ಕಳ್ಳತನ ಪ್ರಕರಣ
ಸ್ಟೇಷನ ಬಜಾರ ಠಾಣೆ:
ಶ್ರೀ. ಎಸ್.ಎಮ್. ದೇವಯ್ಯಾ ಸಾ|| ಮನೆ ನಂ 200 ಐವಾನ-ಎ-ಶಾಹಿ ಎರಿಯಾ ಗುಲಬರ್ಗಾ ರವರು ದಿನಾಂಕ 17.07.11 ರಂದು ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರ್ ನಂ ಕೆಎ 02 , ಎಮ್ ಎ 4699 ನೇದ್ದರ ಕಾರ್ ಟೇಪ ರಿಕಾರ್ಡರ್ ಹಾಗೂ ಡ್ಯಾಶ ಬೋರ್ಡನಲ್ಲಿಟ್ಟಿದ್ದ ಸಿ.ಡಿ. ಕ್ಯಾಸೆಟ್ ಹಾಗೂ ಕಾರಿನ ದಾಖಲೆಗಳು ಅ||ಕಿ|| 15,000-00 ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮಧ್ಯ ಮಾರಾಟ :
ನಿಂಬರ್ಗಾ ಠಾಣೆ: ಇಂದು ದಿನಾಂಕ: 18-07-2011 ರಂದು ಮುಂಜಾನೆ ಬೂಸನೂರ ಕ್ರಾಸ ಹತ್ತಿರ ಜಿ ದಾಬಾ ಮುಂದುಗಡೆ ರೋಡಿನ ಪಕ್ಕದಲ್ಲಿ ದಸ್ತಗಿರ ಸಾಬ ತಂದೆ ಮದರಸಾಬ ಗೌರ ಸಾ|| ಭೂಸನೂರ ಗ್ರಾಮ ತಾಃ ಆಳಂದ ರವರು ಆಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಮತ್ತು ಸಾಗಾಣೆ ಮಾಡುತ್ತಿರುವಾಗ ಪಿ.ಎಸ.ಐ ರವರು ಆತನನ್ನು ವಿಚಾರಿಸಿ ಮಧ್ಯ ಮಾರಾಟ ಮಾಡಿದ ನಗದು ಹಣ 240-00 ರೂ. ಹಾಗು ಮಧ್ಯದ ಬಾಟಲಿಗಳು ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲಾಗಿದೆ .
ಯು.ಡಿ.ಅರ್. ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 17/07/2011 ರಂದು ಪಿಸಿ 29 ಶ್ರೀ ಚಂದ್ರಾಮ ರವರು ವರದಿ ಸಲ್ಲಿಸಿದ ಸಾರಾಂಶದ ಎನೆಂದರೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜ 70 ವರ್ಷ ವಯಸ್ಸಿನವನು ಯಾವುದೋ ಒಂದು ಕಾಯಿಲೆಯಿಂದ ಮರಣ ಹೊಂದಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವರದಿಯ ಮೇಲೆ ಯು,ಡಿ,ಆರ್. ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪಿ.ಎಸ.ಐ ರವರು ಮುಂದಿನ ತನಿಖೆ ಕೈಕೊಂಡಿರುತ್ತಾರೆ. ಅಪರಿಚಿತ ಮನುಷ್ಯ 70 ವಯಸ್ಸಿನವನಾಗಿದ್ದು, ಎತ್ತರ 5.6 ಇಂಚ್ ಸಾದಾ ಕಪ್ಪು ಬಣ್ಣ ತಲೆಯಲ್ಲಿ ಉದ್ದನೆ ಬಿಳಿ ಕೂದಲು ತೆಳ್ಳನೆ ಮೈಕಟ್ಟು ಯಾವದೋ ರೋಗದಿಂದ ನರಳುತ್ತಾ ಮೃತಪಟ್ಟಂತೆ ಕಂಡು ಬರುತ್ತದೆ ಮೃತನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆ 08472-263618 ಅಥವಾ ಕಂಟ್ರೋಲ್ ರೂಮ್ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment