POLICE BHAVAN KALABURAGI

POLICE BHAVAN KALABURAGI

15 December 2018

KALABURAGI DISTRICT REPORTED CRIMES

ಅಕ್ರಮವಾಗಿ ನಾಡ ಪಿಸ್ತೂಲ ಇಟ್ಟುಕೊಂಡವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-12-2018 ರಂದು ಆಳಂದ ಕಡೆಯಿಂದ ದುಧನಿ ಮಾರ್ಗವಾಗಿ ಒಬ್ಬ ವ್ಯೆಕ್ತಿ ಪಿಸ್ತೂಲು ಇಟ್ಟುಕೊಂಡು ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಂಜುನಾಥ ಹೂಗಾರ ಪಿ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಫಜಲಪೂರ – ದುಧನಿ ರಸ್ತೆಗೆ ಇರುವ ಹಳ್ಯಾಳ ಕ್ರಾಸ ನಿಂತುಕೊಂಡು ದುಧನಿ ಕಡೆಯಿಂದ ಬರುವಂತಹ ಮೋಟರ ಸೈಕಲಗಳ ಮೇಲೆ ನಿಗಾ ಇಟ್ಟು, ಮೋಟರ ಸೈಕಲಗಳನ್ನು ಚೆಕ್ ಮಾಡುತ್ತಿದ್ದೇವು, ದುಧನಿ ಕಡೆಯಿಂದ ಒಂದು ಮೋಟರ ಸೈಕಲ ಮೇಲೆ ಬರುತ್ತಿದ್ದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಮೋಟರ ಸೈಕಲನ್ನು ದುಧನಿ ಕಡೆಗೆ ತಿರುಗಿಸಿ ಮೋಟರ ಸೈಕಲನ್ನು ಅತಿವೇಗವಾಗಿ ಓಡಿಸಿಕೊಂಡು ಹೊರಟನು. ಆಗ ನಮಗೆ ಸದರಿಯವನ ಮೇಲೆ ಬಲವಾದ ಸಂಶಯ ಬಂದು ನಮ್ಮ ಇಲಾಖಾ ವಾಹನದಲ್ಲಿ ಪಂಚರೊಂದಿಗೆ ಬೆನ್ನಟ್ಟಿಕೊಂಡು ಹೋಗಿ ಮುಂದೆ ದುಧನಿ ರೋಡಿಗೆ ಇರುವ ಪ್ರಗತಿ ಡಾಬಾದ ಹತ್ತಿರ ಮೋಟರ ಸೈಕಲಕ್ಕೆ ನಮ್ಮ ಇಲಾಖಾ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ಸದರಿಯವನನ್ನು ಸುತ್ತುವರೆದು ಸದರಿ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ತಂದೆ ಸದಾಶಿವ ದಣ್ಣೂರೆ ಸಾ|| ನಿರಗುಡಿ ತಾ|| ಆಳಂದ ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು ದೊರೆಯಿತು. ಸದರಿಯವನಿಗೆ ಪಿಸ್ತೂಲ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲನ್ನು ಮಾದನ ಹಿಪ್ಪರಗಾದ ಅಶೋಕ ಎಂಬುವವನ ಹತ್ತಿರ 20,000/- ರೂ ಖರಿದಿ ಮಾಡಿರುತ್ತೇನೆ. ಸದರಿ ಅಶೋಕನು ಈಗಾಗಲೆ ಮೃತಪಟ್ಟಿರುತ್ತಾನೆ. ನಾನು ಪಿಸ್ತೂಲನ್ನು ಕಡಿಮೆ ರೇಟಿಗೆ ಖರೀದಿ ಮಾಡಿ, ಹೆಚ್ಚಿನ ರೇಟಿಗೆ ಮಾರಾಟ ಮಾಡಲು ತಗೆದುಕೊಂಡಿರುತ್ತೇನೆ. ಇಂದು ಅಫಜಲಪೂರದಲ್ಲಿ ಯಾರಿಗಾದರೂ ಮಾರಾಟ ಮಾಡಬೇಕು ಎಂದು ಮೋಟರ ಸೈಕಲ ಮೇಲೆ ತಗೆದುಕೊಂಡು ಹೋಗುತ್ತಿದ್ದೇನೆ. ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಇದಕ್ಕೆ ಯಾವುದೆ ಪರನಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು. ಸದರಿ ಮೋಟರ ಸೈಕಲ ಪರಿಶೀಲಿಸಿ ನೋಡಲಾಗಿ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಇರುತ್ತದೆ. ಸದರಿ ಆರೋಪಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ಅ||ಕಿ|| 30,000/- ರೂ ನ್ನು ಹಾಗೂ ಪಿಸ್ತೂಲು ಮಾರಾಟ ಮಾಡಲು ಬಳಸಿದ ಹಿರೋ ಹೆಚ್.ಎಫ್ ಡಿಲೆಕ್ಸ ಕಂಪನಿಯ ಕೆಂಪು ಬಣ್ಣದ್ದು ಇದ್ದು ನಂ ಕೆಎ-32 ಇಕೆ-6280 ಅಕಿ-25,000/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 14-12-2018 ರಂದು ಅಯ್ಯಣ ಮುತ್ಯಾನ ಜಾತ್ರೆಗೆ ಶ್ರೀ ದೇವರಾಜ ತಂದೆ ಬಸವರಾಜ ಪೂಜಾರಿ ಸಾ|| ಮದ್ದರಕಿ ತಾ|| ಶಹಾಪುರ ರವರು ನಮ್ಮ ತಮ್ಮ ಶಿವರಾಜ ಹಾಗು ನಮ್ಮೂರ ರಾಜೇಂದ್ರ ತಂದೆ ಸಿದ್ರಾಮಪ್ಪ ಬಿಳವಾರ, ಮಹೇಶ ತಂದೆ ಶರಣಯ್ಯಾ ಸ್ಥಾವರಮಠ, ರಮೇಶ ತಂದೆ ಮಲ್ಲಪ್ಪ ನೈಕೋಡಿ ಹಿಗೆಲ್ಲರೂ ಕೂಡಿ ಖಾಸಗಿ ವಾಹನದಲ್ಲಿ ಜಮಖಂಡಿಗೆ ಬಂದಿರುತ್ತೇವೆ, ನಂತರ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ನಾನು ನಮ್ಮ ತಮ್ಮ ಶಿವರಾಜ ಹಾಗೂ ನಮ್ಮೊಂದಿಗೆ ಇದ್ದ ರಾಜೇಂದ್ರ, ಮಹೇಶ, ರಮೇಶ ಎಲ್ಲರೂ ಕೂಡಿ ಜಮಖಂಡಿಯಿಂದ ನಡೆದುಕೊಂಡು ಕೊಣ್ಣೂರ ಕ್ರಾಸ ಕಡೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದೆವು ನಮ್ಮ ತಮ್ಮ ಶಿವರಾಜ ಇವನು ನಮ್ಮಿಂದ ಸ್ವಲ್ಪ ಮುಂದೆ ಹೋಗುತ್ತಿದ್ದನು, ಆಗ ಎದುರುಗಡೆಯಿಂದ ಇಳಿಜಾರಿಗೆ ಮೂರು ಚಾಕಿನ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಚಲಾಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಪಡೆಸಿದಾಗ ನಮ್ಮ ತಮ್ಮನ ಎಡಗಲ್ಲಿಗೆ, ಎಡಮೆಲಕಿಗೆ ಮತ್ತು ತಲೆಗೆ ಭಾರಿ ಓಳಪೆಟ್ಟಾಗಿ ಅಲ್ಲಲ್ಲಿ ರಕ್ತ ಬಂದಿರುತ್ತದೆ, ಅದರಂತೆ ಎರಡು ಕಿವಿಗಳಿಂದ ಸಹ ರಕ್ತ ಸೋರುತ್ತಿತ್ತು, ನಂತರ ಅಪಘಾತ ಪಡಿಸಿದ ಟಂಟಂ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿಹೋಗಿರುತ್ತಾನೆ, ವಾಹನದ ನಂಬರ ನೋಡಿದ್ದು ಅದರ ನಂ ಕೆ.ಎ-32/ಡಿ-2583 ನೇದ್ದು ಇರುತ್ತದೆ. ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ನಾವು ತಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಬರುವಾಗ ಯಡ್ರಾಮಿ ಕೆನಾಲ ಹತ್ತಿರ 4;00 ಪಿ.ಎಂ ಕ್ಕೆ ನಮ್ಮ ತಮ್ಮ ಮೃತ ಪಟ್ಟಿರುತ್ತಾರೆ, ನಂತರ ಅವನ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಹಾಕಿರುತ್ತೇವೆ.  ಮೇಲ್ಕಂಡ ಟಂಟಂ ಗೂಡ್ಸ್ ವಾಹನ ಕೆ.ಎ-32/ಡಿ-2583 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನಿದಿಂದ ಚಲಾಯಿಸಿಕೊಂಡು ಬಂದು ನಮ್ಮ ತಮ್ಮ ಶಿವರಾಜನಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಓಡಿಹೋಗಿರುತ್ತಾನೆ, ಅಪಘಾತದಲ್ಲಿ ನಮ್ಮ ತಮ್ಮನಿಗೆ ಭಾರಿಗಾಯಗಳಾಗಿ ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

14 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-11-2018 ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಪಾರ್ವತಿ @ ಮಹಾದೇವಿ ಇವರು ಅವರು ಕೆಲಸ ಮಾಡುವ ಉದನೂರ ರೋಡ ಹತ್ತೀರ ಇರುವ ಹಾಸ್ಟೆಲನಿಂದ ಎನ್.ಈ ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2183 ನೇದ್ದರಲ್ಲಿ ಕುಳಿತು  ಬರುವಾಗ ಆರ.ಪಿ ಸರ್ಕಲ ಹತ್ತೀರ ಬರುವ ಅಯ್ಯಾಂಗಾರ ಬೇಕರಿ ಎದುರು ರೋಡ ಮೇಲೆ ಬಸ್ಸ ಚಾಲಕನು ಪ್ರಯಾಣಿಕರು ಇಳಿಯುವ ಸಂಬಂದ ಬಸ್ಸ ನಿಲ್ಲಿಸಿದಾಗ ನನ್ನ ತಾಯಿ ಬಸ್ಸಿನಿಂದ ಇಳಿಯುತ್ತಿದ್ದಾಗ ಬಸ್ಸ ಚಾಲಕ ವೀರಭದ್ರಯ್ಯಾ ಇತನು ನನ್ನ ತಾಯಿ ಬಸ್ಸಿನಿಂದ ಇಳಿಯುತ್ತೀರುವದನ್ನು ನೋಡದೆ ಮತ್ತು ಬಸ್ಸ ಕಂಡೆಕ್ಟರ್ ಸಿಟಿ ಹೊಡೆಯದೆ ಇದ್ದರು ಕೂಡಾ ಬಸ್ಸನ್ನು ಒಮ್ಮಲೆ ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ನನ್ನ ತಾಯಿಯವರಗೆ ಬಸ್ಸಿನ ಬಾಗಿಲಿನಿಂದ ಬಿಳಿಸಿ ಅಪಘಾತ ಪಡಿಸಿದ್ದು ದಿನಾಂಕ 24-12-2018 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಸಿ.ಎನ್.ಎಸ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಿಗೆ ಬರುತ್ತಿದ್ದರಿಂದ ದಿನಾಂಕ 12-12-2018 ರಂದು ನನ್ನ ತಾಯಿಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ತಾಯಿ ಪಾರ್ವತಿ @ ಮಹಾದೇವಿ ಇವಳು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 13.12.2018 ರಂದು ಸಾಯಂಕಾಲ 6-25 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಕೃಷ್ಣಾ ತಂದೆ ಸಿದ್ರಾಮಪ್ಪಾ ಹೊಸ್ಮನಿ ಸಾ: ಮಾಹಾದೇವ ನಗರ ಶಾಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-12-2018 ರಂದು  ಸೋನ್ನ  ಗ್ರಾಮದ ಭೀಮಾ ನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ/ಎಸ್/ಐ/ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿತ್ತು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್  ಜೀಪ ನೋಡಿ ತನ್ನ ಟ್ರಾಕ್ಟರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರಲಿಲ್ಲ, ಅದರ ಇಂಜಿನ ನಂ 39.1308/99A0619 ಚೆಸ್ಸಿ ನಂ 99A036700609 ಅಂತ ಇರುತ್ತದೆ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3000/- ರೂ ಆಗಬಹುದು. ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ನೀಲಕಂಠ ತಂದೆ ಶಾಂತಪ್ಪ ದೋಡಮನಿ ಸಾ: ಗೌರ (ಬಿ) ರವರು ಊರಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಇರುತ್ತದೆ. ಊರಿನ ಗುರು ಹಿರಿಯರು ಕೂಡಿಕೊಂಡು ಸದರಿ ದೇವಸ್ಥಾನದಲ್ಲಿ ದಿನಾಂಕ 03-03-2019 ರಂದು ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಂಭಂದಿಸಿದ ಪೋಸ್ಟರಗಳನ್ನು ಗ್ರಾಮದಲ್ಲಿ ಹಚ್ಚಿಲಾಗಿದ್ದು ಸುಮಾರು 3-4 ದಿನಗಳಿಂದ ನಮ್ಮೂರಿನ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಎಂಬಾತನು ಸದರಿ ಪೋಷ್ಟರಗಳನ್ನು ಹರಿದು ಹಾಕುವುದು ಹಾಗೂ ಪೋಸ್ಟರದಲ್ಲಿನ ದೇವರ ಚಿತ್ರಕ್ಕೆ ಮತ್ತು ಗಣ್ಯ ವ್ಯಕ್ತಿಗಳ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿರುತ್ತಾನೆ. ನಿನ್ನೆ ದಿನಾಂಕ 12-12-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನವರಾದ 1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಇನ್ನಿತರರೂ ಕೂಡಿಕೊಂಡು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಪ್ರಕಾಶ ದೋಡ್ಡಮನಿ ಈತನು ಗುಡಿಯಲ್ಲಿ ಹೋಗಿ ಸರಾಯಿ ಕುಡಿಯುತ್ತಾ ಕುಳಿತಿದ್ದಾದ್ದನು, ಆಗ ನಾವು ಸದರಿ ಪ್ರಕಾಶನಿಗೆ ನಾವು ಪೂಜೆ ಮಾಡುವ ಗುಡಿ ಇದು, ನೀನು ಈ ರೀತಿ ಗುಡಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಕೇಳಿದಾಗ ಬೋಸಡಿ ಮಕ್ಕಳ್ಯಾ ದೇವರ ಗುಡಿ ಇದ್ರ ನಿಮಗ ಇದ್ದರಬೇಕು ನನಗಲ್ಲ ಎಂದು ನಮಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಏನ ಮಾಡ್ಕೋತಿರಿ ಮಾಡ್ಕೊರಿ ಎಂದು ಅಲ್ಲೆ ಎದುರುಗಡೆ ಮೂತ್ರ ವಿಸರ್ಜನೆ ಮಾಡಿ ನನಗೆ ಮಗನೆ ನಿಂದೆ ಜಾಸ್ತಿ ನಡದಾದ ನನ್ನ ವಿಷಯಕ್ಕೆ ಬಂದರೆ ನಿನಗ ಜೀವ ಸಹಿತ ಬಿಡುವುದಿಲ್ಲ. ನಿನ್ನಷ್ಟಕ್ಕೆ ನೀನಿರಬೇಕು ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ.   ಸದರಿ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಸಾ|| ಗೌರ (ಬಿ) ಈತನು ನಮ್ಮ ಮತಕ್ಕೆ ಅಪಮಾನ ಮಾಡುವ ಉದ್ದೇಶದಿಂದ ನಮ್ಮ ಪವಿತ್ರ ಸ್ಥಾನವಾದ ಪೂಜಾ ಸ್ಥಳವೆಂದು ಬಾವಿಸಿ ಪೂಜೆ ಪುನಸ್ಕಾರಗಳನ್ನು ಮಾಡುವ ಶ್ರೀ ಹುಚ್ಚಲಿಂಗೇಶ್ವರ ಗುಡಿಯಲ್ಲಿ ಸರಾಯಿ ಕುಡಿದು, ಮೂತ್ರ  ವಿಸರ್ಜನೆ ಮಾಡಿ ನಮ್ಮ ಮತಕ್ಕೆ ಅಪಮಾನ ಮಾಡಿರುತ್ತಾನೆ ಹಾಗೂ ಕೇಳಲು ಹೋದ ನನಗೆ ಮತ್ತು ನನ್ನ ಜೋತೆಗೆ ಇದ್ದ1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನಗೆ ಜಿವ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.11-12-2018 ರಂದು ರಾತ್ರಿ 10-00 ಪಿ.ಎಂ.ದ ಸುಮಾರಿಗೆ ಉದನೂರದಿಂದ ನಮ್ಮ ಅಳಿಯ ಚಂದ್ರಕಾಂತ ಹಡಪದ ಇತನು ಅವರ ತಾಯಿ ಅಂದರೆ ನನ್ನ ಹೆಂಡತಿಯ ತಾಯಿ ಸುಭದ್ರಬಾಯಿ ಎಂಬುವವರು ತೀರಿಕೊಂಡಿರುತ್ತಾರೆ ಅಂತಾ ಸುದ್ದಿ ತಿಳಿಸಿದ್ದು ಇಂದು ದಿನಾಂಕ.12-12-2018 ರಂದು ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ಸಣ್ಣ ಮಗ ಶರಣು ಹಡಪದ ಕೂಡಿಕೊಂಡು ಮುಂಜಾನೆ ನಾವು ಉದನೂರಕ್ಕೆ ಬಂದಿದ್ದು ಹಾಗೂ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಹಾಗೂ ಅವನ ಹೆಂಡತಿ ಶೃತಿ ಇಬ್ಬರು ಕೂಡಾ ಉದನೂರಕ್ಕೆ ಬಂದಿದ್ದರು. ಮದ್ಯಾನ 1-45 ಪಿ.ಎಂ.ಕ್ಕೆ. ನನ್ನ ಮಗ ಮಲ್ಲು @ ಮಲ್ಲಿಕಾರ್ಜುನ ಮತ್ತು ಅವನ ಗೆಳೆಯ ಶಿವಕುಮಾರ ಪೂಜಾರಿ ಇಬ್ಬರು ಕೂಡಿಕೊಂಡು ಒಂದು ಹೀರೋ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆ.ಎ.32. ಇ.ಇ.0541 ನೆದ್ದರ ಮೇಲೆ ಕುಣಿ ನೋಡಿಕೊಂಡು ಬರಲು ಹೋಲಕ್ಕೆ  ಹೋದರು 2-00 ಗಂಟೆಯ ಸುಮಾರಿಗೆ ನಮ್ಮ ಸಂಬಂದಿ ಶಿವಕುಮಾರ ಹಡಪದ ಇತನು ನನಗೆ ಫೋನಮಾಡಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇವರಿಗೆ ಟಿಪ್ಪರ ಇಕ್ಕಿ ಹೊಡೆದಿದ್ದು ಅವರಿಗೆ ಭಾರಿ ಗಾಯವಾಗಿರುತ್ತದೆ ಅಂತಾ ತಿಳಿಸಿದನು ಆಗ ಗಾಬರಿಗೊಂಡು  ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ನನ್ನ ಸಣ್ಣ ಮಗ ಶರಣು, ನಮ್ಮ ಸಡಕ್ ಮಡಿವಾಳ ಹಡಪದ ಎಲ್ಲರೂ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇತನಿಗೆ ನೋಡಲು ಸ್ಥಳದಲ್ಲಿಯೇ ಮೃತಪಟ್ಟಿದನು. ಅವನಿಗೆ ಗದಕ್ಕೆ ರಕ್ತಗಾಯ , ಹೊಟ್ಟೆಯ ಕೆಳಭಾಗ , ಟೊಂಕದ ಮೇಲೆ ಎರಡು ತೋಡೆಗಳ ಮಲೆ  ಟಿಪ್ಪರ ಹಾಯಿದು ಹೋಗಿದ್ದರಿಂದ ಭಾರಿರಕ್ತಗಾಯವಾಗಿ ಭಾರಿ ರಕ್ತಸ್ರಾವವಾಗಿ ಟೊಂಕದ ಮೋಲೆ ಮುರಿದಂತೆ ಆಗಿರುತ್ತದೆ , ಎಡಗಾಲು ತೊಡೆಗೆ ಭಾರಿ ರಕ್ತಗಾಯವಾಗಿತ್ತು ಮತ್ತು ಆತನ ಸಂಗಡ ಇದ್ದ ಶಿವಕುಮಾರ ತಂದೆ ಲಕ್ಷ್ಮಣ ಪೂಜಾರ ಇತನಿಗೆ ಎಡಗಣ್ಣಿ ಹುಬ್ಬಿನ ಮೇಲೆ, ಮೂಗಿಗೆ ,ಎಡಗೈಗೆ ,ಎಡತೋಡೆಯ ಹತ್ತಿರ ಅಲಲ್ಲಿ ತರಚಿದ ಗಾಯಗಳಾಗಿದ್ದು, ಅಪಘಾತಪಡಿಸಿದ ಟಿಪ್ಪರ ಕೂಡಾ ಅಲ್ಲಿಯೇ ನಿಂತಿದ್ದು ನೋಡಲಾಗಿ ನಂ.ಕೆ.ಎ.32. ಬಿ.9244 ನೆದ್ದು ಇತ್ತು ಜನರು ಸೇರುವಷ್ಟರಲ್ಲಿ ಟಿಪ್ಪರ ಚಾಲಕ ಓಡಿಹೋಗಿದ್ದು ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೆವೆ, ಆಗ ಸ್ಥಳದಲ್ಲಿಯೇ ಇದ್ದ ಘಟನೆಯನ್ನು ನೋಡಿದ ಶಿವಕುಮಾರ ಹಡಪದ ಮತ್ತು ಈರಣ್ಣ ಹಡಪದ ಇವರಿಗೆ ವಿಚಾರಿಸಲು ಮಲ್ಲಿಕಾರ್ಜುನ @ ಮಲ್ಲು ಮತ್ತು ಶಿವಕುಮಾರ ಪ್ರಜಾರಿ ಇವರು ತಮ್ಮ ಮೋಟಾರ ಸೈಕಲ್ ನಂ.ಕೆ.ಎ.32ಇಇ0541 ನೆದ್ದನ್ನು ಶಿವಕುಮಾರ ನಡೆಸುತಿದ್ದು  ಮಲ್ಲಿಕಾರ್ಜುನ ಹಿಂದೆ ಕುಳಿತಿದು ರೇವಣಸಿದ್ದ ಹಡಪದ ಇವರ ಹೊಲದ  ಮುಂದೆ ಉದನೂರದಿಂದ ಹೊಲಕ್ಕೆ ಹೋಗುತ್ತಿರುವಾಗ ಅದೇ ವೇಳಗೆ ಅವರ ಎದರುಗಡೆಯಿಂದ ಮಿಣಜಗಿ ಕಡೆಯಿಗೆ ಹೋಗುವ ರಸ್ತೆ ಮೇಲೆ ಹೋಗುವಾಗ ಅದೇವೇಳಗೆ ಅವರ ಎದರುಗಡೆಯಿಂದ ಒಂದು ಟಿಪ್ಪರ ನಂ.ಕೆ.ಎ.32. ಬಿ-9244 ನೆದ್ದರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮಲ್ಲಿಕಾರ್ಜುನ @ ಮಲ್ಲು ಇತನು ಕುಳಿತು ಹೋಗುತಿದ್ದ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ ಅಂತಾ ತಿಳಿಸಿದನು. ನಂತರ ಒಂದು ಖಾಸಗಿ ಅಂಬುಲೆನಸದಲ್ಲಿ ಮಲ್ಲು @ ಮಲ್ಲಿಕಾರ್ಜುನ ಹಾಕಿಕೊಂಡು ಮತ್ತು ಶಿವಕುಮಾರನಿಗೆ ಕೂಡಿಸಿಕೊಂಡು ಬಂದು ಶಿವಕುಮಾರನಿಗೆ ಸನರೈಜ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗನಿಗೆ ಸರಕಾರಿ ಆಸ್ಪತ್ರೆಗೆ ತಂದು ದಾಖಲ ಮಾಡಿರುತ್ತೇವೆ. ಅಂತಾ ಶ್ರೀ. ಶ್ರೀಕಾಂತ  ತಂದೆ ಕಾಶೀರಾಯ ಹಡಪದ ಸಾ; ಗೊಬ್ಬರ (ಬಿ) ತಾ;ಅಫಜಲಪೂರ ಜಿ;ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಣ್ಣ ತಂದೆ ಶೇಖಪ್ಪ ನಾಟೀಕಾರ ಸಾ|| ಆಲೂರ ಗ್ರಾಮ ರವರು ತಮ್ಮೂರಿನಲ್ಲಿ ತಮ್ಮ ಸಮಾಜದ ಲಕ್ಷ್ಮೀಬಾಯಿ ಗಂಡ ಚಂದ್ರಾಮ ಹೆಡಗಿಜೋಳ ಇವರಿಗೆ ಮಕ್ಕಳು ಇಲ್ಲದ ಕಾರಣ ಮತ್ತು ಅವರು ಹೇಳಿದಂತೆ ಅವರ ಹೊಲವನ್ನು ನಮ್ಮ ಅಣ್ಣ ಹಣಮಂತ ನಾಟೀಕಾರ ಈತನು ಹರಿಜನ ಸಮಾಜದವರಿಗೆ ಮಾಡಿಸಿಕೊಟ್ಟಿದ್ದು ಇರುತ್ತದೆ. ಈ ಬಗ್ಗೆ ಲಕ್ಷ್ಮೀಬಾಯಿ ರವರ ಅಣತಮ್ಮಕಿಯವರಾದ ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ ಹಾಗು ಇತರರು ಸೇರಿಕೊಂಡು ನಮ್ಮೊಂದಿಗೆ ಹಗೇ ಸಾಧಿಸುತ್ತಾ ಬಂದಿರುತ್ತಾರೆ,  ದಿನಾಂಕ 12-12-2018 ರಂದು 7;30 ಪಿ.ಎಂ ಸುಮಾರಿಗೆ ನಾನು ನಮ್ಮ ಅಣ್ಣ ಹಣಮಂತ, ಸಿದ್ದಣ್ಣ ಹಾಗು ಪರಶುರಾಮ ತಂದೆ ಬಸವರಾಜ ಹೆರೂರ ರವರೆಲ್ಲರೂ ಕೂಡಿ ನಮ್ಮೂರ ಸಿದ್ದಲಿಂಗೇಶ್ವರ ಗುಡಿ ಹತ್ತಿರ ಲೈಟಿನ ಬೆಳಕಿನಲ್ಲಿ ಮಾತನಾಡುತ್ತಾ ನಿಂತಾದ ಅದೇ ಸಮಯಕ್ಕೆ 1] ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ, 2] ಶಿವಪ್ಪ ತಂದೆ ಚಂದ್ರಕಾಂತ ಹೆಡಗಿಜೋಳ, 3] ವಿಶ್ವನಾಥ ತಂದೆ ಶರಣಪ್ಪ ಹೆಡಗಿಜೋಳ, 4] ಹಣಮಂತ ತಂದೆ ಮಹಾಂತೇಶ ಹೆಡಗಿಜೋಳ, 5] ಭೀಮಣ್ಣ ತಂದೆ ಸಿದ್ದಣ್ಣ ಹೆಡಗಿಜೋಳ, 6] ಚಂದ್ರಕಾಂತ ತಂದೆ ಬಸಪ್ಪ ಹೆಡಗಿಜೋಳ, 7] ಮಹಾಂತೇಶ ತಂದೆ ಚಂದ್ರಕಾಂತ ಹೆಡಗಿಜೋಳ, 8] ಬಸವರಾಜ ತಂದೆ ಹಣಮಂತ ಹೆಡಗಿಜೋಳ, 9] ಯಮನೂರಪ್ಪ ತಂದೆ ಈರಣ್ಣ ಹೆಡಗಿಜೋಳ, 10] ಬಸವರಾಜ ತಂದೆ ಭೀಮರಾಯ ಹೆಡಗಿಜೋಳ, 11] ಹುಲಕಂಠ ತಂದೆ ಶಿವಶರಣಪ್ಪ ಹೆಡಗಿಜೋಳ, 12] ಶಿವರಾಯ ತಂದೆ ಶಿವಶರಣಪ್ಪ ಹೆಡಗಿಜೋಳ, 13] ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 14]  ಶಿವು ತಂದೆ ಬಸವರಾಜ ಹೆಡಗಿಜೋಳ, 15] ಸುರೇಶ ತಂದೆ ಯಮನಪ್ಪ ಹೆಡಗಿಜೋಳ, 16] ಮಲ್ಲಣ್ಣ ತಂದೆ ಯಮನಪ್ಪ ಹೆಡಗಿಜೋಳ, 17] ಬಸವರಾಜ ತಂದೆ ಶಿವರಾಯ ಹೆಡಗಿಜೋಳ, 18] ಈರಣ್ಣ ತಂದೆ ಬೀಮರಾಯ ಹೆಡಗಿಜೋಳ, 19] ಶಿವಪ್ಪ ತಂದೆ ಬಸವಂತ ಹೆಡಗಿಜೋಳ, 20] ಶಿವಪ್ಪ ತಂದೆ ಶರಣಪ್ಪ ಹೆಡಗಿಜೋಳ, 21] ರಾಜಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 22] ಸಿದ್ದಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 23] ಮಲ್ಲಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 24] ರಾಜು ತಂದೆ ಬಸವರಾಜ ಹೆಡಗಿಜೋಳ, 25] ರಾಜು ತಂದೆ ಶಿವರಾಯ ಹೆಡಗಿಜೋಳ ಸಾ|| ಎಲ್ಲರು ಆಲೂರ ಗ್ರಾಮದ ರವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ಹೋಗದಂತೆ ತಡೆದು ನಿಲ್ಲಿಸಿ ಈ ಸೂಳಿ ಮಕ್ಕಳಿಗೆ ಹೊಡೆದು ಖಲಾಸೆ ಮಾಡರೋ ಅಂತಾ ಅನ್ನುತ್ತಿದ್ದರು, ಅವರಲ್ಲಿ ಅಯ್ಯಣ್ಣ ಇವನು ಏ ಸೂಳಿ ಮಕ್ಕಳ್ಯಾ ನಮ್ಮ ಆಸ್ತಿ ಮಂದಿಗಿ ಮಾರಲಾಕ ನಿವ್ಯಾರೋ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಅಣ್ಣ ಹಣಮಂತನ ತಲೆಯ ಮೇಲೆ ಜೋರಾಗಿ ಎರಡು ಸಲ ಹೋಡೆದು ಭಾರಿ ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಹಣಮಂತ ನೆಲದಮೇಲೆ ಬಿದ್ದಾಗ ಶಿವಪ್ಪ ಮತ್ತು ವಿಶ್ವನಾಥ ರವರು ಬಡಿಗೆಗಳಿಂದ ನಮ್ಮ ಅಣ್ಣನ ಬೆನ್ನಿನ ಮೇಲೆ, ಬಲಭುಜದ ಮೇಲೆ ಮತ್ತು ಎಡಗಾಲಿಗೆ ಹಾಗು ಬಲಗೈ ಮಣಿಕಿಟ್ ಹತ್ತಿರ  ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ, ಹಣಮಂತ ತಂದೆ ಮಹಾಂತೇಶ ಮತ್ತು ಭೀಮಣ್ಣ ತಂದೆ ಸಿದ್ದಣ್ಣ ರವರು ನಮ್ಮ ಅಣ್ಣ ಸಿದ್ದಣ್ಣನಿಗೆ ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡುತ್ತಿದ್ದಾಗ ಚಂದ್ರಕಾಂತ ಈತನು ಕಲ್ಲಿನಿಂದ ಸಿದ್ದಣ್ಣನ ಬಲ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಸಿದ್ದಣ್ಣ ನೆಲಕ್ಕೆ ಬಿದ್ದಾಗ ಮಹಾಂತೇಶ ತಂದೆ ಚಂದ್ರಕಾಂತ ಈತನು ಕಲ್ಲಿನಿಂದ ಅವನ ಎದೆಯ ಮೇಲೆ ಹೊಡೆದು ಗುಪ್ತಪೆಟ್ಟು ಪಡಿಸಿರುತ್ತಾನೆ, ಬಸವರಾಜ ತಂದೆ ಹಣಮಂತ ಮತ್ತು ಯಮನೂರಪ್ಪ ತಂದೆ ಈರಣ್ಣ ರವರು ನನಗೆ ಎಳೆದಾಡಿ ನೆಲಕ್ಕೆ ಕೆಡವಿದರು, ಆಗ ಬಸವರಾಜ ತಂದೆ ಬೀಮರಾಯ ಹಾಗು ಹುಲಕಂಠ ತಂದೆ ಶಿವಶರಣಪ್ಪ ರವರು ಬಡಿಗೆಗಳಿಂದ ನನ್ನ ಮೊಳಕಾಲ ಕೆಳಗೆ, ಬಲಗೈ ಮೊಳಕೈ ಹತ್ತಿರ, ಬೆನ್ನಿನ ಮೇಲೆ ಭುಜದ ಮೇಲೆ ಹಾಗು ತಲೆಯ ಮೇಲೆ ಹೊಡೆದು ಗುಪ್ತಪೆಟ್ಟುಪಡಿಸಿರುತ್ತಾರೆ, ಆಗ ನಮ್ಮೋಂದಿಗೆ ಇದ್ದ ಪರಶುರಾಮ ಹೆರೋರ ಈತನಿಗೆ ಶಿವರಾಯ ತಂದೆ ಶಿವಶರಣಪ್ಪ, ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ರವರು ಎಳೆದಾಡಿ ನೆಲಕ್ಕೆ ಕೆಡವಿದ್ದರಿಂದ ಅವನ ಬಲ ಹಣೆಯ ಹತ್ತಿರ ಒಳೆಟ್ಟಾಗಿರುತ್ತದೆ, ನಂತರ ಇನ್ನುಳಿದವರೆಲ್ಲರು ಸೇರಿಕೊಂಡು ಇವತ್ತ ಇವರಿಗೆ ಹೊಡೆದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ನಮಗೆ ಕೈಯಿಂದ ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರು 7 ತಿಂಗಳ ಹಿಂದೆ ನಾನು ಬಾಣೆತನಕ್ಕೆ ನನ್ನ ತವರೂರಿಗೆ ಬಂದಿದ್ದು ನನಗೆ 6 ತಿಂಗಳದ ಒಂದು ಹೆಣ್ಣು ಮಗು ಇರುತ್ತದೆ. ಬಿರಾಳ ಹಿಸ್ಸಾ ಗ್ರಾಮದ ಕಾಂತಪ್ಪ ತಂದೆ ಮಲ್ಲಪ್ಪ ಬರಗುಡಿ ಈತನು ಈಗ 2-3 ತಿಂಗಳಿಂದ ನನಗೆ ನೋಡುವುದು, ನನ್ನ ಹಿಂಬಾಲಿಸುವುದು, ಹಾಗು ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಅವನಿಗೆ ನನ್ನ ಮದುವೆಯಾಗಿದೆ, ನನಗೆ ಚುಡಾಯಿಸುವುದು ಮಾಡಬೇಡಾ ಅಂತಾ ತಿಳಿಸಿ ಹೇಳಿದರು ಕೇಳದೆ ಅದೇ ರೀತಿ ನನಗೆ ಚುಡಾಯಿಸುತ್ತಾ ಬಂದಿರುತ್ತಾನೆ. ದಿನಾಂಕ 09-11-2018 ರಂದು ರಾತ್ರಿ 11;00 ಗಂಟೆಗೆ ನಾನು ಬೈಹಿರದೇಸೆ ಹೋದಾಗ ಕಾಂತಪ್ಪ ಬರಗುಡಿ ಮತ್ತು ಅವರ ಮಾವ  ಗೋಲಗೇರಿ ಗ್ರಾಮದ ಸಿದ್ದಪ್ಪ ಇವರುಗಳು ಒಮ್ಮೇಲೆ ನನ್ನ ಎದುರುಗಡೆ ಬಂದು ನನ್ನ ಬಾಯಿಗೆ ಬಟ್ಟೆ ಒತ್ತಿ ಹಿಡಿದರು, ನೀನು ಚೀರಾಡಿದರೇ ನಿನಗೆ ಖಲಾಸೆ ಮಾಡುತ್ತೇವೆ ಅಂತಾ ಅಂದು ನನಗೆ ಎತ್ತಿಕೊಂಡು ಒಂದು ಮೋಟರ ಸೈಕಲ್ ಮೇಲೆ ಮದ್ಯದಲ್ಲಿ ಕೂಡಿಸಿಕೊಂಡು ಅಲ್ಲಿಂದ ಕಾಂತಪ್ಪ ರವರ ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋದರು, ನಂತರ ಸಿದ್ದಪ್ಪ ಇವನು ಕೆಲಸಾ ಇದೇ ಅಂತ ಹೇಳಿ ಅಲ್ಲಿಂದ ಹೋದಾಗ ಕಾಂತಪ್ಪ ಇವನು ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ, ಅಂದು ರಾತ್ರಿ ಹೊಲದಲ್ಲೆ ಇದ್ದು, ಬೆಳಗಿನ ಜಾವ ಕಾಂತಪ್ಪ ಇವನು ಅಂಜಿಸಿ ಅಲ್ಲಿಂದ ನನಗೆ ಮೇನ ರೋಡಿಗೆ ಕರೆದುಕೊಂಡು ಹೋಗಿ ಬಿಜಾಪೂರಕಡೆ ಹೋಗುವ ಯಾವುದೋ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಹೋಗಿ ನಂತರ ಮಹಾರಾಷ್ಟ್ರಾದ ಬಂಡರಕವಟೆ ಹತ್ತಿರ ಇದ್ದ ತೆಲಗಾಂವ ಗ್ರಾಮದ ಸುರೇಶ ಪಾಟೀಲ ಎಂಬುವರ ಹೊಲದಲ್ಲಿರುವ ಮನೆಯಲ್ಲಿ ಇಟ್ಟನು, ಕಾಂತಪ್ಪ ಇವನು ನಿನಗ ಕಿಡ್ನ್ಯಾಪ ಮಾಡಿದ ವಿಷಯ ಯಾರಿಗಾದರು ಹೇಳಿದರೆ ಇಲ್ಲೇ ಖಲಾಸ ಮಾಡುತ್ತೇನೆ ಅಂತಾ ಅಂದಿದ್ದಕ್ಕೆ ನಾನು ಅಂಜಿ ಸುಮ್ಮನಾಗಿದ್ದೇ, ಹೊಲದ ಮಾಲಿಕ ಸುರೇಶ ಪಾಟೀಲ ರವರು ಕೇಳಿದಾಗ ಕಾಂತಪ್ಪ ಇವನು ನಾವಿಬ್ಬರು ಗಂಡ ಹೆಂಡತಿ ಇರುತ್ತೇವೆ ಅಂತಾ ಅವರಿಗೆ ಹೇಳಿರುತ್ತಾನೆ, ನಂತರ ಕಾಂತಪ್ಪ ಇವನು ನನಗೆ ದಿನಾಲು ರಾತ್ರಿವೇಳೆಯಲ್ಲಿ ಒತ್ತಾಯಪೂರ್ವಕವಾಗಿ ಪದೆ ಪದೆ ಸಂಭೋಗ ಮಾಡಿರುತ್ತಾನೆ, ನಿನ್ನೆ ರಾತ್ರಿಯು ಸಹ ಕಾಂತಪ್ಪ ಇವನು ನನಗೆ ಅಂಜಿಸಿ ಸಂಭೊಗ ಮಾಡಿರುತ್ತಾನೆ, ಇಂದು ಪೊಲೀಸನವರು ನಾವು ಇದ್ದ ಜಾಗಕ್ಕೆ ಬಂದಾಗ ಅವರಿಗೆ ನೋಡಿ ಕಾಂತಪ್ಪ ಇವನು ಅಲ್ಲಿಂದ ಓಡಿ ಹೋದನು, ನಂತರ ನನಗೆ ನಿಮ್ಮೊಂದಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ, ಕಾಂತಪ್ಪ ಮತ್ತು ಅವರ ಮಾವ ಸಿದ್ದಪ್ಪ ಸಾ|| ಗೊಲಗೇರಿ ರವರು ದಿನಾಂಕ 09-11-2018 ರಂದು 11;00 ಪಿ.ಎಂ ಕ್ಕೆ ನಮ್ಮೂರಲ್ಲಿ ನಾನು ಬೈಹಿರದೇಸೆಗೆ ಹೋದಾಗ ನನಗೆ ಅಪಹರಣಮಾಡಿಕೊಂಡು ಹೋಗಿ ಕಾಂತಪ್ಪ ಇವನು ಜೀವ ಭಯ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.