POLICE BHAVAN KALABURAGI

POLICE BHAVAN KALABURAGI

21 September 2019

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಪಂಚಾಕ್ಷರಯ್ಯಾ ತಂದೆ ಶಿವಯ್ಯಾ ಮಠ ಸಾಃ ರಮೇಶ ಕುಲಕರ್ಣಿ ಲೇಔಟ ಜೇವರಗಿ ರವರು ದಿನಾಂಕ; 19/09/2019 ರಂದು  ಸಾಯಂಕಾಲ 5.00 ಘಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗುರಮ್ಮ ಇಬ್ಬರೂ ಮನೆಯಲ್ಲಿ ಇದ್ದಾಗ  ಒಬ್ಬ ಅಪರಿತ ವ್ಯಕ್ತಿ ನಮ್ಮ ಮನೆಗೆ ಬಂದು ಕುಡಿಯಲು ನೀರು ಕೊಡಿರಿ ಎಂದು ಹೇಳಿದಾಗ ನಾನು ನೀರು ಕೊಟ್ಟೆನು ಅವನು ನೀರು  ಕುಡಿದು ಹೊದ ನಂತರ  ಸಾಯಂಕಾಲ  7.30  ಗಂಟೆಯ ಸುಮಾರಿಗೆ  ಇಬ್ಬರೂ ಅಪರಿತ ಮನುಷ್ಯರು ನಮ್ಮ ಮನೆಯೋಳಗೆ ಪ್ರವೇಶ ಮಾಡಿ ತಮ್ಮ ಕೈಯಿಂದ ನನಗೆ ಹಿಡಿದು ಹೊರಗೆ ಎಳೆದಾಡಿಕೊಂಡು ತಂದು   ಕೈಕಾಲುಕಟ್ಟಿ  ಮನೆಯಲ್ಲಿ ಹಣ ಬಂಗಾರ ಎಲ್ಲಿವೆ ಹೆಳು ಎಂದು ಕೈಯಿಂದ ನನಗೆ ಹೊಡೆದು ಕಾಲಿನಿಂದ ಒದ್ದು ಕೇಳುತ್ತಿದ್ದಾಗ  ನಾನು ಅವರಿಗೆ ನಮ್ಮ ಹತ್ತಿರ ಹಣ ಇಲ್ಲಾ ನನನ್ನು ಬಿಟ್ಟು ಬಿಡಿರಿ ಎಂದು ಪರಿಪರಿಯಾಗಿ ಕೇಳಿಕೊಂಡರು ಅವರು  ನನಗೆ ಬಿಡದೆ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಬಾಯಿಯಲ್ಲಿ ಬಟ್ಟೆ ತುರುಕಿ  ನನ್ನನು ಅಲ್ಲಿಯೇಕೇಡುವಿ ನಮ್ಮ ಮನೆಯೊಳಗೆ ಹೋಗಿ ಮನೆಯಲ್ಲಿದ್ದ  ನನ್ನ ಹೆಂಡತಿ ಗುರಮ್ಮ ಇವಳ ಮೈಮೇಲಿದ್ದ  ಬಂಗಾರದ ಆಭರಣಳನ್ನು ಮತ್ತು ಜಬರದಸ್ತಿಯಿಂದ ಕಿತ್ತುಕೊಂಡಿರುತ್ತಾರೆ. ಅಲ್ಲದೆ  ಕಬ್ಬಿಣದ ಅಲಮಾರಿ ಬಾಗೀಲು ತೆರೆದು  ಅದರಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಎಲ್ಲಾ ಸೇರಿ 87,500/- ಕಿಮ್ಮತಿನಷ್ಟು ದೊಚಿಕೊಂಡು ಹೋಗಿರುತ್ತಾರೆ. ಅವರು ನೋಡಲು ಸುಮಾರು ಐದರಿಂದ ಐದುವರೆ ಪೀಟ್ ಎತ್ತರ ಹೊಂದಿದ್ದು, ತಳ್ಳನೆ ಮೈಕಟ್ಟಿನವರಿದ್ದು, ಅಂದಾಜು ವಯಸ್ಸು 22 ರಿಂದ 26 ವರ್ಷ ವಯಸ್ಸಿನವರಾಗಿದ್ದರು. ಅವರು ಕನ್ನಡ ಬಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹೊಡೆ ಬಡೆ ಮಾಡಿದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಮಾಲಿನಿ ಗಂಡ ಸಂತೋಷ ಡೋಲಾರೆ ಸಾ:ಸೋನಾಬಾಯಿ ಏರಿಯಾ ವಾಡಿ ರವರು 10/02/2019 ರಂದು ಸಂತೋಷ ಇತನೊಂದಿಗೆ ಮದುವೆಯಾಗಿರುತ್ತದೆ.ನಮ್ಮ ತಂದೆ ತಾಯಿ ಅಕಾಲಿಕ ಮರಣ ಹೊಂದಿರುತ್ತಾರೆ. ಮದುವೆಯಾದ ನಂತರ ನಾನು ನನ್ನ ಗಂಡ ಕೂಡಿ ಬಾಂಬೆಯ ಪನವೇಲದಲ್ಲಿ ವಾಸವಾಗಿದ್ದು ಅಲ್ಲಿ ನನ್ನ ಗಂಡನಿಗೆ ನಮ್ಮ ಅತ್ತೆ ವಿಜಯಲಕ್ಷ್ಮೀ ಇವಳು ಫೋನ ಮಾಡಿ ನಿನ್ನ ಹೆಂಡತಿಗೆ ಹೊಡಿ, ಬಡಿ ಮಾಡು ತ್ರಾಸ ಕೊಡು ರಂಡಿಗೆ ಭೋಸಡಿಗೆ ಅಂತಾ ಹೇಳುತ್ತಿದ್ದನ್ನು ನನ್ನ ಗಂಡನು ಕೇಳಿಸಿಕೊಂಡು ನನಗೆ ಕಿರಕುಳ ಕೊಡಲು ಪ್ರಾರಂಭಿಸಿದನು ಮತ್ತು ನಮ್ಮ ಅತ್ತೆಯ ಮಾತು ಕೇಳಿ ನನಗೆ ನನ್ನ ಗಂಡನು ಬಾಂಬೆಯಿಂದ ಕರೆದುಕೊಂಡು ವಾಡಿ ಪಟ್ಟಣದ ಸೋನಾಬಾಯಿ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು ನನ್ನ ಗಂಡನು ಎಸಿಸಿ ಕಂಪನಿಯಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದನು.ನನಗೆ ವಿನಾಕಾರಣ ನೀನು ಕಪ್ಪಾಗಿದ್ದಿ, ನಿನಗೆ ಮನೆಕೆಲಸ ಮಾಡಲು ಬರುವದಿಲ್ಲ, ನೀನು ನೋಡಲು ಸರಿಯಾಗಿಲ್ಲ ಅಂತಾ ದಿನಾಲೂ ನನಗೆ ಹೊಡೆ ಬಡೆ ಮಾಡುತ್ತಿದ್ದನು. ಆಗ ನಾನು ನಮ್ಮ ಅತ್ತೆ ವಿಜಯಲಕ್ಷ್ಮೀ ಮತ್ತು ಭಾವ ಖಂಡು ಇವರಿಗೆ ನಮ್ಮ ಮನೆಗೆ ಕರೆಯಿಸಿ ನನ್ನ ಗಂಡನಿಗೆ ಬುದ್ದಿ ಹೇಳಲು ಹೇಳಿದಾಗ ಅವರು ಸಹ ನನಗೆ ರಂಡಿ ಬೋಸಡಿ, ನೀನು ಛೀನಾಲಿ ಇದ್ದಿ, ಬೇಡುಕೊಂಡು ತಿನ್ನುತ್ತಿ ಅಂತಾ ಬೈಯ್ದು ನನಗೆ ತ್ರಾಸ ಕೊಡುವಂತೆ ನನ್ನ ಗಂಡನಿಗೆ ಹೇಳಿ ಹೋಗುತ್ತಿದ್ದರು.ಇಂದಿಲ್ಲಾ ನಾಳೆ ನನ್ನ ಗಂಡ ಸರಿ ದಾರಿಗೆ ಬರಬಹುದು ಅಂತಾ ನಾನು ನನ್ನ ಗಂಡ ಕೊಟ್ಟ ತ್ರಾಸನ್ನು ಸಹಿಸಿಕೊಂಡು ನನ್ನ ಗಂಡನೊಂದಿಗೆ ವಾಸವಾಗಿದ್ದೆ. ಈ ವಿಷಯದಲ್ಲಿ ಬಳ್ಳಾರಿಯಲ್ಲಿರುವ ನನ್ನ ಅಜ್ಜಿ ಮೀನಾಕ್ಷಿ ಇವರಿಗೆ ವಿಷಯ ತಿಳಿಸಿದಾಗ ಫೋನ ಮೂಲಕ ನನ್ನ ಗಂಡನಿಗೆ ಬುದ್ದಿವಾದ ಹೇಳಿದರು ಸಹ ನನಗೆ ತ್ರಾಸ ಕೊಡುವದು ಮಾಡುತ್ತಿದ್ದನು. ನಂತರ ದಿನಾಂಕ 29/08/2019 ರಂದು ಬೆಳಗ್ಗೆ 10-00 ಗಂಟೆ ಸುಮಾರು ನಾನು ಮನೆಯಲ್ಲಿ ಅಡುಗೆ ಮಾಡುತ್ತ ಇದ್ದಾಗ ನನ್ನ ಗಂಡ ಮನೆಯ ಹೊರಗಡೆ ಹೋದವನು ನಮ್ಮ ಅತ್ತೆ ವಿಜಯಲಕ್ಷ್ಮೀ ಗಂಡ ರಾಮಲಿಂಗ, ಭಾವ ಖಂಡು ತಂದೆ ರಾಮಲಿಂಗ ರವರಿಗೆ ಕರೆದುಕೊಂಡು ಮನೆಗೆ ಬಂದು ನನ್ನ ಗಂಡನು ನನ್ನೊಂದಿಗೆ ಜಗಳ ತೆಗೆದು ‘’ರಂಡಿ ನೀನು ಈ ಮನೆಯಲ್ಲಿ ಇರಬೇಡಾ ಅಂತಾ ಜಗಳಕ್ಕೆ ಬಿದ್ದು ಕೈಯಿಂದ ಹೊಡೆ ಬಡೆ ಮಾಡ ಹತ್ತಿದನು ಮತ್ತು ನಮ್ಮ ಅತ್ತೆ ಭಾವ ಖಂಡು ಇವರು ‘’ ಈ ರಂಡಿಗೆ ಬೀಡಬೇಡಾ ಹೊಡೆದು ಮನೆಯ ಹೊರಗಡೆ ಹಾಕು ಅಂತಾ ಬೈಯುತ್ತಿದ್ದಾಗ ನಾನು ನನಗೆ ಏಕೆ ತ್ರಾಸ ಕೊಡುತ್ತಿರಿ ನಾನೇನು ಮಾಡಿದ್ದೆನೆ ಅಂತಾ ಕೇಳಿದ್ದಕ್ಕೆ ನನ್ನ ಗಂಡನು ರಂಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ತಲೆ ಕೂದಲು ಹಿಡಿದು ನನಗೆ ಮನೆಯ ಹೊರಗೆ ಹಾಕಿ ಇನ್ನೊಮ್ಮೆ ಈ ಮನೆಗೆ ಬಂದರೆ ನಿನಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ದಾರಿಗೆ ಹೊರಟ ನನ್ನ ಪರಿಚಯದ ರಾಜು ಎನ್ನುವವರು ನೋಡಿ ಜಗಳವನ್ನು ಬಿಡಿಸಿದರು. ಆಗ ಸಮಯ ಬೆಳಗ್ಗೆ 10-30 ಗಂಟೆಯಾಗಿತ್ತು. ನಂತರ ನಾನು ವಿಷಯ ನನ್ನ ಅಜ್ಜಿಗೆ ತಿಳಿಸಿ ನಾನು ಬಳ್ಳಾರಿಯ ನಮ್ಮ ಅಜ್ಜಿಯ ಮನೆಗೆ ಹೋಗಿ ಅಲ್ಲಿ ಉಳಿದುಕೊಂಡೆನು. ನಂತರ ನನ್ನ ಗಂಡ ಸಂತೋಷ ಇತನು ಇಂದಿಲ್ಲಾ ನಾಳೆ ನನಗೆ ಕರೆದುಕೊಂಡು ಹೋಗಲು ಬರಬಹುದು ಅಂತಾ ನಾನು ಅಜ್ಜಿಯ ಮನೆಯಲ್ಲಿ ಉಳಿದುಕೊಂಡೆನು. ನನ್ನ ಗಂಡನು ನನಗೆ ಕರೆದುಕೊಂಡು ಹೋಗಲು ಬರಲಿಲ್ಲ. ನನ್ನ ಗಂಡ ಸಂತೋಷ,ಅತ್ತೆ ವಿಜಯಲಕ್ಷ್ಮೀ, ಭಾವ ಖಂಡು ರವರು ನನಗೆ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡಿ ಜೀವದ ಬೆದರಿಕೆ ಹಾಕಿ ಮನೆಯ ಹೊರಗಡೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

20 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 19/09/2019 ರಂದು ಶ್ರೀ ತುಕಾರಾಮ ತಂದೆ ನಾರಾಯಣ ಘಾಳೆ ಸಾ|| ಪಡಸಾವಳಿ ತಾ|| ಆಳಂದ ರವರ  ತಂದೆಯವರು ಇಂಡಿಯಲ್ಲಿರುವ ನನ್ನ ತಂಗಿಯ ಮನೆಗೆ ಹೋಗಿ ಬರುತ್ತೆನೆ ಅಂತಾ ಹೇಳಿದಾಗ ನಾನು ಹಾಗೂ ನನ್ನ ಹೆಂಡತಿ ವಿದ್ಯಾ  ಇಬ್ಬರು ಕೂಡಿ ತಂದೆಯವರಿಗೆ ಬಸ್ಸಿಗೆ ಹತ್ತಿಸಿ ಬರಬೇಕೆಂದು ಕರೆದುಕೊಂಡು ಬಂದು ಜಿಡಗಾ ಕ್ರಾಸ್ ಹತ್ತಿರದ ಕಮಾನ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಜಿಡಗಾ ಕಡೆಯಿಂದ ಒಬ್ಬ 407 ಟೆಂಪೊದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಲ್ಲಿ  ನಿಂತಿದ್ದ ನನ್ನ ತಂದೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ತಂದೆಯವರು ರೋಡಿನ ಮೇಲೆ ಬಿದ್ದಾಗ ವಾಹನದಲ್ಲಿ ಸಿಕ್ಕಿಕೊಂಡು ಸ್ವಲ್ಪ ಮುಂದೆ ಹೋಗಿದ್ದು ನಾನು ಹಾಗೂ ನನ್ನ ಹೆಂಡತಿ ತಂದೆಯವರಿಗೆ ಎಬ್ಬಿಸಿ ನೋಡಲಾಗಿ ತಂದೆಯವರ ಹೊಟ್ಟೆಯ ಭಾಗದಲ್ಲಿ ಭಾರಿ ಗುಪ್ತ ಗಾಯ, ಬಲಗಾಲ ತೊಡೆ, ಬಲಗಾಲ ಪಾದದ ಹತ್ತಿರ ಭಾರಿ ರಕ್ತ ಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು 407 ಟೆಂಪೊ ಚಾಲಕ ತನ್ನ ವಾಹನ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಂಬರ ನೋಡಲಾಗಿ ಕೆಎ 28-3870 ಅಂತಾ ಇದ್ದು ಚಾಲಕ ತನ್ನ ವಾಹನದಲ್ಲಿದ್ದು ಆತನ ಹೆಸರು ವಿಚಾರಿಸಲಾಗಿ ಶರಣಬಸಪ್ಪಾ ತಂದೆ ಕಾಂತು ಬಳಕೋಟೆ ಸಾ|| ಮಾದನ ಹಿಪ್ಪರಗಾ ತಾ|| ಆಳಂದ ಅಂತಾ ಹೇಳಿ ತನ್ನ ಟೆಂಪೋ ಸಮೇತ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ, ನಂತರ ನಾನು ನನ್ನ ಗೆಳೆಯ ಮುಬಾರಕ ತಂದೆ ರಾಜಾಭಾಯಿ ಇತನಿಗೆ ಫೋನ ಮಾಡಿ ಕರೆಯಿಸಿ ಆತನು ಬಂದ ನಂತರ 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನಾವು ಅದರಲ್ಲಿ ನನ್ನ ತಂದೆಯವರಿಗೆ ಕೂಡಿಸಿಕೊಂಡು ಕಲಬುರಗಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ತಂದು ಸೇರಿಕೆ ಮಾಡಿರುತ್ತೆವೆ, ಉಪಚಾರ ಫಲಕಾರಿಯಾಗದೆ ನನ್ನ ತಂದೆಯವರು ಇಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತಪಟ್ಟರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                              
ನರೋಣಾ ಠಾಣೆ : ದಿನಾಂಕ:19/08/2019 ರಂದು ಕೋಗನೂರ ಗ್ರಾಮದಲ್ಲಿ ನಮ್ಮ ಸಂಬಂಧಿಕರು ತೀರಿಕೊಂಡ ಕಾರಣ ನಾನು ಕಾರ್ ನಂಬರ್ ಕೆಎ20-ಡಿ5800 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಕುಳಿತುಕೊಂಡು ಕೋಗನೂರ ಗ್ರಾಮಕ್ಕೆ ಬಂದು ದಿನಾಂಕ:20/08/2019 ರಂದು ಬೆಳಿಗ್ಗೆ ಕೊಗನೂರ ಗ್ರಾಮದಿಂದ ಗೋಳಾ(ಬಿ) ಗ್ರಾಮಕ್ಕೆ ನನ್ನ ತಂದೆ ತಾಯಿಯವರಿಗೆ ಕರೆದುಕೊಂಡು ಬರಲು ಅದೇ ಕಾರಿನಲ್ಲಿ ಕಡಗಂಚಿ ಮಾರ್ಗವಾಗಿ ಹೊರಟಾಗ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಕಾರ್ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಿದ್ದನು. ನಾನು ಆತನ ಪಕ್ಕದ ಸೀಟಿನಲ್ಲಿ ಕುಳಿತಿದ್ದು. ಗೋಳಾ(ಬಿ) ಗ್ರಾಮ ಇನ್ನು 2 ಕಿ.ಮೀ ಇರುವಾಗ ಕಾರ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ಕಾರ್ ಪಲ್ಟಿಯಾಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ನಾನು ನನ್ನ ತಲೆಗೆ, ಹಣೆಗೆ ಹಾಗೂ ಎದೆಗೆ ಗಂಬೀರ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದಾಗ ಕಾರಿನ ಡ್ರೈವರ್ ಹಾಗೂ ನಮ್ಮೂರಿನ ರೇವಪ್ಪಾ ತಂದೆ ಗುರುಲಿಂಗಪ್ಪಾ ಉಪ್ಪಿನ, ಕಾಶಿನಾಥ ತಂದೆ ಶರಣಪ್ಪಾ ಬಿರಾದಾರ, ತಮ್ಮಣ್ಣಾ ತಂದೆ ಶಿವಾಜಿ ಪವಾರ್ ಎಲ್ಲರೂ ಸದರಿ ಘಟನೆಯನ್ನು ನೋಡಿ ನನಗೆ ಕಾರಿನಿಂದ ಹೊರಗೆ ತಗೆದು ಅಲ್ಲಿಂದ ನನ್ನ ಸಹೋದರನಾದ ಶಿವಪ್ಪಾ ಈತನಿಗೆ ಸುದ್ದಿ ತಿಳಿಸಿದ್ದು. ನನ್ನ ಸಹೋದರನು ಒಂದು ಖಾಸಗಿ ವಾಹನದೊಂದಿಗೆ ಸ್ಥಳಕ್ಕೆ ಬಂದು ನನಗೆ ಅದರಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಕಲಬುರಗಿಯ ಡೆಕ್ಕನ್ ಕೇರ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಸೋಲಾಪೂರದ ಬಲವಂತ ಆಸ್ಪತ್ರೆಗೆ ಸೇರಿಕೆಮಾಡಿರುತ್ತಾರೆ ಅಂತಾ ಶ್ರೀ ಶ್ರೀಕಾಂತ ತಂದೆ ಲಕ್ಷ್ಮಣ ಸೇರಿಕಾರ ಸಾ : ಗೋಳಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 September 2019

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಸೈಯದ ಗುಲ್ಜರ ಶಾಹಾ ತಂದೆ ಸೈಯ್ಯದ ಉಸ್ಮಾನ್ ಶಾಹಾ ಸಾಃ ಹಜ್ ಕಮಿಟಿ ನಯಾಮೊಹಲ್ಲಾ ಕಲಬುರಗಿ,  ರವರ ಮಗಳಾದ ರುಬಿನಾ ಬೇಗಂ ಇವಳನ್ನು ಇದೇ ವರ್ಷ ಎಪ್ರಿಲ್ ತಿಂಗಳಲ್ಲಿ ಗುರು ಹಿರಿಯರು ಸೇರಿ ಜೇವರಗಿ ತಾಲೂಕಿನ ಮದರಿ ಗ್ರಾಮದ ಯಾಕೂಬ ಶಾಹಾ ತಂದೆ ಮದರ ಶಾಹಾ ಈತನನ್ನು ನೊಡಿ ನಿಶ್ಚಯ ಮಾಡಿದ್ದು ದಿ; 04.04.19 ರಂದು ಇದೇ ಕಲಬುರಗಿಯ ಮಿಲನ್ ಪಂಕ್ಷನ್ ಹಾಲ್ ಹಾಗರಗಾ ರೊಡದಲ್ಲಿ ಮಗಳ ಮದುವೆ ಮಾಡಿ ಕೊಟ್ಟಿರುತ್ತೇವೆ. ಮದುವೆಯಲ್ಲಿ ಅಳಿಯನಿಗೆ 3 ತೊಲಿ ಬಂಗಾರ, 51000 ರೂ ನಗದು, ಬಟ್ಟೆ ಬರೆ ಸಲುವಾಗಿ, ಹಾಗು 150000 ರೂ ಬೆಲೆ ಬಾಳುವ ಪಾತ್ರೆ ಸಾಮಾನುಗಳು, ಅಲಮಾರಿ, ಪಲ್ಲಂಗ್, ಇತ್ಯಾದಿ ಮನೆ ಸಾಮಾನುಗಳನ್ನು ಕೊಟ್ಟಿರುತ್ತೆವೆ. ಮದುವೆ ಆದ ನಂತರ ಮಗಳು ಗಂಡನ ಮನೆಗೆ ನಡಿಯಲು ಹೋಗಿರುತ್ತಾಳೆ. ಗಂಡನ ಮನೆಯಲ್ಲಿ ಗಂಡ ಯಾಕುಬ್ ಶಾಹಾ ತಂದೆ ಮದರ ಶಾಹಾ ಈತನ ತಾಯಿ ಖುರ್ಶಿದ್ ಬೀ, ನಾದನಿ ತಬಸುನ್ ಗಂಡ ಮೈಬೂಬ್ ಶಾಹಾ, ಸನ್ನಹಾ ಗಂಡ ರಪೀಕ್ ಶಾಹಾ ಹೀಗೆ ಇರುತ್ತಿದ್ದರು. ಗಂಡ ಮೆಕಾನಿಕ್ ಕೆಲಸ ಮಾಡಿಕೊಂಡು ಇರುತ್ತಿದ್ದನು. ಎರಡು ತಿಂಗಳ ಕಳೆದ ಮೇಲೆ ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ಕೊಡಲು ಪ್ರಾರಂಬಿಸಿದ್ದು ಮಗಳಿಂದ ಗೊತ್ತಾಗಿತ್ತು. ಒಂದು ಸಲ ಆಸ್ಪತ್ರೆಗ ತೊರಿಸಿಕೊಳ್ಳಲು ನಮ್ಮ ಹತ್ತಿರ ಬಂದಿದ್ದು ಆ ವೇಳೆಯಲ್ಲಿ ಮಗಳು ಕಣ್ಣೀರಿಟ್ಟು ಗಂಡನ ಮನೆಯಲ್ಲಿ ಅವಳ ಗಂಡ, ಅತ್ತೆ, ಇಬ್ಬರು ನಾದನಿಯರು ಸೇರಿ ಗ್ಯಾರೇಜ ಸಲುವಾಗಿ ಮಶೀನ್ ಖರಿದಿಸಲು ತವರಿಂದ 2,00,000/- ರೂ ತೆಗೆದುಕೊಂಡು ಬಾ ಎಂದು ದಿನಾಲು ಮನೆಯಲ್ಲಿ ಅವಾಚ್ಯವಾಗಿ ಬೈದು ಹಲ್ಲೆ ಮಾಡುವದು ಮಾಡಿ ಮಾನಸಿಕ ಕಿರುಕುಳ ಹಿಂಸೆ ನಿಡುತ್ತಿದ್ದಾರೆ ಎಂದು ತಿಳಿಸಿದಳು. ಇಂದಿಲ್ಲ ನಾಳೆ ಸರಿ ಹೋಗಬಹುದು ತಾಳಿಕೊಂಡು ಸಂಸಾರ ಮಾಡು ಎಂದು ಮಗಳಿಗೆ ದೈರ್ಯ ತುಂಬಿದ್ದೇವು. ಆದರು ಕೂಡ ಮಗಳಿಗೆ ತವರಿಂದ ಹಣ ತರದೆ ಹೋದಲ್ಲಿ ಜೀವಂತ ಬಿಡುವದಿಲ್ಲ ಎಂದು ಹೆದರಿಕೆ ಹಾಕಿದ್ದು ಮಗಳು ನಮಗೆ ವಿಷಯ ತಿಳಿಸಬಹುದೆಂದು ಮೊಬೈಲ್ ಸಹ ಕೊಡುತ್ತಿರಲಿಲ್ಲ. ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ/ಹಿಂಸೆ ಕೊಡುತ್ತಿರುವ ವಿಚಾರ ಅಕ್ಕ ಪಕ್ಕದ ಜನರಿಗು ಕೂಡ ಗೊತ್ತಿರುತ್ತದೆ. ದಿ; 16.09.19 ರಂದು ಸಂಜೆ 5-00 ಘಂಟೆಯ ಹೊತ್ತಿಗೆ ಅಳಿಯ ಯಾಕೂಬ್ ಶಾಹಾ ಪೋನ್ ಮಾಡಿ ನಿನ್ನ ಮಗಳು ಉರುಲು ಹಾಕಿಕೊಂಡು ಸತ್ತಿರುತ್ತಾಳೆ ಎಂದು ತಿಳಿಸಿದ. ಸುದ್ದಿ ಕೇಳಿ ನಾನು ಮತ್ತು ಮಹ್ಮದ್ ಗೌಸ್ ಅಹ್ಮದ್ , ಸೈಯದ್ ಜಾಫರ್ ಶಾಹಾ, ಸೈಯದ್ ಅಮೀರ ಶಾಹಾ , ರಶೀದಾಬೇಗಂ, ಹಾಗು ಇತರರು ಕೂಡಿಕೊಂಡು ಮದರಿ ಗ್ರಾಮಕ್ಕೆ ರಾತ್ರಿ ಹೋಗಿ ಮಗಳ ರುಬಿನಾ ಬೇಗಂ ಇವಳ ಮೃತ ದೇಹ ನೋಡಿದೇವು. ಮಗಳ ಗಂಡ, ಅತ್ತೆ, ನಾದನಿಯರು, ಯಾರೂ ಇರಲಿಲ್ಲ, ದಿನಾಂಕ; 16.09.19 ರಂದು ಹಗಲು ಹೊತ್ತಿನಲ್ಲಿ ತವರಿಂದ ಹಣ ತರುವಂತೆ ಬೇಡಿಕೆ ಇಟ್ಟು ಮಗಳಿಗೆ ಹೊಡೆ ಬಡೆ ಮಾಡಿ ಮಾನಸಿಕ ಹಿಂಸೆ/ಕಿರುಕುಳ ನೀಡಿ ಕೊಲೆಗೈದು ಅವಳ ಶವವನ್ನು ಓಡಣಿಯಿಂದ ಬಿಗಿದು ಕೋಣೆಯ ಪೈಪಿಗೆ ಸಿಗಿಸಿರುತ್ತಾರೆ. ಶವದ ಕಾಲುಗಳು ಪೂರ್ತಿ ನೆಲದ ಮೇಲೆ ಕುಳಿತಿರುತ್ತವೆ. ಆದ್ದರಿಂದ ಅಳಿಯ ಯಾಕೂಬ್ ಶಾಹಾ, ಅತ್ತೆ ಖುರ್ಶಿದ ಬೀ, ನಾದನಿ ತಬಸುನ್ ಹಾಗು ಸನ್ನಹಾ ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾಂತಪ್ಪ ತಂದೆ ಯಶ್ವಂತ್ರಾಯ ಅಮ್ಮಣ್ಣಿ ಸಾ: ಘತ್ತರಗಿ ತಾ||ಅಫಜಲಪೂರ ರವರು ದಿನಾಂಕ :17/09/2019 ರಂದು ಪಾನ ಶಾಪ ಅಂಗಡಿಯಲ್ಲಿ ಕುಳಿತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು 35 ವಯಸ್ಸಿನವನು ಸರಾಯಿ ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಬಂದು ನಮ್ಮ ಪಾನ ಶಾಪ್ ಮುಂದೆ ಹಾಕಿರುವ ಲೈಟಿನ ವಾಯರನ್ನು ಕೈಯಿಂದ ಹಿಡಿದು ಜಗ್ಗಿದನು ಆಗ ಸದರಿಯವನಿಗೆ ಒಮ್ಮೆಲೆ ವಿದ್ಯುತ ತಗುಲಿ ನೆಲಕ್ಕೆ ಬಿದ್ದನು ಆಗ ನಾನು ಮತ್ತು ನಮ್ಮ ಪಾನಶಾಪ್ ಹತ್ತೀರ ನನ್ನ ಜೋತೆ ಮಾತನಾಡುತ್ತಾ ನಿಂತಿದ್ದ ನನ್ನ ಸ್ನೇಹಿತರಾದ 1)ಹಣಮಂತರಾಯ ತಂದೆ ಅವಪ್ಪಗೌಡ ಪಾಟೀಲ 2)ಜಗದೇವಪ್ಪ ತಂದೆ ದತ್ತು ಲಾಳಸಂಗಿ ಮೂರು ಜನ ಹೋಗಿ ಹತ್ತೀರ ನೋಡಲಾಗಿ ಸ್ಥಳದಲ್ಲಿಯೆ ಮೃತಪಟ್ಟನು ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ ಸದರಿಯವನು ಅಂದಾಜು 5 ರಿಂದ 5 ½ ಇಂಚು ಎತ್ತರ ಸದೃಡವಾದ ದೇಹ ಹೊಂದಿದ್ದು ಮೈಮೇಲೆ ಒಂದು ಬಿಳಿ ಟವಲ ಸುತ್ತಿಕೊಂಡಿದ್ದು ಯಾವುದೆ ಬಟ್ಟೆ ಉಟ್ಟಿರುವದಿಲ್ಲ ದುಂಡು ಮುಖ ಗೋದಿ ಬಣ್ಣ ಹೊಂದಿರುತ್ತಾನೆ.  ಕಾರಣ ಸದರಿ ಅಪರಿಚಿತ ವ್ಯಕ್ತಿ ಅಂದಾಜು ವಯಸ್ಸು 35 ಈತನು ಕುಡಿದ ಅಮಲಿನಲ್ಲಿ ನಮ್ಮ ಪಾನ ಶಾಪ ಮುಂದೆ ಹಾಕಿರುವ ಲೈಟಿನ ವಾಯರ್ ಹಿಡಿದು ಎಳೆದಿದ್ದರಿಂದ ಸದರಿಯವನಿಗೆ ವಿದ್ಯುತ ತಗಲಿ ಆಕಸ್ಮೀಕವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.