POLICE BHAVAN KALABURAGI

POLICE BHAVAN KALABURAGI

09 May 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-05-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ ಎಮ್.ಹೆಚ್-13 .ಜೆ-9900 ಅಂತ ಇದ್ದು ಅದರ ಎಂಜಿನ ನಂಬರ:PY3029D208835 ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ 08/05/2019 ರಂದು ಬೆಳ್ಳಿಗೆ ನನ್ನ ಗಂಡನು ನನ್ನ ಹಿರಿಯ ಮಗಳಾದ ಕಾದಂಬರಿಯ ವಿವಾಹದವನ್ನು ಮುಂದಿನ ದಿನಗಳಲ್ಲಿ ಮಾಡುವುದು ಫೀಕ್ಸ ಆಗಿದ್ದರಿಂದ ಅದಕ್ಕೆ ಲಗ್ನ ಸಲುವಾಗಿ ಬೆಳಗುಂಪಾ ಗ್ರಾಮದಲ್ಲಿ ವಾಸವಾಗಿರುವ ತನ್ನ ಸಂಬಂದಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರ ಹತ್ತಿರ ದುಡ್ಡು ಕೇಳಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 08/05/19 ರಂದು 11-00 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಕಾದಂಬರಿ, ಕಾವೇರಿ ಎಲ್ಲರು ಮನೆಯಲ್ಲಿದ್ದಾಗ ಬೆಳಗುಂಪಾ ಗ್ರಾಮದ ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಗಂಡ ಸುಭಾಷ ಇವನು ಗುಂಡಗುರ್ತಿ  ಕ್ರಾಸ ದಿಂದ ಬೆಳಗುಂಪಾ ಗ್ರಾಮದ ಕಡೆಗೆ ಬರುವ ಸಂಬಂಧ ಗುಂಡಗುರ್ತಿ ಕ್ರಾಸದಿಂದ ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಇಂಜನ ಹಾಗೂ ಟ್ರ್ಯಾಲಿಗೆ ನಂಬರ ಇರದ ಟ್ರ್ಯಾಲಿಗೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಬರೆದಿದ್ದು ಟ್ರ್ಯಾಲಿಯಲ್ಲಿ ಕುಳಿತು ಹೋಗುವಾಗ ಟ್ರ್ಯಾಕ್ಟರ ಚಾಲಕನು ತನ್ನ  ಟ್ರ್ಯಾಕ್ಟರ ಅನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸ ಇನ್ನು 01 ಕಿ.ಮೀ ಅಂತರದಿಂದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಚಾಲಕನು ಸ್ಪಿಡ ಚಲಾಯಿಸಿಕೊಂಡು ಹೋಗಿದ್ದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ  ಮೇಲಿಂದ ಕೆಳಗೆ ಬಿದ್ದು ತಲೆ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಬಲಗಾಲಿನ ಮುಂಡಿಗೆ ಭಾರಿ ಗುಪ್ತ ಗಾಯವಾಗಿ, ಕಾಲು ಮುರಿದಿರುತ್ತದೆ ಮತ್ತು ಮುಖಕ್ಕೆ ತರಚಿದ ಗಾಯಗಳಾಗಿ, ಮುಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಸದರಿ ರಸ್ತೆ ಅಪಘಾತ ಪಡಿಸಿದ ಒಂದು ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ನಂಬರ ಇರದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಅದರ ಮೇಲೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಅಂತಾ ಬರೆದಿದ್ದು ಟ್ರ್ಯಾಲಿಯಲ್ಲಿ ಕುಡಿಸಿಕೊಂಡು ಚಾಲಕನು ಟ್ರ್ಯಾಲಿಯನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸದಿಂದ 1 ಕಿಮೀ ಅಂತರದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಮೇಲಿಂದ ಕೆಳಗೆ ಬಿದ್ದು ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಸದರಿ ಚಾಲಕ ಹಾಗೂ ಟ್ರ್ಯಾಕ್ಟರ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಭೀಮಬಾಯಿ ಗಂಡ ಸುಭಾಷ ಸಾ : ನೆಲೋಗಿ ತಾ : ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 May 2019

KALABURAGI DISTRICT PRESS NOTE

ಸಾರ್ವಜನಿಕರ ಗಮನಕ್ಕೆ
ಯಾವುದೇ ವ್ಯಕ್ತಿಯ ವಿರುದ್ಧ ಪ್ರಚೋದನಾತ್ಮಕ ಅವಹೇಳನಕಾರಿ, ದ್ವೇಷಪೂರಿತ ಹೇಳಿಕೆ ಹಾಗೂ ಸುಳ್ಳು ಸುದ್ದಿ ಹಬ್ಬಿಸಿ ಗುಂಪು ಹಿಂಸೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಂಡು ಯಾವುದೇ ವ್ಯಕ್ತಿಯ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡುವುದನ್ನು ಸಮೀಪದ ಪೊಲೀಸ್ ಠಾಣೆಗೆ ತಿಳಿಸುವುದು. ಅಲ್ಲದೇ ನಾಗರಿಕರು ಯಾವುದೇ ತರಹದ ಸುಳ್ಳು ವದಂತಿಗೆ ಕಿವಿಗೊಡದಂತೆ ಮತ್ತು ಏನಾದರೂ ತರಹದ ಗುಂಪು ಹಲ್ಲೆಯ ಬಗ್ಗೆ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06/05/2019 ರಂದು ಶ್ರೀಮತಿ  ಇರಫಾನಬೇಗಂ ರವರು ನಿಧಿಶಹಾ ಎಲೆಕ್ಟ್ರಿಕಲ್ ಅಂಗಡಿಗೆ ಎ.ಸಿ.  ಖರೀದಿ ಮಾಡಬೇಕೆಂದು  ನನ್ನ ಮಕ್ಕಳಾದ  ಮಹ್ಮದ ಫರದಾನ ಅಹ್ಮದ, ಫಾರಿಹಾ ಮಹೆವೇಸ, ವಾನಿಯಾ ಫಾತೀಮಾ ಮೂವರಿಗೆ ಮನೆಯಲ್ಲಿ  ಬಿಟ್ಟು  ಮೋಟಾರ ಸೈಕಲ ಮೇಲೆ ಹೋಗಿದ್ದು. ಸಂಜೆ 05-58 ಗಂಟೆ ಸುಮಾರಿಗೆ ನನ್ನ ಹಿರಿಯ ಮಗ ಮಹ್ಮದ ಫರದಾನ ಅಹ್ಮದ ಇತನು ಮನೆಯಲ್ಲಿದ್ದ ನನ್ನ ಹೆಂಡತಿ ಮೋಬಾಯಿಲನಿಂದ ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ತಾನು ಮತ್ತು ತಂಗಿಯರಾದ ಫಾರಿಹಾ ಮಹೆವೇಸ ವಾನಿಯಾ ಫಾತೀಮಾ ಮೂವರು ಮನೆಯ ಬಾಗಿಲು ಖುಲ್ಲಾ ಇಟ್ಟುಕೊಂಡು ಮುಂದಿನ ಗೇಟ ಮುಚ್ಚಿಕೊಂಡು ಅಂಗಳದಲ್ಲಿ ಆಟವಾಡುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತರು ಹೇಗೋ ಮನೆಯಲ್ಲಿ ಬಂದು ನಮ್ಮ ಮೂವರಿಗೆ  ಹಿಂದಿಯಲ್ಲಿ ಅಂದರ ಚಲ್ಲ್ ಅನ್ನುತ್ತಾ ಬೆಡ ರೂಮನಲ್ಲಿ ಕಳುಹಿಸಿ ಕೊಂಡಿ ಹಾಕಿದರು. ಸ್ವಲ್ಪ ಸಮಯದ ನಂತರ ನಮಗೆ ಕೊಂಡಿ ಹಾಕಿದ ಅಪರಿಚಿತರು ಕೊಂಡಿ ಹಾಕಿದ ನಮ್ಮ ಬೊಡರೂಮಿನ ಬಾಗಿಲ ತೆರೆದು ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಇರಫಾನಬೇಗಂ ಇಬ್ಬರು ಮನೆಗೆ ಬಂದು ನೋಡಲಾಗಿ ನಮ್ಮ ಮಕ್ಕಳಿಗೆ ಕೊಂಡಿ ಹಾಕಿದ ಬೆಡರೂಮಿಗೆ ಲಗತ್ತಾಗಿರುವ ಇನ್ನೊಂದು  ಬೆಡರೂಮಿನಲ್ಲಿ ಇದ್ದ ರಾಜ ರಾಣಿ ಅಲಮಾರಿ ತೆರೆದಿದ್ದು ಅದರಲ್ಲಿ ಇಟ್ಟ ಬಂಗಾರದ ಆಭರಣಗಳ ಪಾಕೇಟಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ರಾಜ ರಾಣಿ ಅಲಮಾರಿ ಕೊಂಡಿ ಮುರಿದಿದ್ದು ಕಂಡು ಬರದ ಕಾರಣ ನನ್ನ ಹೆಂಡತಿ ಇರಫಾನಬೇಗಂ ಇವಳಿಗೆ ಕೀಲಿ ಹಾಕಿದ್ದೀ ಹೇಗೇ ಅಂತಾ ವಿಚಾರಿಸಿದಾಗ ಅವಳು ಬಂಗಾರದ ಇಟ್ಟ ಕಡೆ ಕೀಲಿ ಹಾಕಿರುತ್ತೇನೆ. ಬಂಗಾರದ ಇರಲಾರದ ಅಲಮಾರಿ ಕೀಲಿ ಹಾಕಿರಲಿಲ್ಲಾ ಎರಡು ಅಲಮಾರಿಗಳ ಚಾವಿಗಳು ಅಲ್ಲೇ ಬಟ್ಟೆ ಹತ್ತಿರ ಇಟ್ಟಿರುತ್ತೇನೆ ಅಂತಾ ತಿಳಿಸಿದಳು. ಅಲಮಾರಿಯಲ್ಲಿ ಇಟ್ಟ ಒಟ್ಟು 190.58 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನವಾದ ಬಗ್ಗೆ  ಕಂಡು ಬಂದಿರುತ್ತದೆ. ಈ ಮೇಲಿನ ಬಂಗಾರದ ಆಭರಣಗಳು ಬಹಳ ವರ್ಷಗಳ ಹಿಂದೆ ಖರೀದಿಸಿದ್ದು ಅವುಗಳ ಒಟ್ಟು ಬೆಲೆ 4,76,450/- ರೂ. ನಿನ್ನೆ ದಿನಾಂಕ 06/05/2019 ರಂದು ಸಂಜೆ 05-10 ಗಂಟೆಯಿಂದ ಸಂಜೆ 05-58 ಗಂಟೆಯ ಅವಧಿಯಲ್ಲಿ ಈ ಮೇಲೆ ಹೇಳಿದಂತೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ದಿನಾಂಕ: 06.05.2019 ರಂದು ಶ್ರೀ ಅಶೋಕ ತಂದೆ ಭಿಮರಾವ ಪಾಟೀಲ, ಸಾ: ಖಣದಾಳ, ತಾ&ಜಿ: ಕಲಬುರಗಿ ವರು ತಮ್ಮ ಸ್ವಂತ ಕೆಲಸಕ್ಕಾಗಿ ಸಿಡಿ ಡಿಲಕ್ಸ್ ವಾಹನ ಸಂಖ್ಯೆ KA 32 U 5534 ನೇದ್ದನ್ನು ಖರೀದಿ ಮಾಡಿದ್ದು ಆ ಮೋಟಾರ ಸೈಲನ್ನು ನಾನೆ ಇಲ್ಲಿಯವರೆಗೂ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು, ದಿನಾಂಕಃ 11.04.2019 ರಂದು ಕಲಬುರಗಿ ನಗರದ ರಿಂಗ್ ರೋಡಿನ ಹತ್ತಿರ ಇರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಮ್ಮ ಪರಿಚಯದವರ ಮದುವೆ ಇದ್ದ ಕಾರಣ ನಾನು ಅಂದು 12.15 ಪಿ.ಎಂಕ್ಕೆ ನನ್ನ HERO HONDA CD DELUXE ವಾಹನ ಸಂಖ್ಯೆ KA 32 U 5534, ಚೆಸ್ಸಿನಂ.MBLHA11EE89F21938, ಇ.ನಂ.HA11EA89F40642 ನೆದ್ದನ್ನು ನಿಲ್ಲಿಸಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು 1.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ನಾನು ನಿಲ್ಲಿಸಿದ ನನ್ನ ಮೊಟಾರ ಸೈಕಲ ಇರಲಿಲ್ಲ. ನಂತರ ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲ ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 06.05.2019 ರಂದು ರಾತ್ರಿ ಶಿವಾಜಿನಗರ ಹನುಮಾನ ದೇವಸ್ಥಾನದ ಹತ್ತಿರದ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಶಿವಾಜಿನಗರದಲ್ಲಿರುವ ಹನುಮಾನ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಹನುಮಾನ ಗುಡಿಯ ಮುಂದೆ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಸಿದ್ದಾರಾಮ @ ಸಿದ್ದು ತಂದೆ ಬಾಬುರಾವ ಜಮಾದಾರ,ಸಾ: ಶಿವಾಜಿನಗರ ಕಲಬುರಗಿ ಅಂತಾ ತಿಳಿಸಿದ್ದು ಮತ್ತು ರಾಜಶೇಖರ ಉಮಾಶೇಟ್ಟಿ ಇವರ ಅಣತೆಯಂತೆ ನಾನು ಮಟಕಾ ಜೂಜಾಟ ನಡೆಸುತ್ತಿದ್ದು, ಮಟಕಾ ಜುಜಾಟದ ಹಣವನ್ನು ರಾಜಶೇಖರ ಉಮಾಶೇಟ್ಟಿ ಇವರಿಗೆ ನೀಡುವುದಾಗಿ ತಿಳಿಸಿದನು. ಈತನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂದಿಸಿದ 1230/- ರೂ ನಗದು ಹಣ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು ದೊರೆತಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಪರಮೇಶ್ವರ ತಂದೆ ಭಿಮಶ್ಯಾ ಮಾಂಗ್, ಸಾ: ಪಟ್ಟಣ್ಣ ತಾ&ಜಿ: ಕಲಬುರಗಿ ರವರು ಕಲಬುರಗಿ ನಗರದಲ್ಲಿ ಆಟೋನಗರದ ಲಾರಿ ತಂಗುದಾಣದಲ್ಲಿ ಪಿಜಿಪಿ ಟ್ರಾನ್ಸಪೊರ್ಟ ಅಂತಾ ಹೆಸರಿನ ಟ್ರಾನ್ಸಪೊರ್ಟ ಟ್ಟುಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು ದಿನಾಲು ಕೆಲಸಕ್ಕಾಗಿ ಪಟ್ಟಣ ಗ್ರಾಮದಿಂದ 8.00 ಎ.ಎಂಕ್ಕೆ ಬಂದು ಕೆಲಸ ಮುಗಿಸಿಕೊಂಡು ರಾತ್ರಿ 8.30 ಗಂಟೆಗೆ ವಾಪಸ್ಸು ಮನೆಗೆ ಹೊಗುತ್ತೇನೆ. ಹೀಗಿದ್ದು, ದಿನಾಂಕ. 05.05.2019 ರಂದು ಮದ್ಯಾಹ್ನ 2.30 ಪಿ.ಎಂಕ್ಕೆ ನನ್ನ ಟ್ರಾನ್ಸಪೊರ್ಟದಿಂದ ಸ್ವಲ್ಪ ದೂರದಲ್ಲಿ ಇರುವ ಆಟೋನಗರದಲ್ಲಿರುವ ಖಾನಾವಳಿ ಹತ್ತಿರ ಇದ್ದಾಗ 7-8 ಜನರು ಕೂಡಿಕೊಂಡು 3-4 ದ್ವಿ ಚಕ್ರವಾಹನಗಳ ಮೇಲೆ ಬಂದು ನನಗೆ ನಿಲ್ಲಿಸಿ “ ಏ ರಂಡಿಮಗನೆ ನಮ್ಮ ಮೊಬೈಲಿಗೆ ಮಿಸಕಾಲ್ ಮಾಡುತ್ತಿ ರಂಡಿಮಗನೆ” ಎಂದು ನನಗೆ ಒಮ್ಮೆಲೆ ಬೈಯಲು ಶುರು ಮಾಡಿದ್ದು ಅದಕ್ಕೆ ನಾನು ನಿಮಗ ಯಾಕೆ ಮಿಸಕಾಲ ಮಾಡಲಿ ನಾನು ಕಾಲ ಮಾಡಿರುವುದಿಲ್ಲ ಅಂತಾ ಹೇಳಲು ನನಗೆ ಅವರು ಯಾವುದೇ ನನ್ನ ಮಾತು ಕೇಳದೆ ನನಗೆ ಒಮ್ಮೆಲೆ ಹೊಡೆಯಲು ಪ್ರಾರಂಭಿಸಿದರು. ನಾನು ಚಿರಾಡುತ್ತಾ ಅಲ್ಲೆ ಬಿದ್ದರು ಸಹ ನನಗೆ ಸದರಿಯವರು ಬಿಡದೆ ತಾವು ತಂದಿದ್ದ ಒಂದು ಮೊಟಾರ ಸೈಕಲ ಮೇಲೆ ಜಬರದಸ್ತಿಯಿಂದ ಕೂಡಿಸಿಕೊಂಡು ಆಟೋನಗರ ದಿಂದ ರಾಮತಿರ್ಥ ಹಿಂದುಗಡೆ ಇರುವ ಡಬರಾಬಾದಿ ಕ್ರಾಸ್ ಹತ್ತಿರದ ಅಪಾರ್ಟಮೆಂಟ್ ಹೊಸದಾಗಿ ಕಟ್ಟಿದ ಸ್ಥಳದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿಯು ಸಹ ನನಗೆ ಕರೆದುಕೊಂಡು ಹೋದ 5-6 ಜನರು ಎಲ್ಲರೂ ಸೇರಿಕೊಂಡು ಕೈಯಿಂದ, ಕಾಲಿನಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡುವ ಉದ್ದೇಶದಿಂದಲೆ ಮಾರಣಾಂತಿಕವಾಗಿ ನನಗೆ ಹಲ್ಲೆ ಮಾಡಿರುತ್ತಾರೆ. ನನಗೆ ಸದರಿಯವರು ಎಲ್ಲರೂ ನಿನು ಒಂದು ವೇಳೆ ಯಾರಿಗಾದರು ಹೊಡೆಯುವ ವಿಷಯ ತಿಳಿಸಿದರೆ ರಂಡಿಮಗನೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಸಿಕ್ಕಾಪಟ್ಟೆಯಾಗಿ ಕೈಯಿಗೆ, ಮುಖದ ಮೇಲೆ, ಮುಗಿನ ಮೇಲೆ ಬಡಿಗೆಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿದ್ದು ತಲೆಯ ಮೇಲೆ ಸಹ ಬಡಿಗೆಯಿಂದ ಹೊಡೆದು ಬುಗಟ್ಟಿ ಬಂದು ಒಳಗಡೆ ಗಂಬೀರ ಗಾಯಪಡಿಸಿರುತ್ತಾರೆ ನನಗೆ ಇವರು ನನ್ನ ಟ್ರಾನ್ಸಪೊರ್ಟ ಹತ್ತಿರದಿಂದ ಅಪಹರಣ ಮಾಡಿಕೊಂಡು ಬರುವ ಕಾಲಕ್ಕೆ ನಮ್ಮ ಟ್ರಾನ್ಸಪೊರ್ಟದಲ್ಲಿ ಕೆಲಸ ಮಾಡುವ ಶಶಿಕುಮಾರ ತಂದೆ ಧರ್ಮಣ್ಣಾ, ಮರೇಪ್ಪಾ, ಬಾಬು ಇವರು ನೋಡಿದ್ದು ಅಲ್ಲದೇ ಖಾನಾವಳಿ ಹತ್ತಿರ ಕೆಲವು ಜನರು ಸಹ ನೋಡಿರುತ್ತಾರೆ. ನನಗೆ ಎತ್ತಿಕೊಂಡು ಬಂದಿದ್ದನ್ನು ನೋಡಿ ಶೆಶಿಕುಮಾರ, ಬಾಬು, ಮರೆಪ್ಪಾ ಇವರು ಬರುವುದನ್ನು ನೋಡಿ ಅವರು ನನಗೆ ಅಲ್ಲೇ ಹೊಡೆದು ಬಿಸಾಕಿ ಹೋಗಿರುತ್ತಾರೆ. ಸದರಿಯವರು ನನಗೆ ಹೊಡೆದ ವೇಳೆಯಲ್ಲಿ ನನ್ನ ಜೇಬಿನಲ್ಲಿದ್ದ ನಗದು ಹಣ ಐದುಸಾವಿರ ರೂಪಾಯಿ ಮತ್ತು ಒಂದು ಎ.ಟಿ.ಎಂ ಕಾರ್ಡ ಅಲ್ಲದೇ ನನ್ನ ಕೊರಳ್ಳಲ್ಲಿಯ ಅರ್ದತೊಲಿಯ ಒಂದು ಲಾಕೀಟ ಅ.ಕಿ: 15,000=00 ರೂ, ಒಂದು ಮೊಬೈಲ ಇದ್ದು ಕಳೆದು ಹೋಗಿರುತ್ತವೆ. ನನಗೆ ಹೊಡೆದವರ ಹೆಸರು ವಿಚಾರಿಸಲಾಗಿ ಒಬ್ಬನು ಜೈಭೀಮ, ಶ್ರೀಕಾಂತ, ಸಿದ್ರಾಮ, ಸಾಗರ ಮತ್ತು ಇತರೆ 3-4 ಜನರು ಇದ್ದರು ನಂತರ ಅವರ ಹೆಸರು ತಿಳಿದುಕೊಂಡು ಹೇಳುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.