ಕಳ್ಳತನ ಪ್ರಕರಣ
ರೋಜಾ ಠಾಣೆ
: ಶ್ರೀ ಸುಧೀರ ತಂದೆ ಮಲ್ಲಿಕಾರ್ಜುನ ಅವಟೆ ಸಾ|| ಗಂಜ ಕಾಲೋನಿ ಗುಲಬರ್ಗಾ ರವರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲದ ಕೊಂಡಿ ಮುರಿದು ಅಡಿಗೆ ಮನೆಯಲ್ಲಿಟ್ಟದ್ದ 4 ತಾಮ್ರದ ಹಾಂಡೆ, ತಾಮ್ರದ ಕೊಡಗಳು , ತಾಮ್ರದ ಪೂಜಾ ಸಾಮಾನುಗಳು, ನಗದು ಹಣ 4700/-ರೂ. ಹೀಗೆ ಒಟ್ಟು ಅ.ಕಿ.19700/-ರೂಪಾಯಿ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸುಲೇಪೇಟ ಠಾಣೆ : ಶ್ರೀ ಅಶೊಕರಡ್ಡಿ ತಂದೆ
ಬಸವಂತರೆಡ್ಡಿ ಹಸರಗುಂಡಗಿ ಸಾ||
ಪರದರ ಮೊತಕಪಳ್ಳಿ ರವರು ನನ್ನ ಮಗಳು ರೇಖಾ ಮತ್ತು ಇತರ ಹುಡಗ ಹುಡಗಿಯವರು ನಮ್ಮೂರಿನಿಂದ
ಗರಗಪಳ್ಳಿ
ಗ್ರಾಮಕ್ಕೆ ಶಾಲೆಗೆ ಹೊಗುತ್ತಿರುವಾಗ ಮೊತಕಪಳ್ಳಿ ಗ್ರಾಮದ ಹತ್ತಿರ
ರೊಡಿನಲ್ಲಿ ಎದುರಿನಿಂದ ಗುಡ್ಸ ಆಟೊ
ನಂ
ಕೆ.ಎ-32 ಬಿ-4267 ನೇದ್ದರ ಚಾಲಕ
ನಬಿಪಟೇಲ ತಂದೆ
ಫತ್ರು ಪಟೇಲ
ಸಾ||
ದಸ್ತಾಪೂರ
ಇತನು ತನ್ನ ವಾಹನವನ್ನು ಅತಿವೇಗ ಮತ್ತು
ಅಜಾಗರೂಕತೆಯಿಂದ
ಚಲಾಯಿಸಿ ಕೊಂಡು ಬಂದು ತನ್ನ
ಮಗಳು ರೇಖಾ ಇವಳಿಗೆ ಡಿಕ್ಕಿ ಹೊಡೆದಿದ್ದರಿಂದ ರೇಖಾ ಇವಳಿಗೆ ತಲೆಗೆ ಮತ್ತು ದೇಹದ
ಇತರೆ ಭಾಗಗಳಿಗೆ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಚಿಂಚೋಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ರೇಖಾ
ಇವಳು ಮೃತ ಪಟ್ಟಿರುತ್ತಾಳೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಜಾತಿ ನಿಂದನೆ ಪ್ರಕರಣ :
ಚೌಕ ಠಾಣೆ :
ಶ್ರೀ ಮಂಜುನಾಥ ತಂದೆ ಚಂದ್ರಶಾ ಮದನಕರ ಸಾಃ ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ 29.06.2011 ರಂದು ಮದ್ಯಾಹ್ನ ಪ್ರಿಯಾ ಬಾರನಿಂದ ನನ್ನ ಗೆಳೆಯರಾದ ಪ್ರಕಾಶ ಮತ್ತು ಹಣಮಂತ ರವರು ಕೂಡಿಕೊಂಡು ಬಾರಿನಿಂದ ಹೊರಗಡೆಗೆ ಬರುತಿದ್ದಾಗ ಬಾರ ಮ್ಯಾನೇಜರನಾದ ಬಸವರಾಜ ಹಡಗಿಲ ಇತನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
No comments:
Post a Comment