ಓಣಿಯವರಾದ ವಿಶಾಲ ತಂದೆ ರಾಜ ಟಾಕ, ಹಾಗೂ ಆತನ ಹೆಂಡತಿಯಾದ ಮಮತಾ ಗಂಡ ವಿಶಾಲ ಟಾಕ ಇಬ್ಬರು ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ವಿಶಾಲ ಈತನು ನನ್ನೊಂದಿಗೆ ಜಗಳಕ್ಕೆ ಬಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಮುಖದ ಮೇಲೆ ಹೊಡೆದಿದ್ದು ಜಗಳ ಬಿಡಿಸಲು ಬಂದ ನನ್ನ ಹೆಂಡತಿಗೂ ವಿಶಾಲನ ಹೆಂಡತಿಯಾದ ಮಮತಾ ಇವಳು ಕೂದಲು ಹಿಡಿದು ಮುಖದ ಮೇಲೆ ಹೊಡೆಯುತ್ತಿರುವಾಗ ನಮ್ಮ ಓಣಿಯ ಸತೀಷ ಮತ್ತು ರಮೇಶ ಇವರು ಇಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:202/2011 ಕಲಂ: 341, 323, 504, 506 ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
POLICE BHAVAN KALABURAGI

27 October 2011
GULBARGA DIST REPORTED CRIME
Subscribe to:
Post Comments (Atom)
No comments:
Post a Comment