POLICE BHAVAN KALABURAGI

POLICE BHAVAN KALABURAGI

12 August 2011

GULBARGA DISTRICT REPORTED CRIMES


ಕೊಲೆ ಮಾಡಿದ 12 ಗಂಟೆಗಳಲ್ಲಿ ಕೊಲೆ ಗಡುಕರ ಬಂಧನ :

ಶ್ರೀಮತಿ ಸಂಗೀತಾ ಗಂಡ ಮಾಹಾಂತೇಶ ಪೂಜಾರಿ ಸಾ;ದುಬೈ ಕಾಲೂನಿ ಗುಲಬರ್ಗಾ ರವರು ನನ್ನ ಗಂಡ ಮಹಾಂತೇಶ ಇತನನ್ನು ದಿನಾಂಕ: 10-08-2011 ರಂದು 10-00 ಪಿ.ಎಂ.ದಿಂದ ದಿನಾಂಕ.11-08-2011 11-00 ಎ.ಎಂ. ಮದ್ಯದ ಅವಧಿಯಲ್ಲಿ ಉಪಳಾಂವ ಸೀಮೆಯ ವನ್ಯಧಾಮ (ಫಾರೆಸ್ಟ) ಪಕ್ಕದ ಪಟೇಲ ಇವರ ಹೊಲದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ನನ್ನ ಗಂಡ ಮಾಹಾಂತೇಶ ಪೂಜಾರಿ ಸಾ;ಶಹಾಬಜಾರ ಗುಲಬರ್ಗಾ ಇತನಿಗೆ ಕಲ್ಲುಗಳಿಂದ ತಲೆಗೆ ಮುಖಕ್ಕೆ ಹೊಡೆದು ಭಾರಿ ಗಾಯಗೊಳಿಸಿ ಮುಖ ವಿರೂಪಗೊಳಿಸಿ ಕೃತ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಮುಖದ ಮೇಲೆ ಯಾಸೀಡ್ ಹಾಕಿ ಸಾಕ್ಷಿ ನಾಶ ಪಡಿಸಿರುತ್ತಾರೆ ಅಂತಾ ದೂರು ನೀಡಿದ್ದರ ಮೇರೆಗೆ ಕೊಲೆ ಮಾಡಿದ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪವಾರ ಪ್ರವೀಣ ಮಧುಕರ ಐಪಿಎಸ್. ಎಸ್.ಪಿ. ಗುಲಬರ್ಗಾ ಮತ್ತು ಶ್ರೀ ಕಾಶೀನಾಥ ತಳಕೇರಿ ಅಪರ ಎಸ್.ಪಿ. ಗುಲಬರ್ಗಾ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ.ಎ.ಡಿ ಬಸವಣ್ಣನವರ ಡಿ.ಎಸ್.ಪಿ.(ಬಿ) ಉಪ ವಿಭಾಗ ಪ್ರಭಾರಿ ಗ್ರಾಮೀಣ ಉಪ - ವಿಭಾಗ ಗುಲಬರ್ಗಾ ರವರ ಸಲಹೆ ಮೇರೆಗೆ ವಿಜಯಲಕ್ಷ್ಮೀ ಸಿ.ಪಿ.ಐ ಗ್ರಾಮೀಣ ವೃತ್ತ ಗುಲಬರ್ಗಾ, ಮತ್ತು ಆನಂದರಾವ ಪಿ.ಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರಾದ ಸೂರ್ಯಕಾಂತ , ಪ್ರಭುಲಿಂಗ ,ಲಕ್ಕಪ್ಪಾ, ಪೇದೆಗಳಾದ ಕುಪೇಂದ್ರ , ಆನಂದ, ಮೋಯಿಜ ಹಾಗೂ ಶರಣು ,ಜೀಪ ಚಾಲಕರಾದ ಬಂಡಪ್ಪಾ ,ಮಲ್ಲಿಕಾರ್ಜುನ ಗ್ರಾಮೀಣ ಠಾಣೆ ಇವರುಗಳು ತಂಡಗಳನ್ನು ರಚಿಸಿಕೊಂಡು ಆರೋಪಿತರ ಪತ್ತೆಗಾಗಿ ಜಾಲ್ ಬೀಸಿ ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಹತ್ತಿರ ಇರುವಿಕೆಯ ಬಗ್ಗೆ ಖಚಿತ ಬಾತ್ಮಿಯನ್ನು ಪಡೆದುಕೊಂಡು ಕೋಲೆ ಮಾಡಿದ ಕೃಷ್ಣಕಾಂತ @ ಕೃಷ್ಣ,@ ಕಿಟ್ಯಾ ತಂದೆ ಲಕ್ಷ್ಮಣರಾವ ಅವಧೂತ, ಲಕ್ಷ್ಮೀಪುತ್ರ @ ಪುತ್ರು ತಂದೆ ಸುಭಾಷ ಗಣೆರ ಸಾ;ಇಬ್ಬರು ಶಹಾಬಜಾರ ಗುಲಬರ್ಗಾ ರವರನ್ನು ದಸ್ತಗಿರ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುತ್ತಾರೆ. ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಪಿಎಸ್.ಐ. (ಕಾ&ಸೂ) ಗ್ರಾಮೀಣ ಠಾಣೆ ಗುಲಬರ್ಗಾ ಹಾಗೂ ಸಿಬ್ಬಂದಿಯವರ ಪತ್ತೆ ಕಾರ್ಯಕ್ಕೆ ಪ್ರಶಂಸನೆ ಮಾಡಲಾಗಿದೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಠಾಣೆ
:ಶ್ರೀ ವಿಶ್ವನಾಥ ತಂದೆ ಶಿವಶರಣಪ್ಪ ಬೆಣ್ಣೂರ ಗೊದುತಾಯಿ ನಗರ ಜೇವರ್ಗಿರೋಡ ಗುಲಬರ್ಗಾ ರವರು ನಾನು ನನ್ನ ಎಕ್ಟೀವ ಹೊಂಡಾ ನಂ: ಕೆಎ 32 ಯು7659 ನೇದ್ದನ್ನು ಬಲಗಡೆ ಇಂಡಿಕೇಟರ ಹಾಕಿ ನಿಧಾನವಾಗಿ ಗೋದುತಾಯಿ ಕಾಲೋನಿ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಮೋಟಾರ ಸೈಕಲ್ ನಂ:ಕೆಎ 32 ಎಲ್ 9316 ನೇದ್ದನ್ನು ರಾಷ್ಟ್ರಪತಿ ಸರ್ಕಲ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: