POLICE BHAVAN KALABURAGI

POLICE BHAVAN KALABURAGI

05 May 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26/04/2018 ರಂದು ಯಶರಾಜ ಮತ್ತು ಆತನ ಹೆಂಡತಿ ಅರ್ಚನಾ  ಇಬ್ಬರು ಅರ್ಚನಾ ಅಕ್ಕ ಅನೀತಾ ಇವರ ಕಮಲ ನಗರದಲ್ಲಿ ಇರುವ ಮನೆಗೆ ಹೋಗಿದ್ದು ರಾತ್ರಿ ನಮ್ಮ ಸೋಸೆ ಅರ್ಚನಾ ಇವಳು ನಮಗೆ ಅಂದಾಜು 10-30 ಗಂಟೆಯ ಸುಮಾರಿಗೆ ಫೋನ ಮಾಡಿ ಯಶರಾಜ ಇತನು ಬೆಳ್ಳಿಗೆ 11-00 ಗಂಟೆಗೆ ಬಾಂಬೆಗೆ ಹೋಗಲು ಬಸ್ ಟಿಕೇಟ ತರುತ್ತೆನೆ ಅಂತ ಹೇಳಿ ಮನೆಯಿಂದ ಹೋದವನು ಈಗಿನವರೆಗೆ ಮನೆಗೆ ಬಂದಿರುವದಿಲ್ಲ ನಿಮ್ಮ ಕಡೆ ಬಂದಿರುತ್ತಾನೆ ಹೇಗೆ ಅಂತ ಕೇಳಿದಾಗ ನಾವು ನಮ್ಮ ಮನೆಗೆ ಬಂದಿರುವುದಿಲ್ಲ ಅಂತ ತಿಳಿಸಿದೇವು. ನಮ್ಮ ಮಗನಿಗೆ ನಾವು ಎಲ್ಲಾ ಕಡೆ ಹುಡುಕಾಡಿದೇವು ಮಗನ ಬಗ್ಗೆ ಯಾವುದೆ ಮಾಹಿತಿ ದೊರೆಯದೆ ಇರುವದರಿಂದ ನಮ್ಮ ಸೋಸೆ ಅರ್ಚನಾ ಇವಳು ಗ್ರಾಮೀಣ ಪೊಲೀಸ ಠಾಣೆಗ ದಿನಾಂಕ 05/05/2018 ರಂದು ಹೋಗಿ ನಮ್ಮ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದು, ನಮ್ಮ ಸೊಸೆಯ ದೂರಿನ ಆಧಾರವಾಗಿ ಗ್ರಾಮೀಣ ಪೊಲೀಸ ಠಾಣೆ ಪ್ರಕರಣ ದಾಖಲಾಗಿದ್ದು  ಕಾಣೆಯಾದ ನಮ್ಮ ಮಗ ಯಶರಾಜ ಈತನ ಪತ್ತೆ ಕಾರ್ಯಾದಲ್ಲಿ ಇರುವಾಗ 2019 ನೇ ಸಾಲಿನ ಫೆಬ್ರುವರಿ ತಿಂಗಳಲ್ಲಿ ಒಂದು ದಿವಸ ನಮ್ಮ ಅಣ್ಣನಾದ ಶಿವಾನಂದ ಮಾಳಗಿ ಇವರು ನನಗೆ ಫೋನ ಮಾಡಿ ಯಶರಾಜನಿಗೆ ಕಪನೂರ ಏರಿಯಾದವರಾದ 1] ನಿಂಗಪ್ಪ ತಂದೆ ಸಾಯಿಬಣ್ಣಾ ಕೊಳ್ಳುರು 2) ಶಿವುಕುಮಾರ @ ಶಿವಪ್ಪ ತಂದೆ ತುಳಜಪ್ಪ ಹಂಗರಗಿ 3) ಶಹಾಬೋದ್ದಿನ ತಂದೆ ಫತ್ರುಸಾಬ 4) ಸೂರ್ಯಕಾಂತ @ ಸೂರ್ಯ ತಂದೆ ಅಂಬಾರಯ ಬೆಳಕೋಟೆ 5) ಪ್ರಫುಲಕುಮಾರ @ ಪಪ್ಪು @ ದಾದಾ ತಂದೆ ಅರ್ಜುನ ಡಾಂಗೆ 6) ಶಿವಯೋಗಿ @ ಛೇ ತಂದೆ ಕುಪೇಂದ್ರ ಭಂಕೂರ 7) ಕಾಶಪ್ಪ ಹಂಗರಗಿ 8) ಪುಟ್ಯಾ 9) ಸುಭಾಷ ಹಂಗರಗಿ ಹಾಗೂ ಇತರರು ಸೇರಿ ರಾಮನಗರ ರಿಂಗ ರೋಡ ಸಮರ್ಥ ವೈನಶಾಪ ಹತ್ತಿರ ಸರಾಯಿ ಕುಡಿಯಲು ಹೋದಾಗ ಅಲ್ಲಿ ಇವರು ಯಶರಾಜ ನೊಂದಿಗೆ ಜಗಳ ತೆಗೆದು ಅವನಿಗೆ ಆಟೋದಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ ಶವ ಹೂತಿಟ್ಟಿರುವ ಬಗ್ಗೆ ಚೌಕ ಪೊಲೀಸ ಠಾಣೆಯ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿಯಾದಾಗ ಪೊಲೀಸರ ಮುಂದೆ ಒಪ್ಪಿಕೊಂಡಿರುವ ಬಗ್ಗೆ ಮತ್ತು ಈ ಸುದ್ದಿ ದಿನ ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ನಮಗೆ ತಿಳಿಸಿರುತ್ತಾರೆ. ನಂತರ ನಾವು ಸಹಿತ ಚೌಕ ಪೊಲೀಸ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ವಿಚಾರಿಸಿದಾಗ ನಮ್ಮ  ಮಗನಿಗೆ ಇವರು ಅಪಹರಿಸಿ ಕೊಲೆ ಮಾಡಿ ಶವ ಹೂತಿಟ್ಟಿರುವ ಬಗ್ಗೆ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ ಎಂದು ತಿಳಿಸಿರುತ್ತಾರೆ . ಕಾರಣ ನಮ್ಮ ಮಗನಿಗೆ ಅಪಹರಿಸಿ ಕೊಲೆ ಮಾಡಿ ಶವವನ್ನು ಹೂತಿಟ್ಟಿರುವ ಈ ಮೇಲ್ಕಂಡವ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನಾಗಮ್ಮಾ ಗಂಡ ಭಾಸ್ಕರ ಆಳಗೇರಾ ಸಾ:ತಾರಾಪೂರ ಮುಂಬಯಿ ಹಾ:ವ:ಶಿವಶಕ್ತಿ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬಾರಾಯ ತಂದೆ ಶ್ರೀಮಂತರಾಯ ಕೆರೂರ ಸಿ.ಪಿ.ಸಿ 1133 ಸಾ : ಸಂಚಾರಿ ಪೊಲಿಸ್ ಠಾಣೆ-2 ಕಲಬುರಗಿ ರವರು ದಿನಾಂಕ : 04-05-2019 ರಂದು ಸಾಯಂಕಾಲ 7=00 ಗಂಟೆಯಿಂದ ರಾತ್ರಿ 10=00 ಗಂಟೆ ವರೆಗೆ ಚೌಕ ಸರ್ಕಲ್ ಸಂಚಾರಿ ಪಾಯಿಂಟ ಕರ್ತವ್ಯದ ಮೇಲೆ ಇರುವಾಗ ರಾತ್ರಿ 8=20 ಗಂಟೆ ಸುಮಾರಿಗೆ ಒಂದು ಮೋಟರ ಸೈಕಲ್ ಸವಾರ ತನ್ನ ಮೋಟರ ಸೈಕಲ್ ಮೇಲೆ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಹುಮನಾಬಾದ ಬೇಸ್ ರೋಡ ಕಡೆಯಿಂದ ಚಲಾಯಿಸಿಕೊಂಡು ಬಂದು ಚೌಕ ಸರ್ಕಲ್ ಹತ್ತಿರ ಒಮ್ಮೇಲೆ ತನ್ನ  ಮೋಟರ ಸೈಕಲ್ ಅಡ್ಡ ಹಚ್ಚಿ ನಿಲ್ಲಿಸಿ ಟ್ರಾಫಿಕ್ ಚಾಮ್ ಮಾಡಿದ್ದರಿಂದ ಅದನ್ನು ನೋಡಿ ನಾನು ಸುಗಮ ಸಂಚಾರಗೊಳಿಸುವ ಕುರಿತು ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ಮೋಟರ ಸೈಕಲ್ ರಸ್ತೆ ಪಕ್ಕದಲ್ಲಿ ತೆಗೆದುಕೊಳ್ಳಲು ಹೇಳಿದಾಗ ನೀ ಏನು ಕೇಳುತ್ತಿ ಬೋಸಡಿ ಮಗನೆ ಅಂತಾ ಬೈದು ನನ್ನ ಕಪಾಳದ ಮೇಲೆ 3-4 ಸಲ ಹೊಡೆಯುತ್ತಿದ್ದಾಗ ಶರಣು ಪಪ್ಪು ಮತ್ತು ಶಿವಪ್ರಭು ಪಾಟೀಲ ಸಾ : ಮಹಾಗಾಂವ ಇವರು ಬಂದು ಆತನಿಗೆ ಹಿಡಿದು ಬಿಡಿಸುತ್ತಿದ್ದಾಗ ಆತನು ನೀನು ದಿನಾಲು ಇಲ್ಲಿಯೇ ನೌಕರಿ ಮಾಡಲು ಬರುತ್ತಿ ಮಗನೇ ನಿನಗೆ ಬಿಡಲ್ಲಾ  ನಿನಗೆ ಖಲಾಸ ಮಾಡಿ ಬಿಡುತ್ತಿನಿ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾನೆ. ಅಷ್ಠರಲ್ಲಿ ಆತನ ಜೊತೆಗೆ ಇರುವವನು  ಮೋಟರ ಸೈಕಲ್ ತೆಗೆದುಕೊಂಡು ಹೊರಟು ಹೋದನು. ನನಗೆ ಹೊಡೆದವನು ಹೆಸರು ವಿಚಾರಿಸಲು  ಆತನ ಹೆಸರು ಆನಂದ ತಂದೆ ರಾಮಚಂದ್ರ ಮೋರೆ ಸಾ : ಪುಟಾಣಿ ಗಲ್ಲಿ ಕಲಬುರಗಿ ಅಂತಾ ಹೇಳಿದನು. ಕಾರಣ ಆನಂದ ತಂದೆ ರಾಮಚಂದ್ರ ಮೋರೆ ಈತನು ಮೋಟರ ಸೈಕಲ್ ಚಲಾಯಿಸಿಕೊಂಡು ಬಂದು ಚೌಕ್ ಸರ್ಕಲ್ ಹತ್ತಿರ ಸಾರ್ವಜನಿಕ ರೋಡ ಮೇಲೆ ಮೋಟರ ಸೈಕಲ್ ಅಡ್ಡ ಹಚ್ಚಿ ನಿಂತು ಟ್ರಾಫಿಕ್ ಜಾಮ್ ಮಾಡಿ ಕರ್ತವ್ಯದ ಮೇಲೆ ಇರುವ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕಪಾಳಕ್ಕೆ ಹೊಡೆದು ಜೀವ ತೆಗೆಯುವ ಬೇದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿ ಆನಂದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 May 2019

KALABURAGI DISTRICT REPORTED CRIMES

ಕ್ರಿಕೇಟ ಬೆಟ್ಟಿಂಗನಲ್ಲಿ ತೊಡಗಿದವನ ಬಂಧನ :
ಚೌಕ ಠಾಣೆ : ದಿನಾಂಕ. 03.05.2019 ರಂದು ಲೋಹಾರಗಲ್ಲಿಯ ಬಾಲಾಜಿ ಕಲ್ಯಾಣ ಮಂಟಪದ ಮುಂದೆ ರೋಡಿನಲ್ಲಿ ಒಬ್ಬ ಮನುಷ್ಯನು ಐಪಿಎಲ್‌ ಕ್ರಿಕೇಟ ಮ್ಯಾಚ ಕೆಕೆಆರ್ ಮತ್ತು ಪಂಜಾಬ ಕಿಂಗ್ಸ ಲೆವನ್ ಟೀಮ್‌ಗಳ ಮದ್ಯ ನಡೆಯುತ್ತಿರುವ ಮ್ಯಾಚ್‌‌ನಲ್ಲಿ ಕ್ರಿಕೇಟ ಬೆಟ್ಟಿಂಗ್‌ ದಂದೆ ನಡೆಸುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಐ ಚೌಕ ಠಾಣೆ  ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲೋಹಾರಗಲ್ಲಿಯ ಬಾಲಾಜಿ ಕಲ್ಯಾಣ ಮಂಟಪ ಹತ್ತಿರದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಬಾಲಾಜಿ ಕಲ್ಯಾಣ ಮಂಟಪದ ಮುಂದಿನ ರೋಡಿನ ಮೇಲೆ ನಿಂತು ಮೊಬೈಲ್‌ ಫೋನ್‌ ಮುಖಾಂತರ ಐಪಿಎಲ್‌ ಕ್ರಿಕೇಟ ಮ್ಯಾಚನಲ್ಲಿನ ನಡೆಯುತ್ತಿರುವ ಒಂದು ಬಾಲಿಗೆ 6 ಹೊಡೆದರೆ  3000/-, 4 ಹೊಡೆದರೆ 2000/-ರೂ ಅಂತ ಮಾತನಾಡುವದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮೇತ ದಾಳಿ ಮಾಡಿ ಬೆಟ್ಟಿಂಗ್‌ ದಂದೆಕೊರನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ರಾಜೀವ ತಂದೆ ಶಿವರಾಯ ಮೂಗನೂರ, ಸಾ: ಜಗತ ಮೇಲಿನಕೇರಿ ಕಲಬುರಗಿ ಅಂತಾ ತಿಳಿಸಿದ್ದು, ಪುನಃ ವಿಚಾರಣೆಗೆ ಒಳಪಡಿಸಲಾಗಿ ತನಗೆ ಕ್ರಿಕೇಟ ಬೆಟ್ಟಿಂಗ ದಂಧೆಯನ್ನು ನಡೆಸುವಂತೆ ಭಿ,ವಿರುಪಾಕ್ಷ ಮತ್ತು ಮಲಬು ಮಲ್ಲು ಸಾ: ಕಲಬುರಗಿ ಇವರು ಹೇಳಿದ್ದು ಬೆಟ್ಟಿಂಗ ನಡೆಸಿದ ಹಣ ಅವರಿಗೆ ಕೊಡುತ್ತೇನೆ ಅಂತಾ ತಿಳಿಸಿದನು. ಆಗ ಅವನಿಗೆ ಹಿಡಿದು ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ಕೃತ್ಯಕ್ಕೆ ಬಳಿಸಿದ 1) ಒಂದು ಲಾವಾ ಕಂಪನಿಯ ಮೊಬೈಲ್‌ ಫೊನ್‌ ಅ:ಕಿ:500/- ರೂ. ಮತ್ತು ಬೆಟ್ಟಿಂಗ ಜೂಜಾಟಕ್ಕೆ ಬಳಸಿದ ನಗದು ಹಣ 8,000/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ:03.05.2019 ರಂದು ಠಾಣಾ ವ್ಯಾಪ್ತಿಯ ಜಿಡಿಎ ಲೇಔಟದಲ್ಲಿರುವ ಸಾಯಿ ಶಕ್ತಿ  ಲಾಡ್ಜಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ  ಪಿಐ. ಅಶೋಕ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜಿಡಿಎ ಲೇಔಟ ಸಾಯಿ ಶಕ್ತಿ  ಲಾಡ್ಜ ಹತ್ತಿರ ಹೋಗಿ ಲಾಡ್ಜನ ಮರೆ ನಿಂತು ನೊಡಲು ಲಾಡ್ಜ ಹಿಂದುಗಡೆ  5 ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ 5 ಜನ ಜೂಜುಕೊರರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದಿದ್ದು ನಂತರ ಒಬ್ಬೊಬ್ಬರಿಗೆ ವಿಚಾರಣೆ ಮಾಡಿ ಅಂಗ ಜಪ್ತಿ ಮಾಡಿ  ಹೆಸರು ವಿಳಾಸ ವಿಚಾರಿಸಲು  1) ಸಂಜಯಕುಮಾರ ತಂದೆ ಲಕ್ಷ್ಮಣ ಭಜಂತ್ರಿ ಸಾ||  ಬಸವ ನಗರ ಕಲಬುರಗಿ 2) ರವಿ ತಂದೆ ಯಲ್ಲಪ್ಪ ಭಜಂತ್ರಿ ಸಾ|| ಹಾರುತಿ ಹಡಗಿಲ್ ತಾ|| ಜಿ||  ಕಲಬುರಗಿ 3) ಸಿದ್ದಪ್ಪ ತಂದೆ ಜಟ್ಟೆಪ್ಪ ಭಜಂತ್ರಿ ಸಾ|| ಹಾರುತಿ ಹಡಗಿಲ್ ತಾ|| ಜಿ|| ಕಲಬುರಗಿ 4) ಅಣ್ಣಾರಾಯ ತಂದೆ ಸಾಯಿಬಣ್ಣಾ ಸಾ|| ಅಲ್ಲಾಪೂರ ತಾ|| ಆಳಂದ 5)  ಶರಣಪ್ಪ ತಂದೆ ಶಿವಲಿಂಗಪ್ಪ ಭಜಂತ್ರಿ ಸಾ|| ನಂದಿಕೂರ ಕಲಬುರಗಿ ಅಂತ ತಿಳಿಸಿದ್ದು,. ಸದರಿಯವರಿಂದ ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 3370/- ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ಪಡೆಸು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ,
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ; 02/05/2019 ರಂದು ಬೆಳಿಗ್ಗೆ ನನ್ನ ತಾಯಿ ಚಂದಮ್ಮ ಇವಳು ನ್ಯಾವನೂರ ಗ್ರಾಮದಲ್ಲಿ ನಮ್ಮ ಸಂಬಂದಿ ನಿಧನವಾಗಿದ್ದರಿಂದ ಮಾತನಾಡಿಸಿ ಬರುತ್ತೇನೆ ಸತ್ತ ಸುದ್ದಿ ಮುಟ್ಟಿಸಿ ಬರುತ್ತೇನೆ ಎಂದು ಅವರಾಧ ಗ್ರಾಮದಿಂದ ನಮ್ಮೂರ ಟಂ ಟಂ ದದಲ್ಲಿ ಜೇವರಗಿ ಹೋದಳು. ನಂತರ ಮದ್ಯಾಹ್ನ 12-30 ಘಂಟೆಯ ಸುಮಾರಿಗೆ ಪರಶುರಾಮ ತಂದೆ ಮರೆಪ್ಪ ದೊರೆ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ತಾಯಿಗೆ ಇಂದು ಮದ್ಯಾಹ್ನ 12-15 ಪಿ.ಎಮ್ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ತಹಸಿಲ್ ಆಫಿಸ್ ಹತ್ತಿರ ಒಂದು ನೀರಿನ ಟ್ಯಾಂಕರ್ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಾಯಿ ರೋಡಿನ ಮೇಲೆ ಬಿದ್ದು ತಲೆಗೆ, ಗಲ್ಲಕ್ಕೆ, ಎಡ ಮೆಲಕಿನ ಮೇಲೆ ಭಾರಿ ರಕ್ತ ಘಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದನು. ನಂತರ ನಾನು ಮತ್ತು ನಮ್ಮ ಅಕ್ಕ ಶರಣಮ್ಮ, ಕೂಡಿ ಜೇವರಗಿ ಆಸ್ಪತ್ರೆಗೆ ಬಂದು ನೋಡಲು ನಮ್ಮ ತಾಯಿಗೆ ತಲೆಯೆ ಮೇಲೆ, ಎಡ ಮೆಲಕಿನ ಮೇಲೆ, ಎಡ ಕಣ್ಣಿನ ಕೆಳಗೆ, ಗಲ್ಲಕ್ಕೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದಳು. ನಂತರ ನಾನು ಅಲ್ಲಿಯೇ ಘಟನೆ ನೋಡಿದ ಪರಶುರಾಮ ತಂದೆ ಮರೆಪ್ಪ ದೊರೆ ಈತನಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ; ಇಂದು ದಿನಾಂಕ; 02/05/2019 ರಂದು ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಪ್ಪ ತಂದೆ ಮರೆಪ್ಪ ಬಡಿಗೇರ ಕೂಡಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆ ಹತ್ತಿರ ಇದ್ದಾಗ ಚಂದಮ್ಮ ತಳವಾರ ಇವಳು ಕೆ..ಬಿ ಆಫೀಸ್ ಕಡೆಗೆ ನಡೆದುಕೊಂಡು ಹಳೆಯ ತಹಸಿಲ್ ಆಫಿಸ್ ಎದುರಿನಿಂದ ಹೋಗುತ್ತಿರುವಾಗ ಜೇವರಗಿ ಬಸ್ ನಿಲ್ದಾಣದ ಕಡೆಯಿಂದ ಒಂದು ನೀರಿನ ಟ್ಯಾಂಕರ್ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಾಯಿ ರೋಡಿನ ಮೇಲೆ ಬಿದ್ದು ತಲೆಗೆ, ಗಲ್ಲಕ್ಕೆ ಎಡ ಮೆಲಕಿನ ಮೇಲೆ ಭಾರಿ ಘಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾಳೆ. ನಂತರ ನಾನು ಅಲ್ಲಿಯೇ ನಿಂತಿದ್ದ ಟ್ರಾಕ್ಟರ್ ನಂಬರ್ ನೋಡಲು ಅದರ ಮೇಲೆ ನಂಬರ್ ಇರಲಿಲ್ಲ.ಅದರ ಇಂಜಿನ್ ನಂ; NKK4YBE006 ಇದ್ದು, ಅದರ ಚೆಸ್ಸಿ ನಂ: MBNADBGDKNK00804 ಇರುತ್ತದೆ. ಮತ್ತು ನೀರಿನ ಟ್ಯಾಂಕರ್ ಮೇಲೆ; JPL MC 125 ಎಂದು ನಂಬರ ಬರೆದಿದ್ದು ಇರುತ್ತದೆ  ನಂತರ ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ  ಅಂತಾ ತಿಳಿಸಿದ್ದು ಮೇರೆಗೆ  ಶ್ರೀ ಶಾಂತಪ್ಪ ತಂದೆ ಶರಣಪ್ಪ ತಳವಾರ ಸಾ; ಅವರಾಧ ಗ್ರಾಮ ತಾ; ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಬೀರಪ್ಪ ತಂದೆ ಮಾರಯ್ಯ ಪೂಜಾರಿ ಸಾಃ ಯಾಳವಾರ ತಾಃ ಜೇವರಗಿ ರವರು ದಿನಾಂಕ 02/04/2019 ರಂದು ಸಾಯಂಕಾಲ ನಾನು ಮತ್ತು ನಮ್ಮೂರ ರಾಹುತಪ್ಪ ತಂದೆ ನಿಂಗಪ್ಪ ಪೂಜಾರಿ ಇಬ್ಬರೂ ಕೂಡಿಕೊಂಡು ಅವನ ಮೊಟಾರ್ ಸೈಕಲ ನಂ ಕೆಎ-32-ಇಕ್ಯೂ- 7774 ನೇದ್ದರ ಮೇಲೆ ಕುಳಿತುಕೊಂಡು ನಮ್ಮೂರಿನಿಂದ ಚಿಗರಳ್ಳಿ ಕ್ರಾಸಗೆ ಬಂದಿರುತ್ತೆವೆ. ಚಿಗರಳ್ಳಿ ಕ್ರಾಸ್ ನಲ್ಲಿ  ಕೆಲಸ ಮುಗಿಸಿಕೊಂಡು, ನಾವಿಬ್ಬರೂ ಕೂಡಿಕೊಂಡು ಚಿಗರಳ್ಳಿ ಕ್ರಾಸ್  ದಾಟಿ ಶಹಾಪೂರ ರೋಡಿನಲ್ಲಿರುವ ದಾಬಾಕ್ಕೆ ಊಟ ಮಾಡಿಕೊಂಡು ಬರಲು ದಾಬಾಕ್ಕೆ ಹೋಗಿ, ದಾಬಾದಲ್ಲಿ ಊಟ ಮಾಡಿ ಮೇಲೆ ನಮೂದಿಸಿದ ಮೊಟಾರ್ ಸೈಕಲ ನಂ ಕೆಎ-32-ಇಕ್ಯೂ-7774 ನೇದ್ದರ ಮೇಲೆ ಕುಳಿತುಕೊಂಡು ನಮ್ಮೂರಿಗೆ ಬರಲು ಚಿಗರಳ್ಳಿ ಕ್ರಾಸ್ ಕಡೆಗೆ ಬರುತ್ತಿದ್ದೆವು ಮೊಟಾರ್ ಸೈಕಲನ್ನು ನಾನು ನಡೆಯಿಸುತ್ತಿದ್ದೆನು, ರಾಹುತಪ್ಪ ಹಿಂದೆ ಕುಳಿತುಕೊಂಡಿದ್ದೆನು. ಜೇವರಗಿ-ಶಹಾಪೂರ ರೋಡ ಚಿಗರಳ್ಳಿ ಕ್ರಾಸ್ ಹತ್ತಿರ ಜೋಗುರು ಪೇಟ್ರೊಲ್ ಪಂಪ್ ಹತ್ತಿರ ರೋಡಿನಲ್ಲಿ ರಾತ್ರಿ 8.30 ಗಂಟೆಗೆ ಬರುತ್ತಿದ್ದಾಗ  ಎದುರಿನಿಂದ ಅಂದರೆ ಜೇವರಗಿ ಕಡೆಯಿಂದ ಒಂದು ಟಾಟಾ ಎ ವಾಹನವನ್ನು ಅದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲ್  ಕ್ಕೆ  ಎದುರಾಗಿ ಡಿಕ್ಕಿಪಡಿಸಿದನು.  ಆಗ ನಾವು ಇಬ್ಬರೂ ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದೆವು.  ಆಗ ನನಗೆ  ತಲೆಯಲ್ಲಿ ರಕ್ತಗಾಯ,  ಮೂಗಿನ ಹತ್ತಿರ,  ಬಲಕೈ ಮುಂಗೈ ಹತ್ತಿರ ಬಲಕಾಲಿನ ಬೆರಳಿಗೆ ರಕ್ತಗಾಯವಾಗಿರುತ್ತದೆ ಅಲ್ಲದೆ  ಬಲಕೈ ಮುಂಗೈ ಹತ್ತಿರ ಮುರಿದ ಬಾರಿ ಗಾಯವಾಗಿರುತ್ತದೆ ಹಿಂದೆ ಕುಳಿತ ರಾಹುತಪ್ಪ ಇತನಿಗೆ ತಲೆಯಲ್ಲಿ ಬಾರಿ ರಕ್ತಗಾಯವಾಗಿರುತ್ತದೆ. ಎರಡು ಕಾಲಿನ ಮೊಳಕಾಲು ಹತ್ತಿರ, ಮತ್ತು ಗದ್ದಕ್ಕೆ, ತರಚಿದ ರಕ್ತಗಾಯವಾಗಿರುತ್ತದೆ ಅಲ್ಲದೆ ಬಲಕಣ್ಣಿನ ಹತ್ತಿರ ಪ  ಪೆಟ್ಟಾಗಿ  ಕಂದು ಗಟ್ಟಿರುತ್ತದೆ. ನಮ್ಮ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದ ಟಾಟಾ ಎ ವಾಹನ ಚಾಲಕನು ತನ್ನ ವಾಹವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದನು. ಅದರ ನಂಬರ ರೋಡಿನಲ್ಲಿ ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ನೊಡಲಾಗಿ ಟಾಟಾ ಎಸಿಇ ವಾಹನ ನಂ ಕೆಎ-33-ಎ- 7529 ನೇದ್ದು ಇತ್ತು,  ಅದರ ಚಾಲಕನು ನಮಗಾದ ಗಾಯಗಳು ನೋಡಿ ತನ್ನ  ಟಾಟಾ ಎ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಡಿ ಹೋದನು ಅವನಿಗೆ ಮುಂದೆ ನೊಡಿದಲ್ಲಿ ಗುರುತಿಸುತ್ತೆನೆ. ಅಫಘಾತವಾಗಿರುವುದನ್ನು ಅಲ್ಲಿಯೇ ಪೇಟ್ರೊಲ್ ಪಂಪ್ ಹತ್ತಿರ ಇದ್ದ ಶಂಕರಲಿಂಗ್ ತಂದೆ  ಈರಣ್ಣಾ ಸೂಗೂರ ಸಾಃ ಗಂವ್ಹಾರ, ಶರಣು ತಂದೆ ಸಾಯಿಬಣ್ಣಾ ಪೂಜಾರಿ ಸಾಃ ಚಿಗರಳ್ಳಿ ಇವರು ನೋಡಿ  ಬಂದು ನಮಗೆ ಎಬ್ಬಿಸಿದರು ನಂತರ ಅವರು ನಮ್ಮಿಬ್ಬರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು  ಜೇವರಗಿ ಸರಕಾರಿ ಆಸ್ಪತ್ರೆಗೆ ತಂದರು ರಾಹುತಪ್ಪನಿಗೆ ಉಪಚಾರ ಕೊಡಿಸಿದರು ಅಲ್ಲಿ  ವೈದ್ಯರು  ರಾಹುತಪ್ಪನಿಗೆ ಬೇಗನೆ ಹೆಚ್ಚಿನ ಉಪಚಾರ ಕುರಿತು  ಕಲಬುರಗಿ ಆಸ್ಪತ್ರೆಗೆ  ತೆಗೆದುಕೊಂಡು ಹೋದಲು ತಿಳಿಸಿದರಿಂದ  ನನಗೆ ಮತ್ತು ರಾಹುತಪ್ಪನಿಗೆ ಒಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯಿಂದ ಕಲಬುರಗಿ ಯೂನೈಟೇಡ್ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ.  ರಾಹುತಪ್ಪ ಇತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನಾನು ಉಪಚಾರ ಪಡೆದುಕೊಳಲು  ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಬಂದಿರುವುದರಿಂದ  ಟಾಟಾ ಎಸಿಇ ವಾಹನ ನಂ ಕೆಎ-33-ಎ-7529 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲಕ್ಕೆ ಎದುರುನಿಂದ ಡಿಕ್ಕಿಪಡಿಸಿ ನಮಗೆ ಸಾದಾ ಮತ್ತು ಬಾರಿ ಗಾಯಗೊಳಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ,  ಸದರಿ ಟಾಟಾ ಎ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ್ದು ದಿನಾಂಕ 03/04/2019 ರಂದು ಸೊಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ. ನಮ್ಮ ತಂದೆಯವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ  ಗುಣಮುಖನಾಗದೆ  ದಿನಾಂಕ 11/04/2019 ರಂದು ಮುಂಜಾನೆ 8.20 ಗಂಟೆಗೆ ಸೊಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 01 : ಶ್ರೀ ಧೂಳಪ್ಪ ರವರು ದಿನಾಂಕ 02-05-2019 ರಂದು ರಾತ್ರಿ 10-15 ಗಂಟೆ ಸುಮಾರಿಗೆ ನಾನು ಸುಪರ ಮಾರ್ಕೆಟನ ಲಸ್ಸಿ ಶಾಪದಿಂದ ತಗೆದುಕೊಂಡು ನನ್ನ ಬ್ಯಾಗನಲ್ಲಿ ಲಸ್ಸಿ ಇಟ್ಟುಕೊಂಡು ನನ್ನ ಮೋಟಾರ ಸೈಕಲ ನಂ ಕೆಎ-32/ಇಟಿ-0450 ನೇದ್ದನ್ನು ಚಲಾಯಿಸಿಕೊಂಡು ಜಗತ ಸರ್ಕಲ ಮುಖಾಂತರ ಹಳೆ ಜೇವರ್ಗಿ ರೋಡಿಗೆ ತಗೆದುಕೊಂಡು ಹೋಗುವಾಗ ದಾರಿ ಮದ್ಯ ಸಿದ್ದಿ ಬಾಶಾ ದರ್ಗಾ ಕ್ರಾಸ ಹತ್ತೀರ ರೋಡ ಮೇಲೆ ಕಾರ ನಂಬರ ಕೆಎ-24/ಎಮ್-1184 ನೇದ್ದರ ಚಾಲಕನು ಎಸವಿಪಿ ಸರ್ಕಲ ಕಡೆಯಿಂದ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸನ್ನೇ ಮಾಡದೆ ಇಂಡಿಕೇಟರ್ ಹಾಕದೆ ಒಮ್ಮಲೇ ಹಳೇ ಡಿಪಿಓ ಕ್ರಾಸ ಕಡೆಗೆ ತಿರುಗಿಸಿ ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಕಮಲಾಕರ ತಂದೆ ಭೀಮಶ್ಯಾ ಜಾಧವ ಸಾಃ ಪಡಸಾವಳಗಿ ತಾಃ ಆಳಂದ ಜಿಃ ಕಲಬುರಗಿ ರವರ ಹೊಲವು ನಮ್ಮೂರಿನ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಸರ್ವೆ ನಂಬರ 136 ರಲ್ಲಿ ಒಟ್ಟು 06 ಎಕರೆ ಜಮೀನು ಇದ್ದು ಈ ಜಮೀನು ಉಳುಮೆ ಮಾಡಲು ಸುಮಾರು ಒಂದುವರೆ ವರ್ಷಗಳ ಹಿಂದೆ ಒಂದು ಬಿಳಿಯ ಬಣ್ಣದ ಹಾಗೂ ಒಂದು ಕೆಂಪು ಬಣ್ಣದ ಎರಡು ಎತ್ತುಗಳು ಖರಿದಿಸಿದ್ದು ಸದರಿ ಎತ್ತುಗಳನ್ನು ಕಟ್ಟಲು ನಮ್ಮ ಹೊಲದಲ್ಲಿ ಪತ್ರಾಸ ಶೆಡ್ಡು ಹಾಗೂ ಅದರ ಮುಂದೆ ಚಪ್ಪರ ಹಾಕಿದ್ದು ಇರುತ್ತದೆ. ದಿನಾಲೂ ಅದರಲ್ಲಿ ಎತ್ತುಗಳನ್ನು ಕಟ್ಟಿ ಬರುತ್ತೇನೆ. ದಿನಾಂಕ:02/05/2019 ರಂದು ಹೊಲದಲ್ಲಿ ಕೆಲಸ ಮಾಡಿ ಎಂದಿನಂತೆ ಎತ್ತುಗಳನ್ನು ಪತ್ರಾಸ ಶೇಡ್ಡಿನ ಮುಂದಿನ ಚಪ್ಪರದಲ್ಲಿ ಕಟ್ಟಿ ರಾತ್ರಿ 10:30 ಗಂಟೆಗೆ ಮನೆಗೆ ಬಂದಿರುತ್ತೇನೆ. ಮರು ದಿವಸ ಬೆಳಗ್ಗೆ 05:00 ಗಂಟೆಗೆ ಗಳೆ ಹೊಡೆಯಬೇಕು ಎಂದು ಮನೆಯಿಂದ ಎದ್ದು ಹೊಲಕ್ಕೆ ಹೋಗಿ ನೋಡಲಾಗಿ ಚಪ್ಪರದಲ್ಲಿ ಎತ್ತುಗಳು ಕಾಣಲಿಲ್ಲಾ ಎತ್ತುಗಳಿಗೆ ಕಟ್ಟಿದ ಹಗ್ಗಗಳನ್ನು ಕತ್ತರಿಸಿದ್ದು ನೋಡಿ ನಾನು ಗಾಬರಿಯಾಗಿ ಅಲ್ಲೆ ಬಹಿರ್ದೆಸೆಗೆ ಹೋಗುತ್ತಿದ್ದ ವಿಶ್ವನಾಥ ತಂದೆ ಕಲ್ಯಾಣಿ ಜಮಾದಾರ, ಹಣಮಂತ ತಂದೆ ಭೀಮರಾವ ಜಾಧವ ಹಾಗೂ ಪಕ್ಕದ ಹೊಲದ ಹರ್ಷಾನಂದ ತಂದೆ ಈರಣ್ಣಾ ನಿಂಬರ್ಗಿ ರವರಿಗೆ ನನ್ನ ಎತ್ತುಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಿಷಯ ತಿಳಿಸಿ ನಾವೆಲ್ಲರೂ ಕೂಡಿಕೊಂಡು ಸುತ್ತಮುತ್ತಲೂ ಎಲ್ಲ ಕಡೆಗೆ ಹೊಲಗಳಲ್ಲಿ ಹುಡುಕಾಡಿದರು ಎತ್ತುಗಳು ಎಲ್ಲೂ ಕಂಡು ಬಂದಿರುವುದಿಲ್ಲ, ನಂತರ ನಾನು ಮತ್ತು ಮುಬಾರಕ ತಂದೆ ರಾಜಾಭಾಯಿ ಮುಲಗೆ ರವರು ಕೂಡಿಕೊಂಡು ವಾಗ್ದರ್ಗಿ, ವಳಸಂಗ, ಅಚಲೇರ್, ಮೈಂದರ್ಗಿ ಗ್ರಾಮಗಳಿಗೆ ಹೋಗಿ ಹುಡುಕಾಡಿದರು ಎತ್ತುಗಳು ಸಿಕ್ಕಿರುವುದಿಲ್ಲ. ಸದರಿ ನನ್ನ ಎತ್ತುಗಳನ್ನು ಯಾರೋ ಕಳ್ಳರು ದಿನಾಂಕ 02/05/2019 ರ ರಾತ್ರಿ 11-00 ಪಿಎಮ್ ದಿಂದ ದಿನಾಂಕ 03-05-2019 ರ ಬೆಳಗಿನ 05-00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಎತ್ತುಗಳ ಅಂದಾಜು ಕಿಮ್ಮತ್ತು 48000/- ರೂಪಾಯಿ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 May 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಾರಾಮ ತಂದೆ ಜೀವಪ್ಪ ಚಿಂಚೋಳಿ ಸಾಃ ನಿಂಬರ್ಗಾ ಗ್ರಾಮ, ತಾಃ ಆಳಂದ ರವರದು ನಿಂಬರ್ಗಾ ಗ್ರಾಮ ಸೀಮಾಂತರದಲ್ಲಿ ನನ್ನ ಹೆಸರಿಗೆ ಹೊಲ ಸರ್ವೆ ನಂ. 365 ರಲ್ಲಿ 3 ಎಕರೆ, 35 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ಪಟ್ಟಣ ಕ್ರಾಸದಿಂದ  ಸ್ಟೇಶನ ಗಾಣಗಾಪೂರಕ್ಕೆ ಹೋಗುವ ಮುಖ್ಯ ಡಾಂಬರ ರಸ್ತೆಗೆ ಹೊಂದಿಕೊಂಡಿರುತ್ತದೆ. ನಾನು ದಿನಾಂಕ 30/04/2019 ರಂದು ಸಾಯಂಕಾಲ 04.00 ಪಿ.ಎಮ ಸುಮಾರಿಗೆ ಹೊಲ ನೊಡಿಕೊಂಡು ಬರಲು ಅಂತ ನಮ್ಮೂರಿನಿಂದ ಹೊಲಕ್ಕೆ ಹೋಗಿ ತಿರುಗಾಡಿ ಹೊಲ ನೋಡಿಕೊಂಡು ಸಾಯಂಕಾಲ 05.45 ಪಿ.ಎಮ ಸುಮಾರಿಗೆ ನಮ್ಮ ಹೊಲದಿಂದ ಉತ್ತರ ದಿಕ್ಕಿನ ಬಂದಾರಿ ಏರಿ ರೊಡಿನ ಕಡೆ ಬರುವಾಗ ರೊಡಿನ ಪಕ್ಕದಲ್ಲಿ ಅರಣ್ಯ ಇಲಾಖೆಯವರು ಹೊಂಗೆ ಗಿಡದ ಸಸಿ ನೆಟ್ಟ ಗುಂಡದಲ್ಲಿ ಒಂದು ಗೊಣಿ ಚೀಲದಿಂದ ಒಬ್ಬ ಮಹಿಳೆಯ ಶವವು ತಲೆಯಿಂದ ಹೊಟ್ಟೆಯವರೆಗೆ  ಹೊರ ಚಾಚಿದ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡು ನಾನು ನೋಡಲಾಗಿ ಶವದ ತಲೆಯಿಂದ ಕುತ್ತಿಗೆಯವರೆಗೆ ಅಸ್ತಿ ಪಂಜರದ ಸ್ಥಿತಿಯಲ್ಲಿದ್ದು ಚರ್ಮ, ಮಾಂಸ ಖಂಡ, ತಲೆಯ ಮೇಲಿನ ಕೂದಲು ಇರುವದಿಲ್ಲ, ಬಲ ಭುಜದಿಂದ ಮುಂಗೈವರೆಗೆ ಎಲುಬು ಮಾತ್ರ ಇದ್ದು ಚರ್ಮ ಮಾಂಸ ಖಂಡ ಇರುವದಿಲ್ಲ, ಎರಡು ಕೈಗಳ ಮಣಿ ಕಟ್ಟುಗಳನ್ನು ಒಂದು ನೀಲಿ ಬಣ್ಣದ ಬಟ್ಟೆಯಿಂದ ಬಿಗಿದಿದ್ದು, ಎರಡು ಕೈಗಳು ತಲೆಯ ಹಿಂಭಾಗಕ್ಕೆ ಚಾಚಿರುತ್ತವೆ. ತಲೆಯಿಂದ ಕುತ್ತಿಗೆಯವರೆಗೆ ಸುಟ್ಟಂತೆ ಕಂಡು ಬಂದಿರುತ್ತದೆ. ಮಹಿಳೆಯ ಮೈ ಮೇಲೆ ಯಾವುದೆ ಬಟ್ಟೆ ಇರುವದಿಲ್ಲ ಹೀಗಾಗಿ ಮೃತ ದೇಹದ ಎದೆಯ ಭಾಗದಿಂದ ಸದರಿ ಶವವು ಮಹಿಳೆಯದ್ದೆ ಅಂತ ಗೊತ್ತಾಗುತ್ತದೆ. ಶರೀರವು ಸ್ವಲ್ಪ ಕೊಳೆತಂತಹ ಸ್ಥಿತಿಯಲ್ಲಿದ್ದು ದುರ್ವಾಸನೆ ಬರುತ್ತಿದೆ. ಹೊಟ್ಟೆಯಿಂದ ಕಾಲಿನವರೆಗೆ ಮೃತ ದೇಹದ ಭಾಗ ಗೊಣಿ ಚೀಲದಲ್ಲಿ ಇದ್ದು, ಗೊಣಿ ಚೀಲದ ಬಾಯಿಯನ್ನು ಕೆಂಪು ಬಣ್ಣದ ಟಾವೆಲದಿಂದ ಬಿಗಿಯಲಾಗಿದೆ. ಸದರಿ ಮೃತ ಮಹಿಳೆಯ ಅಂದಾಜ ವಯಸ್ಸು 20 ರಿಂದ 25 ವರ್ಷ ಇರಬಹುದು. ಸದರಿಯವಳನ್ನು ಯಾರೊ, ಎಲ್ಲೊ, ಯಾವುದೋ ದುರುದ್ದೇಶದಿಂದ ಅಂದಾಜು 2-3 ದಿವಸಗಳ ಹಿಂದೆ ಕೊಲೆ ಮಾಡಿ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮಹಿಳೆಯ ಮುಖವನ್ನು ತಲೆಯಿಂದ ಕುತ್ತಿಗೆವರೆಗೆ ಗುರುತು ಸಿಗದಂತೆ ಮಾಡಿ ಸದರಿ ಶವವನ್ನು ಒಂದು ಗೊಣಿ ಚೀಲದಲ್ಲಿ ಹಾಕಿ ಗೊಣಿ ಚೀಲದ ಬಾಯಿಯನ್ನು ಟಾವೆಲದಿಂದ ಬಿಗಿದು ರೊಡಿನ ಪಕ್ಕದಲ್ಲಿ ಎಸೆದು ಹೊದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿರ್ಮಲಾ ಗಂಡ ಕೃಷ್ಣ ಕಡಕೋಳ ಸಾ: ಸುಂಬಡ ಗ್ರಾಮ ರವರು ಮಗಳು ಮನೆಗೆ ಅಳುತ್ತಾ ಬಂದಳು ಆಗ ನಾನು ಯಾಕೆ ಅಳುತ್ತಿದ್ದಿ ಏನಾಯಿತು ಅಂತ ಕೇಳಿದಕ್ಕೆ ಅವಳು ಹೇಳಿದೆನೆಂದರೆ, ನಾನು ಮರಗಮ್ಮ ದೇವಿಗೆ ನೈವಿದ್ಯ ಕೊಟ್ಟು ಮರಳಿ ಮನೆಗೆ ಬರುತ್ತಿದ್ದಾಗ ನಮ್ಮೂರಿನ ತೋಶಿಫ್ ತಂದೆ ಮಹಿಬೂಬಅಲಿ ಕುಕನೂರ ಇವನು ನನ್ನನ್ನು ಹಿಂಬಾಲಿಸುತ್ತಾ ಏ ನಿಲ್ಲು ಅಂತಾ ಅನ್ನುತ್ತಾ ಸೈಕಲ್ ಮೇಲೆ ಬರುತ್ತಿದ್ದನು, ನಂತರ 11;20 .ಎಂ ಸುಮಾರಿಗೆ ದುಂಡಪ್ಪಗೌಡ ಮಲಘಾಣ ರವರ ಹೊಲದ ಹತ್ತಿರ ತೋಶಿಫ್ ಇವನು ನನ್ನನ್ನು ಹಿಂಬಾಲಿಸುತ್ತಾ ಬಂದು ಸೈಕಲ್ ನಿಂದ ಇಳಿದು ಬಂದು ನನಗೆ ತಡೆದು ನಿಲ್ಲಿಸಿ ಏ ನಾನು ನಿನಗೆ ಇಷ್ಟ ಪಡುತ್ತೇನೆ, ನಿನಗೆ ಎಷ್ಟೂ ಬೇಕಾದರು ಹಣ ಕೊಡುತ್ತೆನೆ’’ ಅಂತ ಅಂದು ನನ್ನ ಎದೆ ಭಾಗವನ್ನು ಒತ್ತಿ ಹಿಡಿದು ಗಲ್ಲಕ್ಕೆ ಮುತ್ತು ಕೊಟ್ಟು ಗಟ್ಟಿಯಾಗಿ ತಬ್ಬಿಕೊಂಡನು, ಆಗ ನಾನು ಏ ಬೀಡು ಓ ತೋಶಿಫ್ ಅಂತ ಚಿರಾಡುತ್ತಿದ್ದಾಗ ಅವನು ಸೈಕಲ್ ತಗೆದುಕೊಂಡು ಓಡಿ ಹೋದನು ಅಂತ ಹೇಳಿದಳು, ನಂತರ ನಾನು ಮತ್ತು ನಮ್ಮ ಸಂಬಂಧಿಕರಾದ ಹೊನ್ನಮ್ಮ ಗಂಡ ಬಸವರಾಜ ದೋರಿ, ಶೇಖರ ತಂದೆ ಬಸವರಾಜ ದೋರಿ, ಕೃಷ್ಣಪ್ಪ ತಂದೆ ಯಂಕಪ್ಪ ದಳವಾಯಿ ಎಲ್ಲರೂ ಕೂಡಿಕೊಂಡು ತೋಶಿಫ್ನ ಮನೆಗೆ ಹೋಗಿ ತೋಶಿಫ್ ಇತನಿಗೆ ನನ್ನ ಮಗಳು ಪೂಜಾಗೆ ಹೀಗೇಕೆ ಮಾಡಿದಿ ಅಂತ ಕೇಳಿದಾಗ ಅವನುಏ ಬೇಡರ ಸೂಳೇ ಮಕ್ಕಳ್ಯಾ ನಮ್ಮ ಮನಿತನ ಕೇಳಲು ಬಂದಿರಿ ಅಂತ ಅಂದು ಕೈಯಿಂದ ನನ್ನ ಎಡ ಕಪಾಳ ಮೇಲೆ ಹೊಡೆದನು, ಆಗ ನನ್ನೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಇವಳಿಗೆ ತೋಶಿಫ್ ಇವನು ಲೈಂಗಿಕ ಉದ್ದೇಶದಿಂದ ಹಿಂಬಾಲಿಸುತ್ತಾ ತಡೆದು ನಿಲ್ಲಿಸಿ ಹಣದ ಆಮೀಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ನನಗೆ ಕೈಯಿಂದ ಕಪಾಳ ಮೇಲೆ ಹೊಡೆದು ಜಾತಿ ನಿಂದನೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 27.04.2019 ರಂದು ಬೆಳಿಗ್ಗೆ ಮೃತ ನೀಲಮ್ಮಾ ಮತ್ತು ಅವರ ಮಗ ಶಿವರುದ್ರ ಹಾಗೂ ಸೊಸೆ ಮಂಗಲಾ ಮೂರು ಜನರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾದ ಅವರ ಸಂದಿಕರನ್ನು ಮಾತನಾಡಿಸುವ ಸಲುವಾಗಿ ಸಂಗೋಳಗಿ (ಜಿ) ಗ್ರಾಮದಿಂದ ಬಸ್ಸ ಮೂಲಕ ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಇಳಿದು ಬಸ್ಸ ನಿಲ್ದಾಣ ಸಮೀಪ ಬರುವ ಸಂಗಮೇಶ್ವರ ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುವಾಗ ಸಂಗಮೇಶ್ವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-39/ಕೆ-1133 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ  ಮೋಟಾರ ಸೈಕಲನ್ನು ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನೀಲಮ್ಮಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಂದೆ ನೀಲಮ್ಮಾ ಇವರು ಉಪಚಾರ ಕುರಿತು ಖಾಸಗಿ ಕುರಾಳ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ದಿನಾಂಕ 01-05-2019 ರಂದು ಮದ್ಯಾಹ್ನ 01-00 ಗಂಟೆ ಸುಮಾರಿಗೆ ಕುರಾಳ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01  : ಶ್ರೀ ಆನಂದರಾಯ ತಂದೆ ಅಣ್ಣಪ್ಪ ಮಾಲಿಪಾಟೀಲ ರವರು ದಿನಾಂಕ 27-04-2019 ರಂದು ನನ್ನ ಮಗನಾದ ಶ್ರೀಶೈಲ ಇತನು ನಮ್ಮ ಲಾರಿ ನಂಬರ ಕೆಎ-52/9837 ನೇದ್ದರಲ್ಲಿ ಕಲಬುರಗಿ ಕಪನೂರ ಇಂಡಸ್ಟ್ರಿಯಲ್ ಏರಿಯಾದಿಂದ ಬೆಂಗಳೂರಿಗೆ ತೊಗರಿ ಬೆಳೆಗಳನ್ನು ತಗೆದುಕೊಂಡು ಹೋಗುವ ಕುರಿತು ಆತನು ಚಲಾಯಿಸುತ್ತೀರುವ ಲಾರಿಯಲ್ಲಿ ನನಗೆ ಮತ್ತು ಲಾರಿ ಡ್ರೈವರ ಬಸವರಾಜ ಹಾಗೂ ಲಾರಿ ಕ್ಲಿನರ ಮಹೇಶ ಮೂರು ಜನರನ್ನು ಕೂಡಿಸಿಕೊಂಡು  ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋಗುವಾಗ ನನ್ನ ಮಗ ಶ್ರೀಶೈಲ ಇತನು ಫರಹತಾಬಾದ ದಾಟಿದ ನಂತರ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾನು ಮತ್ತು ವಿಶ್ರಾಂತಿಯಲ್ಲಿರುವ ಡ್ರೈವರ ಬಸವರಾಜ ಹಾಗೂ ಕ್ಲಿನರ ಮಹೇಶ ಮೂರು ಜನರು ಶ್ರೀಶೈಲ ಇತನಿಗೆ ಲಾರಿಯನ್ನು ನಿಧಾನವಾಗಿ ಚಲಾಯಿಸುವಂತೆ ತಿಳಿಸಿದರೂ ಕೂಡಾ ಶ್ರೀಶೈಲ ಇತನು ನಮ್ಮ ಮಾತು ಕೇಳದೆ ಅದೇ ವೇಗದಲ್ಲಿ ಮತ್ತು ಅಲಕ್ಷತನದಿಂದ ಲಾರಿ ಚಲಾಯಿಸಿ ಕಟ್ಟಿ ಸಂಗಾವಿ ಬ್ರಿಡ್ಜ್ ಸಮೀಪ ಬರುವ ತಿರುವಿನಲ್ಲಿ ರಾತ್ರಿ 11-45 ಗಂಟೆ ಸುಮಾರಿಗೆ ಒಮ್ಮಲೆ ಬ್ರೇಕ ಹಾಕಿ ತಿರುಗಿಸಿ ಲಾರಿ ಪಲ್ಟಿ ಮಾಡಿ ಅಪಘಾತ ಮಾಡಿ  ಲಾರಿಯಲ್ಲಿರುವ ತೋಗರಿ ಬೆಳೆಯ ಚೀಲಗಳು ಹರಿದು ಬೆಳೆಗಳು ಚಲ್ಲಾಪಿಲ್ಲಿಯಾಗಿ ಬಿಳಿಸಿ ಲಾರಿ ಡ್ಯಾಮೇಜ್ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.