POLICE BHAVAN KALABURAGI

POLICE BHAVAN KALABURAGI

16 July 2011

GULBARGA DIST REPORTED CRIME

ಮುಂಜಾಗ್ರತೆ ಕ್ರಮ :

ಚಿತ್ತಾಪುರ ಪೊಲೀಸ್ ಠಾಣೆ :
ದಿನಾಂಕ 15/07/11 ರಂದು ರಾತ್ರಿ ಶ್ರೀ ಚಾಂದಪಾಶಾ ಎ.ಎಸ್.ಐ ಚಿತ್ತಾಫುರ ಪೊಲಿಸ್ ಠಾಣೆ ರವರು ವರದಿ ಸಲ್ಲಿಸಿದ್ದರ ಮೇರೆಗೆ 1 ನೇ ಪಾರ್ಟಿ ಜನರಾದ ಬುಡ್ಡ ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಮಹಾದೇವ ತಂದೆ ಬುಡ್ಡ ಬಸಪ್ಪ ಬೂತಪುರ, ನಾಗಮ್ಮ ಗಂಡ ಹಣಮಂತ ಹಿರಿನಿಂಗಣ್ಣನವರ, ರಾಜಶೇಖರ ತಂದೆ ಬುಡ್ಡ ಬಸಪ್ಪಪ ಬೂತಪೂರ, ಶರಣಪ್ಪ ತಂದೆ ಬುಡ್ಡ ಬಸಪ್ಪ ಬೂತಪೂರ, ಈಶಪ್ಪ ತಂದೆ ಬುಡ್ಡ ಬಸಪ್ಪ ಬೂತಪುರ, ಸಿದ್ರಾಮಪ್ಪ ತಂದೆ ಬುಡ್ಡಬಸಪ್ಪ ಬೂತಪೂರ, ಭಾಗಮ್ಮ ಗಂಢ ರಾಜಶೇಖರ ಬೂತಪುರ ಮಹೇಶಮ್ಮ ಗಂಡ ಶರಣಪ್ಪ ಬೂತಪೂರ ದೇವಿಂದ್ರಮ್ಮ ಗಂಡ ಈಶಪ್ಪ ಬೂತಪೂರ ಹಾಗು 2ನೇ ಪಾರ್ಟಿ ಜನರಾದ ದೇವಿಂದ್ರಪ್ಪ ತಂದೆ ಮಾರ್ತಾಂಡಪ್ಪ ಬೂತಪುರ, ಬಸಪ್ಪ ತಂದೆ ಮಾರ್ತಾಂಡಪ್ಪ ಬೂತಪುರ ಸಾ|| ಎಲ್ಲರೂ ದಂಡಗುಂಡ ಗ್ರಾಮ ತಾ|| ಚಿತ್ತಾಪುರ ರವರ ಮುಂಜಾಗ್ರತೆ ಕ್ರಮ ಕುರಿತು ಸಿ.ಅರ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಾ ಮಾಡಿಕೊಳ್ಳಲಾಗಿದೆ .

ಖೋಟಾ ನೋಟು ಪ್ರಕರಣ :
ಸ್ಟೇಷನ ಬಜಾರ ಠಾಣೆ
; ಶ್ರೀ ಕೆ.ವೇಣುಗೋಪಾಲ ತಂದೆ ಪಾಂಡುರಂಗ ಶೆಣೈ ಸಿನಿಯರ್ ಮ್ಯಾನೇಜರ ಸಿಂಡಿಕೇಟ್ ಬ್ಯಾಂಕ ಕರೆನ್ಸಿ ಚೆಕ್ಕ ಎಸ್.ವಿ.ಪಿ. ಚೌಕ್. ಗುಲಬರ್ಗಾ ರವರು ನಮ್ಮ ಸಿಂಡಿಕೇಟ ಬ್ಯಾಂಕ ಕರೆನ್ಸಿ ಚೆಸ್ಟ ಎಸ್.ವಿ.ಪಿ. ಚೌಕ ಗುಲಬರ್ಗಾ ಪರಿವೀಕ್ಷಣೆಯನ್ನು ದಿನಾಂಕ 24-12-2010 ರಂದು ಆರ್.ಬಿ.ಐ ಬೆಂಗಳೂರಿನ ಪರಿವಿಕ್ಷಕರು ಕೈಕೊಂಡಿದದು, ಪರೀವಿಕ್ಷಣೆ ಕೈಕೊಂಡ ಕಾಲಕ್ಕೆ ಐದನೂರು ರುಪಾಯಿ ಮುಖಬೆಲೆಯುಳ್ಳ ಮೂರು ಖೋಟಾ ನೋಟುಗಳು ಸಿಕ್ಕಿದ್ದು ಈ ಬಗ್ಗೆ ನಮ್ಮೆ ಮೇಲಾಧಿಕಾರಿಗಳಲ್ಲಿ ಚರ್ಚಿಸುವ ಸುಲವಾಗಿ ಅರ್ಜಿ ಕೊಡಲು ವಿಳಂಬವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಅಯ್ಯಪ್ಪಾ ಹಂದರಕಿ ಸಾ:ಭಂಕೂರ ರವರು ದಿ:10/01/1999 ರಿಂದ 05/09/2007 ರವರೆಗೆ ನನ್ನ ಹೊಲ ಸರ್ವೆ ನಂ.133/1, 2 ಎಕರೆ 18 ಗುಂಟೆ ನನ್ನ ಗಂಡನಿಗೆ 85,000/- ರೂ ಗೆ ಮಾರಾಟ ಮಾಡಿ ಸ್ಟಾಂಪಗಳು ಬರೆದು ಕೊಟ್ಟು ಮತ್ತು ಬಿಳಿ ಪೇಪರನಲ್ಲಿ ಮಾರಾಟ ಪತ್ರ ಅಂತಾ ಬರೆದುಕೊಟ್ಟು ನೊಂದಣೆ ಮಾಡದೆ ಮೋಸ ಮಾಡಿರುತ್ತಾನೆ. ನಾವು ಕೇಳಲಿಕ್ಕೆ ಹೋದರೆ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: