POLICE BHAVAN KALABURAGI

POLICE BHAVAN KALABURAGI

15 September 2011

Gulbarga District Reported Crimes

ಹಲ್ಲೆ ಪ್ರಕರಣ :


ಫರಹತಾಬಾದ :ಶ್ರೀ ಲಕ್ಷ್ಮಿನಾರಾಯಣ ತಂದೆ ರಾಮಚಂದ್ರ ಮೂರ್ತಿ ಇವರು ಮಾಚನಾಳ ತಾಂಡಾದ ಸೀಮಾಂತರದಲ್ಲಿ ಎಸ್.ಆರ್.ಕೆ ಕಂಪನಿಯ ಆವರಣದಲ್ಲಿ ಒಂದು ಡಿಜೇಲ್ ಬಂಕ ಹಾಕಿದ್ದು ದಿನಾಂಕ: 13-09-2011 ರಂದು ಸಾಯಂಕಾಲ ಮಾಚನಾಳ ತಾಂಡಾದ ನಿವಾಸಿಗಳಾದ 1
.ಚಂದು ಪವಾರ ಲೈನಮಾನ 2.ಸುಭಾಷ 3.ಶಂಕರ, 4. ಬಾಬು ಈ ನಾಲ್ಕು ಜನರು ತಮ್ಮ ಗ್ರಾಮದ ಇತರೆ ಜನರೊಂದಿಗೆ ನಮ್ಮ ಕಂಪನಿಯೊಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಯಾಕೆ ಪ್ಯಾಕ್ಟರಿ ಹಾಕಿದ್ದೀರಿ ನಮಗೆ ಇದರಿಂದ ತೊಂದರೆಯಾಗುತ್ತಿದೆ ಅಂತಾ ಡಿಜೇಲ್ ಬಂಕ ಪಕ್ಕದ ಕೊಣೆಯಲ್ಲಿ ಅಳವಡಿಸಿದ ಟಿವಿಟಿ ಸ್ಟಾಟರ್ ಸ್ಟೇಪ್ಲೇಜರ್ ಗಳು ಕಿತ್ತಿ ಜಮೀನ ಮೇಲೆ ಬಿಸಾಡಿ ಡ್ಯಾಮೇಜ್ ಮಾಡಿದ್ದಲ್ಲದೆ ಕರೆಂಟ ವಾಯರ್ ಕೂಡಾ ಕಟ್ ಮಾಡಿದ್ದು ಇರುತ್ತದೆ. ಆಗ ಕ್ಯಾಂಪ ಮಾನ್ಯೇಜರ್ ಜೈನೋದ್ದೀನ ಬಂದು ಸದರಿಯವರಿಗೆ ಯಾಕೆ ಹೀಗೆ ಮಾಡುತ್ತಾ ಇದ್ದೀರಿ ಅಂತಾ ಕೇಳಿದಕ್ಕೆ ಏ ಸೂಳೆ ಮಗನೇ ಈ ಪ್ಯಾಕ್ಟರಿ ನೀವು ಬಂದ ಮಾಡಬೇಕು ಅಂತಾ ಬೈದು ಈ ಸುದ್ದಿ ಯಾರ ಮುಂದೆ ಹೇಳಿದರೆ ನಿಮ್ಮನ್ನು ಜೀವ ಸಹಿತಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ನಮಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಕು|| ಅಶ್ವಿನಿ ತಂದೆ ಅಶೋಕ ಕಾಂಬಳೆ ಸಾ:ಮಹಾಲಕ್ಷ್ಮೀ ಲೇ ಔಟ ಪೊಲೀಸ್ ವಸತಿ ಗೃಹ ಗುಲಬರ್ಗಾ ಇವರು ದಿನಾಂಕ: 14-09-2011 ರಂದು ಸಾಯಂಕಾಲ ಪಾಲಟೇಕ್ನಿಕ ಕಾಲೇಜದಿಂದ ಮನೆಗೆ ನಡೆದುಕೊಂಡು ಐವಾನ ಈ ಶಾಹಿ ರೋಡದಿಂದ ಸ್ಟಡಿಯಂ ರೋಡ ಕಡೆಗೆ ಮನೆಗೆ ಹೋಗುತ್ತಿರುವಾಗ ಚರ್ಚ ಕಂಪೌಂಡ ಗೊಡೆ ಹತ್ತಿರ ರೋಡಿನ ಮೇಲೆ ಎದುರಿನಿಂದ ಮೋ/ಸೈಕಲ್ ನಂ:ಕೆಎ 32 ಜೆ 6050 ನೆದ್ದರ ಚಾಲಕನು ಎದುರುನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರುಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ವಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು :
ರಾಘವೇಂದ್ರ ನಗರ ಠಾಣೆ :
ವಡ್ಡರ ಗಲ್ಲಿ ಹತ್ತಿರ ಭಗತಸಿಂಗ್ ಚೌಕದಲ್ಲಿ ದಿನಾಂಕ 14-09-2011 ರಂದು ಮದ್ಯಾಹ್ನದ ಸಮಯದಲ್ಲಿ ಈರಮ್ಮ ಗಂಡ ಚಂದ್ರಶಾ ದಾಳಿಂಬ ವ|| 60, ಇವಳು
ಮನೆಯಲ್ಲಿ ಚಹಾ ಮಾಡಲು, ಸ್ಟೂವ್ ಹಚ್ಚುತ್ತಿದ್ದಾಗ ಅದರ ಬೆಂಕಿ ಪಕ್ಕದಲ್ಲಿದ್ದ ಹಾಸಿಗೆಗೆ ಹತ್ತಿ ಅದರಿಂದ ಅಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಮ್ರತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ವಿಶ್ವವಿದ್ಯಾಲಯ ಠಾಣೆ :ಶ್ರೀ ಸಂತೋಷಕುಮಾರ ತಂದೆ ರಾಮಣ್ಣ ಕಣ್ಣಿ ಸಾ|| ಕಾಳಗಿ ತಾ|| ಚಿತ್ತಾಪೂರ ರವರು ದಿನಾಂಕ 06-09-2011 ರಂದು ಸಾಯಂಕಾಲ ಕಾಳಗಿಯಿಂದ ಗುಲಬರ್ಗಾಕ್ಕೆ ಬಸ್ಸಿನಲ್ಲಿ ಹೋರಟಿದ್ದು ಗುಲಬರ್ಗಾದ ಬಸ್ಸಿನಲ್ಲಿ ನನ್ನ ಪರ್ಸ ಕಳವು ಆಗಿರುತ್ತದೆ. ನನ್ನ ಪರ್ಸ ಯಾರೋ ಕಳ್ಳರೂ ಬಸ್ಸಿನಲ್ಲಿ ಕಳವು ಮಾಡಿದ್ದು, ನನ್ನ ಪರ್ಸನಲ್ಲಿ ಎರಡು ಸಾವಿರ ರೂ, ಮತ್ತು ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಮ್ ಕಾರ್ಡ ಹಾಗೂ ಗುಪ್ತ ಸಂಖ್ಯೆ ಇರುವ ಕವರ ಮತ್ತು ಕಾಲೇಜಿನ ದಾಖಲೆಗಳು ಇದ್ದವು, ಆದರೆ ನನ್ನ ಎಸ್,ಬಿ,ಐ ಖಾತೆ ನಂ- 30851252071 ನೇದ್ದರಲ್ಲಿ 25.000 ರೂ ಇರುತ್ತವೆ, ನನ್ನ ಪರ್ಸ ಕಳೆದುಕೊಂಡು ಮಾರನೇ ದಿನ 11-00 ಗಂಟೆಗೆ ನಾನು ಕಾಳಗಿ ಎಸ್,ಬಿ,ಐ ಬ್ಯಾಂಕಿಗೆ ಹೋಗಿ ನನ್ನ ಖಾತೆ ಬಗ್ಗೆ ವಿಚಾರಿಸಿದಾಗ ದಿನಾಂಕ 07-09-2011 ರಂದು ಬೆಳಿಗ್ಗೆ 10-58 ನಿಮಿಷಕ್ಕೆ 20.000 ರೂ ಹಾಗೂ 11-00 ಗಂಟೆಗೆ 4.900 ರೂ ಗಳು ಗುಲಬರ್ಗಾದ ಮಕ್ಕಾ ಕಾಲೋನಿಯಲ್ಲಿರುವ ಎಸ್,ಬಿ,ಎಚ್ ಶಾಖೆಯ ಬ್ಯಾಂಕಿನ ಎ,ಟಿ,ಎಮ್ ದಿಂದ ಒಟ್ಟು 24.900 ರೂ ಗಳು ಯಾರೋ ಕಳ್ಳರೂ ನನಗೆ ಗೋತ್ತಿಲ್ಲದವರು ಹಣ ಡ್ರಾ ಮಾಡಿಕೊಂಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: