POLICE BHAVAN KALABURAGI

POLICE BHAVAN KALABURAGI

09 May 2011

GULBARGA DIST REPORTED CRIMES

ಕಳವು ಪ್ರಕರಣ :-
ನಿಂಬರ್ಗಾ ಠಾಣೆ :
ಶ್ರೀ ಗಿರಿಶ ತಂದೆ ಶಾಂತಾರಾಮ ಮೂಲಭಾರತಿ ಸಾ|| ಪ್ರಬುದ್ಧ ನಗರ ಗುಲಬರ್ಗಾ ರವರು, ನಾನು ಬಿ.ಎಸ್.ಎನ್.ಎಲ್. ಉದ್ಯೋಗಿಯಾಗಿದ್ದು, ನಮ್ಮ ಸಬ್ ಡಿವಿಜನ್ ವ್ಯಾಪ್ತಿಗೆ ಒಳಪಡುವ ಭೂಸನೂರ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಎಂಟೆನಾದಿಂದ ಬಿ.ಟಿ.ಎಸ್. ರೂಮಿಗೆ ಸಂಪರ್ಕ ಜೋಡಿಸಿರುವ 30 ಮೀ. ಉದ್ದದ 6 ಆರ್.ಎಫ್ ಕಾಪರ ಕೇಬಲ್ ವೈರಗಳು ಒಟ್ಟು 180 ಮೀ., ಅಂದಾಜು 81,000/- ರೂ. ನೇದ್ದನ್ನು ಯಾರೋ ಅಪರಿಚಿತ ಕಳ್ಳರು ಕತ್ತರಿಸಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಯತ್ನ :-
ವಾಡಿ ಠಾಣೆ :
ಶ್ರೀ ವೆಂಕಟಪ್ಪಾ ತಂದೆ ಮಹಾದೇವಪ್ಪಾ ವಡ್ಡಹಳ್ಳಿ ಸಾ|| ರಾಂಪೂರಹಳ್ಳಿ ಹಾ|| ವ|| ಬೆಂಗಳೂರು ರವರು, ನಾನು ಹನುಮಾನ ಗುಡಿಯ ಮುಂದಿನ ರೋಡಿನ ಹತ್ತಿರ ಬರುತ್ತಿದ್ದಾಗ ಲಕ್ಷ್ಮಣ ಈತನು ಬಂದು 3 ವರ್ಷಗಳ ಹಿಂದೆ ನನ್ನ ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿ ಬೆಂಗಳೂರಲ್ಲಿ ವಾಸವಾಗಿದ್ದಿ ಅಂತಾ ಹೇಳಿ ಅದೇ ವೈಮನಸ್ಸಿನಿಂದ ನಾಗಪ್ಪಾ, ಶ್ರೀಪಾದ ಇವರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಕಾರಣ ನನಗೆ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :-

ರಟಕಲ್ ಠಾಣೆ :ಶ್ರೀ ರೇವಣಸಿದ್ದಪ್ಪಾ ತಂದೆ ರುದ್ರಪ್ಪಾ ಕೋಡ್ಲಿ ಸಾ|| ಚೆಂಗಟಾ ರವರು, ನನ್ನ ಮೊದಲನೆ ಮಗಳಿಗೆ 2005 ನೇ ವರ್ಷದಲ್ಲಿ ನಮ್ಮ ಗ್ರಾಮದ ಶ್ರೀ ರಾಜಶೇಖರ ದೇಸಾಯಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ 1 ವರ್ಷದವರೆಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ನಿಮ್ಮ ತಂದೆಯ ಹತ್ತಿರ ಹಣ ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡಿ ತೊಂದರೆ ಕೊಡಲು ಶುರು ಮಾಡಿದ್ದು , ನಾನು ಅನೇಕ ಸಲ ದುಡ್ಡು ಕೊಟ್ಟು ಕಳುಹಿಸಿದ್ದು ಇರುತ್ತದೆ. ಇದಕ್ಕೆ ಆತನ ತಾಯಿ ಲಲಿತಾ ಕುಮ್ಮಕ್ಕು ನೀಡಿರುತ್ತಾಳೆ. ಹೀಗಿದ್ದು ದ: 25-04-11 ರಂದು ರಾಜಶೇಖರ ಈತನು ಫೋನ್ ಮಾಡಿ ನಿಮ್ಮ ಮಗಳಿಗೆ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ್ದು ನಂತರ ನಾನು ನಮ್ಮೂರ ದಳಪತಿಗೆ ನನ್ನ ಮಗಳ ಸಾವಿನ ಬಗ್ಗೆ ಸಂಶಯವಿರುತ್ತದೆ ಹೇಳಿ ಅವರು ನನಗೆ ಸಮಜಾಯಿಸಿ ಶವ ಸಂಸ್ಕಾರ ಮಾಡಿಸಿರುತ್ತಾರೆ. ನನ್ನ ಅಳಿಯ ಮತ್ತು ಅವಳ ತಾಯಿ ನನ್ನ ಮಗಳಿಗೆ ಹೊಬಡೆ ಮಾಡಿ ಕೊಲೆ ಮಾಡಿರುತ್ತಾರೆ. ಈ ವಿಷಯ ಊರಿನ ದಳಪತಿಯವರಿಗೆ ಗೊಗೊತ್ತಿದ್ದರು ಸಹ ನಮಗೆ ಹೆದರಿಸಿ ಫಿರ್ಯಾದಿ ಸಲ್ಲಿಸಲು ಅಡಚಣೆ ಮಾಡಿರುತ್ತಾರೆ. ಕಾರಣ ರಾಜಶೇಖರ ತಂದೆ ಬಸವರಾಜ, ಲಲಿತಾ ಗಂಡ ಬಸವರಾಜ, ವೀರಣ್ಣ ತಂದೆ ಚನ್ನಬಸ್ಸಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: