ಕೊಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ದಿನಾಂಕ 18-09-2011 ರಂದು ಸಾಯಂಕಾಲ ಶ್ರೀ ಮಹ್ಮದ ಗುಲಾಮ ತಂದೆ ಮೀರಾ ಪಟೇಲ್ ಸಾ;ಕೊಳ್ಳುರ ತಾ: ಜಿ: ಗುಲಬರ್ಗಾ ಹಾವ: ಟಿಪ್ಪು ಸುಲ್ತಾನ ಚೌಕ ಅಹ್ಮದ ನಗರ ಅಜಾದಪೂರ ರೋಡ ಗುಲಬರ್ಗಾ ಕೆಲಸದಿಂದ ಮನೆಗೆ ಬಂದಾಗ ಹೆಂಡತಿ ಅಫ್ರೀನಾ ಸುಲ್ತಾನ ಇವಳು ಈ ತಿಂಗಳ ಪಗಾರ ಹಣ ಕೊಡು ಅಂತಾ ಕೇಳಿದ್ದಕ್ಕೆ 2-3 ದಿವಸ ನಂತರ ಕೊಡುವದಾಗ ಹೇಳಿರುತ್ತಾರೆ ಅಂತಾ ಹೇಳಿದ್ದಕ್ಕೆ ನೀನು ಇದೆ ರೀತಿ ದಿನಾಲು ಸುಳ್ಳು ಹೇಳುತ್ತಾ ಬಂದಿರುತ್ತಿ ನಿನ್ನಿಂದ ನನಗೆ ಸಾಕಾಗಿ ಹೋಗಿದೆ ಅಂತಾ ಅಂದು ಮನೆಯಲ್ಲಿದ್ದ ಸೀಮೇಎಣ್ಣೆ ಡಬ್ಬ ತೆಗೆದುಕೊಂಡು ನನ್ನ ಮೈಮೇಲೆ ಚಲ್ಲಿ ಕಡ್ಡಿ ಕೊರೆದು ಬೆಂಕಿ ಹಚ್ಚಿದ್ದು ಇದರಿಂದಾಗಿ ಮೈಯೆಲ್ಲಾ ಸುಟ್ಟಗಾಯಗಳಾಗಿದ್ದು ಗುಲಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ 22-09-2011 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ :ದಿನಾಂಕ 19-09-2011 ಮತ್ತು 20-09-2011 ರ ರಾತ್ರಿ ಯಾರೋ ಕಳ್ಳರು ದಿ ಉಗಾರ ಸುಗರ ವರ್ಕ್ಸ ಲಿಮಿಟೆಡ್ ಕಂಪನಿ ಮಳ್ಳಿ ನಾಗರಳ್ಳಿ ಕಾರ್ಖಾನೆಯ ಅಕೌಂಟ ಆಫಿಸಗೆ ಹಾಕಿದ ಕೀಲಿ ಕೋಡಿ ಮುರಿದು ಆಫೀಸ ಕಾರ್ಯ ನಿರ್ವಹಿಸಲು ಅಳವಡಿಸಿದ ಐದು ಗಣಕಯಂತ್ರಗಳ ಪೈಕಿ ಮೂರು ಗಣಕಯಂತ್ರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅವುಗಳ ಅಂದಜ ಕಿಮ್ಮತ್ತು 21,000/- ಆಗಬಹುದು ಅಂತಾ ಶ್ರೀ ಸಾಗರ ತಂದೆ ಅವಿನಾಶ ಕುಲಕರ್ಣಿ ವ್ಯವಸ್ಥಾಪಕರು ದಿ ಉಗಾರ ಸುಗರ ವರ್ಕ್ಸ ಲಿಮಿಟೆಡ್ ಕಂಪನಿ ಮಳ್ಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯೆಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ದಿನಾಂಕ 19-09-2011 ರಂದು ಪಿ,ಎಸ,ಐ ಎಂ.ಬಿ ನಗರ ರವರು ಸಿಬ್ಬಂದಿಯೊಂದಿಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಗುನ್ನೆ ನಂ 60/11 ಕಲಂ 504, 323, 324, 353, 392 ಐಪಿಸಿ ನೇದ್ದರಲ್ಲಿ ಆರೋಪಿತರಾದ 1.ಜಹೀರಖಾನ ತಂದೆ ಬಶೀರ ಅಹ್ಮದ 2.ಜಮೀರಖಾನ ತಂದೆ ಬಶೀರ ಅಹ್ಮದ 3.ಜುಬೇರಖಾನ ತಂದೆ ಬಶೀರ ಅಹ್ಮದ 4.ಹಜಾರಾ ಗಂಡ ಬಶೀರ ಅಹ್ಮದ 5.ಅಂಜುಮನ ಗಂಡ ಜಮೀರಖಾನ 6.ನಾಜೀಯಾ ಗಂಡ ಜಹೀರಖಾನ 7.ಜಹೂರಖಾನ ತಂದೆ ಬಶೀರ ಅಹ್ಮದ ಸಾ: ಎಲ್ಲರೂ ಜುಂ ಜುಂ ಕಾಲನಿ ಗುಲಬರ್ಗಾ ಪತ್ತೆ ಮಾಡಿ ದಸ್ತಗಿರಿ ಮಾಡಲು ಸಿಬ್ಬಂದಿಯೊಂದಿಗೆ ಜುಂ ಜುಂ ಕಾಲೋನಿಯ ಡೆಕ್ಕನ ಕಾಲೇಜ ಹತ್ತಿರ ಹೋಗಿ ವಿಚಾರಿಸಲು ಸದರಿಯವರು ಹಾಗರಗಾ ರೋಡಿನ ಕಟ್ಟಿಗೆ ಅಡ್ಡಾದ ಹತ್ತಿರ ಇದ್ದ ಬಗ್ಗೆ ಮಾಹಿತಿ ಮೇರೆಗೆ ನಾವೆಲ್ಲರು ಹೋಗಿ ಸದರಿ ಮೂವರನ್ನು ಸುತ್ತುವರಿದಾಗ ಆರೋಪಿತ ಜಹೀರಖಾನ ಇತನು ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಮೈನೆ ಚಾರ್ ಮರ್ಡರ ಕೇಸ ಮೇ ಹೂ ಪೊಲೀಸ ಲೋಗೂ ಕೊ ಬಿ ಮರ್ಡರ ಕರ್ತಾ ಹೂ ಅಂತಾ ಬೈಯ್ಯುತ್ತಿದ್ದು ಆಗ ನಾವು ಹಿಡಿಯಲು ಹೋದಾಗ ಅಲ್ಲಿ ಜಹೀರಖಾನನ ತಮ್ಮ ಹಾಗೂ ಮೂರು ಹೆಣ್ಣು ಮಕ್ಕಳು ಗುಂಪು ಕಟ್ಟಿಕೊಂಡು ತುಮ ಲೊಗೊ ಕೈಸೆ ಹಮಾರ ಆದಮಿಯೊಕೂ ಲೇಕೆ ಜಾತೆ ಹೈ ಹಮ ಬಿ ದೇಖತೆ ಹೂ ಅಂತಾ ಹೇಳಿ ತಡೆ ಹಿಡದದ್ದು ಆಗ ನಾವು ಬೆನ್ನ ಹತ್ತಿದಾಗ ಸದರಿಯವರು ನಮ್ಮನ್ನು ದಬ್ಬಿಕೊಟ್ಟು ತಗ್ಗಿನಲ್ಲಿ ಕಾಂಪೌಂಡ ದಾಟಿ ಓಡಿ ಹೋಗಿ ಬಿದ್ದು ಎದ್ದು ಅಲ್ಲಿಯೆ ನಿಲ್ಲಿಸಿದ ಟಾಟಾ ಸುಮೂ ನಂ ಕೆಎ 33 4122 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ನಾವು ಸರಕಾರ ಜೀಪನಿಂದ ಬೆನ್ನು ಹತ್ತಿ ಹಿಡಿದು ದಸ್ತಗಿರಿ ಮಾಡಿಕೊಂಡು ಮಾನ್ಯ ಸಿಪಿಐ ಎಂಬಿ ನಗರ ವೃತ್ತ ರವರ ಮುಂದೆ ಹಾಜರುಪಡಿಸಿದ್ದು ನಾವು ದಸ್ತಗಿರಿ ಮಾಡುವ ಕಾಲಕ್ಕೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿರೋಧ ಒಡ್ಡಿ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಜೀವ ಬೇದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ 21-09-2011 ರಂದು ಸಾಯಂಕಾಲ ನಗರದ ಜಗತ ಸರ್ಕಲ್ ಹತ್ತಿರ ಗುಡ್ಡಾಂಬೆ ಅಂಗಡಿ ಎದುರು ರೋಡಿನ ಮೇಲೆ ಮೋ/ಸೈಕಲ್ ನಂ:ಕೆಎ 32 ಆರ್ 5579 ನೆದ್ದರ ಚಾಲಕ ತನ್ನ ಮೋ/ಸೈಕಲನ್ನು ತಿರಾಂದಾಜ ಟಾಕೀಜ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ನಿಂತ ಶ್ರೀ ಮತಿ ಅಲಿಯಾ ಬೇಗಂ ಗಂಡ ಅಪ್ಸರಪಟೇಲ ಸಾ: ಅಲ್ದಿಹಾಳ ತಾ:ಚಿತ್ತಾಪೂರ ಜಿ: ಗುಲಬರ್ಗಾ ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗುಪ್ತ ಗಾಯ ಪೆಟ್ಟುಗೊಳಿಸಿ ಫಿರ್ಯಾದಿದಾರಳನ್ನು ಒಂದು ಅಟೋರಿಕ್ಷಾದಲ್ಲಿ ಬಸವೇಶ್ವರ ಅಸ್ಪತ್ರೆಗೆ ಒಯ್ದು ಉಪಚಾರ ಕುರಿತು ಸೇರಿಕೆ ಮಾಡಿ ತನ್ನ ಹೆಸರು ಹೇಳದೆ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment