POLICE BHAVAN KALABURAGI

POLICE BHAVAN KALABURAGI

22 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 21/01/2019 ರಂದು  ಶ್ರೀ ಮಂಜುನಾಥ ತಂದೆ ಕಲ್ಯಾಣರಾವ ಬರುಡೆ ಸಾ : ರಾಮತೀರ್ಥ ನಗರ ಆಳಂದ ಚಕ್ಕಪೋಸ್ಟ ಕಲಬುರಗಿ  ರವರು ಆಳಂದ ಪಟ್ಟಣದ ಅಕ್ಕ ಮಾಹಾದೇವಿ ಕಾಲೇಜನಲ್ಲಿ ಡಿಗ್ರಿ ಪರಿಕ್ಷೇ ಸಂಬಂಧವಾಗಿ ಮೀಟಿಂಗ ಹಾಜರಾಗಲು ತನ್ನ ಹೊಂಡಾ ಸೈನ  KA 32 EG 4334 ರ ಹಿಂದೆ ತಮ್ಮ ಕಾಲೇಜನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಿ.ಎ.ಎರಡನೇ ವರ್ಷದ ಹುಡುಗ ಶರಣಪ್ಪ ತಂದೆ ಜಗದೇವಪ್ಪ ಅಂಕಲಗಿ ಸಾ: ಕಲ್ಲಬೇನೂರ ಗ್ರಾಮ ಇತನನ್ನು  ಕೂಡಿಸಿಕೊಂಡು ಆಳಂದಕ್ಕೆ ಹೋಗಿ ಮೀಟಿಂಗ ಮುಗಿದ ನಂತರ ವಾಪಸ್ಸು ಕಲಬುರಗಿ ಕಡೆ ತನ್ನ ಮೋಟಾರ ಸೈಕಲ ಹಿಂದೆ ಶರಣಪ್ಪ ಅಂಕಲಗಿ ಇತನನ್ನು  ಕೂಡಿಸಿಕೊಂಡು  ತನ್ನ ಸೈಡ ಹಿಡಿದುಕೊಂಡು ರೋಡ ಬದಿಯಿಂದ ನಡೆಸುತ್ತಾ ಸುಂಟನೂರ ಕ್ರಾಸ ದಾಟಿ  ಅರ್ಧ ಕಿ.ಮೀ. ದೂರ ಶಿವಶರಣಪ್ಪ ಬುಳ್ಳಾ ಇವರ ಹೊಲದ ಹತ್ತಿರ ಬಂದಾಗ ಎದುರುನಿಂದ  ಯಾವುದೋ ಒಬ್ಬ ವಾಹನ ಚಾಲಕ  ತನ್ನ ವಶದಲ್ಲಿದ್ದ ವಾಹನವನ್ನು  ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ನನ್ನ ಸೈಡಿಗೆ ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದೇವು. ಅಪಘಾತ ಪಡಿಸಿದ ಯಾವುದೋ ವಾಹನ ಚಾಲಕ  ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿದನು. ಅಪಘಾತಪಡಿಸಿದ ವಾಹನ ನಂಬರ ನೋಡಬೇಕುನ್ನುಷ್ಟರಲ್ಲಿ ವಾಹನ ಚಾಲು ಮಾಡಿಕೊಂಡು ಆಳಂದ ಕಡೆಗೆ ಓಡಿಸಿಕೊಂಡು ಹೋದನು. ಇದರಿಂದಾಗಿ ನನಗೆ ಅಪಘಾತಪಡಿಸಿದ ವಾಹನ ಮತ್ತು ಅದರ ನಂಬರ ನೋಡಲು ಆಗಿರುವುದಿಲ್ಲಾ. ಈ ಅಪಘಾತದಿಂದಾಗಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ ಭಾರಿ ರಕ್ತಗಾಯಗಳಾಗಿದ್ದು. ಶರಣಪ್ಪ ಅಂಕಲಗಿ ಇತನಿಗೆ ಅವನ ಬಲತಲೆಗೆ, ಬಲಗಣ್ಣಿನ ಹತ್ತಿರ, ಗದ್ದಕ್ಕೆ ಮತ್ತು ಬಲಗಾಲ ತೊಡೆ ಮೂಳೆ ಮುರಿದು ಮಾಂಸ ಖಂಡ ಹೊರ ಬಂದು  ಭಾರಿ ರಕ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು. ಈ ವಿಷಯ ಕಾರಿನಲ್ಲಿ ಹೊರಟ ನಮ್ಮ ಪ್ರಿನ್ಸಿಪಾಲ ಅಂಬಾರಾವ ಹಾಗರಗಿ ಇವರಿಗೆ ಪೋನ ಮಾಡಿ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ನಮಗೆ ಆದ ಗಾಯಗಳು ನೋಡಿ  108 ಅಂಬುಲೈನ್ಸ ಗಾಡಿಗೆ ಪೋನ ಮಾಡಿ  ವಿಷಯ ತಿಳಿಸಿದಾಗ ಸ್ವಲ್ಪ ಸಮಯದಲ್ಲಿ 108 ಅಂಬುಲೈನ್ಸ ಗಾಡಿ ಬರಲು ಅದರಲ್ಲಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ ಹಾಕಿಕೊಂಡು  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರಾತ್ರಿ 08-30 ಗಂಟೆಗೆ ತಂದಿದ್ದು ವೈದ್ಯರು ಶರಣಪ್ಪ ಇತನಿಗೆ ನೋಡಿ ಈಗಾಗಲೇ ಮೃತಪಟ್ಟಿದ್ದಾನೆ ಅಂತಾ ತಿಳಿಸಿರುತ್ತಾರೆ. ಕಾರಣ ಈ ಮೇಲೆ ಹೇಳಿದಂತೆ ನನಗೆ ಮತ್ತು ಶರಣಪ್ಪ ಇಬ್ಬರಿಗೂ ಅಪಘಾತಪಡಿಸಿ ನನಗೆ ಭಾರಿ ರಕ್ತಗಾಯ ಮತ್ತು ಶರಣಪ್ಪ ಇತನಿಗೆ  ಮರಣವನ್ನುಂಟು ಮಾಡಿ ಹಾಗೇ ಓಡಿಸಿಕೊಂಡು ಹೋದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 21.01.2019 ರಂದು ಸಾಯಂಕಾಲ 4-00 ಗಂಟೆ  ಸುಮಾರಿಗೆ  ಬಬ್ಲೂ ಇತನು ಹಳೆ  ಅರ.ಟಿ.ಓ ಅಪೀಸ್ ಹತ್ತಿರ ಬರುವ ವಾತ್ಸಲ್ಯ ಆಸ್ಪತ್ರೆ  ಎದುರುಗಡೆ ಪುಟ್ ಪಾತ್ ಪಕ್ಕದಲ್ಲಿ ವಾಹನಗಳ ಸಿಟ್ ಕವರ್ ಮಾರಾಟ ಮಾಡುವ ಕೆಲಸದ ಮೇಲೆ  ಇದ್ದು ವಾತ್ಸಲ್ಯ ಆಸ್ಪತ್ರೆಯ ಪಕ್ಕದಲ್ಲಿ ಇರುವ ಬಂಡಿ ಹೋಟೆಲನಲ್ಲಿ ನೀರು ಮತ್ತು ಚಹಾ ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುತ್ತಿರುವಾಗ ಸೇಡಂ ರಿಂಗ್ ರೋಡ ಕಡೆಯಿಂದ ಜಿಜಿಹೆಚ. ಸರ್ಕಲ್ ಕಡೆಗೆ ಹೋಗುವ ಕುರಿತು ಚಂದ್ರಕಾಂತ ಪಾಟೀಲ ಶಾಲೆಯ ಬಸ್ಸ ನಂಬರ ಕೆಎ32/ಡಿ-6764 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಬಬ್ಲೂ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿದ್ದರಿಂದ ಬಬ್ಲೂ ಇತನಿಗೆ ಎದುರಿನ  ವಾತ್ಸಲ್ಯ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ವಾತ್ಸಲ್ಯ ಆಸ್ಪತ್ರೆ ವೈದ್ಯರು ಬಬ್ಲೂ ಇತನಿಗೆ ನೋಡಿ ಅಪಘಾತ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ  ಅಂತಾ ತಿಳಿಸಿದ್ದು  ಬಬ್ಲೂ ಇತನಿಗೆ  ಬಸ್ಸ ಚಾಲಕ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಸಿದ್ದರಿಂದ  ಬಬ್ಲೂ ಇತನು  ಸ್ಥಳದಲ್ಲಿ ಮೃತ ಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಕಮಲಾ ಗಂಡ ಸಹದೇವ ಪಾಸೋಡಿ ಸಾ ಬಬಲಾದ ಐಕೆ  ಹಾಲ ವಸತಿ ಆಶ್ರಯ ಕಾಲೂನಿ ಸೈಯದ ಚಿಂಚೂಳಿ ರೋಡ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಗುರಪ್ಪ ತಂದೆ ಸಂಗಪ್ಪ ಮೇತ್ರಿ ಸಾ||ಉಡಚಣ ತಾ||ಅಫಜಲಪೂರ ರವರು  ಕಳೆದ ವರ್ಷ ಅಂದರೆ 2018 ನೇ ಸಾಲಿನಲ್ಲಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ್ ಖರಿದಿ ಮಾಡಿರುತ್ತೇನೆ. ಸದರಿ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ಅಂತಾ ಮತ್ತು ಚೆಸ್ಸಿ ನಂ-MBLHAR077JHC49063, ಹಾಗೂ ಇಂಜಿನ ನಂ-HA10AGJHC56922 ಅಂತಾ ಇರುತ್ತದೆ. ನನ್ನ ಮಗ ಆಕಾಶನಿಗೆ ಭಾರತಿ ವಿಧ್ಯಾಕೇಂದ್ರ ಶಿರನೂರದಲ್ಲಿ ವಿಧ್ಯಾಭ್ಯಾಸಕ್ಕಾಗಿ ಸೇರಿಕೆ ಮಾಡಿರುತ್ತೇನೆ. ಕಲಬುರಗಿಯಲ್ಲಿ ನನ್ನ ಕೆಲಸ ಇದ್ದ ನಿಮೀತ್ಯ ಮತ್ತು ನನ್ನ ಮಗನಿಗೆ ಮಾತನಾಡಿಸಲು ಬರಲು ನಾನು ದಿನಾಂಕ-14/01/2019 ರಂದು ಸಾಯಂಕಾಲ ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇನೆ. ಭೋಗನಳ್ಳಿ ಕ್ರಾಸ್ ಹತ್ತಿರ ಬಂದಾಗ ದಾಬಾದಲ್ಲಿ ಊಟ ಮಾಡಲು 7-30 ಪಿಎಮ್ ಸುಮಾರಿಗೆ ರಸ್ತೆಯ ಪಕ್ಕದಲ್ಲಿರುವ ಮತ್ತು ದಾಬಾದ ಮುಂದಿರುವ ಜಾಗದಲ್ಲಿ ಮೋಟರ ಸೈಕಲ ನಿಲ್ಲಿಸಿ ಊಟಕ್ಕೆ ದಾಬಾದಲ್ಲಿ ಹೋಗಿರುತ್ತೇನೆ. ಊಟ ಮುಗಿಸಿಕೊಂಡು ಮರಳಿ 8-10 ಪಿಎಮ್ ಕ್ಕೆ ಹೋರಗೆ ಬಂದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲಾ, ಅಲ್ಲಿರುವ ಜನರಿಗೂ ಮತ್ತು ದಾಬಾದಲ್ಲಿರುವ ಜನರಿಗೂ ವಿಚಾರಿಸಿದರು ಅವರು ತಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು. ನಾನು ಊಟಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯ ಯಾಗಪ್ಪ ತಂದೆ ಮಹಾದೇವಪ್ಪಾ ಹಲಸಂಗಿ ಇಬ್ಬರೂ ದಿನಾಂಕ-14/01/2019 ರಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಿದರು ಎಲ್ಲಿಯು ಸಿಕ್ಕಿರುವುದಿಲ್ಲಾ. ಸದರಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ  ಅಂ||ಕಿ|| 45,000 ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಸೂಚಿತಾ ಗಂಡ ಗೋಪಾಲ ಭೋಸ್ಲೆ ಸಾವಂತ ಸಾ||ಮನೆ ನಂ-407 ರೂಪೇಶ ಸೋಸೈಟಿ, ಕಳವಾ ವೆಸ್ಟ, ಜಿಲ್ಲಾ-ಠಾಣಾ. ಮಹಾರಾಷ್ಟ ರಾಜ್ಯ ರವರ ಠಾಣೆಗೆ ಹಾಜರಾಗಿ ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದ ನಿವಾಸಿತಳಿದ್ದು ಮನೆಕೆಲಸ ಮಾಡಿಕೊಂಡು ಪರಿವಾರ ದೊಂದಿಗೆ ಉಪಜೀವನ ಸಾಗಿಸುತ್ತಿದ್ದೇನೆ. ನನ್ನ ತಾಯಿಯಾದ ಜಯಶ್ರೀ ಗಂಡ ದಿ||ವಸಂತ ಸಾವಂತ ವಯ||75 ಜಾ|| ಮರಾಠ ಉ|| ಮನೆಕೆಲಸ ಸಾ||ನಾಟಲ ಗ್ರಾಮ ತಾ||ಕನಕೌಲಿ ಜಿಲ್ಲಾ||ಸಿಂಧದುರ್ಗ ಮಹಾರಾಷ್ಟ್ರ. ಇವರು ಒಂದು ವಾರದ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ. ದೇವಲಗಾಣಗಾಪೂರ ದತ್ತ ಮಹಾರಾಜ ದರ್ಶನಕ್ಕೆ ಹೋಗಲು  ನಾನು ನನ್ನ ತಾಯಿ ಮತ್ತು  ನನ್ನ ಅಕ್ಕಳ  ಮಗನಾದ ಪ್ರಸಾದ ತಂದೆ  ಪ್ರದೀಪ ರಾಸಮ ವಯ||20 ಜಾ|| ಮರಾಠ ಉ|| ವಿಧ್ಯಾರ್ಥಿ  ಸಾ||ಮನೆ ನಂ-170 ಕಂದಮವಾರ ನಗರ ವಿಕೋಳಿ ಈಸ್ಟ ಜಿ|| ಠಾಣಾ ಮತ್ತು ನಮಗೆ ಪರಿಚಯಿಸ್ಥರು ಮತ್ತು ಗುರುಜಿಗಳಾದ ಮಹೇಶ ತಂದೆ ರಾಮಚಂದ್ರ  ದೇವಧರ ಸಾ|| ಮನೆ ನಂ-1/8 ಶ್ರೀಚಿಂತಾಮಣಿ, ವಿಟ ಬಂದರ ರಸ್ತೆ ಠಾಣೆಈಸ್ಟ, ಎಲ್ಲರೂ ದಿನಾಂಕ-15/01/2019 ರಂದು  ರಾತ್ರಿ ಠಾಣೆಯಿಂದ  ರೈಲಿನ ಮೂಲಕ ಬಿಟ್ಟು ದಿನಾಂಕ-16/01/2019 ರಂದು ಸೋಲಾಪೂರಕ್ಕೆ ಬಂದಿರುತ್ತೇವೆ. ಸೋಲಾಪೂರದಲ್ಲಿ ಮೊದಲಿನಿಂದಲು ನಮಗೆ ಪರಿಚಯ ಇರುವ ಶ್ರೀ ಚಂದ್ರಕಾಂತ ತಂದೆ ವಿಠಲರಾವ ಭಾಲೆಕಾರ ಸಾ||ಮನೆ ನಂ-18/14 ಮಾಧವನಗರ ಎಮ್,,ಡಿ,ಸಿ ರೋಡ  ಸೋಲಾಪೂರ  ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ಸೋಲಾಪೂರದಿಂದ ಎಲ್ಲರೂ  ಓಮಿನಿ ಕಾರನಲ್ಲಿ ಅಕ್ಕಲಕೋಟಾದ ಸ್ವಾಮಿ ಸಮರ್ಥಕ್ಕೆ ಬಂದಿರುತ್ತೇವೆ. ಸದರಿ ಓಮಿನಿ ಕಾರ ಚಂದ್ರಕಾಂತ ರವರೆ ಚಲಾಯಿಸುತ್ತಿದ್ದರು ದಿನಾಂಕ 17/01/2019 ಮುಂಜಾನೆ 09-00 ಎಎಮ್ ಕ್ಕೆ ದೇವಲಗಾಣಗಾಪೂರಕ್ಕೆ ಹೋಗಲು  ಎಲ್ಲರೂ ಚಂದ್ರಕಾಂತ ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದರಲ್ಲಿ ಅಕ್ಕಲಕೋಟದಿಂದ ಬಿಟ್ಟು ದೇವಲಗಾಣಗಾಪೂರಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಅಕ್ಕಲಕೋಟಕ್ಕೆ ಹೋಗಲು ಅದೆ ಓಮಿನಿ ಕಾರನಲ್ಲಿ ಅತನೂರ  ಗ್ರಾಮ ದಾಟಿ ಸುಮಾರು 02 ಕೀ,ಮೀಟರ ಅಂತರದಲ್ಲಿ ಹೋಗುತ್ತಿದ್ದಾಗ 4-15 ಪಿಎಮ್ ಕ್ಕೆ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರು ಓಮಿನಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತದಿಂದ ಚಲಾಯಿಸಿ ದ್ದರಿಂದ ಅವರಿಗೆ ನಿಯಂತ್ರಿಸಲು ಆಗದೆ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿಯಾಗಿ ಬಿದ್ದಿತು. ಪಲ್ಟಿಯಾದಾಗ ಬಾಗಿಲು  ತೆರೆದಿದ್ದರಿಂದ ನನ್ನ ತಾಯಿ ಜಯಶ್ರೀ ಓಮನಿ ವಾಹನದಿಂದ ರಸ್ತೆಯ ಮೇಲೆ ಕೆಳಗೆ ಬಿದ್ದಿರುತ್ತಾಳೆ. ನಾನು, ಪ್ರಸಾದ ಮಹೇಶ ಗುರುಜಿ ಎಲ್ಲರೂ ಓಮಿನಿಂದ ಕೆಳಗೆ ಇಳಿದೇವು. ಆಗ ಅಲ್ಲೆ ಇದ್ದ ಸಂತೋಷ ಹುಲಿ ಎಂಬ ವ್ಯಕ್ತಿಯು ಬಂದಿದ್ದು ಎಲ್ಲರೂ ಕೂಡಿ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರಿಗೆ ಹೋರಗೆ ತೆಗೆದು ಕೂಡಿಸಿ, ನನ್ನ ತಾಯಿಗೆ ಎತ್ತಿ ರಸ್ತೆಯ ಪಕ್ಕಕ್ಕೆ ಹಾಕಿರುತ್ತೇವೆ. ಸಂತೋಷ  ಹುಲಿ ಎಂಬುವರು ಅಂಬುಲೇನ್ಸ ವಾಹನಕ್ಕೆ  ಪೋನ ಮಾಡಿ ಬರಲು ಹೇಳಿದರು. ಸದರಿ ಅಪಘಾತದಿಂದ  ನನ್ನ ತಾಯಿ ಜಯಶ್ರೀ ಹಣೆಯ ಬಲಭಾಗಕ್ಕೆ  ಮತ್ತು ತಲೆಗೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಪ್ರಜ್ಞಾಹಿನಳಾಗಿದ್ದಳು. ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರ ತಲೆಯ ಹಿಂಭಾಗದಲ್ಲಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯ ವಾಗಿರುತ್ತವೆ. ಮತ್ತು ನನ್ನ ಗಲ್ಲಕೆ ಮತ್ತು ಬಲಭಾಗದ ಭುಜಕ್ಕೆ ಒಳ ಪೆಟ್ಟಾಗಿರುತ್ತದೆ. ಮತ್ತು ಪ್ರಸಾದ ಮತ್ತು ಮಹೇಶ ಗುರುಜಿಗೆ ರವರಿಗೆ ಸಣ್ಣ ಪುಟ್ಟ ತೆರೆಚಿದ ಗಾಯಗಳಾಗಿರುತ್ತದೆ. ಅಂಬುಲೇನ್ಸ ವಾಹನ ಬಂದ ನಂತರ ನನ್ನ ತಾಯಿಗೆ ಮತ್ತು ಚಂದ್ರಕಾಂತ ರವರಿಗೆ ಅದರಲ್ಲಿ ಹಾಕಿಕೊಂಡು ನಾನು ಮಹೇಶ ಗುರುಜಿ, ಪ್ರಸಾದ ಕಲಬುರಗಿಯ ಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ನನ್ನ ತಾಯಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ಚಂದ್ರಕಾಂತ ರವರಿಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಕುರಿತು ದಾಖಲು ಮಾಡಿ ನನ್ನ ತಾಯಿಯ ಮೃತದೇಹವನ್ನು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ  ತಂದು ಹಾಕಿರುತ್ತೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 18/01/2019 ರಂದು ಕೊಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಬುಲೆರೋ ನಂ ಕೆಎ-28 ಎನ್ 4712 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ಶ್ರೀ ಕಾಮಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊಳ್ಳೂರ ಗ್ರಾಮ ರವರ  ಮಗನಾದ ದೇವಪ್ಪ ಇತನಿಗೆ ಡಿಕ್ಕಿಪಡಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ರಾಜಾಪಟೇಲ ತಂದೆ ದಾವಲಸಾಬ ಹಚ್ಚಡದ ಸಾ|| ಕಣಮೇಶ್ವರ ತಾ|| ಜೇವರ್ಗಿ ರವರು ದಿನಾಂಕ 15-01-2019 ರಂದು ನಮ್ಮೂರ ಹಜರತ ಶಾಹುಸೇನಿ ಜಾತ್ರಾ ಪ್ರಯುಕ್ತ ಸಮುದಾಯ ಭವನದ ಹತ್ತಿರ ಇದ್ದ ಟಾವರ ಕಂಭಕ್ಕೆ ನಾನು ಹಸೀರು ಬಣ್ಣದ ಝಂಡಾವನ್ನು ಕಟ್ಟಿದ್ದು ಇರುತ್ತದೆ, ಅದನ್ನು ನೋಡಿ ನಮ್ಮೂರಿನ ಹಿಂದು ಸಮಾಜದ ಕೆಲವರು ಅದೇ ಟಾವರ ಮೇಲೆ ಕೇಸರಿ ಬಣ್ಣದ ಝಂಡಾವನ್ನು ಕಟ್ಟಿರುತ್ತಾರೆ. ಈ ಬಗ್ಗ ನಮ್ಮ ಹಿರಿಯವರು ಉರಲ್ಲಿ ವಿನಾಕಾರಣ ಜಗಳಾಗುತ್ತವೆ, ನೀನು ಕಟ್ಟಿದ ಝಂಡಾವನ್ನು ಬಿಚ್ಚುಕೊಂಡು ಬಾ ಅಂತಾ ನನಗೆ ಹೇಳಿದ್ದರಿಂದ ನಾನು ಕಟ್ಟಿದ ಹಸೀರು ಬಣ್ಣದ ಝಂಡಾವನ್ನು ಬಿಚ್ಚಿರುತ್ತೇನೆ, ದಿನಾಂಕ 17-01-2019 ರಂದು ಮದ್ಯಾಹ್ನ ನಾನು ಸಂಡಾಸಕ್ಕೆ ಅಲ್ಲೆ ನಮ್ಮೂರ ಪಕ್ಕದಲ್ಲಿರುವ ಬಂದಗಿಸಾಬ ಹಚ್ಚಡದ ರವರ ಹೊಲಕ್ಕೆ ಹೋಗಿದ್ದು, ಮರಳಿ ಬರುವಾಗ ಅಲ್ಲೆ ಹೊಲದಲ್ಲೆ ನಮ್ಮೂರ 1] ರಾಜು ತಂದೆ ಬಸವರಾಜ ನಾಟೀಕಾರ, 2] ರಮೇಶ ತಂದೆ ಬಸವರಾಜ ನಾಟೀಕಾರ, 3] ಸುನೀಲ ತಂದೆ ಶಂಕ್ರೆಪ್ಪ ಜೇರಟಗಿ, 4] ಮಾಳಪ್ಪ ತಂದೆ ಸಾಯಬಣ್ಣ ನಾಟೀಕಾರ, 5] ಬಸವರಾಜ ತಂದೆ ಚಂದ್ರಾಮ ನಾಗಾವಿ, 6] ಸಂತೋಷ ತಂದೆ ಶಂಕ್ರೆಪ್ಪಾ ನಾಟೀಕಾರ, 7] ದಯಾನಂದ ತಂದೆ ಬಲಭೀಮ ನಾಗಾವಿ, 8] ದತ್ತಪ್ಪ ನಾಟೀಕಾರ, 9] ಸಂತೋಷ ತಂದೆ ಮಲ್ಕಪ್ಪ ನಾಟೀಕಾರ, 10] ಪರಸಪ್ಪ ತಂದೆ ಬಸಪ್ಪ ಮುದಬಾವಿ, 11] ರಾವುತಪ್ಪ ತಂದೆ ಮಲ್ಕಪ್ಪ ನಾಟೀಕಾರ, 12] ಜಯವಂತ ತಂದೆ ರಾಮಣ್ಣ ಕೆಲೋಜಿ, 13] ಸಿದ್ದಪ್ಪ ತಂದೆ ನಾಗಪ್ಪ ನಾಟೀಕಾರ, 14] ಸಂತೋಷ ಗುಬ್ಬೇವಾಡ, 15] ವಿಶ್ವರಾದ್ಯ ತಂದೆ ಗೋಪಾಲ ಬೋರಗಿ, 16] ಸಾಯಬಣ್ಣ ತಂದೆ ಲಕ್ಷ್ಮಣ ನಾಟೀಕಾರ, 17] ಸುರೇಶ ತಂದೆ ಬಲಭೀಮ ನಾಗಾವಿ, 18] ಪರಸಪ್ಪ ತಂದೆ ಅಡವೆಪ್ಪ ಕೊಂಡಗೂಳಿ, 19] ದೇವಪ್ಪ ಮಲ್ಕಪ್ಪ ನಾಟೀಕಾರ, 20] ದೇವಪ್ಪ ಚಟ್ಟರಕಿ, 21] ಶಿವರಾಜ ತಂದೆ ಮಲ್ಲಪ್ಪ ನಾಗಾವಿ ಸಾ|| ಎಲ್ಲರೂ ಕಣಮೇಶ್ವರ ಗ್ರಾಮ ಹಿಗೆಲ್ಲರು ಗುಂಪು ಕಟ್ಟಿಕೊಂಡು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಮೊನ್ನೆ ಜಾತ್ರಿಯಲ್ಲಿ ಬಹಳ ಹಾರಾಡಿದಿ, ಉರಾಗ ನಿವೂ ಮುಸಲರು ಕಡಿಮಿ ಇದ್ದಿರಿ, ಇವತ್ತ ನಿನಗ ಖಲಾಸೆ ಮಾಡುತ್ತೇವೆ  ಅಂತಾ ಅಂದು ಹೊಡೆ ಬಡೆ ಮಾಡಿ ಬಿಡಿಸಲು ಬಂದ ನನ್ನ ತಾಯು ಮತ್ತು ಅತ್ಎಯಂದಿರಿಗೆ ಹೊಡೆದು ಅವಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ಅಸ್ಲಂ ತಂದೆ ಅಮೀರಸಾಬ ಮುಲ್ಲಾ, ಸಾ:ಮುನ್ನಳ್ಳಿ ಗ್ರಾಮ ರವರು ದಿನಾಂಕ:10/01/2019 ರಂದು ರಾತ್ರಿ ಸಮೂರಿನ ಬಂಡಪ್ಪಾ ಜಮಾದಾರ ಇವರ ಹೊಲಕ್ಕೆ ಟ್ರ್ಯಾಕ್ಟರ್ ಗಳ್ಯಾ ಕೂಲಿಕೆಲಸಕ್ಕೆ ಹೋಗಿದ್ದು, ಗಳ್ಯಾ ಹೊಡೆಯಲು ಟ್ರ್ಯಾಕ್ಟರ್ ಕೆಎ32ಟಿಬಿ3281 ನೇದ್ದರ ಚಾಲಕ ರಾಜಕುಮಾರ ತಂದೆ ಬಬ್ರುವಾಹನ ಆಳಂಗೆ ಸಾ:ಕಣ್ಮಸ್ ಈತನು ಇದ್ದು ಸದರಿಯವನು ಹಾಗೂ ನಾನು ರಾತ್ರಿ 8-30 ರಿಂದ 11-30 ಪಿ.ಎಂ ವರೆಗೆ ಹೊಲದಲ್ಲಿ ಗಳ್ಯಾ ಹೊಡೆದು ನಾನು ಟ್ರ್ಯಾಕ್ಟರ್ ಹಿಂದೆ ಗಳ್ಯಾ ಹೊಡೆಯುವ ಕಾಲಕ್ಕೆ ನೆಲದಿಂದ ಏಳುವ ಕಟ್ಟಿಗೆ ಹಾಗೂ ಬಂಡೆ ಕಲ್ಲು ತಗೆದಿರುತ್ತೇನೆ ರಾತ್ರಿ 11-30ಕ್ಕೆ ಬಂದಾರಿ ಹತ್ತಿರ ಇನ್ನು ಕೆಲವು ಕಟ್ಟಿಗೆ ಮತ್ತು ಕಲ್ಲು ತಗೆಯುತ್ತಿರುವಾಗ ರಾಜಕುಮಾರ ಈತನು ಟ್ರ್ಯಾಕ್ಟರ್ ತಿರುಗಿಸಲು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಟ್ರ್ಯಾಕ್ಟರ್ ಚಲಾಯಿಸುತ್ತಾ ಬಂದಾರಿ ಕಡೆಗೆ ಬಂದು ನನಗೆ ಜೋರಾಗಿ ಡಿಕ್ಕಿಹೊಡೆದು ಅಪಾಘಾತ ಪಡಿಸಿದನು. ಆಗ ನನಗೆ ಎಡಗಾಲಿ ಮೇಲೆ ಟ್ರ್ಯಾಕ್ಟರ್ ಹಾಯ್ದು ಗಂಭೀರಗಾಯವಾಗಿ ನಾನು ನೆಲಕ್ಕೆ ಬಿದ್ದಾಗ ನನಗೆ ರಾಜಕುಮಾರನು ಅಲ್ಲಿಂದ ಎತ್ತಿ ಈ ವಿಷಯ ಕುಪೇಂದ್ರ ತಂದೆ ಶಂಕರ ಇವರಿಗೆ ತಿಳಿಸಿದ್ದರಿಂದ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ನನಗೆ ಉಪಚಾರಕ್ಕಾಗಿ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ತಂದು  ಸೇರಿಕೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 15/01/19 ರಂದು ಕಲಬುರಗಿ ಅಫಜಲಪೂರ ರೋಡಿನ ಕೊಳ್ಳೂರ ಕ್ರಾಸ ಇನ್ನೂ 2 ಕಿ.ಮಿ ದೂರ ಇರುವಂತೆ ರೋಡಿನ ಮೇಲೆ ಕಾರ ನಂ ಕೆಎ-2 ಎಮ್-5012 ನೇದ್ದರ ಚಾಲಕನದ ರಾಚಯ್ಯ ಇತನು ಕಾರನು ಅತೀ ವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಪಕ್ಕದಲ್ಲಿ ಪಲ್ಟಿ ಆಗಿದ್ದರಿಂದ ಕಾರಿನಲ್ಲಿದ್ದ ಶ್ರೀ ಸೂಮಶೇಖರ ತಂದೆ ಈರಯ್ಯ ಹೀರೆವ್ಮಠ ಸಾಃ ಜೇಮಶೆಟ್ಟಿ ನಗರ ಕಲಬುರಗಿ ರವರಿಗೆ ಹಾಗು ಇನ್ನಿತರರಿಗೆ  ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದಊರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.