POLICE BHAVAN KALABURAGI

POLICE BHAVAN KALABURAGI

01 April 2020

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಾಳಪ್ಪ ದೊಡ್ಡಮನಿ ಸಾ: ಜಮಖಂಡಿ ತಾ: ಜೇವರಗಿ  ರವರ ಮಕ್ಕಳಾದ  ಅಯ್ಯಪ್ಪ ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ, ಶಿವಪುತ್ರ ಇವರೆಲ್ಲರೂ ಬೆಂಗಳೂರದಲ್ಲಿ ಕೂಲಿ ಕೆಲಸಕ್ಕೆ  ಹೊಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು,  ನನ್ನ ಮಗ ಶಿವಪುತ್ರನು  ನೆಲಮಂಗಲದಲ್ಲಿನ ಭಾರತ ಪೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್ ಖಾಸಗಿ ಕಂಪನಿಯಲ್ಲಿ ಫೀಲ್ಡ ಅಸಿಸ್ಟಂಟ  ಅಂತಾ   ಕೆಲಸ ಮಾಡುತ್ತಿದ್ದನು.  ಈಗ ಕರೊನಾ  ವೈರಸ್ ಹರಡುತ್ತಿದ್ದರಿಂದ  ಲಾಕ್ ಡೌನ ಆದ ಪ್ರಯುಕ್ತ ಕೆಲಸ ಇಲ್ಲದ ಕಾರಣ  ನಮ್ಮ ಮಕ್ಕಳಾದ   ಅಯ್ಯಪ್ಪ  ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ ಎಲ್ಲರೂ  ಬೆಂಗಳೂರದಿಂದ ಬಸ್ಸಿನಲ್ಲಿ ಕುಳಿತು ನಮ್ಮೂರಿಗೆ ದಿನಾಂಕ 25/03/2020 ರಂದು ಮುಂಜಾನೆ ಬಂದಿರುತ್ತಾರೆ.  ಮಗ ಅಯ್ಯಪ್ಪ ಈತನು ಹೇಳಿದ್ದನೆಂದರೆ ಲಾಕಡೌನ್  ಸಲುವಾಗಿ ಶಿವಪುತ್ರ ಈತನ ಆಫೀಸ್ ಕೂಡಾ ರಜೆ ಇದ್ದು  ಅವನೂ ಕೂಡಾ  ತನ್ನ ಗೆಳೆಯ ಅವಿನಾಶ ಸಾ: ಮಂಗಲಗಿ ಇತನ್ನೊಂದಿಗೆ ನಮ್ಮ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ಕುಳಿತುಕೊಂಡು ಬೆಂಗಳೂರದಿಂದ ಬರುತ್ತಿದ್ದಾರೆ ಎಂದು ಹೇಳಿರುತ್ತಾನೆ. ದಿನಾಂಕ 25/03/2020 ರಂದು ಅವನ ಮೊಬೈಲಕ್ಕೆ ಕರೆ ಮಾಡಲಾಗಿ ಮೊಬೈಲ ರಿಂಗ್ ಆಗಿರುತ್ತದೆ.  ಆದರೆ ಅವನು ಮೊಬೈಲ್ ಎತ್ತಿರುವುದಿಲ್ಲಾ. ಆ ದಿವಸ ರಾತ್ರಿಯಾದರೂ ಶಿವಪುತ್ರನು ಮನೆಗೆ ಬರಲಿಲ್ಲಾ ಪೊನಿನಲ್ಲಿ ಸಹ ಸಿಕ್ಕಿರುವುದಿಲ್ಲಾ, ನನ್ನ ಮಗನ ಸಂಗಡ ಬೆಂಗಳೂರದಿಂದ ಬಂದ ಅವಿನಾಶ ಈತನ ಮೊಬೈಲಕ್ಕೆ  ಪೊನ ಮಾಡಿ ಕೇಳಲಾಗಿ ಅವನು  ಹೇಳಿದ್ದೆನೆಂದರೆ  ನಾನು ಮತ್ತು ಶಿವಪುತ್ರ ಇಬ್ಬರೂ ಮೊಟಾರ್ ಸೈಕಲ ಮೇಲೆ ಬೆಂಗಳೂರದಿಂದ ಕಲಬುರಗಿಗೆ ದಿನಾಂಕ 25/03/2020 ರಂದು ಮುಂಜಾನೆ  ಬಂದಿರುತ್ತೆವೆ.   ಮುಂಜಾನೆ  7.00 ಗಂಟೆಯ ಸುಮಾರಿಗೆ  ಶಿವಪುತ್ರನು ನನಗೆ ಕಲಬುರಗಿ ಹುಮನಾಬಾದ ರಿಂಗ್ ರೊಡ ಹತ್ತಿರ ಬಿಟ್ಟು  ಊರಿಗೆ ಹೋಗುತ್ತೆನೆಂದು  ಹೇಳಿ ತನ್ನ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ಕುಳಿತುಕೊಂಡು  ಹೋಗಿರುತ್ತಾನೆ.  ನಾನು ನಮ್ಮೂರಿಗೆ ಬಂದಿರುತ್ತೆನೆ  ಎಂದು ತಿಳಿಸಿದನು. ನಮ್ಮ ಮಗನು ಮನೆಗೆ ಬರಲಾರದಕ್ಕೆ ನಾವು ಕಲಬುರಗಿಗೆ ಹೋಗಿ ಹುಡುಕಾಡಿದೇವು ಮತ್ತು ಅವನ ಗೆಳೆಯರಿಗೆ  ಹಾಗೂ ನಮ್ಮಸಂಭಂದಿಕರಿಗೆ  ಪೊನ ಮಾಡಿ ಕೇಳಲಾಗಿ ನಮ್ಮ ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ  ಪತ್ತೆ ಸಹ ಹತ್ತಿರುವುದಿಲ್ಲಾ.  ನಮ್ಮ ಮಗ ಶಿವಪುತ್ರನು ಮನೆಗೆ ಬರಲಾರದಕ್ಕೆ  ಮತ್ತುಅವನು ಪತ್ತೆ ಹತ್ತಲಾರದಕ್ಕೆ ನಾನು ಮತ್ತು  ನಮ್ಮೂರ  ಭೀಮಣ್ಣಗೌಡ ತಂದೆ ಗುರುಲಿಂಗಪ್ಪಗೌಡ  ಮಾಲಿಗೌಡರ  ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ,  ಕೂಡಿಕೊಂಡು ಇಂದು ದಿ 31/03/2020 ರಂದು ಮುಂಜಾನೆ ಕಲಬುರಗಿಗೆ ಗ್ರಾಮೀಣ ಪೊಲೀಸ್ ಠಾಣೆಗೆ ಕೇಸು ಕೊಡಲು ಹೊದಾಗ  ಪೊಲೀಸರು ನಮ್ಮ ಮಗನ ಮೊಬೈಲ್  ನಂಬರ ಕಾಲ ಡಿಟೈಲ್ಸ ತೆಗೆದು ನೊಡಿ ನೀಮ್ಮ ಮಗ ಜೇವರಗಿ  ತಾಲೂಕಿನ  ರೇವನೂರ ಕಡೆಗೆ ಹೋದ ಬಗ್ಗೆ ಮಾಹಿತಿ ಇರುತ್ತದೆ ಎಂದು  ಹೇಳಿದಾಗ,  ನಾವು ಮೂವರು ಕೂಡಿಕೊಂಡು ಜೇವರಗಿ-ವಿಜಯಪೂರ ರೋಡ ರೇವನೂರ ಸೀಮಾಂತರ ಹೇಲಿಪ್ಯಾಡ ಹತ್ತಿರ ರೊಡಿನ ಪಕ್ಕದಲ್ಲಿ ಹುಡುಕಾಡುತ್ತಾ ಹೋದಾಗ  ರೇವನೂರ ಸೀಮಾಂತರದ ರೋಡಿನ ಪಕ್ಕದ ತಗ್ಗಿನಲ್ಲಿ   ನಮ್ಮ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದು ಬಿದ್ದಿತ್ತು ಅಲ್ಲಿಯೇ ಹೇಲ್ಮೇಟ್ ಸಹ ಇತ್ತು. ಮತ್ತು ಕೇನಾಲ್ ನೀರಿನ ತೆಗ್ಗಿನಲ್ಲಿ  ಒಬ್ಬ ಮನುಷ್ಯನ ಹೆಣ ಬಿದ್ದಿದ್ದು ಇತ್ತು. ಸಮೀಪ ಹೋಗಿ ನೋಡಲಾಗಿ ಆ ಹೆಣ ನನ್ನ ಮಗ ಶಿವಪುತ್ರನೆ  ಇತ್ತು. ಅವನ ತಲೆಯಲ್ಲಿನ ಉದ್ದನೆ ಕೂದಲು,  ಮತ್ತು  ಮೈ ಮೇಲಿನ ಬಟ್ಟೆ ಮತ್ತು ಅವನ ಕಾಲಿನ ಚಪ್ಪಲಿ ಹಾಗೂ ಅವನ ಬ್ಯಾಗನಲ್ಲಿನ ಕಾಗದ ಪತ್ರಗಳು ಇದ್ದಿರುವುದು ನೋಡಿ  ಗುರುತಿಸಿರುತ್ತೆನೆ.  ಅವನ ಹೊಟ್ಟೆಯಿಂದ ಕೇಳಗಿನ ಬಾಗ ಹುಳ ತಿಂದು ಕೊಳೆತಿದ್ದು ಮೊಳಕಾಲಿನವರೆಗೆ  ಎಲುಬು ಮಾತ್ರ ಇತ್ತು ಮತ್ತು ಕಣ್ಣು, ಕಿವಿ, ಮೂಗು, ಬಾಯಿ, ಕುತ್ತಿಗೆ ಬಾಗ, ಎದೆಯ ಬಾಗ ಹುಳಗಳು ತಿಂದು ಕೊಳೆತಿದ್ದು ಇತ್ತು ಮತ್ತು ಹೊಟ್ಟೆ ಬಾಗವು ಸಹ ಪೂರ್ತಿ ಕೊಳೆತಿರುತ್ತದೆ. ಅಡವಿಯಲ್ಲಿನಪ್ರಾಣಿಗಳು  ಮೈಮೇಲಿನ ಮಾಂಶ ಖಂಡ ತಿಂದಿದಂತೆ  ಇತ್ತು.  ಅಲ್ಲಿಯೇ  ರೋಡಿನಸೈಡಿನಲ್ಲಿ ಒಂದುಬೇವಿನ ಗೀಡ ಇದ್ದು ಗಿಡದಬಡ್ಡಗೆ ಮೊಟಾರ್ ಸೈಕಲ್ ಡಿಕ್ಕಿಯಾದಂತೆ ಬಡ್ಡೇಯ ತೊಗಟಿ ಕಿತ್ತಿದಂತೆ ಆಗಿತ್ತು.  ಅಲ್ಲಿ ಸ್ಥಳದಲ್ಲಿ  ನೊಡಿದರೆ ನಮ್ಮ ಮಗನಾದ ಶಿವಪುತ್ರನು ತನ್ನ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ತನ್ನ ಗೆಳೆಯ ಅವಿನಾಶನ್ನೊಂದಿಗೆ  ಬೆಂಗಳೂರದಿಂದ ಕಲಬುರಗಿಗೆ ಬಂದು ಅವನ ಗೆಳೆಯನಿಗೆ ಕಲಬುರಗಿಯಲ್ಲಿ ಬಿಟ್ಟು ಕಲಬುರಗಿಯಿಂದ ನಮ್ಮೂರಿಗೆ ಬರಲು ಜೇವರಗಿ ವಿಜಯಪೂರ ರೋಡಿನಲ್ಲಿ ತನ್ನ ಮೊಟಾರ್ ಸೈಕಲ್ ಮೇಲೆ ದಿನಾಂಕ 25/03/2020 ರಂದು ಮುಂಜಾನೆ  09-30 ಗಂಟೆಯಿಂದ ಮದ್ಯಾಹ್ನ 12.00 ಗಂಟೆಯ ಮದ್ಯದಲ್ಲಿ ನಮ್ಮೂರಿಗೆ ಬರುತ್ತಿದ್ದಾಗ ತನ್ನ ವಶದಲ್ಲಿರುವ ಮೋಟಾರ ಸೈಕಲ್ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ತಾನೆ  ರೋಡಿನ ಸೈಡಿನಲ್ಲಿ ಬೇವಿನಗಿಡಕ್ಕೆ ಮೊಟಾರ್ ಸೈಕಲ್  ಡಿಕ್ಕಿಪಡಿಸಿದರಿಂದ ಅವನ  ತಲೆ  ಮೇಲಕಿಗೆ  ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಕರೋನಾ ವೈರಸ್ ದಿಂದ  ಹೊರಗಡೆ ಯಾರು ಹೆಚ್ಚಿಗೆ ರೊಡಿನಲ್ಲಿ ಜನರು ಓಡಾಡದೆ ಇದ್ದರಿಂದ ನನ್ನ ಮಗನು ಮೃತ ಪಟ್ಟ  ಬಗ್ಗೆ ಯಾರಿಗು ಗೊತ್ತಾಗಿರುವುದಿಲ್ಲಾ.  ಕಾರಣ ಮಾನ್ಯರು ಈ ಬಗ್ಗೆ  ಸೂಕ್ತ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

28 March 2020

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಹಲಪೂರ ಠಾಣೆ : ಶ್ರೀ ಶಿವಲಿಂಗೇಶ್ವರ ತಂದೆ ಸಿದ್ದಾರಾಮ ಜಾಲವಾದಿ ಸಾ: ಹೋಸುರ ರವರು             ದಿನಾಂಕ 14-12-2019 ರಂದು ಬೆಳಿಗ್ಗೆ 10:15 ಗಂಟೆ ಸುಮಾರಿಗೆ ನಾನು ನನ್ನ ಸ್ವಂತ ಕೆಲಸದ ಮೇಲೆ ಮಣ್ಣೂರಕ್ಕೆ ಮೋಟರ ಸೈಕಲ ಮೇಲೆ ಹೋರಟಿರುತ್ತೇನೆ. ಅದೆ ಸಮಯಕ್ಕೆ ನಮ್ಮ ಮಾವನಾದ ಮಹಾಧೇವ ಇವರು ನಮ್ಮೂರಿನ ನಿಂಗರಾಜ ತಂದೆ ಶಿವುಕುಮಾರ ಗೌಡಗಾಂವ ಈತನ ಮೋಟರ ಸೈಕಲ ಮೇಲೆ ಹೋಸೂರದಿಂದ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಮಣ್ಣೂುರ ಗ್ರಾಮಕ್ಕೆ ಹೊರಟಿರುತ್ತಾರೆ. ಅಂದಾಜು 10:30 ಗಂಟೆ ಸುಮಾರಿಗೆ ಹೋಸೂರ ಮಣ್ಣೂರ ರಸ್ತೆಗೆ ಇರುವ ಉಪ್ಪಾರವಾಡಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಹೋಗುತ್ತಿದ್ದ ನಿಂಗರಾಜ ಗೌಡಗಾಂವ ಈತನು ಮೋಟರ ಸೈಕಲನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಕ್ರಾಸಿನಲ್ಲಿ ಸ್ಕೀಡ್ ಮಾಡಿದನು. ಆಗ ನಾನು ಮೋಟರ ಸೈಕಲನ್ನು ನಿಲ್ಲಿಸಿ ನೋಡಲು ನಮ್ಮ ಮಾವನಾದ ಮಹಾಧೇವನಿಗೆ ಬಲ ಗಾಲು ಮೋಳಕಾಲಿನ ಹತ್ತಿರ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಆಗಿ ಕಾಲು ಮುರಿದಿತ್ತು. ಮೋಟರ ಸೈಕಲ ನಡೆಸುತ್ತಿದ್ದ ನಿಂಗರಾಜನಿಗೆ ಸ್ವಲ್ಪ ತರಚಿದ ಗಾಯಗಳು ಆಗಿದ್ದವು. ಮೋಟರ ಸೈಕಲ ನಂ ನೋಡಲು ಹಿರೊ ಹೆಚ್.ಎಫ್. ಡಿಲೆಕ್ಸ ಕಂಪನಿಯ ಮೋಟರ ಸೈಕಲ ನಂ ಕೆಎ-28 ಇಸಿ-0990 ಇರುತ್ತದೆ. ನಂತರ ನನ್ನ ಮಾವನು ಮೋಟರ ಸೈಕಲ ಮೇಲೆ ಬಿದ್ದ ವಿಷಯವನ್ನು ನನ್ನ ಇನ್ನೊಬ್ಬ ಮಾವನಾದ ತುಕಾರಾಮ ಇವರಿಗೆ ಪೋನ್ ಮಾಡಿ ತಿಳಿಸಿದ್ದು, ನಾನು ಮತ್ತು ನನ್ನ ಮಾವ ತುಕಾರಾಮ ಇಬ್ಬರೂ ಕೂಡಿ ನನ್ನ ಮಾವನಾದ ಮಹಾದೇವನನ್ನು ಸೋಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಮಹಾರಾಷ್ಟ್ರದ ಮಿರಜದಲ್ಲಿರುವ ವಿನಯ ಅರವಟ್ಟಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಿಂಗರಾಜ ತಂದೆ ಶಿವಕುಮಾರ ಗೌಡಗಾಂವ ಸಾ|| ಹೋಸೂರ ತಾ|| ಅಫಜಲಪೂರ ಈತನು ಮೋಟರ ಸೈಕಲ ನಂ ಕೆಎ-28 ಇಸಿ-0990 ನೇದ್ದರ ಮೇಲೆ ನನ್ನ ಮವಾನಾದ ಮಹಾಧೇವ ಇವರನ್ನು ಕೂಡಿಸಿಕೊಂಡು ಹೋಗಿ, ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟರ ಸೈಕಲನ್ನು ಸ್ಕೀಡ್ ಮಾಡಿ ನನ್ನ ಮಾವನಾದ ಮಹಾಧೇವನ ಬಲಗಾಲು ಮುರಿದಿರುವುದಕ್ಕೆ ಕಾರಣನಾಗಿರುತ್ತಾನೆ. ಕಾರಣ ನಿಂಗರಾಜನ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀನಿವಾಸರಾವ ತಂದೆ ಶಾಸಯ್ಯ ಇಲ್ಲೋರಿ ತಾ/ ಮದ್ದಿಪಾಡು ಜಿ/  ಪ್ರಕಾಶಂ ರಾ/ ಆಂದ್ರಪ್ರದೇಶ ಹಾ/ವ/ ಯಾಳವಾರ ತಾ/ ಜೇವರಗಿ ರವರು ಪ್ರತೀಕ ತಂದೆ ಬಂಡುರಾವ ಕುಲಕರ್ಣಿ ಸಾ/ ಯಾಳವಾರ ಇವರ 16 ಎಕರೆ ಹೋಲ ಲೀಜಿಗೆ ಹಾಕಿಕೊಂಡು ಸಾಗುವಳಿ ಮಾಡುತ್ತಾ ವೀರಣ್ಣ ಸಾಹು ಸಾ/ ಯಾಳವಾರ ಇವರ ಹೋಲದಲ್ಲಿ ನಮ್ಮಂತೆ ಬಂದಿರುವ ನಮ್ಮ ಭಾಗದ ಇತರೆ ಜನರೊಂದಿಗೆ ಗುಡಿಸಲು ಹಾಕಿಕೊಂಡು ನನ್ನ ಹೆಂಡತಿ ಸುಬ್ಬರತ್ನಮ್ಮ ಇವಳೊಂದಿಗೆ ವಾಸವಾಗಿರುತ್ತೇನೆ. ಇಂದು ದಿನಾಂಕ 27/03/2020 ರಂದು ಬೆಳಿಗ್ಗೆ 06-00 ಎಎಮ್ ಸುಮಾರಿಗೆ ನಾನು ಹೋಲಕ್ಕೆ ಹೋಗಿರುತ್ತೇನೆ ನಂತರ 10-00 ಎಎಮ್ ಸುಮಾರಿಗೆ ಮರಳಿ ನಾನು ನಮ್ಮ ಗುಡಿಸಲಿಗೆ ಬಂದಾಗ ನನ್ನ ಹೆಂಡತಿ ಸುಬ್ಬರತ್ನಮ್ಮ ಇವಳು ಮನೆಯೆಲ್ಲಿ ( ಗುಡಿಸಲಲ್ಲಿ ) ಇರಲಿಲ್ಲ. ಆಗ ನಾನು ನಮ್ಮ ಪಕ್ಕದ ಗುಡಿಸಲಿನವರಿಗೆ ವಿಚಾರಿಸಿದಾಗ ನಿನ್ನ ಹೆಂಡತಿ ಬಟ್ಟೆ ತೋಳೆದುಕೊಂಡು ಬರಲು ಕಾಲುವೆಗೆ ಹೋಗಿರುತ್ತಾಳೆ ಅಂತಾ ವಿಜಯಲಕ್ಷ್ಮೀ ಗಂಡ ಯಾನಾದಿ ಇವಳು ಹೇಳಿದಳು. ನಾನು ಸ್ವಲ್ಪ ಸಮಯ ಕಳೆದರು ನನ್ನ ಹೆಂಡತಿ ಬಟ್ಟೆ ತೊಳೆದುಕೊಂಡು ಮರಳಿ ಮನೆಗೆ ಬಾರದೆ ಇರುವದರಿಂದ ನಾನು ಅಲ್ಲಿಯೆ ವೀರಣ್ಣ ಸಾಹು ಇವರ ಹೋಲದ ಹತ್ತಿರ ಕೇನಾಲಕ್ಕೆ ಹೋಗಿ ನೋಡಿದಾಗ ಕೇನಾಲ ದಂಡೆಯೆಲ್ಲಿ ನನ್ನ ಹೆಂಡತಿಯ ಚಪ್ಪಲಿ ಇದ್ದು ಮತ್ತು ನಮ್ಮ ಬಟ್ಟೆಗಳು ಇದ್ದವು ಆದರೆ ನನ್ನ ಹೆಂಡತಿ ಇರಲಿಲ್ಲ ಆಗ ನಾನು ಗಾಬರಿಯಾಗಿ ನಮ್ಮ ಗುಡಿಸಲು ಹತ್ತಿರ ಬಂದು ಈ ವಿಷಯ ಕೆ .ಶ್ರೀನಿವಾಸಲು ಕಲಗುಂಟ ,ಚಂದ್ರಶೇಖರ ಯಡವಲ್ಲಿ,ಶ್ರೀನಿವಾಸ ವೆಲ್ಲಮ್ಮರಿ,ಇವರಿಗೆ ತಿಳಿಸಿದ್ದು ಎಲ್ಲರು ಕೂಡಿಕೊಂಡು ನನ್ನ ಹೆಂಡತಿ ಕೆನಾಲ ನೀರಿನಲ್ಲಿ ಹರೆದುಕೊಂಡು ಹೋಗಿರಬಹುದು ಎಂದು ಬಾವಿಸಿ ಹುಡುಕಾಡ ತೋಡಗಿದಾಗ ಬೆಳಿಗ್ಗೆ 11-30 ಎಎಮ್ ಸುಮಾರಿಗೆ ನನ್ನ ಹೆಂಡತಿ ಶವ ಗಂವ್ವಾರ ಸೀಮೆಯ ದೇವೀಂದ್ರಪ್ಪ ಕಂದಗಲ್ ಇವರ ಹೋಲದ ಹತ್ತಿರ ಕೇನಾಲ ನೀರಿನಲ್ಲಿ ಕಟ್ಟಿಗೆಗೆ ತಟ್ಟಿ ನಿಂತಿದ್ದು ನಮೆಗೆ ಸಿಕ್ಕಿರುತ್ತದೆ. ಇಂದು ದಿನಾಂಕ 27/03/2020 ರಂದು ಬೆಳಿಗ್ಗೆ 09-00 ಎಎಮ್ ಸುಮಾರಿಗೆ ನನ್ನ ಗೆಂಡತಿ ಬಟ್ಟೆ ತೋಳೆಯಲು ಕೇನಾಲಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದರಿಂದ ನನ್ನ ಹೆಂಡತಿಗೆ ಈಜು ಬಾರದೆ ಇದ್ದಿದರಿಂದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.