ಕಳವು ಪ್ರಕರಣ ;
ಆಳಂದ ಠಾಣೆ ;ಶ್ರೀಮತಿ ಪ್ರತಿಭಾ ಗಂಡ ರಾಜೇಂದ್ರ ಸೀಗಿ ಸಾ; ಜೋಡಬಸವಣ್ಣ ಚೌಕ ಸೋಲ್ಲಾಪೂರ ರವರು ದಿನಾಂಕ 30-05-2011 ರಂದು ಸೋಲ್ಲಾಪೂರಕ್ಕೆ ಹೋಗುವ ಕುರಿತು ತಮ್ಮ ಬ್ಯಾಗಗಳಲ್ಲಿ ಬಟ್ಟೆಹಾಕಿಕೊಂಡು ವ್ಯಾನಿಟಿ ಬ್ಯಾಗನಲ್ಲಿ ನಗದು ಹಣ 11000/- ರೂ ಮತ್ತು ತಮ್ಮ ಬಂಗಾರದ ವಡವೆಗಳಾದ ಬಂಗಾರದ 4 ಬಿಲವಾರ, ಮಾಂಗಲ್ಯ ಚೈನ ಬಂಗಾರದ ಕರಿಮಣಿ ಸರ, ಲಾಕೇಟ, ಕಿವಿಯಲ್ಲಿಯ ಹೂವು, ಕಿವಿ ಓಲೆ ಹಳ್ಳಿನದು, ಬಂಘಾರದ ಮಾಟಣಿ, ಬೆಳ್ಳಿ ಕಾಲ ಚೈನ, 2 ಮೂಗಬಟ್ಟು, 3 ಜೋತೆ ಕಾಲುಂಗರ ಬೆಳ್ಳಿಯದ್ದು ಹೀಗೆ ಒಟ್ಟು 133 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 60 ಗ್ರಾಂ ಬೆಳ್ಳಿಯ ಆಭರಣಗಳನ್ನು ಒಟ್ಟು 2,60,000/- ರೂ ಕಿಮ್ಮತ್ತಿನವುಗಳನ್ನು ಒಂದು ಪರಸನಲ್ಲಿ ಇಟ್ಟು ಅದನ್ನು ವ್ಯಾನಿಟಿ ಬ್ಯಾಗನಲ್ಲಿ ಹಾಕಿ ಆಳಂದ ಬಸ್ಸ ನಿಲ್ದಾಣಕ್ಕೆ ತಂದೆ ತಾಯಿಯವರ ಜೋತೆ ಬಂದು ಸೊಲ್ಲಾಪೂರಕ್ಕೆ ಹೋಗುವ ಮಾಹಾರಾಷ್ಟ್ರಾ ಬಸ್ಸಿಗೆ ಬಹಳ ಜನರು ಬಸ್ಸ ಹತ್ತುತ್ತಿರುವುದರಿಂದ ನಾನು ಕೂಡ ಜನಗಳ ಮಧ್ಯ ಭುಜಕ್ಕೆ ವ್ಯಾನಿಟಿ ಬ್ಯಾಗ ಹಾಕಿಕೊಂಡು ಕೈಯಲ್ಲಿ ಬ್ಯಾಗ ಹಿಡಿದುಕೊಂಡು ಬಸ್ಸ ಹತ್ತಿದ್ದು ನಾನು ಬಸ್ಸ ಹತ್ತುವಾಗ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗ ಕತ್ತರಿಸಿ ಅದರ ಒಳಗಡೆ ಇದ್ದ ಸುಮಾರು 2,60,000/- ರೂ ಕಿಮ್ಮತ್ತಿನ ನಗದು ಹಣ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ ;
ನರೋಣಾ ಠಾಣೆ ;ಶ್ರೀ ಮದರ ಸಾಬ ತಂದೆ ಮಹಿಬೂಬ್ ಸಾಬ ಬಾಗವಾಲೆ ಸಾ: ವಿ.ಕೆ.ಸಲಗರ್ ;ರವರ ಮಗನಾದ ಸಿಕಂದರ ಇವನು ನಮ್ಮೂರಿನ ಅಣ್ಣಪ್ಪ ತಂದೆ ಜಂಪಣ್ಣ ಬೆಳಗಿ ಇವರ ಟ್ರ್ಯಾಕ್ಟರ ನಂ ಕೆಎ 32 ಟಿ 1714 ನೆದದ್ದನ್ನು ದಿನಾಂಕ 31-05-2011 ರಂದು ಸಣ್ಮೂಖಪ್ಪಾ ಮಗಿ ಇವರ ಹೊಲದಲ್ಲಿ ನೇಗಿಲು ಹೊಡೆಯಲು ಹೋಗಿದ್ದು ವಾಪಸ ಬರುವಾಗ ಉರ ಸಮೀಪ ಮಾಹಾಗಾಂವ ಕೆಗೆ ಹೋಗುವ ರೋಡಿನ ಸರಕಾರಿ ಭಾವಿ ಹತ್ತಿರ ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ತಗ್ಗಿನಲ್ಲಿ ಬಿದ್ದು ಪಲ್ಟಿಹೊಡೆದು ಟ್ರ್ಯಾಕ್ಟರ ಕೆಳಗಡೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment