ಮಾರಣಾಂತಿಕ ಹಲ್ಲೆ ಪ್ರಕರಣ :
ರೋಜಾ ಠಾಣೆ :ಇಂದು ದಿನಾಂಕ
25-09-2011 ರಂದು ಸಾಯಂಕಾಲ ಶ್ರೀ ಜಕಿ ಖಾನ ತಂದೆ ಜಹೀರ ಅಹ್ಮದ ಖಾನ ಸಾ:ಖಾನ ಕಂಪೌಂಡ ಪಾಶಾಪೂರ ಗುಲಬರ್ಗಾ ಇವರು ಬಾಂಬೆ ಹೊಟೆಲ್ ಹತ್ತಿರ ಇರುವ ಚಿಕನ ಸೆಂಟರ ಮುಂದುಗಡೆ ನನ್ನ ವಾಹನಕ್ಕೆ ಕಟ್ ಹೊಡೆದ ಹುಡುಗನಿಗೆ ವಿಚಾರಿಸುತ್ತಿದ್ದಾಗ ಕಲೀಮ, ಸಿ.ಐ.ಬಿ ಕಾಲೋನಿ, ಯುನೂಸ, ಜಾವೀದ, ಚೋಟು ಇವರೆಲ್ಗರು ಕೂಡಿಕೊಂಡು ಬಂದು ಜಂಬ್ಯ ಮತ್ತು ರಾಡಿನಿಂದ ತಲೆಗೆ ಮತ್ತು ಕಣ್ಣಿನ ಹುಬ್ಬಿನ ಮೇಲೆ ಹೊಡೆದು ಭಾರಿ ರಕ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಝಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ :ಶ್ರೀ ಶರಣಪ್ಪ ತಂದೆ ಕಾಶಪ್ಪ ಬೊಮ್ಮನಳ್ಳಿ ದಿನಾಂಕ 24-09-2011 ರಂದು ಸಾಯಂಕಾಲ ನಿಂಗಪ್ಪ ಮುತ್ಯನ ಗುಡಿಯ ಹತ್ತಿರ ಕುಳಿತಾಗ ನಮ್ಮೂರ ಸಾಬಣ್ಣ ಧೂಳಪ್ಪ ಅಗಸಿಮನಿ ಇವನು ಬಂದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಜೇಬಿನಿಂದ ಬಿದ್ದ ಹಣ ಯಾಕೆ ತೆಗೆದುಕೊಂಡಿದಿ ಅಂತ ಬೈದಾಡಿದಕ್ಕೆ ನಾನು, ನಿನ್ನ ದುಡ್ಡು ತೆಗೆದುಕೊಂಡಿಲ್ಲ ನನಗೆ ಗೊತ್ತಿಲ್ಲ ಅಂತ ನನ್ನ ಹೊಲದ ಕಡೆಗೆ ಹೋಗುತ್ತಿದ್ದಾಗ, ನನ್ನ ಬೆನ್ನು ಹಿಂದೆ ಓಡುತ್ತಾ ಬಂದು ಅಯ್ಯಣ್ಣ ಸೌಕಾರ ಇವರ ಗೋದಾಮ ಹತ್ತಿರ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿ ಎಲ್ಲಿಗೆ ಹೋಗುತ್ತಿ ನನ್ನ ಹಣಕೊಟ್ಟು ಹೋಗು ಅಂತ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ಕಂದುಗಟ್ಟಿದ ಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI
26 September 2011
Gulbarga District Reported Crimes
Subscribe to:
Post Comments (Atom)
No comments:
Post a Comment