ಇಸ್ಪೀಟ ಆಟದ ಮೇಲೆ ದಾಳಿ :
ಬ್ರಹ್ಮಪೂರ ಠಾಣೆ : ದಿನಾಂಕ: 18-06-2011 ರಂದು ಮಧ್ಯ ರಾತ್ರಿ ನಾನು ವೀರಣ್ಣ ಕುಂಬಾರ ಪಿ.ಎಸ.ಐ ಮತ್ತು ಮಾನ್ಯ ರವಿ ಎಸ.ಪಿ (ಪ್ರೋಬೆಶನರಿ) ಹಾಗು ಠಾಣೆಯ ಸಿಬ್ಬಂದಿಯವರಾದ ಶಿವಪುತ್ರಪ್ಪಾ , ರಾಜಕುಮಾರ, ಆನಂದ, ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಸಾರ್ವಜನಿಕ ಸ್ತಳದಲ್ಲಿ ಲೈಟಿನ ಬೆಳಕಿನಲ್ಲಿ ಅಂದರ ಬಾಹರ ಇಸ್ಪೀಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ, ನಾವೆಲ್ಲರೂ ಹೋಗಿ ನೋಡಲಾಗಿ ಇಸ್ಪೀಟ ಜೂಜಾಟ ಆಡುತ್ತಿರುವವರ ಮೇಲೆ ಇಬ್ಬರ ಪಂಚರ ಸಮಕ್ಷಮ ದಾಳಿ ಮಾಡಿ ಹೆಸರು ವಿಚಾರಿಸಲಾಗಿ ಭರತ ತಂದೆ ತಿಮ್ಮಯ್ಯಾ ತಾಂಡೂರಕರ, ಸಿದ್ದು ತಂದೆ ಸೂರೆಕಾಂತಕರ್, ಶ್ರಾವಣ ತಂದೆ ಕಲ್ಲಪ್ಪಾ ಹಿರೇಮಠ, ಸಂತೋಷ ತಂದೆ ಭಾಗಣ್ಣ ನಾಟಿಕಾರ, ಸುಭಾಶ ತಂದೆ ನಾಗಣ್ಣ ಸರಡಗಿ, ರಾಚಯ್ಯ ತಂದೆ ಶಾಂತಲಿಂಗಯ್ಯಾ, ರಾಜಶೇಖರ ತಂದೆ ಸಿದ್ರಾಮಪ್ಪಾ, ಶರಣಬಸಪ್ಪಾ ತಂದೆ ಅಂಬಣ್ಣ, ಮಲ್ಲಿಕಾರ್ಜುನ ತಂದೆ ಸಂಗಣ್ಣ, ಶಿವಕುಮಾರ ತಂದೆ ಬಸವಣಪ್ಪಾ ಸಾ|| ಎಲ್ಲರೂ ಗುಲಬರ್ಗಾರವರಿಂದ ಒಟ್ಟು ಹಣ 10,045-00 ರೂಪಾಯಿಗಳು ಮತ್ತು ಜೂಜಾಟಕ್ಕೆ ಬಳಸಿದ ಇಸ್ಪೀಟ ಕಾರ್ಡಗಳು ಜ್ತಪಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಇಸ್ಪೀಟ ಆಟದ ಮೇಲೆ ದಾಳಿ :
ಸ್ಟೇಶನ ಬಜಾರ ಠಾಣೆ : ದಿನಾಂಕ: 18-06-2011 ರಂದು ಮಧ್ಯರಾತ್ರಿ ನಾನು ಬಿ.ಡಿ ಬುರ್ಲಿ ಪಿ.ಎಸ.ಐ ಕರ್ತವ್ಯಲ್ಲಿದ್ದಾಗ ಜೇಸ್ಕಾಂ ಕಛೇರಿಯ ಒಳಾಂಗಣದಲ್ಲಿ ಕೆಲವು ಜನರು ಇಸ್ಪೀಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ್ದಿದರಿಂದ, ನಾನು ಮತ್ತು ಸಿಬ್ಬಂದಿಯವರು ಇಸ್ಪೀಟ ಆಡುತ್ತಿರುವವರ ಮೇಲೆ ದಾಳಿ ಮಾಡಲಾಗಿ ಮಸೂದ ಅಹ್ಮದ ಎಮ.ಎಸ.ಕೆ.ಮಿಲ್ಲ, ಬಾಬಾ ತಂದೆ ಮಹಿಮೂದ ಸ್ಟೇಶನ ಏರಿಯಾ, ಅಶೋಕ ತಾರಪೈಲ್, ಸಂಜಯ ಐವಾನ ಶಾಹಿ ರಸ್ತೆ, ಖಲೀಲ ಉಪ್ಪರ ಲೈನ, ಶಕೀಲ ಹಳೆ ಜೇವರ್ಗಿ ರಸ್ತೆ ಮತ್ತು ಸಂಗಮನಾಥ ಕಪಾಳೆ ಸಾ|| ಎಲ್ಲರೂ ಗುಲಬರ್ಗಾರವರಿಗೆ ದಸ್ತಗಿರಿ ಮಾಡಿ ಇಸ್ಪೀಟ ಜೂಜಾಟಕ್ಕೆ ಬಳಸುತ್ತಿದ್ದ ನಗದು ಹಣ 3750/- ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳು ಸದರಿಯವರಿಂದ ವಶಪಡಿಸಿಕೊಂಡು ಬಂದು ಠಾಣೆಗೆ ವರದಿ ನೀಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment