POLICE BHAVAN KALABURAGI

POLICE BHAVAN KALABURAGI

16 September 2011

GULBARGA DIST REPORTED CRIMES

ಕಳವು ಪ್ರಕರಣ :-
ಗ್ರಾಮೀಣ ಠಾಣೆ :
ಶ್ರೀ ಮಹೇಶ ತಂದೆ ವಿರುಪಣಪ್ಪಾ ಶೀಲವಂತ ಸಾ|| ಜಗತ ಗುಲಬರ್ಗಾರವರು, ದಿನಾಂಕ 14-09-11 ರಂದು ಸಂಜೆ 6-00 ಗಂಟೆ ಸುಮಾರಿಗೆ ನನ್ನ ಟಾಟಾ ಇಂಡಿಕಾ ವಿಸ್ಟಾ ಕಾರ್ ಕೆಎ-41 ಎಮ್-9003 ಕಾರನ್ನು ಚಾಲಕ ಅನಿಲ ತಂದೆ ಶರಣಪ್ಪ ದೇಗಾಂವ ಸಾ|| ರಾಮ ನಗರ ಗುಲಬರ್ಗಾ ಇತನು ರಾಮ ನಗರದಲ್ಲಿರುವ ತನ್ನ ಮನೆಯ ಮುಂದಿನ ಕಲ್ಲಿನ ಕಂಪೌಂಡ ಒಳಗಡೆ ಕಾರು ಹಚ್ಚಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 15-09-11 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆ ಮುಂದೆ ಕಾರ ಇರಲಿಲ್ಲಾ. ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬೆಲೆ 4 ಲಕ್ಷ ರೂ. ಇರುತ್ತದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಪತ್ತೆ ಮಾಡಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ ಪ್ರಕರಣ :-

ಬ್ರಹ್ಮಪುರ ಠಾಣೆ :ಶ್ರೀ ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ತಳ್ಳೋಳಿ ಸಾ|| ಕುಮಸಿ, ಹಾ||ವ|| ಪೊಲೀಸ ಕಾಲೋನಿ ಗುಲಬರ್ಗಾ ರವರು, ದಿನಾಂಕ: 15-09-11 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ರಮಾಕಾಂತ ಈತನು ವಿರೇಶ ನಗರದಲ್ಲಿರುವ ಬಾಲಾಜಿ ಕಿರಾಣಿ ಅಂಗಡಿಯಲ್ಲಿ ನಮ್ಮ ಮೊಬೈಲಗೆ ರಿಚಾರ್ಜ ಮಾಡು ಅಂತಾ ಹೇಳಿ 20 ರೂಪಾಯಿ ಕೊಟ್ಟು ಮರಳಿ ಮನೆಗೆ ಬಂದಿದ್ದು, ಮನೆಗೆ ಬಂದು ಅರ್ಧ ಗಂಟೆಯಾದರು ನಮ್ಮ ಮೊಬೈಲಗೆ ಬ್ಯಾಲನ್ಸ ಬರದ ಕಾರಣ ನಾನು ಬಾಲಾಜಿ ಕಿರಾಣಿ ಅಂಗಡಿಗೆ ಹೋಗಿ ಅಂಗಡಿಯ ಮಾಲಿಕನಾದ ಶರಣಬಸ್ಸು ಖಾನಾಪೂರ ಈತನಿಗೆ ವಿಚಾರಿಸಿದಾಗ ಅವನು ನನ್ನೊಂದಿಗೆ ಜಗಳಕ್ಕೆ ಬಿದ್ದು ಜಾತಿ ನಿಂದನೆ ಮಾಡಿ, ಅವಾಚ್ಯಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾನೆ. ಅವರ ತಮ್ಮನಾದ ಸಂತೋಷ ಖಾನಾಪೂರ ಮತ್ತು ಮತ್ತೊಬ್ಬನು ಅವಾಚ್ಯಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾನೆ ಇದರಿಂದ ಗುಪ್ತ ಪೆಟ್ಟಾಗಿರುತ್ತದೆ. ಅಲ್ಲದೇ ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶ್ರೀಶೈಲಯ್ಯಾ ಮಠ ಸಾ|| ಶಿವಯೋಗಿ ಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆ ಸೇಡಂ ರವರು, ದಿ:13-09-11 ರಂದು ಮದ್ಯಾಹ್ನ 15:00 ಗಂಟೆಗೆ ತಿಮ್ಮಾಪೂರ ಸರ್ಕಲ್ ಗುರುಕುಲ ಶಾಲೆ ಪಕ್ಕದಲ್ಲಿ ತಮ್ಮ ವಾಹನ ಹೀರೊ ಹೋಂಡಾ ಸ್ಪ್ಲೆಂಡರ್ ಕಪ್ಪು ಬಣ್ಣದು ನಂ ಎಮ್. ಹೆಚ್ 13 ಟಿ 469 ಅಂದಾಜು 25000/-ರೂ. ಮೌಲ್ಯದ್ದು ನಿಲ್ಲಿಸಿ ಹೋಗಿ ಮರಳಿ 16:00 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ವಾಹನ ಇರಲಿಲ್ಲಾ. ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇಂದಿನವರೆಗೆ ಹುಡುಕಾಡಿದರೂ ವಾಹನ ಸಿಕ್ಕಿರುವುದಿಲ್ಲಾ. ಕಾರಣ ಪತ್ತೆ ಹಚ್ಚಿಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: