POLICE BHAVAN KALABURAGI

POLICE BHAVAN KALABURAGI

21 September 2011

Gulbarga District Reported Crimes

ಹಲ್ಲೆ ಪ್ರಕರಣಗಳು :

ಶಹಾಬಾದ ನಗರ ಪೊಲೀಸ ಠಾಣೆ :ದಿನಾಂಕ 20-09-2011 ರಂದು ಸಾಯಂಕಾಲ ಶ್ರೀ ಬಸವರಾಜ ತಂದೆ ಭೀಮಶ್ಯಾ ಬಾಲವುಡಿ ಸಾ:ಸುಣ್ಣಾ ಭಟ್ಟಿ ಶಹಾಬಾದ ಇವರು ಮುಕ್ತಿಯಾರ ಇನಾಮದಾರ ಇವರ ಖಣೆಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವನ ಹೆಂಡತಿಗೆ ಆರೋಪಿ ಶೀವು ಇವನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿ ವಿನಾಕಾರಣ ಯಾಕೆ ನನ್ನ ಹೆಂಡತಿಗೆ ಬೈಯುತ್ತಿ ಅಂದಿದ್ದಕ್ಕೆ ಆರೋಪಿತರಾದ ಶೀವು ಮತ್ತು ಅವನ ತಮ್ಮ ಶರಣು ಮತ್ತು ಅವನ ಮಾವ ನಾರಾಯಣ ಇವರು ಕುಡಿಕೊಂಡು ಕೈಯಿಂದ ಮತ್ತು ಸಲಿಕೆಯ ಕಾವಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ: ದಿನಾಂಕ 19-09-2011 ರಂದು ರಾತ್ರಿ ಶ್ರೀ. ಮಹ್ಮದ ಶಾಹಾ ನವಾಜ ತಂ/ ಮಹ್ಮದ ಅಲಿ ಸಾ: ಮಿಲ್ಲತ ನಗರ ಗುಲಬರ್ಗಾ ರವರು ತಂದೆ ತಾಯಿಯೊಂದಿಗೆ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಫಯಾಜ ಸಂಗಡ 3 ಜನರು ಬಂದು ಸಮೀನಾ ಎಂಬ ಹುಡಗಿಯ ಹಿಂದೆ ಯಾಕೇ ತಿರುಗಾಡುತ್ತಿ ಅಂತಾ ಅವ್ಯಾಚ್ಛ ವಾಗಿ ಬೈದು ಬಿಡಿಗೆಯಿಂದ ತಲೆಯ ಮೇಲೆ ಬಲ ಗಣ್ಣಿನ ಮೇಲೆ ಮತ್ತು ಕೈಯಿಂದ ಬೆನ್ನು ಮೇಲೆ ಹೊಡೆದು ರಕ್ತಗಾಯ & ಗುಪ್ತಗಾಯ ಮಾಡಿ ಇನ್ನೊಮ್ಮೆ ಹುಡುಗಿಯಿಂದ ತಿರುಗಾಡಿದರೆ ಫೋನ ಮಾಡಿದರೆ ಬಡಿಗೆಯಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರತಾಬಾದ ಠಾಣೆ :ಶ್ರಿ ಸುದಾರಕ ತಂದೆ ಸಿದ್ರಾಮಪ್ಪಾ ದುಧನಿ ಸಾ: ಫೇಠ ಫಿರೋಜಾಬಾದ ಇವರು ದಿನಾಂಕ: 19-09-2011 ರಂದು ಬೆಳಗ್ಗೆ ಹರಿಜನ ವಾಡಕ್ಕೆ ನೀರು ಬಿಟ್ಟಿದ್ದರಿಂದ ನಮ್ಮ ಗ್ರಾಮದ ಬಂಡಪ್ಪ ತಂದೆ ಅಣೇಪ್ಪಾ ಸಿರೂರ ಇವನು ಹರಿಜನ ವಾಡಕ್ಕೆ ಬಿಟ್ಟ ನೀರು ಬಂದ ಮಾಡಿ ನಮ್ಮ ಓಣಿಗೆ ವಾಲು ತಿರುಗಿಸಿಕೊಂಡಿದ್ದರಿಂದ ಸದರಿ ಬಂಡೇಪ್ಪಾ ಇವನು ಯಾಕಪ್ಪಾ ಹರಿಜನ ವಾಡಕ್ಕೆ ಹೋಗುವ ನೀರು ಯಾಕೆ ಬಂದ ಮಾಡಿದ್ದಿ ಈ ಕಡೆ ಯಾಕೆ ವಾಲ ತಿರುಗಿಸಿಕೊಂಡಿದ್ದಿ ಅಂತಾ ಕೇಳಿದಕ್ಕೆ ನೀರು ಬಿಡುವ ವಿಷಯಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಋಆಡಿನಿಂದ ಹೊಡೆದಿದ್ದರಿಂದ ಗುಪ್ತ ಗಾಯಗಳಾಗಿರುತ್ತವೆ. ಮತ್ತು ನೀನು ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವದ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ,ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಕಾರ್ಮಿಕ ಮಹಿಳೆಯ ಸಾವು :
ಕಮಲಾಪೂರ ಠಾಣೆ :
ದಿನಾಂಕ 20-09-2011 ರಂದು ಮಧ್ಯಾಹ್ನ ಸೊಂತ ಗ್ರಾಮದ ಲಲ್ಷ್ಮಣ ಈಟೀ ಇವರ ಕಳವಿ ಹೊಲದಲ್ಲಿ ಗಂಗಮ್ಮ ಗಂಡ ಮೈಲಪ್ಪಾ ಭೂಯಾರ ಇವರು ಕಸ ತೆಗೆಯುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ
20-09-2011 ರಂದು ಮಧ್ಯಾಹ್ನ ನಗರದ ಆರ್.ಪಿ.ಸರ್ಕಲ್ ದಿಂದ ಕೇಂದ್ರ ಬಸ್ ನಿಲ್ದಾಣ ಮೇನ ರೋಡಿನಲ್ಲಿ ಬರುವ ಸಮತೋಷ ಟಾಕೀಜ ಹತ್ತಿರ ಇರುವ ಮಹಾರಾಜ ಹೊಟೆಲ ಎದುರು ರೋಡಿನ ಮೇಲೆ ಮೋ/ಸೈಕಲ್ ನಂ: 28 ಕ್ಯೂ 5105 ಎಮ್.ಎಸ್.ಕೆ.ಮಿಲ್ ರೊಡಿನ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಮೇಲೆ ಹೋಗುತ್ತಿದ್ದ ಶ್ರೀ ಎಮ್.ಡಿ.ನಜೀರ ಮಿಯಾ ತಂದೆ ಉಸ್ಮಾನ ಸಾಬ ಸಾ: ಹೆಚ್.ನಂ:151 ವಿದ್ಯಾ ನಗರ ಗುಲಬರ್ಗಾ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತನ್ನ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ :ದಿನಾಂಕ: 19-09-2011 ರಂದು ಮುಂಜಾನೆ ಸಮಯದಲ್ಲಿ ಶ್ರೀ ಹಣಮಂತ ತಂದೆ ನಿಂಗಪ್ಪ ಹುಲಕಲ್ಲ ಸಾ: ಚಾಮನಾಳ ತಾ: ಶಹಾಪೂರ ಮತ್ತು ಗ್ರಾಮದ ಅಬ್ದುಲ ಸಾಬ ಮತ್ತು ಇನ್ನಿತರರೂ ಕೂಡಿಕೊಂಡು ಚಾಮನಾಳದಿಂದ ಕೊಳಕೂರ ಗ್ರಾಮಕ್ಕೆ ಬಸವಣ್ಣ ದೇವರ ಪರ್ವ ಕಾರ್ಯಕ್ರಮಕ್ಕೆ ಬಂದು ಮರಳಿ ರಾತ್ರಿ ಸಮಯದಲ್ಲಿ ಕ್ರೋಜರ ಜೀಪ ನಂ ಕೆ.ಎ. 28 ಎಮ್. 4542 ನೇದ್ದರಲ್ಲಿ ಚಾಮನಾಳಕ್ಕೆ ಹೋಗುತ್ತಿರುವಾಗ ರಾತ್ರಿ ಮಾರಡಗಿ ಕ್ರಾಸ ಇನ್ನೂ ಒಂದು ಕೀ.
,ಮಿ ಅಂತರ ಇರುವಾಗ ಕ್ರೋಜರ ಜೀಪ ನಿಲ್ಲಿಸಿ ರೋಡಿನ ಸೈಡಿಗೆ ನಿಂತು ಏಕಿ ಮಾಡುತ್ತಿದ್ದಾಗ ಅದೆ ವೇಳೆಗೆ ಹಿರೋ ಹುಂಡಾ ಸ್ಪ್ಲೇಂಡರ ಮೋಟಾರ ಸೈಕಲ ನಂಬರ ಕೆ.ಎ. 32 ಎಲ್ 4585 ನೇದ್ದರ ಸವಾರ ಸಂತೋಷ ಇತನು ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಬ್ದುಲಸಾಬನಿಗೆ ಡಿಕ್ಕಿ ಪಡಿಸಿ ಗಾಯ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: