POLICE BHAVAN KALABURAGI

POLICE BHAVAN KALABURAGI

20 July 2011

GULBARGA DIST REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಬಸೀರ ತಂದೆ ಶಮ್ಮಶೋದೀನ ಪಟವಾರಿ ಉ: ಟ್ರಾನ್ಸಪೋರ್ಟ ಕೇಲಸ ಸಾ: ಇಸ್ಲಾಮಾಬಾದ ಕಾಲನಿ ಗುಲಬರ್ಗಾ ರವರು ನಾನು ದಿನಾಂಕ 19/7/2011 ರಂದು ಮದ್ಯಾಹ್ನ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ 32 ವೈ 3720 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನ ರಾಂಗ ಸೈಡಿನಿಂದ ಹಿರೋ ಹೊಂಡಾ ಸ್ಪ್ಲೇಂಡರ ನಂ: ಕೆಎ 32 ವ್ಹಿ 9116 ನೇದ್ರ ಸವಾರ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಬಿರಬಟ್ಟಿ ಸಾ: ಶಿವಾಜಿನಗರ ಗುಲಬರ್ಗಾ ಇತನು ತನ್ನ ಮೋಟಾರ ಸೈಕಲನ್ನು ಅತೀ ವೇಗ & ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಆಳಂದ ಠಾಣೆ
: ಸಿದ್ರಾಮಪ್ಪ ತಂದೆ ಹಣಮಂತರಾವ ಪಾಟೀಲ್ ಸಾ|| ಹೊಡಲುರ ರವರು ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದೆನೆ, ನನಗೂ ನನ್ನ ಸ್ವಂತ ತಮ್ಮ ಅಮೃತ ನಡುವೆ ಜಮಿನಿನ ವಿಷಯದಲ್ಲಿ ತಕರರು ನಡೆದಿದೆ, ದಿನಾಂಕ 20/07/2011 ರಂದು ಬೆಳಿಗೆ ನಾನು ಮತ್ತು ಕೂಲಿ ಕೆಲಸಕ್ಕೆ ಬಂದಿದ ಬಹದ್ದೂರ ಪಟೇಲ, ಈರಣ್ಣ ಸಿರೋಳ್ಳಿ ಎಲ್ಲರೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು ಬೆಳಿಗ್ಗೆ ಸುಮಾರಿಗೆ ನಮ್ಮ ಮೇಲೆ ದ್ವೇಶ ಭಾವನೆ ಹೊಂದಿರುವ ನನ್ನ ತಮ್ಮ ಅಮೃತ ಮತ್ತು ಅವನ ಮಕ್ಕಳಾದ ಹಿರೇಶ, ಗಿರೀಶ, ಶರಣು ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಹೊಲ ಹ್ಯಾಂಗ ಸಾಗುವಳಿ ಮಾಡುತ್ತಿಯ ಅಂತಾ ಗೀರಿಶ ಪಾಟೀಲ್ ಇವನು ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: