POLICE BHAVAN KALABURAGI

POLICE BHAVAN KALABURAGI

14 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-11-2018 ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಪಾರ್ವತಿ @ ಮಹಾದೇವಿ ಇವರು ಅವರು ಕೆಲಸ ಮಾಡುವ ಉದನೂರ ರೋಡ ಹತ್ತೀರ ಇರುವ ಹಾಸ್ಟೆಲನಿಂದ ಎನ್.ಈ ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2183 ನೇದ್ದರಲ್ಲಿ ಕುಳಿತು  ಬರುವಾಗ ಆರ.ಪಿ ಸರ್ಕಲ ಹತ್ತೀರ ಬರುವ ಅಯ್ಯಾಂಗಾರ ಬೇಕರಿ ಎದುರು ರೋಡ ಮೇಲೆ ಬಸ್ಸ ಚಾಲಕನು ಪ್ರಯಾಣಿಕರು ಇಳಿಯುವ ಸಂಬಂದ ಬಸ್ಸ ನಿಲ್ಲಿಸಿದಾಗ ನನ್ನ ತಾಯಿ ಬಸ್ಸಿನಿಂದ ಇಳಿಯುತ್ತಿದ್ದಾಗ ಬಸ್ಸ ಚಾಲಕ ವೀರಭದ್ರಯ್ಯಾ ಇತನು ನನ್ನ ತಾಯಿ ಬಸ್ಸಿನಿಂದ ಇಳಿಯುತ್ತೀರುವದನ್ನು ನೋಡದೆ ಮತ್ತು ಬಸ್ಸ ಕಂಡೆಕ್ಟರ್ ಸಿಟಿ ಹೊಡೆಯದೆ ಇದ್ದರು ಕೂಡಾ ಬಸ್ಸನ್ನು ಒಮ್ಮಲೆ ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ನನ್ನ ತಾಯಿಯವರಗೆ ಬಸ್ಸಿನ ಬಾಗಿಲಿನಿಂದ ಬಿಳಿಸಿ ಅಪಘಾತ ಪಡಿಸಿದ್ದು ದಿನಾಂಕ 24-12-2018 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಸಿ.ಎನ್.ಎಸ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಿಗೆ ಬರುತ್ತಿದ್ದರಿಂದ ದಿನಾಂಕ 12-12-2018 ರಂದು ನನ್ನ ತಾಯಿಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ತಾಯಿ ಪಾರ್ವತಿ @ ಮಹಾದೇವಿ ಇವಳು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 13.12.2018 ರಂದು ಸಾಯಂಕಾಲ 6-25 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಕೃಷ್ಣಾ ತಂದೆ ಸಿದ್ರಾಮಪ್ಪಾ ಹೊಸ್ಮನಿ ಸಾ: ಮಾಹಾದೇವ ನಗರ ಶಾಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-12-2018 ರಂದು  ಸೋನ್ನ  ಗ್ರಾಮದ ಭೀಮಾ ನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ/ಎಸ್/ಐ/ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿತ್ತು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್  ಜೀಪ ನೋಡಿ ತನ್ನ ಟ್ರಾಕ್ಟರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರಲಿಲ್ಲ, ಅದರ ಇಂಜಿನ ನಂ 39.1308/99A0619 ಚೆಸ್ಸಿ ನಂ 99A036700609 ಅಂತ ಇರುತ್ತದೆ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3000/- ರೂ ಆಗಬಹುದು. ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ನೀಲಕಂಠ ತಂದೆ ಶಾಂತಪ್ಪ ದೋಡಮನಿ ಸಾ: ಗೌರ (ಬಿ) ರವರು ಊರಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಇರುತ್ತದೆ. ಊರಿನ ಗುರು ಹಿರಿಯರು ಕೂಡಿಕೊಂಡು ಸದರಿ ದೇವಸ್ಥಾನದಲ್ಲಿ ದಿನಾಂಕ 03-03-2019 ರಂದು ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಂಭಂದಿಸಿದ ಪೋಸ್ಟರಗಳನ್ನು ಗ್ರಾಮದಲ್ಲಿ ಹಚ್ಚಿಲಾಗಿದ್ದು ಸುಮಾರು 3-4 ದಿನಗಳಿಂದ ನಮ್ಮೂರಿನ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಎಂಬಾತನು ಸದರಿ ಪೋಷ್ಟರಗಳನ್ನು ಹರಿದು ಹಾಕುವುದು ಹಾಗೂ ಪೋಸ್ಟರದಲ್ಲಿನ ದೇವರ ಚಿತ್ರಕ್ಕೆ ಮತ್ತು ಗಣ್ಯ ವ್ಯಕ್ತಿಗಳ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿರುತ್ತಾನೆ. ನಿನ್ನೆ ದಿನಾಂಕ 12-12-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನವರಾದ 1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಇನ್ನಿತರರೂ ಕೂಡಿಕೊಂಡು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಪ್ರಕಾಶ ದೋಡ್ಡಮನಿ ಈತನು ಗುಡಿಯಲ್ಲಿ ಹೋಗಿ ಸರಾಯಿ ಕುಡಿಯುತ್ತಾ ಕುಳಿತಿದ್ದಾದ್ದನು, ಆಗ ನಾವು ಸದರಿ ಪ್ರಕಾಶನಿಗೆ ನಾವು ಪೂಜೆ ಮಾಡುವ ಗುಡಿ ಇದು, ನೀನು ಈ ರೀತಿ ಗುಡಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಕೇಳಿದಾಗ ಬೋಸಡಿ ಮಕ್ಕಳ್ಯಾ ದೇವರ ಗುಡಿ ಇದ್ರ ನಿಮಗ ಇದ್ದರಬೇಕು ನನಗಲ್ಲ ಎಂದು ನಮಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಏನ ಮಾಡ್ಕೋತಿರಿ ಮಾಡ್ಕೊರಿ ಎಂದು ಅಲ್ಲೆ ಎದುರುಗಡೆ ಮೂತ್ರ ವಿಸರ್ಜನೆ ಮಾಡಿ ನನಗೆ ಮಗನೆ ನಿಂದೆ ಜಾಸ್ತಿ ನಡದಾದ ನನ್ನ ವಿಷಯಕ್ಕೆ ಬಂದರೆ ನಿನಗ ಜೀವ ಸಹಿತ ಬಿಡುವುದಿಲ್ಲ. ನಿನ್ನಷ್ಟಕ್ಕೆ ನೀನಿರಬೇಕು ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ.   ಸದರಿ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಸಾ|| ಗೌರ (ಬಿ) ಈತನು ನಮ್ಮ ಮತಕ್ಕೆ ಅಪಮಾನ ಮಾಡುವ ಉದ್ದೇಶದಿಂದ ನಮ್ಮ ಪವಿತ್ರ ಸ್ಥಾನವಾದ ಪೂಜಾ ಸ್ಥಳವೆಂದು ಬಾವಿಸಿ ಪೂಜೆ ಪುನಸ್ಕಾರಗಳನ್ನು ಮಾಡುವ ಶ್ರೀ ಹುಚ್ಚಲಿಂಗೇಶ್ವರ ಗುಡಿಯಲ್ಲಿ ಸರಾಯಿ ಕುಡಿದು, ಮೂತ್ರ  ವಿಸರ್ಜನೆ ಮಾಡಿ ನಮ್ಮ ಮತಕ್ಕೆ ಅಪಮಾನ ಮಾಡಿರುತ್ತಾನೆ ಹಾಗೂ ಕೇಳಲು ಹೋದ ನನಗೆ ಮತ್ತು ನನ್ನ ಜೋತೆಗೆ ಇದ್ದ1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನಗೆ ಜಿವ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.11-12-2018 ರಂದು ರಾತ್ರಿ 10-00 ಪಿ.ಎಂ.ದ ಸುಮಾರಿಗೆ ಉದನೂರದಿಂದ ನಮ್ಮ ಅಳಿಯ ಚಂದ್ರಕಾಂತ ಹಡಪದ ಇತನು ಅವರ ತಾಯಿ ಅಂದರೆ ನನ್ನ ಹೆಂಡತಿಯ ತಾಯಿ ಸುಭದ್ರಬಾಯಿ ಎಂಬುವವರು ತೀರಿಕೊಂಡಿರುತ್ತಾರೆ ಅಂತಾ ಸುದ್ದಿ ತಿಳಿಸಿದ್ದು ಇಂದು ದಿನಾಂಕ.12-12-2018 ರಂದು ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ಸಣ್ಣ ಮಗ ಶರಣು ಹಡಪದ ಕೂಡಿಕೊಂಡು ಮುಂಜಾನೆ ನಾವು ಉದನೂರಕ್ಕೆ ಬಂದಿದ್ದು ಹಾಗೂ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಹಾಗೂ ಅವನ ಹೆಂಡತಿ ಶೃತಿ ಇಬ್ಬರು ಕೂಡಾ ಉದನೂರಕ್ಕೆ ಬಂದಿದ್ದರು. ಮದ್ಯಾನ 1-45 ಪಿ.ಎಂ.ಕ್ಕೆ. ನನ್ನ ಮಗ ಮಲ್ಲು @ ಮಲ್ಲಿಕಾರ್ಜುನ ಮತ್ತು ಅವನ ಗೆಳೆಯ ಶಿವಕುಮಾರ ಪೂಜಾರಿ ಇಬ್ಬರು ಕೂಡಿಕೊಂಡು ಒಂದು ಹೀರೋ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆ.ಎ.32. ಇ.ಇ.0541 ನೆದ್ದರ ಮೇಲೆ ಕುಣಿ ನೋಡಿಕೊಂಡು ಬರಲು ಹೋಲಕ್ಕೆ  ಹೋದರು 2-00 ಗಂಟೆಯ ಸುಮಾರಿಗೆ ನಮ್ಮ ಸಂಬಂದಿ ಶಿವಕುಮಾರ ಹಡಪದ ಇತನು ನನಗೆ ಫೋನಮಾಡಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇವರಿಗೆ ಟಿಪ್ಪರ ಇಕ್ಕಿ ಹೊಡೆದಿದ್ದು ಅವರಿಗೆ ಭಾರಿ ಗಾಯವಾಗಿರುತ್ತದೆ ಅಂತಾ ತಿಳಿಸಿದನು ಆಗ ಗಾಬರಿಗೊಂಡು  ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ನನ್ನ ಸಣ್ಣ ಮಗ ಶರಣು, ನಮ್ಮ ಸಡಕ್ ಮಡಿವಾಳ ಹಡಪದ ಎಲ್ಲರೂ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇತನಿಗೆ ನೋಡಲು ಸ್ಥಳದಲ್ಲಿಯೇ ಮೃತಪಟ್ಟಿದನು. ಅವನಿಗೆ ಗದಕ್ಕೆ ರಕ್ತಗಾಯ , ಹೊಟ್ಟೆಯ ಕೆಳಭಾಗ , ಟೊಂಕದ ಮೇಲೆ ಎರಡು ತೋಡೆಗಳ ಮಲೆ  ಟಿಪ್ಪರ ಹಾಯಿದು ಹೋಗಿದ್ದರಿಂದ ಭಾರಿರಕ್ತಗಾಯವಾಗಿ ಭಾರಿ ರಕ್ತಸ್ರಾವವಾಗಿ ಟೊಂಕದ ಮೋಲೆ ಮುರಿದಂತೆ ಆಗಿರುತ್ತದೆ , ಎಡಗಾಲು ತೊಡೆಗೆ ಭಾರಿ ರಕ್ತಗಾಯವಾಗಿತ್ತು ಮತ್ತು ಆತನ ಸಂಗಡ ಇದ್ದ ಶಿವಕುಮಾರ ತಂದೆ ಲಕ್ಷ್ಮಣ ಪೂಜಾರ ಇತನಿಗೆ ಎಡಗಣ್ಣಿ ಹುಬ್ಬಿನ ಮೇಲೆ, ಮೂಗಿಗೆ ,ಎಡಗೈಗೆ ,ಎಡತೋಡೆಯ ಹತ್ತಿರ ಅಲಲ್ಲಿ ತರಚಿದ ಗಾಯಗಳಾಗಿದ್ದು, ಅಪಘಾತಪಡಿಸಿದ ಟಿಪ್ಪರ ಕೂಡಾ ಅಲ್ಲಿಯೇ ನಿಂತಿದ್ದು ನೋಡಲಾಗಿ ನಂ.ಕೆ.ಎ.32. ಬಿ.9244 ನೆದ್ದು ಇತ್ತು ಜನರು ಸೇರುವಷ್ಟರಲ್ಲಿ ಟಿಪ್ಪರ ಚಾಲಕ ಓಡಿಹೋಗಿದ್ದು ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೆವೆ, ಆಗ ಸ್ಥಳದಲ್ಲಿಯೇ ಇದ್ದ ಘಟನೆಯನ್ನು ನೋಡಿದ ಶಿವಕುಮಾರ ಹಡಪದ ಮತ್ತು ಈರಣ್ಣ ಹಡಪದ ಇವರಿಗೆ ವಿಚಾರಿಸಲು ಮಲ್ಲಿಕಾರ್ಜುನ @ ಮಲ್ಲು ಮತ್ತು ಶಿವಕುಮಾರ ಪ್ರಜಾರಿ ಇವರು ತಮ್ಮ ಮೋಟಾರ ಸೈಕಲ್ ನಂ.ಕೆ.ಎ.32ಇಇ0541 ನೆದ್ದನ್ನು ಶಿವಕುಮಾರ ನಡೆಸುತಿದ್ದು  ಮಲ್ಲಿಕಾರ್ಜುನ ಹಿಂದೆ ಕುಳಿತಿದು ರೇವಣಸಿದ್ದ ಹಡಪದ ಇವರ ಹೊಲದ  ಮುಂದೆ ಉದನೂರದಿಂದ ಹೊಲಕ್ಕೆ ಹೋಗುತ್ತಿರುವಾಗ ಅದೇ ವೇಳಗೆ ಅವರ ಎದರುಗಡೆಯಿಂದ ಮಿಣಜಗಿ ಕಡೆಯಿಗೆ ಹೋಗುವ ರಸ್ತೆ ಮೇಲೆ ಹೋಗುವಾಗ ಅದೇವೇಳಗೆ ಅವರ ಎದರುಗಡೆಯಿಂದ ಒಂದು ಟಿಪ್ಪರ ನಂ.ಕೆ.ಎ.32. ಬಿ-9244 ನೆದ್ದರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮಲ್ಲಿಕಾರ್ಜುನ @ ಮಲ್ಲು ಇತನು ಕುಳಿತು ಹೋಗುತಿದ್ದ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ ಅಂತಾ ತಿಳಿಸಿದನು. ನಂತರ ಒಂದು ಖಾಸಗಿ ಅಂಬುಲೆನಸದಲ್ಲಿ ಮಲ್ಲು @ ಮಲ್ಲಿಕಾರ್ಜುನ ಹಾಕಿಕೊಂಡು ಮತ್ತು ಶಿವಕುಮಾರನಿಗೆ ಕೂಡಿಸಿಕೊಂಡು ಬಂದು ಶಿವಕುಮಾರನಿಗೆ ಸನರೈಜ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗನಿಗೆ ಸರಕಾರಿ ಆಸ್ಪತ್ರೆಗೆ ತಂದು ದಾಖಲ ಮಾಡಿರುತ್ತೇವೆ. ಅಂತಾ ಶ್ರೀ. ಶ್ರೀಕಾಂತ  ತಂದೆ ಕಾಶೀರಾಯ ಹಡಪದ ಸಾ; ಗೊಬ್ಬರ (ಬಿ) ತಾ;ಅಫಜಲಪೂರ ಜಿ;ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಣ್ಣ ತಂದೆ ಶೇಖಪ್ಪ ನಾಟೀಕಾರ ಸಾ|| ಆಲೂರ ಗ್ರಾಮ ರವರು ತಮ್ಮೂರಿನಲ್ಲಿ ತಮ್ಮ ಸಮಾಜದ ಲಕ್ಷ್ಮೀಬಾಯಿ ಗಂಡ ಚಂದ್ರಾಮ ಹೆಡಗಿಜೋಳ ಇವರಿಗೆ ಮಕ್ಕಳು ಇಲ್ಲದ ಕಾರಣ ಮತ್ತು ಅವರು ಹೇಳಿದಂತೆ ಅವರ ಹೊಲವನ್ನು ನಮ್ಮ ಅಣ್ಣ ಹಣಮಂತ ನಾಟೀಕಾರ ಈತನು ಹರಿಜನ ಸಮಾಜದವರಿಗೆ ಮಾಡಿಸಿಕೊಟ್ಟಿದ್ದು ಇರುತ್ತದೆ. ಈ ಬಗ್ಗೆ ಲಕ್ಷ್ಮೀಬಾಯಿ ರವರ ಅಣತಮ್ಮಕಿಯವರಾದ ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ ಹಾಗು ಇತರರು ಸೇರಿಕೊಂಡು ನಮ್ಮೊಂದಿಗೆ ಹಗೇ ಸಾಧಿಸುತ್ತಾ ಬಂದಿರುತ್ತಾರೆ,  ದಿನಾಂಕ 12-12-2018 ರಂದು 7;30 ಪಿ.ಎಂ ಸುಮಾರಿಗೆ ನಾನು ನಮ್ಮ ಅಣ್ಣ ಹಣಮಂತ, ಸಿದ್ದಣ್ಣ ಹಾಗು ಪರಶುರಾಮ ತಂದೆ ಬಸವರಾಜ ಹೆರೂರ ರವರೆಲ್ಲರೂ ಕೂಡಿ ನಮ್ಮೂರ ಸಿದ್ದಲಿಂಗೇಶ್ವರ ಗುಡಿ ಹತ್ತಿರ ಲೈಟಿನ ಬೆಳಕಿನಲ್ಲಿ ಮಾತನಾಡುತ್ತಾ ನಿಂತಾದ ಅದೇ ಸಮಯಕ್ಕೆ 1] ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ, 2] ಶಿವಪ್ಪ ತಂದೆ ಚಂದ್ರಕಾಂತ ಹೆಡಗಿಜೋಳ, 3] ವಿಶ್ವನಾಥ ತಂದೆ ಶರಣಪ್ಪ ಹೆಡಗಿಜೋಳ, 4] ಹಣಮಂತ ತಂದೆ ಮಹಾಂತೇಶ ಹೆಡಗಿಜೋಳ, 5] ಭೀಮಣ್ಣ ತಂದೆ ಸಿದ್ದಣ್ಣ ಹೆಡಗಿಜೋಳ, 6] ಚಂದ್ರಕಾಂತ ತಂದೆ ಬಸಪ್ಪ ಹೆಡಗಿಜೋಳ, 7] ಮಹಾಂತೇಶ ತಂದೆ ಚಂದ್ರಕಾಂತ ಹೆಡಗಿಜೋಳ, 8] ಬಸವರಾಜ ತಂದೆ ಹಣಮಂತ ಹೆಡಗಿಜೋಳ, 9] ಯಮನೂರಪ್ಪ ತಂದೆ ಈರಣ್ಣ ಹೆಡಗಿಜೋಳ, 10] ಬಸವರಾಜ ತಂದೆ ಭೀಮರಾಯ ಹೆಡಗಿಜೋಳ, 11] ಹುಲಕಂಠ ತಂದೆ ಶಿವಶರಣಪ್ಪ ಹೆಡಗಿಜೋಳ, 12] ಶಿವರಾಯ ತಂದೆ ಶಿವಶರಣಪ್ಪ ಹೆಡಗಿಜೋಳ, 13] ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 14]  ಶಿವು ತಂದೆ ಬಸವರಾಜ ಹೆಡಗಿಜೋಳ, 15] ಸುರೇಶ ತಂದೆ ಯಮನಪ್ಪ ಹೆಡಗಿಜೋಳ, 16] ಮಲ್ಲಣ್ಣ ತಂದೆ ಯಮನಪ್ಪ ಹೆಡಗಿಜೋಳ, 17] ಬಸವರಾಜ ತಂದೆ ಶಿವರಾಯ ಹೆಡಗಿಜೋಳ, 18] ಈರಣ್ಣ ತಂದೆ ಬೀಮರಾಯ ಹೆಡಗಿಜೋಳ, 19] ಶಿವಪ್ಪ ತಂದೆ ಬಸವಂತ ಹೆಡಗಿಜೋಳ, 20] ಶಿವಪ್ಪ ತಂದೆ ಶರಣಪ್ಪ ಹೆಡಗಿಜೋಳ, 21] ರಾಜಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 22] ಸಿದ್ದಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 23] ಮಲ್ಲಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 24] ರಾಜು ತಂದೆ ಬಸವರಾಜ ಹೆಡಗಿಜೋಳ, 25] ರಾಜು ತಂದೆ ಶಿವರಾಯ ಹೆಡಗಿಜೋಳ ಸಾ|| ಎಲ್ಲರು ಆಲೂರ ಗ್ರಾಮದ ರವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ಹೋಗದಂತೆ ತಡೆದು ನಿಲ್ಲಿಸಿ ಈ ಸೂಳಿ ಮಕ್ಕಳಿಗೆ ಹೊಡೆದು ಖಲಾಸೆ ಮಾಡರೋ ಅಂತಾ ಅನ್ನುತ್ತಿದ್ದರು, ಅವರಲ್ಲಿ ಅಯ್ಯಣ್ಣ ಇವನು ಏ ಸೂಳಿ ಮಕ್ಕಳ್ಯಾ ನಮ್ಮ ಆಸ್ತಿ ಮಂದಿಗಿ ಮಾರಲಾಕ ನಿವ್ಯಾರೋ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಅಣ್ಣ ಹಣಮಂತನ ತಲೆಯ ಮೇಲೆ ಜೋರಾಗಿ ಎರಡು ಸಲ ಹೋಡೆದು ಭಾರಿ ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಹಣಮಂತ ನೆಲದಮೇಲೆ ಬಿದ್ದಾಗ ಶಿವಪ್ಪ ಮತ್ತು ವಿಶ್ವನಾಥ ರವರು ಬಡಿಗೆಗಳಿಂದ ನಮ್ಮ ಅಣ್ಣನ ಬೆನ್ನಿನ ಮೇಲೆ, ಬಲಭುಜದ ಮೇಲೆ ಮತ್ತು ಎಡಗಾಲಿಗೆ ಹಾಗು ಬಲಗೈ ಮಣಿಕಿಟ್ ಹತ್ತಿರ  ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ, ಹಣಮಂತ ತಂದೆ ಮಹಾಂತೇಶ ಮತ್ತು ಭೀಮಣ್ಣ ತಂದೆ ಸಿದ್ದಣ್ಣ ರವರು ನಮ್ಮ ಅಣ್ಣ ಸಿದ್ದಣ್ಣನಿಗೆ ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡುತ್ತಿದ್ದಾಗ ಚಂದ್ರಕಾಂತ ಈತನು ಕಲ್ಲಿನಿಂದ ಸಿದ್ದಣ್ಣನ ಬಲ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಸಿದ್ದಣ್ಣ ನೆಲಕ್ಕೆ ಬಿದ್ದಾಗ ಮಹಾಂತೇಶ ತಂದೆ ಚಂದ್ರಕಾಂತ ಈತನು ಕಲ್ಲಿನಿಂದ ಅವನ ಎದೆಯ ಮೇಲೆ ಹೊಡೆದು ಗುಪ್ತಪೆಟ್ಟು ಪಡಿಸಿರುತ್ತಾನೆ, ಬಸವರಾಜ ತಂದೆ ಹಣಮಂತ ಮತ್ತು ಯಮನೂರಪ್ಪ ತಂದೆ ಈರಣ್ಣ ರವರು ನನಗೆ ಎಳೆದಾಡಿ ನೆಲಕ್ಕೆ ಕೆಡವಿದರು, ಆಗ ಬಸವರಾಜ ತಂದೆ ಬೀಮರಾಯ ಹಾಗು ಹುಲಕಂಠ ತಂದೆ ಶಿವಶರಣಪ್ಪ ರವರು ಬಡಿಗೆಗಳಿಂದ ನನ್ನ ಮೊಳಕಾಲ ಕೆಳಗೆ, ಬಲಗೈ ಮೊಳಕೈ ಹತ್ತಿರ, ಬೆನ್ನಿನ ಮೇಲೆ ಭುಜದ ಮೇಲೆ ಹಾಗು ತಲೆಯ ಮೇಲೆ ಹೊಡೆದು ಗುಪ್ತಪೆಟ್ಟುಪಡಿಸಿರುತ್ತಾರೆ, ಆಗ ನಮ್ಮೋಂದಿಗೆ ಇದ್ದ ಪರಶುರಾಮ ಹೆರೋರ ಈತನಿಗೆ ಶಿವರಾಯ ತಂದೆ ಶಿವಶರಣಪ್ಪ, ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ರವರು ಎಳೆದಾಡಿ ನೆಲಕ್ಕೆ ಕೆಡವಿದ್ದರಿಂದ ಅವನ ಬಲ ಹಣೆಯ ಹತ್ತಿರ ಒಳೆಟ್ಟಾಗಿರುತ್ತದೆ, ನಂತರ ಇನ್ನುಳಿದವರೆಲ್ಲರು ಸೇರಿಕೊಂಡು ಇವತ್ತ ಇವರಿಗೆ ಹೊಡೆದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ನಮಗೆ ಕೈಯಿಂದ ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರು 7 ತಿಂಗಳ ಹಿಂದೆ ನಾನು ಬಾಣೆತನಕ್ಕೆ ನನ್ನ ತವರೂರಿಗೆ ಬಂದಿದ್ದು ನನಗೆ 6 ತಿಂಗಳದ ಒಂದು ಹೆಣ್ಣು ಮಗು ಇರುತ್ತದೆ. ಬಿರಾಳ ಹಿಸ್ಸಾ ಗ್ರಾಮದ ಕಾಂತಪ್ಪ ತಂದೆ ಮಲ್ಲಪ್ಪ ಬರಗುಡಿ ಈತನು ಈಗ 2-3 ತಿಂಗಳಿಂದ ನನಗೆ ನೋಡುವುದು, ನನ್ನ ಹಿಂಬಾಲಿಸುವುದು, ಹಾಗು ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಅವನಿಗೆ ನನ್ನ ಮದುವೆಯಾಗಿದೆ, ನನಗೆ ಚುಡಾಯಿಸುವುದು ಮಾಡಬೇಡಾ ಅಂತಾ ತಿಳಿಸಿ ಹೇಳಿದರು ಕೇಳದೆ ಅದೇ ರೀತಿ ನನಗೆ ಚುಡಾಯಿಸುತ್ತಾ ಬಂದಿರುತ್ತಾನೆ. ದಿನಾಂಕ 09-11-2018 ರಂದು ರಾತ್ರಿ 11;00 ಗಂಟೆಗೆ ನಾನು ಬೈಹಿರದೇಸೆ ಹೋದಾಗ ಕಾಂತಪ್ಪ ಬರಗುಡಿ ಮತ್ತು ಅವರ ಮಾವ  ಗೋಲಗೇರಿ ಗ್ರಾಮದ ಸಿದ್ದಪ್ಪ ಇವರುಗಳು ಒಮ್ಮೇಲೆ ನನ್ನ ಎದುರುಗಡೆ ಬಂದು ನನ್ನ ಬಾಯಿಗೆ ಬಟ್ಟೆ ಒತ್ತಿ ಹಿಡಿದರು, ನೀನು ಚೀರಾಡಿದರೇ ನಿನಗೆ ಖಲಾಸೆ ಮಾಡುತ್ತೇವೆ ಅಂತಾ ಅಂದು ನನಗೆ ಎತ್ತಿಕೊಂಡು ಒಂದು ಮೋಟರ ಸೈಕಲ್ ಮೇಲೆ ಮದ್ಯದಲ್ಲಿ ಕೂಡಿಸಿಕೊಂಡು ಅಲ್ಲಿಂದ ಕಾಂತಪ್ಪ ರವರ ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋದರು, ನಂತರ ಸಿದ್ದಪ್ಪ ಇವನು ಕೆಲಸಾ ಇದೇ ಅಂತ ಹೇಳಿ ಅಲ್ಲಿಂದ ಹೋದಾಗ ಕಾಂತಪ್ಪ ಇವನು ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ, ಅಂದು ರಾತ್ರಿ ಹೊಲದಲ್ಲೆ ಇದ್ದು, ಬೆಳಗಿನ ಜಾವ ಕಾಂತಪ್ಪ ಇವನು ಅಂಜಿಸಿ ಅಲ್ಲಿಂದ ನನಗೆ ಮೇನ ರೋಡಿಗೆ ಕರೆದುಕೊಂಡು ಹೋಗಿ ಬಿಜಾಪೂರಕಡೆ ಹೋಗುವ ಯಾವುದೋ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಹೋಗಿ ನಂತರ ಮಹಾರಾಷ್ಟ್ರಾದ ಬಂಡರಕವಟೆ ಹತ್ತಿರ ಇದ್ದ ತೆಲಗಾಂವ ಗ್ರಾಮದ ಸುರೇಶ ಪಾಟೀಲ ಎಂಬುವರ ಹೊಲದಲ್ಲಿರುವ ಮನೆಯಲ್ಲಿ ಇಟ್ಟನು, ಕಾಂತಪ್ಪ ಇವನು ನಿನಗ ಕಿಡ್ನ್ಯಾಪ ಮಾಡಿದ ವಿಷಯ ಯಾರಿಗಾದರು ಹೇಳಿದರೆ ಇಲ್ಲೇ ಖಲಾಸ ಮಾಡುತ್ತೇನೆ ಅಂತಾ ಅಂದಿದ್ದಕ್ಕೆ ನಾನು ಅಂಜಿ ಸುಮ್ಮನಾಗಿದ್ದೇ, ಹೊಲದ ಮಾಲಿಕ ಸುರೇಶ ಪಾಟೀಲ ರವರು ಕೇಳಿದಾಗ ಕಾಂತಪ್ಪ ಇವನು ನಾವಿಬ್ಬರು ಗಂಡ ಹೆಂಡತಿ ಇರುತ್ತೇವೆ ಅಂತಾ ಅವರಿಗೆ ಹೇಳಿರುತ್ತಾನೆ, ನಂತರ ಕಾಂತಪ್ಪ ಇವನು ನನಗೆ ದಿನಾಲು ರಾತ್ರಿವೇಳೆಯಲ್ಲಿ ಒತ್ತಾಯಪೂರ್ವಕವಾಗಿ ಪದೆ ಪದೆ ಸಂಭೋಗ ಮಾಡಿರುತ್ತಾನೆ, ನಿನ್ನೆ ರಾತ್ರಿಯು ಸಹ ಕಾಂತಪ್ಪ ಇವನು ನನಗೆ ಅಂಜಿಸಿ ಸಂಭೊಗ ಮಾಡಿರುತ್ತಾನೆ, ಇಂದು ಪೊಲೀಸನವರು ನಾವು ಇದ್ದ ಜಾಗಕ್ಕೆ ಬಂದಾಗ ಅವರಿಗೆ ನೋಡಿ ಕಾಂತಪ್ಪ ಇವನು ಅಲ್ಲಿಂದ ಓಡಿ ಹೋದನು, ನಂತರ ನನಗೆ ನಿಮ್ಮೊಂದಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ, ಕಾಂತಪ್ಪ ಮತ್ತು ಅವರ ಮಾವ ಸಿದ್ದಪ್ಪ ಸಾ|| ಗೊಲಗೇರಿ ರವರು ದಿನಾಂಕ 09-11-2018 ರಂದು 11;00 ಪಿ.ಎಂ ಕ್ಕೆ ನಮ್ಮೂರಲ್ಲಿ ನಾನು ಬೈಹಿರದೇಸೆಗೆ ಹೋದಾಗ ನನಗೆ ಅಪಹರಣಮಾಡಿಕೊಂಡು ಹೋಗಿ ಕಾಂತಪ್ಪ ಇವನು ಜೀವ ಭಯ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 December 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದತ್ತುರಾವ ತಂದೆ ಮೋತಿರಾಮ ಘೋಗರೆ ಸಾ: ಜೋಷಿಗಲ್ಲಿ ಈಶ್ವರ ನಗರ ಬಸವಕಲ್ಯಾಣ ಜೀ. ಬೀದರ ರವರ ಮಗಳು ದಿಪಾಲ್ಲಿಯ ಮದುವೆ ಶ್ರೀಕಾಂತ ರಮೇಶ ಮಾಲ್ಲದಾರ (ವಾಕೋಡೆ) ಜೋತೆ ದಿನಾಂಕ 27-12-2011 ರಂದು ಬಸವಕಲ್ಯಾಣದಲ್ಲಿ ಮಾಡಿದ್ದು  ಈ ಮದುವೆ ನಮ್ಮ ಸಮಾಜದ ರಿತ್ತಿ ರಿವಾಜ ಪಾರಂಪರಿಕ ರೀತಿಯಲ್ಲಿ ಆಯಿತ್ತು. ಇವರಿಗೆ 15 ಲಕ್ಷ (ಹದಿನೈದು ಲಕ್ಷ ರೂಪಾಯಿ) ಇವರಿಗೆ ವ್ಯವಸಾಯ ಮಾಡುವ ಸಲುವಾಗಿ ಕೊಡದು ಇತ್ತು ಆದರೆ ನಾನು ಆತನಿಗೆ ಆ ಸಂದರ್ಭದಲ್ಲಿ ಮಾತ್ರ 5 ಲಕ್ಷ ರೂಪಾಯಿ ಕೊಟ್ಟಿದೆ ಉಳಿದ 10 ಲಕ್ಷ ರುಪಾಯಿ ಆಮೇಲೆ ಕೋಡುತ್ತೇನೆ ಎಂದಿದ್ದೆ  ನನ್ನ ಪಾರಂಪರಿಕ ಅಥವಾ ನನ್ನ ಪರಿಸ್ಥಿತಿ ಗಂಭೀರವಾದರಿಂದ ಕೋಡೊಕೆ  ಆಗಿಲ್ಲ ಅದರ ಜೋತೆ ನಾನು ಇವರಿಗೆ ಮನೆಯ ವಸ್ತುಗಳು ಮತ್ತು 5 ತೋಲೆ ಬಂಗಾರ ಕೊಡದೆ ಅದರ ಜೋತೆ ಈ ಮದುವೆಯ ಎಲ್ಲಾ ಖರ್ಚನ್ನು ನಾನು ನೋಡಿಕೊಂಡಿದ್ದೇನೆ. ಮದುವೆ ಆದಾಗ ಕೇಲವು ತಿಂಗಳು ನನ್ನ ಮಗಳ ಖುಶಾಲವಾಗಿ ಇದ್ದಳು ಕೇಲವು ವರ್ಷದ ನಂತರ ನನ್ನ ಮಗಳಿಗೆ ರಜತ ಎಂಬ ಹುಡುಗ ಅದನಂತರ ರಂಜನ ಎಂಬ ಎರಡನೇಯ ಹುಡಗನಿಗೆ ಜನಸಿದಳು, ಅದನಂತರ ನನ್ನ ಅಳಿಯ ಶ್ರೀಕಾಂತ, ಅತ್ತೆ ವಂದನಾ ರಮೇಶ ಮಾಲ್ಲದಾರ , ಮಾವ ರಮೇಶ ಮಾಲ್ಲದಾರ, ಭಾವ ಶಶಿಕಾಂತ ರಮೇಶ ಮಾಲ್ಲದಾರ ಅವನ ಹೆಂಡತಿ ಸಾರಿಕಾ , ಶಶಿಕಾಂತ ಮಾಲ್ಲದಾರ, ಮೈದುನ ರಜನೀಕಾಂತ ರಮೇಶ ಮಾಲ್ಲದಾರ ಅವನ ಹೆಂಡತಿ ರಶಮಾ ರಜನಿಕಾಂತ ಮಾಲ್ಲದಾರ ಇವರು ಎಲ್ಲರೂ ಸೇರಿ ನನ್ನ ಮಗಳು ದಿಪಾಲ್ಲಿಗೆ ತನ್ನ ತವರುಲ್ಲಿಂದ ಉಳಿದ ಹತ್ತು ಲಕ್ಷ ರೂಪಾಯಿ (10 ಲಕ್ಷ ರೂಪಾಯಿ) ಮಾತಿನ ತಕ್ಕಂತೆ ತರಬೇಕು ಎಂದು ಆಕೆಯ ಮೇಲೆ ಅತ್ಯಾಚಾರವನ್ನು ನಡೆಸಿಕೊಂಡು ಮಾತು ಮಾತಿಗು ಆಕೆಯ ಅತ್ತೆ ನೇಗಣಿ , ಮೈದುನ , ಭಾವ ,ಮಾವ ಮತ್ತು ಗಂಡ ಬೈದು ಹೊಡೆದು ಊಟವನ್ನು ಕೋಡುವುದಿಲ್ಲ ಏನಾದ್ದರು ಆಯಿತು ಅಂದರೆ ದವಾಖನೇಗೆ ವಯುವುದಿಲ್ಲ ಇಂತಹ ಹಿಂಸಾಚಾರವನ್ನು ನಡೆಸುಕೊಂಡಿದ್ದರು. ಇವು ಎಲ್ಲಾ ಆಗಿರುವಂತಹ ವಿಚಾರಗಳನ್ನು ದಿಪಾಲ್ಲಿ ಯಾವಾಗ ಬಸವಕಲ್ಯಾಣಗೆ ಬಂದಾಗ ಹೇಳುತ್ತಿದಳು, ಯಾವಾಗ ನನ್ನ ದೊಡ್ಡ ಅಣ್ಣನಾದಂತಹ ಶ್ರೀ ಬಾಬುರಾವ ಮೋತಿರಾಮ ಘೋಗರೇ, ತಮ್ಮರಾದಂತಹ ಶ್ರೀ ಸಂಜುಕುಮಾರ ಮೋತಿರಾಮ ಘೋಗರೇ. ಹಾಗೂ ಇತ್ತರೆ ಸಂಭಂದಿಕರಾದತಂಹ ಶ್ರೀ ದತ್ತಾ ನಾಮದೇವರಾವ ವಾಕೋಡೆ, ಕೂಡಿ ದಿಪಾಲ್ಲಿಯ ಗಂಡನ ಮನೆಗೆ , ಹೋಗಿ ಎಲ್ಲರಿಗೆ ತಿಳಿಸಿ , ಸಮಜಾಯಿಸಿ ವಿನಂತಿಯನ್ನು ಮಾಡಿಕೊಂಡಿದ್ದೇವೆ, ಅವಾಗ ಅವಳ ಅತ್ತೆ ಗಂಡ, ಮೈದುನ ಭಾವ, ಮಾವ ಹಾಗೂ ಗಂಡ ಎಲ್ಲರು ಸೇರಿ ನನ್ನಗೆ ಪ್ರಶ್ನಿಸಿದರು ಅದು ಎನೆತಂದರೆ ತಾವು ನಮಗೆ ಕೋಟ್ಟಿರುವ ಮಾತು ತಕ್ಕಂತೆ, ಉಳಿದ ಹಣ 10 ಲಕ್ಷ ರೂಪಾಯಿ ಏಕೆ ಕೊಟ್ಟಿಲ , ಕಾರಣ ನನಗೆ ನನ್ನ ಬಾಂಡೆಯ ಅಂಗಡಿಯ ಹಾಕುವದಿದೆ, ಅವಾಗೆ ನಾನು ನಿಮ್ಮ ಮಗಳಾದ ದೀಪಾಲಿಯನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ, ಆವಾಗ ನನ್ನ ಬಿಕಟ್ಟು ಪರಿಸ್ಥಿತಿಯಂದಾಗಿ ಈ ಹಣವನ್ನು ಆಮೇಲೆ ಕೊಡುತ್ತೆನೆ ಎಂದು ವಿನಂತಿಸಿದರು ಎಂದು ಹೇಳಿ ನಾವೆಲ್ಲರೂ ನಮ್ಮ ಊರು ಬಸವಕಲ್ಯಾಣಗೆ ತೆರಳಿದ್ದು, ಮತ್ತೆ ಅವರು ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದರು, ಎಂಟು ದಿನಗಳ ಹಿಂದೆ ದಿಪಾಲ್ಲಿ ಬಸವಕಲ್ಯಾಣಕ್ಕೆ ಬಂದಿದ್ದಳು. ಆವಾಗ ನನಗೆ ಹೇಳಿದೆನೆಂದರೆ , ನನಗೆ ಸಣ್ಣ ಸಣ್ಣ ವಿಷಯದ ಮೇಲೆ ಮನೆಯ ಎಲ್ಲಾ ಸದಸ್ಯರು ನನ್ನ ಮೇಲೆ ಅತ್ಯಾಚಾರ ಮಾಡಿರುತ್ತಾರೆ, ಹಾಗೂ ನನಗೆ ಊಟ ಕೋಡುವದಿಲ್ಲಾ ಮೈ ಮೇಲೆ ಹರಿದಿರುವಂತಹ ಬಟ್ಟೆಗಳನ್ನು ಕೊಡುತ್ತಾರೆ, ಒಂದು ಕೊಠಡಿಯೊಳಗೆ ಇಡಿ ದಿನ ಇಡುತ್ತಾರೆ, ಯಾರಿಗೂ ಭೇಟಿಯನ್ನು ಮಾಡಲು ಕೊಡುವದಿಲ್ಲಾ, ದೂರವಾಣಿ ಮಗ ಮಾತಾಡುತ್ತಿರುವಾಗ ಸ್ಪೀಕರ್ ಆನ್ ಅಥವಾ (ಚಾಲು) ಮಾಡಲಿಕೆ ಒತ್ತಾಯಿಸುತ್ತಾರೆ , ಇಂತಹ ಸಿಕ್ಕಾಪಟ್ಟ ಹಿಂಶಾಚಾರವನ್ನು ನನ್ನ ಮೇಲೆ ನಡೆಸಿಕೊಂಡು ಇರುತ್ತಾರೆ. ಯಾವಾಗಲ್ಲು ನನ್ನ ಮದುವೆಯಾದಗ ಹಣವನ್ನು ಕಡಿಮೆ ಕೊಟ್ಟುವುದರಿಂದ ಇವರೆಲ್ಲರು ಮಾತು ಮಾತಿಗೆ ಬಯದು ಹೊಡೆದು ವತಾಯಿಸಿರುವದು ಮಾಡುತ್ತಾರೆ ಎಂದು ಹೇಳಿದಳು, ಆವಾಗ ನಾನು ಶ್ರೀ ದತ್ತುರಾವ ಮೋತಿರಾಮರಾವ ಘೋಗರೇ, ನನ್ನ ಹೆಂಡತಿಯ ಸೋಸೆ ಸುರೇಖಾ ಹಾಗೂ ನನ್ನ ಮಗನಾದಂತಹ ಚಿ.ಸಚೀನ ಎಲ್ಲರೂ ಕೂಡಿ ದೀಪಾಲ್ಲಿಗೆ ತಗೊಂಡಿ ಗಂಡನ ಮನೆಗೆ ತೇರಳಿ ವಿನಂತಿ ಮಾಡಿ ಸಮಜಾಯಿಸಿ ಬಿಟ್ಟು ವಾಪಸ ಬಸವಕಲ್ಯಾಣಗೆ ತೊಗಳಿದ್ದರು.  ಮೊನೆ ದಿನಾಂಕ 9-12-2018 ರಂದು ನಾನು 6-45 ಪಿ.ಎಮ್ ದೂರವಾಣಿ ಮುಖಾಂತರ ಮಾತನಾಡಿದೆನು ಅವಾಗ ಅಕಿ ಅಂದಳು ನಾನು ಇಗ ಬದುಕುವದು ಆಗುವದಿಲ್ಲಾ ಇವರೆಲ್ಲರೂ ನನ್ನ ಕೊಂದು ಹಾಕಲು ಯೋಚಿಸುತ್ತಿದ್ದಾರೆ ಮತ್ತು ಬಹಳ ಹೊಡೆದು ನೋವುವನು ಕೊಡುತ್ತಿದ್ದಾರೆ ಎಂದು ಹೇಳಿದಳು, ಅವಾಗ ನಾನು ಅಕ್ಕಿಗೆ ಸಮಜಾಯಿಸಿ ಧರ್ಯವನ್ನು ಕೊಟ್ಟೆ. ನಿನ್ನೆ ದಿನಾಂಕ 10-12-2018 ರಂದು ದಿಪಾಲ್ಲಿಯ ಮೈದುನ ಶಶಿಕಾಂತ ದೂರವಾಣಿ ನಂಬರ 7353595343 ಮುಖಾಂತರ ನನಗೆ ತ್ವರಿತ ಸೊಂತ ಊರಿಗೆ ಬರಲಿಕೆ ಹೇಳಿದನು ಮತ್ತು ನಿಮ್ಮ ಮಗಳು ನೇಣುಹಾಕಿಕೊಂಡಿದ್ದಾಳೆ ಆಗ ನಾನು ನಮ್ಮ ಊರಿನಲ್ಲಿ ಇರುವಂತಹ ಎಲ್ಲಾ ಸಂಭಂದಿಕರಿಗೆ ತೊಗಂಡು ಸೊಂತ ಊರಿಗೆ ತೇರಳಿದ್ದು ಬಂದು ನೋಡಿದರೆ ನನ್ನ ಮಗಳನ್ನು ಬೆಡ್ ಮೇಲೆ ಮನಕೊಂಡಿರುವಂತಹ ಸ್ಥಿಯಲ್ಲಿದ್ದಳು, ನೋಡಿದಾಗ ಅಕ್ಕಿಯ ಕುತ್ತಿಗೆ ಹಾಗೂ ಮೈ ಮೇಲೆ ಗಾಯ ಇದ್ದವು, ಅವಳ ಮೃತ್ಯವನ್ನು ಬಹಳ ಗಂಭೀರವಾಯಿತು. ನಿಮ್ಮಗೆ ನಾನು ವಿನಂತಿಸುವದೆನೆಂದರೆ ನನ್ನ ಮಗಳ ದಿಪಾಲ್ಲಿಯ ಕೋಲೆಯನ್ನು ಹುಂಡಾ ಸಲುವಾಗಿ ಮಾಡಿದರು. ಇದರಲ್ಲಿ ಕೈವಾಡ ಇರುವಂತಹ ವ್ಯಕ್ತಿಗಳು ಗಂಡ ಶ್ರೀಕಾಂತ ರಮೇಶ ಮಾಲದಾರ, ಮಾವ ರಮೇಶ ಮಾಲದಾರ, ಅತ್ತೆ ವಂದನಾ ರಮೇಶ ಮಾಲದಾರ, ಮೈದುನ ರಜನಿಕಾಂತ ರಮೇಶ ಮಾಲದಾರ, ಭಾವ ಶಶಿಕಾಂತ ರಮೇಶ ಮಾಲದಾರ, ನೆಗೇಣಿ ರೇಶಮಾ ರಮೇಶ ಮಾಲದಾರ, ಭಾವನ ಹೆಂಡತಿ ಸಾರಿಕಾ ಶಶಿಕಾಂತ ಮಾಲ್ಲದಾರ ಇವರೆಲ್ಲರೂ ಕೂಡಿ ನನ್ನ ಮಗಳ ದಿಪಾಲ್ಲಿಯನ್ನು ಕೋಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ದೇವಲಗಾಣಗಾಪೂರ ಠಾಣೆ : ದಿನಾಂಕ 08-12-2018 ರಂದು ರಾತ್ರಿ ಇಂಗಳಗಿ ಗ್ರಾಮದ ನಮ್ಮ ತಂಗಿಯ ಗಂಡನಾದ ಬೀರಪ್ಪ ತಂದೆ ನಿಂಗಪ್ಪ ಮೋನಟಗಿ ಎಂಬಾತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ಮತ್ತು ನಮ್ಮೂರಿನ ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ ಕೂಡಿಕೊಂಡು ನನ್ನ  ವೈಯಕ್ತಿಕ ಕೆಲಸದ ನಿಮಿತ್ಯ ರಾತ್ರಿ ಗೊಬ್ಬೂರ (ಬಿ) ಗ್ರಾಮದಲ್ಲಿದ್ದಾಗ ನಿಮ್ಮ ಅಳಿಯನಾದ ಮಾಳಪ್ಪನು ಕಲಬುರಗಿಯಿಂದ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಗೊಬ್ಬೂರ (ಬಿ) ಗ್ರಾಮಕ್ಕೆ ಬಂದಾಗ ನಾನು ಸದರಿಯವನಿಗೆ ಈ ವೇಳೆಯಲ್ಲಿ ಎಲ್ಲಿಗೆ ಹೋಗುತ್ತಿದ್ದಿಯಾ ಅಂತ ಕೇಳಿದಾಗ ಮಾಳಪ್ಪನು ನಮ್ಮ ಅಕ್ಕನ ಮನೆಯಾದ ಮೋಘನಾ ಇಟಗಾ ಗ್ರಾಮಕ್ಕೆ ಹೋಗುತ್ತಿದ್ದೇನೆ ಅಂತ ತಿಳಿಸಿದನು ನಂತರ ನಾನು ಮತ್ತು ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ ನನ್ನ ಮೋಟರ ಸೈಕಲ ಮೇಲೆ ಇಂಗಳಗಿ (ಬಿ) ಗ್ರಾಮಕ್ಕೆ ಹಾಗು ಮಾಳಪ್ಪನು ತನ್ನ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಮೋಘನಾ ಇಟಗಾ ಗ್ರಾಮಕ್ಕೆ ಹೋಗಲು ಕಲಬುರಗಿ-ಚವಡಾಪೂರ ರೋಡಿನ ಮೇಲೆ ಹೋಗುತ್ತಿದ್ದಾಗ ಮಾಳಪ್ಪನು ನಮ್ಮ ಮೋಟರ ಸೈಕಲ ಮುಂದುಗಡೆ ತನ್ನ ಮೋಟರ ಸೈಕಲ ಮೇಲೆ ಹೋಗುತ್ತಿದ್ದನು ರಾತ್ರಿ 10-30 ಗಂಟೆಯ ಸುಮಾರಿಗೆ ಗೊಬ್ಬೂರ (ಬಿ) ಗ್ರಾಮದ ಹತ್ತಿರ ರೋಡಿಗೆ ಇರುವ ಜೈಭವಾನಿ ಡಾಬಾದ ಹತ್ತಿರ ಹೋಗುತ್ತಿದ್ದಾಗ ಚವಡಾಪೂರ ಕಡೆಯಿಂದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಾಳಪ್ಪನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ಮಾಳಪ್ಪನು ಮೋಟರ ಸೈಕಲ ಸಮೇತ ರೋಡಿನ ಮೇಲೆ ಬಿದ್ದನು ಆಗ ನಾನು ಮತ್ತು ದತ್ತಪ್ಪ ಮೋನಟಗಿ ಇಬ್ಬರು ಮಾಳಪ್ಪನಿಗೆ ಹೋಗಿ ನೋಡಲಾಗಿ ಮಾಳಪ್ಪನ ತಲೆಗೆ ಭಾರೀ ರಕ್ತಗಾಯ ಮತ್ತು ಬಲಗೈಗೆ ಬಾರೀ ರಕ್ತಗಾಯಗಳಾಗಿದ್ದರಿಂದ ಮಾಳಪ್ಪನು ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ದತ್ತು ತಂದೆ ದೀಪಲು ಸಾ|| ಗೊಬ್ಬೂರವಾಡಿ ತಾಂಡಾ ಅಂತ ತಿಳಿಸಿದ್ದು ಸದರಿಯವನಿಗೆ ನೋಡಲಾಗಿ ಸದರಿಯವನ ಬಲಗಾಲಿನ ಹಿಂಬಡಿಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಒಬ್ಬರು 108 ಅಂಬುಲೆನ್ಸ ವಾಹನಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ವಾಹನ ಬಂದ ನಂತರ ಸದರಿಯವನು ಉಪಚಾರ ಕುರಿತು ಗೊಬ್ಬೂರ (ಬಿ) ಸರಕಾರಿ ದವಖಾನೆಗೆ ಹೋಗಿರುತ್ತಾನೆ ಅಂತ ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾವು ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿರುತ್ತದೆ. ನನ್ನ ಅಳಿಯನಿಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನಾದ ದತ್ತು ತಂದೆ ದೀಪಲು ಸಾ|| ಗೊಬ್ಬೂರವಾಡಿ ತಾಂಡಾ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಗುರಪ್ಪ ತಂದೆ ಲಚ್ಚಪ್ಪ ಮ್ಯಾಕೇರಿ ಸಾ|| ಮೋಘನ ಇಟಗಾ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ರಮೇಶ ತಂದೆ ಶಂಕರ ಪಾಟೀಲ ಸಾ: ಕೈಲಾಸ ನಗರ ಕಲಬುರಗಿ ರವರು ದಿನಾಂಕ: 31/10/2018 ರಂದು ರಾತ್ರಿ ಗಂಟೆಯ ಸುಮಾರಿಗೆ ನ್ನ ಹೊಂಡಾ ಸೈನ ಮೋಟಾರ ಸೈಕಲ ನಂ.ಕೆಎ.32 ಇಎಲ್‌‌.3583 ಅ.ಕಿ.48000/-ರೂ ನೇದ್ದನ್ನು ನಮ್ಮ ಮನೆಯ ಮುಂದಿನ ಕಂಪೌಂಡದಲ್ಲಿ ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದು ದಿನಾಂಕ:01/11/2018 ರಂದು ಬೆಳಗ್ಗೆ 5.00 ಗಂಟೆಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ್‌ ಇರಲಿಲ್ಲ ನಂತರ ನಾನು ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲನ್ನು ಹುಡುಕಿದ್ದು ಆದರು ಕೂಡಾ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ನನ್ನ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕು ಅಂತಾ ಅಲ್ಲಿಸಿದ ದೂರು  ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಹಣಮಂತ್ರಾಯ ಬೆನಕಟ್ಟಿ, ರವರು  ದಿನಾಂಕ 06/12/2018 ರಂದು ಬೆಳಿಗ್ಗೆ  ನಮ್ಮೂರ ಕ್ರಾಸ ಹತ್ತಿರ ನಮ್ಮ ಹೊಲಕ್ಕೆ ಹೊಗಲು ಕುಳಿತಾಗ ಅದೆ ವೇಳೆಗೆ ಸಿದ್ದಪ್ಪಾ ತಂದೆ ಮಾದಪ್ಪಾ ಮೂಲಿಮನಿ ಸಾ: ಬೆಳಮಗಿ ಈತನು ನಾನು ಕುಳಿತಲ್ಲಿ ಬಂದು ವಿನಾಕಾರಣ ನನಗೆ ಬಂದು ''ಏ ರಂಡಿ ಇಲ್ಲಿ ಯಾಕೆ ಕುಳಿತಿದ್ದಿ, ರಂಡಿ, ಭೋಸಡಿ, ಸೂಳಿ ಅಂತಾ ಬೈಯುತ್ತಿದ್ದಾಗ ನಾನು ಸುಮ್ಮನೆ ಯಾಕೆ ಬೈಯುತ್ತಿ ಅಂದ್ದಿದಕ್ಕೆ ನನಗೆ ಎದುರು ಮಾತಾಡುತ್ತಿ ಸೂಳಿ ಅಂತಾ ಬೈಯುತ್ತಾ ನನಗೆ ಅಲ್ಲೆ ಬಿದ್ದ ಕಲ್ಲಿನಿಂದ ನನ್ನ ಬಲ ತಲೆಗೆ ಹೊಡೆದು ಗುಪ್ತಗಾಯ ಮಾಡಿದ ಕಾಲಿನಿಂದ ಸೊಂಟಗೆ ಒದ್ದು ಮತ್ತು ಇನ್ನೊಂದು ಕಲ್ಲು ತಗೆದುಕೊಂಡು ಎಡಕಾಲಿನ ಹಿಮ್ಮಡಿ ಹತ್ತಿರ ಹೊಡೆದು ತೆರಚಿದ ರಕ್ತಗಾಯಪಡಿಸಿದ ನಾನು ಚಿರಾಡಿದಾಗ ರಂಡಿ ಬಾಯಿ ಮಾಡತಿ ಅಂತಾ ನನ್ನ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ಅಲ್ಲೆ ಊರಿಗೆ ಹೋಗಲು ನಿಂತಿದ್ದ ನಮ್ಮೂರಿನ ಅಪ್ಪಾರಾಯ ತಂದೆ ಮಲ್ಲಪ್ಪಾ ಬೆನಕಟ್ಟಿ ಮತ್ತು ಜಗನ್ನಾಥ ತಂದೆ ಭೀಮಶಾ ಹೊಲ್ಕರ ಇಬ್ಬರು ಸೇರಿ ನನಗೆ ಬಿಡಿಸಿಕೊಂಡಾಗ ಸೂಳಿ ಇವತ್ತು ಉಳಿದಿದ್ದಿ, ಮತ್ತೆ ಸಿಗು ನಿನಗೆ ಖಲಾಸ ಮಾಡುತ್ತಿನಿ ಅಂತಾ ಅಲ್ಲಿಂದ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.