POLICE BHAVAN KALABURAGI

POLICE BHAVAN KALABURAGI

21 October 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-10-2018 ರಂದು ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ  ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೋಡಲು ಸ್ಥಳಿಯ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಎಲ್ಲಾ 05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿಠ್ಠಲ ತಂದೆ ಮಾಳಪ್ಪ ತೇಗ್ಗಳ್ಳಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 2) ಶರಣು ತಂದೆ ಬಸಣ್ಣ ಒಡೇಯರ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 3) ರಾಜಶೇಖರ ತಂದೆ ಭೀರಪ್ಪ ರುದ್ದಡಗಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ 4) ಚೌಡಪ್ಪ ತಂದೆ ದುಂಡಪ್ಪ ಹಿಂಚಗೇರಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ  5) ಶರಣಪ್ಪ ತಂದೆ ಭಾಗಪ್ಪ ಪೂಜಾರಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರಿಂದ  ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ ನಗದು ಹಣ 1060/- ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದು, ಸದರಿವುಗಳನ್ನು ವಶಕ್ಕೆ ಪಡೆ್ಉಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 20-10-2018 ರಂದು ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಆನೂರ ಗ್ರಾಮಾದ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಅಫಜಲಪೂರದ ಡಿಗ್ರಿ ಕಾಲೇಜ ಹತ್ತಿರ  ಹೋಗುತ್ತಿದ್ದಾಗ ನಮ್ಮ ಮುಂದೆ  ಒಂದು ಟ್ರ್ಯಾಕ್ಟರ ಆನೂರ ಗ್ರಾಮದ ಕಡೆ ಹೋಗುತಿತ್ತು , ಆಗ ಸದರಿ ಟ್ರ್ಯಾಕ್ಟರನ್ನು ನಾವು ಹಿಂದಿಕ್ಕಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಕತ್ತಲಲ್ಲಿ ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra Arjun ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ  ನಂ ಕೆಎ-32 ಟಿಎ-6673 ,SL NO RJC01623 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ  ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಸಂಗಣ್ಣ @ ಸಂಗಪ್ಪ  ತಂದೆ ಸಿದ್ದಪ್ಪಾ ಪರಸ್ತೆ ಸಾ; ಪಟ್ಟಣ ತಾ;ಜಿ;ಕಲಬುರಗಿ. ಇವರು ದಿನಾಂಕ.19-10-2018 ರಂದು ವಿಜಯದಶಮಿ ಹಬ್ಬವನ್ನು ಮುಗಿಸಿಕೊಂಡು ರಾತ್ರಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದ್ದೇವು. ದಿನಾಂಕ. 20-10-2018 ರಂದು ಬೆಳಗ್ಗೆ ನನ್ನ ಮಗಳು ಜೈಶ್ರೀ ಇವಳ ಗಂಡ  ಮಲ್ಲಿಕಾರ್ಜುನ ತಂದೆ ಈರಣ್ಣಾ ಅವರಾಧಿ ಇತನು ನಮ್ಮ ಮನೆಗೆ ಬಂದು ಬಾಗಿಲ ಬಾರಿಸಿದನು ಆಗ ನಾನು ಮತ್ತು ನನ್ನ ಮಗಳು ಜೈಶ್ರೀ ಹಾಗೂ ನನ್ನ ಹೆಂಡತಿ ಶಾಂತಾಬಾಯಿ ಎಲ್ಲರೂ ಎದ್ದು ಬಾಗಿಲು ತೆರೆದಾಗ ನಮ್ಮ ಅಳಿಯ ಸದರಿ ಮಲ್ಲಿಕಾರ್ಜುನ ಇವರು ಬಂದಿದ್ದು  ನನಗೆ ಏನೋ ಸೂಳೆ ಮಗನೆ ಹೊಲಮಾರಿದ್ದಿರಿ ನನಗೆ ಆಟೋ ತೆಗೆದುಕೊಳ್ಳಲು ಹಣಕೋಡು ನಾನು ನಂತರ ಕೋಡುತ್ತೇನೆ ಅಂತಾ ಕೇಳಿದನು ಆಗ ನಾನು ನಮ್ಮ ಹತ್ತಿರ ಹಣ ಇರುವದಿಲ್ಲಾ ಅಂತಾ ಅಂದುದಕ್ಕೆ “ ರಂಡಿ ಮಕ್ಕಳೆ ಆಟೋ  ತೆಗೆದುಕೊಳ್ಳಲು ಹಣಕೋಡುವದಿಲ್ಲಾ ಸೂಳೆ ಮಗನೆ  ನಿನಗೂ ಮತ್ತು ನಿನ್ನ ಮಗಳಿಗೂ ಜೀವಂತವಾಗಿ ಇಡುವದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನನ್ನು ಅತೀಕ್ರಮವಾಗಿ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಯಲು ಬಂದಾಗ ನನ್ನ ಮಗಳು ಜೈಶ್ರೀ ಮತ್ತು ನನ್ನ ಹೆಂಡತಿ ಶಾಂತಬಾಯಿ ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಜೋರಾಗಿ ನೂಕಿಕೊಟ್ಟು ಸೂಳೆ ಮಗನೆ ನನಗೆ ಆಟೋ ತೆಗದುಕೊಳ್ಳಲು ಹಣ ಕೊಡದಿದ್ದರೆ ನೀನು ಜೀವಂತ ಇದ್ದರೆ ನನಗೆ ಏನು ಲಾಭ ಎಂದು ಬೈಯುತ್ತಾ ಮನೆಯಲ್ಲಿಯೇ ಇದ್ದ ಕುಡುಗೋಲು ತೆಗೆದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹೊಡೆಯಲು ಬಂದಾಗ ನಾನು ಕುತ್ತಿಗೆಯನ್ನು ಸ್ವಲ್ಪ  ಸರಿಸದರೂ ಕೂಡಾ ನನ್ನ ಕುತ್ತಿಗೆಯ  ಬಲಭಾಗದಲ್ಲಿ ಹೊಡೆದನು ಇದರಿಂದ ನನ್ನ ಕುತ್ತಿಗೆ ಹತ್ತಿರ ಭಾರಿ ರಕ್ತಸ್ರಾವವಾಗ ಹತ್ತಿದ್ದು ಆಗ ನಾನು ಜೋರಾಗಿ ಕೆಳೆಗೆ ಬಿದ್ದು ಚಿರಾಡುವಾಗ ನನ್ನ ಹೆಂಡತಿ ಶಾಂತಾಬಾಯಿ ಹಾಗೂ  ನನ್ನ ಮಗಳು ಜೈಶ್ರೀ ಇವರು ಬಂದು ಬಿಡಿಸಿಕೊಳ್ಳುವಷ್ಟರಲ್ಲಿ ನನ್ನ ತಮ್ಮ ನಾಗೀಂದ್ರಪ್ಪಾ ಪರಸ್ತೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು. ಆಗ ಸದರಿ ನನ್ನ ಅಳಿಯ ಮಲ್ಲಿಕಾರ್ಜುನ ಇತನು ಸೂಳೆ ಮಗನೆ ಇವತ್ತು ಉಳಿದುಕೊಂಡಿದ್ದಿಯ ಇನ್ನೊಂದು ಬಾರಿನಿನಗೆ ಜೀವಂತ ಬಿಡುವದಿಲ್ಲಾ ಅಂತಾ ಮರಣಾಂತಿಕ ಹಲ್ಲೆ ಮಾಡಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ಅಯ್ಯಮ್ಮ ಗಂಡ ದ್ಯಾವಣ್ಣಾ @ ದ್ಯಾವಪ್ಪಾ ಪೂಜಾರಿ, ಸಾ:ದಣ್ಣೂರ ರವರ  ಮನೆಯ ಬಾಜು ಅಣ್ಣತಮ್ಮಕಿಯವರಾದ ಈರಣ್ಣಾ ತಂದೆ ನಿಂಗಪ್ಪಾ ಪೂಜಾರಿ ಇವರ ಮನೆ ಇರುತ್ತದೆ. ಸದರಿ ಈರಣ್ಣಾ ಇವರ ಮನೆಯವರು ಬಟ್ಟೆ ಒಗಿದ ನೀರು ನಮ್ಮ ಮನೆಯ ಬಾಗಿಲಿಗೆ ಬರುತ್ತಿರುವುದರಿಂದ ನಾನು ಮತ್ತು ನನ್ನ ಗಂಡ ಕೂಡಿ ಈರಣ್ಣಾ ಇವರಿಗೆ ಬಟ್ಟೆ ಒಗಿಯುವ ಕಲ್ಲು ಸ್ವಲ್ಪ ದೂರದಲ್ಲಿ ಹಾಕಿ ಬಟ್ಟೆ ಒಗೆಯಿರಿ ಎಂದು ಹೇಳಿದ್ದು ಅದಕ್ಕೆ ಅವರು ನಮ್ಮೊಂದಿಗೆ ತಕರಾರು ಮಾಡಿದ್ದು ದಿನಾಂಕ:17/10/2018 ರಂದು ಸಾಯಂಕಾಲ ಈರಣ್ಣಾ ಹಾಗೂ ಅವರ ಇಬ್ಬರು ಮಕ್ಕಳಾದ ಶ್ರೀಶೈಲ್ ಮತ್ತು ಮಲ್ಲಣ್ಣಾ ರವರುಗಳು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ರಂಡಿ ಬೋಸಡಿ ಎಂದು ಅವಾಚ್ಯವಾಗಿ ಬೈಯುತ್ತಾ ಶ್ರೀಶೈಲನು ನನ್ನ ಕೂದಲು ಹಿಡಿದು ಎಳೆದಾಡುತ್ತಾ ಕೈಯಿಂದ ನನ್ನ ತಲೆಯ ಮೇಲೆ ಹೊಡೆದಿದ್ದು ಮಲ್ಲಣ್ಣ ಈತನು ಬಡಿಗೆಯಿಂದ ನನ್ನ ಹಣೆಯ ಮೆಲ್ಭಾಗಗಕ್ಕೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಮತ್ತು ಈರಣ್ಣ ಈತನು ನನಗೆ ರಂಡಿ ನಿನಗೆ ಹಡತಿನಿ ಎಂದು ಅಶ್ಲೀಲವಾಗಿ ಬೈಯುತ್ತಾ ಕೈಯಿಂದ ಹೊಡೆದು ಕಾಲಿನಿಂದ ಎಡಗಾಲ ಮೊಳಕಾಲಿಗೆ ಸೊಂಟಕ್ಕೆ ಒದ್ದದ್ದರಿಂದ ಒಳಪೆಟ್ಟಾಗಿದ್ದು ಅಸ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮ ಓಣಿಯ ಅಂಬರಾಯ ತಂದೆ ಮೈಲಾರಿ ಪೂಜಾರಿ ಹಾಗೂ ಮಂಗಲಾ ಗಂಡ ಸೈಬಣ್ಣಾ ನರಗೆ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ಅಲ್ಲದೇ ನಂತರ 3ಜನ ಸೇರಿ ನನಗೆ ರಂಡಿ ಇನ್ನಮುಂದೆ ಬಟ್ಟೆ ಹೊಗೆದ ನೀರಿನ ಬಗ್ಗೆ ಮಾತಾಡಿದರೆ ನಿನಗೆ ಖಲಾಸ  ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀಮತಿ ಸುಶೀಲಾಬಾಯಿ ಗಂಡ ತಿರುಪತಿ ಚವ್ಹಾಣ ಸಾ || ರೇವನೂರ ರವರ  ಮಗಳಾದ ಜ್ಯೋತಿ ಇವಳಿಗೆ ಹಿರಿಯ ಮಗಳಾದ ಜ್ಯೋತಿ ಇವಳು ತನ್ನ ಸಂಗಡ ಊರಿಗೆ ಕರೆದುಕೊಂಡು ಹೋದ ವಿಷಯದಲ್ಲಿ ನನ್ನುಂದಿಗೆ 1) ಬಿಲ್ಲು ತಂದೆ ರಾಮು ರಾಠೋಡ 2) ಸುನೀಲ ತಂದೆ ಬಿಲ್ಲು ರಾಠೋಡ 3) ಅಶೋಕ ತಂದೆ ಪಾಂಡು ರಾಠೋಡ 4) ಕೇಸಿಬಾಯಿ ಗಂಡ ಬಿಲ್ಲು ರಾಠೋಡ ಸಾ| ಎಲ್ಲರ ರೇವನುರ ರವರು  ಜಗಳ ತೆಗೆದು ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಮೃತ ಮರೆಪ್ಪ ತಂದೆ ಸಿದ್ದಪ್ಪ ಸಾ|| ಕೆಂಭಾವಿ ರವರು  ಊರಲ್ಲಿ ಹಾಗು ಅವರಿವರ ಕೈಯಿಂದ ಹಣ ಪಡೆದುಕೊಂಡು ಸಾಲ ಮಾಡಿದ್ದು, ಮಳೆ ಆಗದೆ ಸರಿಯಾಗಿ ಬೆಳೆ ಬಾರದೆ ಸಾಲ ಹೇಗೆ ತಿರಿಸಬೆಕು ಎಂದು ಚಿಂತಿಸುತ್ತಾ ಜೀವನದಲ್ಲಿ ಬೇಸರ ಪಟ್ಟು  ಕೆಂಬಾವಿ ಕೆನಾಲ್ ನೀರಿನಲ್ಲಿ ಮುಳುಗಿ ಆತ್ಮಹತ್ಯ ಮಾಡಿಕೊಂಡಿರುತ್ತರೆ ಅಂತಾ ಶ್ರೀಮತಿ ನಿಂಗಮ್ಮ ಗಂಡ ಮರೆಪ್ಪ ತೆರದಾಳ ಸಾ || ಕೆಂಭಾವಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 October 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಕಮಲಾಶಪೂರ ಠಾಣೆ : ಶ್ರೀಮತಿ ಬಿಕ್ಕುಬಾಯಿ ಗಂಡ ಪೋಮು ಜಾಧವ ಸಾ:ಮರಮಂಚಿ ತಾಂಡಾ ತಾ:ಜಿ:ಕಲಬುರಗಿ ರವರ ಗಂಡ ಪೋಮು ಜಾಧವ ಹಾಗೂ ನನ್ನ ಮಗ ಶಂಕರ ಜಾಧವ ಕೂಡಿ ಮೋನ್ನೆ ಪಟವಾದ ತಾಂಡಾಕ್ಕೆ ಬಂದಿದ್ದೇವು. ಇಂದು ದಿನಾಂಕ:18-10-2018 ರಂದು ಮುಂಜಾನೆ ವೇಳೆಯಲ್ಲಿ ನನ್ನ ಗಂಡ ಮರಮಂಚಿ ತಾಂಡಾದ ನಮ್ಮ ಮನೆಯಲ್ಲಿ ಇರುವ ದನಕರುಗಳಿಗೆ ಮೇವು ಹಾಕಿ ಹೆಂಡಿಕಸ ಮಾಡಿಕೊಂಡು ಬರುತ್ತೇನೆ ಅಂತಾ ನನ್ನ ಅಳಿಯ ಕಿರಣ ರಾಠೋಡ ಇವನಿಗೆ ಹೇಳಿದ್ದರಿಂದ ಕಿರಣ ರಾಠೋಡ ತನ್ನ ರಾಯಲ ಎನಫಿಲ್ಡ ಮೋ.ಸೈಕಲ ನಂ. ಎಮ.ಹೆಚ್-03 ಸಿ.ವೈ-7399 ಮೇಲೆ ನನ್ನ ಗಂಡ ಪೋಮು ಜಾಧವ ಇವರಿಗೆ ಕೂಡಿಸಿಕೊಂಡು ಹೋಗಿದ್ದನು. ಮುಂಜಾನೆ 07.00 ಗಂಟೆಯ ಸೂಮಾರಿಗೆ ಪಟವಾದ ಗ್ರಾಮದ ವೀರುಪಾಕ್ಷಿ ತಡೋಳಗಿ ಇವನು ಗಾಬರಿಯಲ್ಲಿ ಪಟವಾದ ತಾಂಡಾಕ್ಕೆ ನನ್ನ ಹತ್ತೀರ ಬಂದು ತಿಳಿಸಿದ್ದೆನಂದರೆ. ಪಟವಾದ ರೋಡಿನ ತಾಂಡಾದ ಹಳ್ಳದ ಹತ್ತಿರ ತಿರುವಿನಲ್ಲಿ ನಿನ್ನ ಗಂಡ ಮೋಟರ ಸೈಕಲ ಮೇಲಿಂದ ಬಿದ್ದು ಅಪಘಾತವಾಗಿರುತ್ತದೆ ಅಂತಾ ಹೇಳಿದ್ದು. ನಾನು ಗಾಬರಿಗೊಂಡು ಸದರಿ ವಿಷಯ ನನ್ನ ಅಣ್ಣನಾದ ಸುಭಾಷ ರಾಠೋಡ, ತಮ್ಮ ಮೋಹನ ರಾಠೋಡ ಹಾಗೂ ಮಗ ಶಂಕರ ಜಾಧವ ಇವರಿಗೆ ತಿಳಿಸಿ ನಾವೇಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲು ವೀರುಪಾಕ್ಷಿ ಇವನು ಹೇಳಿದಂತೆ ನನ್ನ ಗಂಡನಿಗೆ ಅಪಘಾತವಾದ ವಿಷಯ ನಿಜ ಇದ್ದು. ನನ್ನ ಗಂಡನಿಗೆ ನೋಡಲು ಅವರ ಮುಗಿನ ಮೇಲೆ ಭಾರಿ ರಕ್ತ ಗಾಯವಾಗಿ ಮುಗಿನಿಂದ ರಕ್ತ ಬರುತ್ತಿದ್ದು ಎಡಗಡೆ ಭುಜಕ್ಕೆ ತರಚಿದ ಗುಪ್ತಗಾಯವಾದಂತೆ ಕಂಡು ಬಂದಿದ್ದು. ಅಲ್ಲದೆ ನನ್ನ ಗಂಡನು ತನ್ನ ಎದೆಗೆ ಭಾರಿ ಒಳ ಪೆಟ್ಟು ಆಗಿದ್ದು ತ್ರಾಸ ಆಗುತ್ತಿದೆ ಅಂತಾ ಹೇಳಿದನು. ನಂತರ ಘಟನೆಯ ಬಗ್ಗೆ ನನ್ನ ಗಂಡನಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಮುಂಜಾನೆ ಕಿರಣ ರಾಠೋಡ ಇವನು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಹಳ್ಳದ ಹತ್ತೀರ ರೋಡಿನ ಮೇಲೆ ಮೋ.ಸೈಕಲ ಸ್ಕಿಡ್ಡ ಮಾಡಿ ಕೆಡವಿರುತ್ತಾನೆ ಅಂತಾ ಹೇಳಿದ್ದು. ನನ್ನ ಗಂಡ ಹೇಳಿದ ವಿಷಯ ನಿಜ ಇರುತ್ತದೆ. ನಂತರ ನಾನು ನನ್ನ ಅಣ್ಣ ಸುಭಾಷ ರಾಠೋಡ ಹಾಗೂ ಮಗ ಶಂಕರ ಜಾಧವ ಕೂಡಿ ನನ್ನ ಗಂಡನಿಗೆ ಸೊಂತ ಖಾಸಗಿ ದವಾಖಾಗೆ ಉಪಚಾರ ಕುರಿತು ಕರೆದುಕೊಂಡು ಹೋಗಿದ್ದು. ಅಲ್ಲಿ ವೈಧ್ಯರು ನನ್ನ ಗಂಡನಿಗೆ ಕಲಬುರಗಿಗೆ ಕರೆದುಕೊಂಡು ಹೋಗುವಂತೆ ಹೇಳಿದ್ದು. ಇಂದು ತಾಂಡಾದಲ್ಲಿ ಪಲ್ಲಕ್ಕಿ ಮೇರವಣಿಗೆ ಇದ್ದರಿಂದ ಮೇರವಣಿಗೆ ಮುಗಿಸಿಕೊಂಡು ಹೋಗಬೇಕು ಅಂತಾ ತಾಂಡಾದಲ್ಲಿ ಉಳಿದುಕೊಂಡಿದ್ದು. ಸಾಯಂಕಾಲದ ವೇಳೆಯಲ್ಲಿ ನನ್ನ ಗಂಡ ತನಗೆ ಬಹಾಳ ಎದೆ ನೋವುತ್ತಿದೆ ಅಂತಾ ಹೇಳಿ ಒದ್ದಾಡುತ್ತಿದ್ದರಿಂದ ನಾನು ನನ್ನ ಮಗ ಶಂಕರ ಜಾಧವ ಕೂಡಿ ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಇಂದು ಸಾಯಂಕಾಲ ಕಲಬುರಗಿ ಸರಕಾರಿ ದವಾಖಾನೆಯ ಆವರಣದಲ್ಲಿ ತಂದಾಗ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂಋ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ:18-10-2018 ರಂದು ಮದ್ಯಾಹ್ನದ ನಮ್ಮ ತಾಂಡಾದಿಂದ ಡೊಂಗರಗಾಂವ ಗ್ರಾಮಕ್ಕೆ ಹಬ್ಬ ಇದ್ದರಿಂದ ಕಿರಾಣಿ ಸಾಮಾನುಗಳು ತರಲು ಹೋಗಿದ್ದೇನು. ನಂತರ ನಾನು ಡೊಂಗರಗಾಂವನಲ್ಲಿ ಕಿರಾಣಿ ಸಾಮಾನುಗಳನ್ನು ಖರಿದಿ ಮಾಡಿದ್ದು. ಆಮೇಲೆ ಸಾಮಾನುಗಳು ಬಹಾಳ ಇದ್ದರಿಂದ ನಾನು ನನ್ನ ಮೋಮ್ಮಗ ಪವನ ಇವನಿಗೆ ಮೋಟರ ಸೈಕಲ ತೆಗೆದುಕೊಂಡು ಡೊಂಗರಗಾಂವಗೆ ಬರಲು ಹೇಳಿ ನಾನು ಸಾವುಕಾಸವಾಗಿ ನಡೆದುಕೊಂಡು ಡೊಂಗರಗಾಂವನಿಂದ ಬರುತ್ತಿದ್ದಾಗ ಕಾಳಮಂದರ್ಗಿ ಕಡೆಯಿಂದ ಒಂದು ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನ್ನ ಮುಂದಿನಿಂದ ಹೋದನು. ಇಂದು ಸಾಯಂಕಾಲ ಡೊಂಗರಗಾಂವನ ರೇವಣಸಿದ್ದಪ್ಪ ಹಿರೇಗೌಡ ಇವರ ಹೋಲದ ಹತ್ತೀರ ನನ್ನ ತಮ್ಮನ ಮಗ ಬಬ್ಲು ಇವನ ಹಿರೊಹೊಂಡಾ ಮೋ.ಸೈಕಲ ನಂ-ಕೆಎ-25 ಇ.ಡಬ್ಲು-0505 ನೇದ್ದು ರೋಡಿನ ಮೇಲೆ ಬಿದ್ದಿದ್ದು. ಅದನ್ನು ನೋಡಿ ನಾನು ಗಾಬರಿಗೊಂಡು ಸಮೀಪ ಹೋಗಿ ನೋಡಲು ರೋಡಿನ ಕೆಳಗಡೆ ನನ್ನ ಮೋಮ್ಮಗ ಪವನ ಜಾಧವ ಇವನು ಬಿದ್ದಿದ್ದು. ಅವನ ಹತ್ತೀರ ಹೋಗಿ ನೋಡಲು ಪವನ ಇವನ ಬಲಗಡೆ ಮಗ್ಗಲಿಗೆ ತರಚಿದ ರಕ್ತಗಾಯವಾಗಿದ್ದು. ಅಲ್ಲದೆ ಅವನ ಬಲಗಡೆ ಮೇಲಕಿನ ಮೇಲ್ಭಾಗದಲ್ಲಿ ಭಾರಿ ರಕ್ತಗಾಯವಾಗಿ ಕಿವಿಗಳು ಮತ್ತು ಮುಗಿನಿಂದ ರಕ್ತ ಬಂದು ಸತ್ತಿದ್ದನು. ಆಗ ನಾನು ಗಾಬರಿಗೊಂಡು ಪವನ ಸತ್ತಿರುವ ಸುದ್ದಿ ನಮ್ಮ ತಾಂಡಾದ ಉಮೇಶ ರಾಠೋಡ ಇವನ ಮೂಲಕ ನನ್ನ ಹೆಂಡತಿ ಮಿಠಾಬಾಯಿ ಮತ್ತು ಸಂಜು ರಾಠೋಡ ಮತ್ತು ಏಮನಾಥ ಜಾಧವ ಇವರಿಗೆ ತಿಳಿಸಿದ್ದು ಸ್ವಲ್ಪ ಹೋತ್ತಿನಲ್ಲಿ ಅವರೆಲ್ಲರೂ ಘಟನಾ ಸ್ಥಳಕ್ಕೆ ಬಂದಿರುತಾರೆ. ನನ್ನ ಮೋಮ್ಮಗ ಪವನ ಜಾಧವ ಇವನಿಗೆ ನಾನು ಡೊಂಗರಗಾಂವ ಗ್ರಾಮದಿಂದ ನಡೆದುಕೊಂಡು ಬರುವಾಗ ನನ್ನ ಎದರುನಿಂದ ಬಂದ ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಸಾಯಂಕಾಲ 04.25 ಗಂಟೆಯ ಸೂಮಾರಿಗೆ ನನ್ನ ಮೋಮ್ಮಗನು ನಡೆಸಿಕೊಂಡು ಬರುತ್ತಿದ್ದ ಮೇಲೆ ಹೇಳಿದ ಮೋಟರ ಸೈಕಲಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ಪವನ ಇವನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಸೋಮ್ಲಾ ತಂದೆ ಬಿಕ್ಕು ಜಾಧವ ಮು:ಕಾಳಮಂದರ್ಗಿ  ಗುತ್ತಿ ತಾಂಡಾ ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪ್ರತೀಮಾ ಗಂಡ ರಾಜಶೇಖರ ಗೂಡುರ  ಸಾ: ದೇವನ  ತೆಗನೂರ ತಾ: ಚಿತ್ತಾಪೂರ ಹಾ.ವ. ಪಿಡಬ್ಲೂಡಿ  ಕ್ವಾಟರ್ಸ ಹಳೆ ಜೇವರಗಿ  ರೋಡ ಕಲಬುರಗಿ ರವರ ಗಂಡ  ದಿನಾಂಕ 17.10.2018 ರಂದು ರಾತ್ರಿ ತನ್ನ ಮೋ/ಸೈಕಲ್ ನಂ: ಕೆಎ-32/ಇಎಮ್-1639 ನೇದ್ದನ್ನು ರಾಜಾಪೂರ ಕಡೆಯಿಂದ ಆರಟಿಓ ಕ್ರಾಸ ರೋಡ ಕಡೆಗೆ ಹೋಗುವ ಕುರಿತು ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಅಪ್ಪಾ ವೀಲ್ಸ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಸ್ಕಿಡ್ ಮಾಡಿ ಅಪಘಾತ ಹೊಂದಿ ತನ್ಜಿಂದ ತಾನೆ ಬಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಗಡೆ ಕಿವಿಯಿಂದ ರಕ್ತ ಬಂದು ಬಲಗೈ ಮುಂಗೈ ಹತ್ತೀರ ತರಚಿದಗಾಯವಾಗಿ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಉಪಚಾರ ಕುರಿತು ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಾಹಾಗಾಂವ ಠಾಣೆ : ದಿನಾಂಕ 16/10/2018 ರಂದು ಬೆಳಗ್ಗೆ ನನ್ನ ಮಗ ರಾಯಪ್ಪ ಈತನು ನಾನು ಮಹಾಗಾಂವ ಕ್ರಾಸಿಗೆ ಹೊಗಿ ಕಾಯಿಪಲ್ಲೆ ತರುತ್ತೇನೆ ಅಂತ ಮನೆಯಲ್ಲಿ ನನಗೆ ನನ್ನ ಹೆಂಡತಿಗೆ ಹೇಳಿ ಹೊಗಿದ್ದು ಸುಮಾರು 08.15 ಎ.ಎಂ ಗಂಟೆಗೆ ನಮ್ಮ ತಮ್ಮನ ಮಗ ರವಿ ತೊಂಡಕಲ್ ಈತನು ಫೊನ ಮಾಡಿ ನಮಗೆ ವಿಷಯ ತಿಳಿಸಿದೆನಂದರೆ, ನಾನು ನಮ್ಮ ಗ್ರಾಮದ ಬಸ್ಟಾಂಡ ಹತ್ತಿರ ಕಲಬುರಗಿಗೆ ಹೊಗುವ ಸಲುವಾಗಿ ನನ್ನ ಮೊಟಾರ ಸೈಕಲ್ ತೆಗೆದುಕೊಂಡು ನಿಂತಿದ್ದು ಅಷ್ಟಕ್ಕೆ ನಿಮ್ಮ ಮಗ ರಾಯಪ್ಪ ಮತ್ತು ನಮ್ಮೂರಿನ ಕೃಷ್ಣಪ್ಪ ಜಮಾದಾರ ಇಬ್ಬರು ನಿಮ್ಮ ಮಗನ ಮೊಟಾರ ಸೈಕಲ್ ನಂ ಕೆ.ಎ-32 ಇಸಿ-6934 ನೇದ್ದು ತೆಗೆದುಕೊಂಡು ಬಂದಿದ್ದು ಸದರ ಮೊಟಾರ ಸೈಕಲ್ ಕೃಷ್ಣಪ್ಪ ಇತನು ಚಲಾಯಿಸುತ್ತಿದ್ದು ನಾವು ಮಹಾಗಾಂವ ಕ್ರಾಸಿಗೆ ಹೊಗಿ ಕಾಯಿಪಲ್ಲೆ ತೆಗೆದುಕೊಂಡು ಬರುತ್ತೇವೆ ಅಂತ ಮುಂದೆ ಹೊದರು ನಂತರ ನಾವು ಅವರ ಹಿಂದೆ ಹೊಗುತ್ತಿದ್ದಾಗ ಮುಂದೆ ಹೊಗುತ್ತಿದ್ದ ರಾಯಪ್ಪನ ಮೊಟಾರ ಸೈಕಲ್ ಕೃಷ್ಣಪ್ಪ ಈತನು ಅತೀ ವೇಗ ಮತ್ತು ಅಲಕ್ಷತನದಿಂದ ಅಡಾತಿಡ್ಡಿಯಾಗಿ ಹೊಗುತ್ತಿದ್ದು ಬಬಲಾದ ಐ.ಕೆ ಗ್ರಾಮದಿಂದ ಸಿರಗಾಪೂರ ಗ್ರಾಮಕ್ಕೆ ಹೊಗುವ ರಸ್ತೆ ಮಧ್ಯ ರಮೇಶ ಎ.ಇಇ ಇವರ ಹೊಲದ ಹತ್ತಿರ ನನ್ನ ಮುಂದೆ ಇದ್ದ ಕೃಷ್ಣಪ್ಪ ಈತನು ನಡೆಸುತ್ತಿರುವ ಮೊಟಾರ ಸೈಕಲ್ ಒಮ್ಮೆಲೆ ಕಟ್ ಹೊಡೆದ ಪ್ರಯುಕ್ತ ಮೊಟಾರ ಸೈಕಲ್ ಸ್ಲಿಪ್ ಆಗಿ ಆ ಮೊಟಾರ ಸೈಕಲ್ ಮೇಲೆ ಹೊಗುತ್ತಿದ್ದ ಇಬ್ಬರು ರೋಡಿನ ಮೇಲೆ ಬಿದ್ದಿದ್ದು ನಾನು ಹೊಗಿ ಅವರಿಗೆ ಎಬ್ಬಿಸಿ ನೊಡುತ್ತಿದ್ದಂತೆ ರಾಯಪ್ಪನ ಮುಖಕ್ಕೆ ಬಾಯಿಗೆ, ತಲೆಗೆ, ಮತ್ತು ಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು. ಕೃಷ್ಣಪ್ಪನಿಗೆ ನೊಡಲಾಗಿ ಆತನ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಅಲಲ್ಲಿ ತರಚಿದ ಗಾಯವಾಗಿರುತ್ತವೆ.  ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ನಿವು ಬೇಗನೆ ಬರಿ ಈ ವಿಷಯ ಕೃಷ್ಣಪ್ಪ ಈತನ ಮನೆಯವರಿಗೆ ತಿಳಿಸುತ್ತೇನೆ ಅಂತ ಹೇಳಿದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಸ್ಥಳಕ್ಕೆ ಹೊಗುತ್ತಿದಂತೆ ವಿಷಯ ಹೊತ್ತಾಗಿ ಕೃಷ್ಣಪ್ಪನ ಹೆಂಡತಿ ಸುರೇಖಾ ಜಮದಾರ ಮತ್ತು ಶಿವಪುತ್ರ ಜಮಾದಾರ ಇಬ್ಬರು ಕೂಡಿ ಬಂದಿದ್ದು ಎಲ್ಲರು ಕೂಡಿ ಅಂಬುಲೈನ್ಸ ನಲ್ಲಿ ಹಾಕಿಕೊಂಡು ಈ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ಇಬ್ಬರು ಮಾತನಾಡುತ್ತಿಲ್ಲಾ. ಕಾರಣ ದಿನಾಂಕ 16/10/2018 ರಂದು 08.00 ಎ.ಎಂ.ಕ್ಕೆ  ರಮೇಶ ಎ.ಇಇ ಇವರ ಹೊಲದ ಹತ್ತಿರ ನನ್ನ ಮಗನ ಮೊಟಾರ ಸೈಕಲ್ ಕೆ.ಎ-32 ಇಸಿ-6934 ನೇದ್ದು ಕೃಷ್ಣಪ್ಪ ಈತನು ಅತೀಬೇಗ ಮತ್ತು ಅಲಕ್ಷತನದಿಂದ ನಡೆಸಿ ಕಟ್ ಹೊಡೆಯಲು ಹೊಗಿ ಸ್ಲಿಪ್ ಆಗಿ ರೋಡಿನ ಮೇಲೆ ಬಿದ್ದಿದ್ದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ತಾನು ಭಾರಿಗಾಯ ಹೊಂದಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 18-10-2018 ರಂದು  ಶಿವಪೂರ ಗ್ರಾಮದ ಭೀಮಾನದಿಯಲ್ಲಿ ಲಾರಿಗಳಲ್ಲಿ   ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಅಫಜಲಪೂರಘತ್ತರಗಾ ರೋಡಿಗೆ ಇರುವ ಬನ್ನೇಟ್ಟಿ ಕ್ರಾಸ ಹೋಗುತ್ತಿದ್ದಾಗ ಶಿವಪೂರ ಕಡೆಯಿಂದ  ಎರಡು ಲಾರಿಗಳು ಬರುತ್ತಿದ್ದು ಸದರಿ ಲಾರಿಗಳನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ ಲಾರಿ ಚಾಲಕರು ಲಾರಿಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಲಾರಿಗಳನ್ನು ಚೆಕ್ ಮಾಡಲಾಗಿ, ಲಾರಿಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಅಶೋಕ ಲೈಲೆಂಡ ಕಂಪನಿಯ ಲಾರಿ ನಂ ಕೆಎ-25 ಡಿ-4169 ಲಾರಿ ಅಕಿ-10,000,00/- ರೂ ಅದರಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 10,000/- ರೂ 2) ಅಶೋಕ ಲೈಲೆಂಡ ಕಂಪನಿಯ ಲಾರಿ ನಂ ಕೆಎ-25 ಡಿ-4163 ಲಾರಿ ಅಕಿ-10,000,00/- ರೂ ಅದರಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 10,000/- ರೂ. ನಂತರ ಸದರಿ ಮರಳು ತುಂಬಿದ ಲಾರಿಗಳನ್ನು ಪಂಚರ ಸಮಕ್ಷಮ ಜಪ್ತಿ  ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀಮಾಶಂಕರ ತಂದೆ ಸಾಯಿಬಣ್ಣ ಹೊನ್ನಕೇರಿ ಸಾ||ಕರಜಕಗಿ ರವರದು ಕರಜಗಿ ಗ್ರಾಮದ ಬಸ್ಯ್ಟಾಂಡ ಹತ್ತಿರ ಗಂಗೋತ್ರಿ ಹೆಸರಿನ ನಮ್ಮ ಹೊಟೇಲ ಇರುತ್ತದೆ. ಕೆಲಸಗಾರರು ಇಲ್ಲದಿರುವುದರಿಂದ ನಮ್ಮ ಹೋಟೆಲ ಈಗ ಒಂದು ತಿಂಗಳಿಂದ ಬಂದ ಇರುತ್ತದೆ ನಮ್ಮ ಹೊಟೇಲದಲ್ಲಿ ಹೋಟೆಲ ಬಳಕೆ ಸಾಮಾನುಗಳು ಇರುತ್ತವೆ. ನಾನು ದಿನಾಲು ರಾತ್ರಿ ನಮ್ಮ ಹೊಟೇಲ ಮೇಲಿನ ಕೋಣೆಯಲ್ಲಿ ಮಲಗುತ್ತೇನೆ. ದಿನಾಂಕ 15/10/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಊಟ ಮಾಡಿ ನಮ್ಮ ಹೋಟೆಲ ಸೆಟರಗಳ ಚಾವಿ ಹಾಕಿದ ಬಗ್ಗೆ ಚಕ್ ಮಾಡಿ ನಾನು ಹಾಗು ನಮ್ಮ ಗ್ರಾಮದ ಶರಣಪ್ಪ ತಂದೆ ಪುಂಡಾ ನಾಯ್ಕೊಡಿ ಇಬ್ಬರು ಹೊಟೇಲ ಮೇಲಿನ ರೂಮುನಲ್ಲಿ ಮಲಗಿರುತ್ತೇವೆ. ದಿನಾಂಕ 16/10/2018 ರಂದು ಬೆಳಿಗ್ಗೆ 5.00 ಗಂಟೆ ಸುಮಾರಿಗೆ ನಾನು ಹಾಗು ಶರಣಪ್ಪ ಇಬ್ಬರು ಎದ್ದು ಕೆಳಗೆ ಬಂದಾಗ ನಮ್ಮ ಹೊಟೇಲ ಸೆಟರ ಬೆಂಡ್ ಆಗಿ ಅರ್ಧಾ ತೆರೆದಿತ್ತು ನಾವು ಒಳಗೆ ಹೋಗಿ ನೋಡಲಾಗಿ ನಮ್ಮ ಹೋಟೆಲದಲಿದ್ದ ಎಲ್ ಜಿ ಕಂಪನಿ ಎಲ್ ಇ ಡಿ ಟಿ ವ್ಹಿ  ಅಂದಾಜ 16,500/-ರೂಪಾಯಿ ಕಿಮ್ಮತ್ತಿದ್ದು, ಕುಕ್ಕರ & ಮಿಕ್ಸರ ಅಂದಾಜ 6000/-ರೂಪಾಯಿ ಕಿಮ್ಮತ್ತಿದ್ದು, ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಹಾಸಮ ಅಲಿ ತಂದೆ ಮಸ್ತಾನಸಾಬ ದರ್ಜಿ ಸಾ: ಮಹಾಗಾಂವ ಕ್ರಾಸ ಇವರು ಈಗ 10-11 ವರ್ಷಗಳಿಂದ ಟೇಲರಿಂಗ ಕೆಲಸ ಮಾಡಿಕೊಂಡು ಇರುತ್ತನೇ. ಅದಕ್ಕಾಗಿ ಮಹಾಗಾಂವ ಕ್ರಾಸನಲ್ಲಿ ಹೆಚ್.ಎಂ ಟೇಲರ ಅಂತಾ ಹೆಸರು ಇಟ್ಟುಕೊಂಡು ಗಂಡಸರ ಬಟ್ಟೆ ಹೊಲೆಯುವ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ:13/10/2018 ರಂದು ಎಂದಿನಂತೆ ಬೆಳಿಗ್ಗೆ 6-00 ಗಂಟೆಗೆ ಅಂಗಡಿ ಬಾಗಿಲ ತೆರೆದು ಒಳಗೆ ಹೋಗಿ ನೋಡಲಾಗಿ, ಮೇಲ್ಗಡೆಯಿಂದ ಬೆಳಕು ಕಂಡಿತು ಮೇಲೆ ನೋಡಲಾಗಿ ಫತ್ರಾವನ್ನು ಯಾರೋ ಕಿಡಿಗೇಡಿಗಳು ಯಾವುದೋ ಉದ್ದೇಶದಿಂದ ಸುಮಾರು 2 ಫೀಟ್ ವರೆಗೆ ಓಪನ್ ಮಾಡಿರುತ್ತಾರೆ. ಒಳಗಡೆ ಎನಾದರು ಸಾಮಾನು ಹೋಗಿದ್ದಾವೆ ಅಂತಾ ನೋಡಲು 2 ಜೊತೆ ಬಟ್ಟಿ ಬ್ಯಾಗ ತೆಗೆದುಕೊಂಡು ಹೋಗಿರುತ್ತಾರೆ. ಅದರಿಂದ ನನ್ನ ಹೆಚ್.ಎಂ ಟೇಲರ ಅಂಗಡಿಯ ಮೇಲಿನ ಫತ್ರಾ ದಿನಾಂಕ: 12/10/2018 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 13/10/2018 ರ ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ 1200-00 ರೂ. ಬೆಲೆ ಬಾಳುವ ಬಟ್ಟೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 16/10/2018 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ನಮ್ಮೂರಿನ ಕ್ರಾಸ ಹತ್ತಿರ ನಮ್ಮ ಹರಿಜನರ ಜನಾಂಗದವರು ನನ್ನ ಗಂಡನಿಗೆ ಹೊಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನನ್ನ ಗಂಡ ಹಾಗೂ ನಮ್ಮ ಸಂಬಂಧಿಕರಾದ ಬಸಪ್ಪ ತಂದೆ ಈರಪ್ಪ ಹೊನ್ನಗುಂಟಿ, ಸಿದ್ದಪ್ಪಾ ತಂದೆ ಶಂಕರ ನಾಟಿಕರ್ ಇವರೆಲ್ಲರೂ ಇದ್ದು, ಅಲ್ಲಿ ನಮ್ಮ ಗ್ರಾಮದ ಹರಿಜನ ಜನಾಂಗದವರಾದ ಶಿವಕುಮಾರ @ ಶಿವರಾಜ ತಂದೆ ಶ್ರೀಮಂತ ನಡುವಿನಕೇರಿ, ಆತನ ತಮ್ಮನಾದ ಅಶೋಕ ತಂದೆ ಶ್ರೀಮಂತ ಹಾಗೂ ಸೂರ್ಯಕಾಂತ ತಂದೆ ದೇವಿಂದ್ರಪ್ಪಾ, ಶಿವಶರಣ ತಂದೆ ನಿಂಗಪ್ಪ, ಮಾಳಮ್ಮ ಗಂಡ ಶ್ರೀಮಂತ, ಸಾಯಿಬಣ್ಣ ತಂದೆ ಶಿವಪ್ಪ ದೊಡ್ಡಮನಿ, ರಮೇಶ ತಂದೆ ಶರಣಪ್ಪ ದೊಡ್ಡಮನಿ, ಸುಧಾಕರ ತಂದೆ ಶ್ರೀಮಂತ ನಡುವಿನಕೇರಿ, ವಿಜಯಕುಮಾರ ತಂದೆ ಶ್ರೀಮಂತ, ಚಂದ್ರಕಾಂತ ತಂದೆ ನಿಂಗಪ್ಪಾ ಮಾಂಗ, ಶಾಂತಪ್ಪ ತಂದೆ ಶಿವಪ್ಪ, ಕೈಲಾಸ ತಂದೆ ಮಲ್ಲಪ್ಪ ದೊಡ್ಡಮನಿ, ಅನೂಕೂಲ ತಂದೆ ಕಾಂತಪ್ಪ ದೊಡ್ಡಮನಿ. ಸಾಲಿವಾನ ತಂದೆ ಅಂಬರಾಯ, ಬಾಬುರಾವ ತಂದೆ ಅಂಬರಾಯ, ದೇವಿಂದ್ರ ತಂದೆ ಸಾಯಿಬಣ್ಣ ದೊಡ್ಡಮನಿ, ಶರಣಪ್ಪ ತಂದೆ ಸಾಯಿಬಣ್ಣ ದೊಡ್ಡಮನಿ, ನಾಗಪ್ಪ ತಂದೆ ಶರಣಪ್ಪ ದೊಡ್ಡಮನಿ ಇವರೆಲ್ಲರೂ ಇದ್ದು, ನನ್ನ ಗಂಡ ಹಾಗೂ ನಮ್ಮ ಸಂಬಂಧಿಕರಾದ ಬಸಪ್ಪ ತಂದೆ ಈರಪ್ಪ ಹೊನ್ನಗುಂಟಿ, ಸಿದ್ದಪ್ಪ ತಂದೆ ಶಂಕರ ನಾಟಿಕರ ಇವರಿಗೆ ಬೋಸಡಿ ಮಕ್ಕಳೇ ಚೌಕದಲ್ಲಿದ್ದ ನಿಮ್ಮ ಬೋರ್ಡ ನಾವೇ ಕಿತ್ತು ಹಾಕಿರುತ್ತೇವೆ ಏನೂ ಮಾಡಿಕೊತ್ತಿರಿ ಮಾಡಿಕೋ ರಂಡಿ ಮಕ್ಕಳೇ ನಿಮದು ಊರಿನಲ್ಲಿ ಬಹಳ ಆಗಿದೆ ನಿಮಗೆ ದಿಮಾಕು ಬಂದಿದೆ ನಿಮ್ಮ ಕೋಲಿ ಸಮಾಜದವರಿಗೆ ಸುಟ್ಟು ಹಾಕುತ್ತೇವೆ ಅಂತಾ ಹಳೇ ದ್ವೇಷ ಸಾಧಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಅಶೋಕ ತಂದೆ ಶ್ರಿಮಂತ ಹಾಗೂ ಆತನ ಅಣ್ಣ ಶಿವರಾಜ ಇವರು ತಮ್ಮ  ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಗಂಡನ ತೆಲೆಗೆ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ಜಗಳ ಬೀಡಸಲು ಬಂದ ಸಿದ್ದಪ್ಪ ಹಾಗೂ ಬಸಪ್ಪ ಇವರಿಗೆ ಸೂರ್ಯಕಾಂತ ತಂದೆ ದೇವಿಂದ್ರಪ್ಪಾ,  ಶಿವಶರಣ ತಂದೆ ನಿಂಗಪ್ಪ, ಸಾಯಿಬಣ್ಣ ತಂದೆ ಶಿವಪ್ಪ ದೊಡ್ಡಮನಿ, ರಮೇಶ ತಂದೆ ಶರಣಪ್ಪ ದೊಡ್ಡಮನಿ, ಸುಧಾಕರ ತಂದೆ ಶ್ರೀಮಂತ ನಡುವಿನಕೇರಿ, ಇವರು ಒತ್ತಿ ಹಿಡಿದಾಗ ವಿಜಯಕುಮಾರ ತಂದೆ ಶ್ರೀಮಂತ, ಚಂದ್ರಕಾಂತ ತಂದೆ ನಿಂಗಪ್ಪಾ ಮಾಂಗ, ಶಾಂತಪ್ಪ ತಂದೆ ಶಿವಪ್ಪ, ಕೈಲಾಸ ತಂದೆ ಮಲ್ಲಪ್ಪ ದೊಡ್ಡಮನಿ, ಇವರು ಕೈಯಗಳಿಂದ ಮತ್ತು ಬೆಲಿಗೆ ಹಚ್ಚಿದ ಮುಳ್ಳು ಕಂಠಿಯಿಂದ ಹೊಡೆದು ಕರ್ತಗಾಯಪಡಿಸಿರುತ್ತಾರೆ. ನಾನು ಹಾಗು ಅಲ್ಲೆ ಇದ್ದ ನಮ್ಮುರಿನ ಮಲ್ಲಪ್ಪ ತಂದೆ ಹಯ್ಯಾಳಪ್ಪ ನಾಟಿಕರ್ ಬಸವರಾಜ ತಂದೆ ಚಂದಪ್ಪ ಹಳ್ಳಿ ಕೂಡಿ ಬೀಡಿಸಿಕೊಳ್ಳಲು ಹೊದಾಗ, ನನಗೆ ಶಿವರಾಜ ತಂದೆ ಶ್ರೀಮಂತ, ಅಶೋಕ ತಂದೆ ಶ್ರೀಮಂತ, ಮಾಳಮ್ಮ ಗಂಡ ಶ್ರೀಮಂತ ಹಾಗೂ ದೇವಿಂದ್ರ ತಂದೆ ಸಾಯಿಬಣ್ಣ ದೊಡ್ಡಮನಿ, ಇವರುಗಳು ನನಗೆ ಏ ಬೋಸಡಿ ಮಗಳೇ ನೀನಗೂ ಸಹ ಬೀಡುವುದಿಲ್ಲ ಅಂತಾ ನನ್ನ ತಲೆಗೆ ಕೂದಲು ಮತ್ತು ಸೀರೆಯ ಸೇರಗು ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಶ್ರೀಮತಿ ಆರತಿ ಗಂಡ ಗಂಗಪ್ಪಾ ಹಳ್ಳಿ ಸಾಃ ಮಿಣಜಗಿ ಗ್ರಾಮ ತಾ.ಜಿಃ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 October 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಗಂಗವ್ವ ಗಂಡ ಗುರಪ್ಪ ಗೊಲ್ಲರ ಸಾ|| ಅಫಜಲಪೂರ ರವರ ಗಂಡ ಮತ್ತು ಮಗ ಇಬ್ಬರು ಹಂದಿ ಸಾಕಾಣಿಕೆ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನು ಅತನೂರ ಗ್ರಾಮದಲ್ಲಿಯೂ ಕೆಲವೊಂದು ಹಂದಿಗಳನ್ನು ಬಿಟ್ಟಿರುತ್ತಾನೆ.      ನಮ್ಮ ಸಂಭಂದಿಕನಾದ ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ ಎಂಬಾತನು ಹಂದಿಗಳನ್ನು ಸಾಕಿದ್ದು ಈಗ ಒಂದು ವರ್ಷದ ಹಿಂದೊಮ್ಮೆ, 6 ತಿಂಗಳ ಹಿಂದೊಮ್ಮೆ ಮತ್ತು  ಒಂದು ತಿಂಗಳ ಹಿಂದೊಮ್ಮೆ ಅವರು ನಮ್ಮ ಹಂದಿಗಳು ತಮ್ಮ ಹಂದಿಗಳು ಇರುತ್ತವೆ ಅಂತಾ ಹಂದಿಗಳನ್ನು ತಗೆದುಕೊಂಡು ಹೋಗಿ ಮಾರಾಟ ಮಾಡಿದ್ದರಿಂದ ಸಿದ್ದಪ್ಪನಿಗೂ ಮತ್ತು ಆತನ ಮಕ್ಕಳಾದ ಅಶೋಕ, ಶಾಮಣ್ಣ, ಭೀಮು @ ಭೀಮಶಾ ರವರಿಗೂ ನನ್ನ ಗಂಡನಿಗೂ ಸಣ್ಣ  ಪುಟ್ಟ ಜಗಳ ಆಗಿ ಈ ವಿಷಯದಲ್ಲಿ ಅವರು ನನ್ನ ಗಂಡನ ಮೇಲೆ ದ್ವೇಷ ಹೊಂದಿದ್ದರು. ದಿನಾಂಕ 16-10-2018 ರಂದು ಬೆಳಿಗ್ಗೆ ಅತನೂರ ಗ್ರಾಮದವರು ಹಂದಿಗಳು ತಮ್ಮ ಹೊಲದಲ್ಲಿ ಹೋಗಿ ಬೆಳೆ ನಾಶ ಪಡಿಸುತ್ತಿವೆ ಅಂತಾ ಪೋನ ಮಾಡಿ ತಿಳಿಸಿದ್ದರಿಂದ ಹಂದಿಗಳನ್ನು ಹಿಡಿದುಕೊಂಡು ಬರಲು ನನ್ನ ಗಂಡ ಮತ್ತು ನನ್ನ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ತಂದೆ ಗುರಪ್ಪ ಗೊಲ್ಲರ ಮತ್ತು ನಮ್ಮ ಸಹೋದರ ಸಂಭಂದಿಯವರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ನನ್ನ ಮಗ ಬಸವರಾಜ ಗೊಲ್ಲರ ಹಾಗೂ ನನ್ನ ಮೈದುನ ರವಿ ತಂದೆ ಯಲ್ಲಪ್ಪ ಗೊಲ್ಲರ ರವರೆಲ್ಲರೂ, ಮೋಟರ ಸೈಕಲಗಳ ಮೇಲೆ ಮದ್ಯಾಹ್ನ 12:00 ಗಂಟೆ ಸುಮಾರಿಗೆ ಅತನೂರ ಗ್ರಾಮಕ್ಕೆ ಹೋಗಿದ್ದು ಮದ್ಯಾಹ್ನ 3:15 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ಅವಸರ ಅವಸರದಲ್ಲಿ ಅಳುತ್ತಾ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ, ನಾನು ಮತ್ತು ಮಾವ ಗುರಪ್ಪ ಇಬ್ಬರು ಮೋಟರ ಸೈಕಲ ಮೇಲೆ ಅತನೂರ ಗ್ರಾಮದಿಂದ ಮರಳಿ ಅಫಜಲಪೂರಕ್ಕೆ ಬರುತ್ತಿದ್ದಾಗ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಬಂದ ನಂತರ ಕುರಿಗಳ ಮೇವಿನ ಸಲುವಾಗಿ ಗಿಡಗಳ ತಪ್ಪಲು ತಗೆದುಕೊಂಡು ಬರಲು ಮೋಟರ ಸೈಕಲ ನಿಲ್ಲಿಸಿ ರೋಡಿನ ಬದಿಯಲ್ಲಿರುವ ಗಿಡಗಳ ತಪ್ಪಲು ತಗೆದುಕೊಂಡು ಮೋಟರ ಸೈಕಲ ಹತ್ತಿರ ಬರುತ್ತಿದ್ದಾಗ ಮದ್ಯಾಹ್ನ 3:00 ಗಂಟೆಯ ಸುಮಾರಿಗೆ 1) ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ 2) ಅಶೋಕ ತಂದೆ ಸಿದ್ದಪ್ಪ ಗೋಲ್ಲರ 3) ಶಾಮಣ್ಣ ತಂದೆ ಸಿದ್ದಪ್ಪ ಗೊಲ್ಲರ ಇವರು ಒಂಧು ಮೋಟರ ಸೈಕಲ ಮೇಲೆ, ಮತ್ತೊಂದು ಮೋಟರ ಸೈಕಲ ಮೇಲೆ 4) ಭೀಮು ತಂದೆ ಸಿದ್ದಪ್ಪ ಗೊಲ್ಲರ 5) ಜಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 6) ಜಂಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ರವರು ಬಂದು ಮಾವ ಗುರಪ್ಪನಿಗೆ ಅಶೋಕ, ಭೀಮ, ಜಗಪ್ಪ, ರವರು ಹಿಡಿದು ನೆಲಕ್ಕೆ ಹಾಕಿದಾಗ ಸಿದ್ದಪ್ಪನು ಚಾಕುವಿನಿಂದ ಕುತ್ತಿಗೆ ಕೊಯ್ದಿದಿದ್ದು, ಜಂಗಪ್ಪನು ಮುಖದ ಮೇಲೆ ಕಲ್ಲುಗಳು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಆಗ ಸಿದ್ದಪ್ಪನು ಈ ಮಗನಿಗೆ ಬಿಟ್ಟರೆ ಮುಂದೆ ಇವನು ನಮ್ಮ ವಿರುದ್ದ ಸಾಕ್ಷೀ ಹೇಳುತ್ತಾನೆ ಇವನಿಗೂ ಬಿಡಬೇಡಿರಿ ಮತ್ತು ಅತನೂರಿನಲ್ಲಿ ಉಳಿದವರಿಗೂ ಬಿಡಬೇಡಿರಿ ಅಂತಾ ಅಂದಾಗ ಶಾಮಣ್ಣನು ಬಡಿಗೆಯಿಂದ ನನ್ನ ಎಡಗೈ ರಟ್ಟೆಗೆ ಮತ್ತು ಎಡಗಾಲಿನ ತೊಡೆಗೆ ಹೊಡೆದು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ನಾನು ಅವರಿಂದ ತಪ್ಪಿಸಿಕೊಂಡು ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತೇನೆ. ನಾನು ಓಡಿ ಹೊಗದಿದ್ದರೆ ನನಗೂ ಹೊಡೆದು ಕೊಲೆ ಮಾಡುತ್ತಿದ್ದರು. ಇದಲ್ಲದೆ 7) ರಾಮ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 8) ಸುನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 9) ಅನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 10) ರಮೇಶ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ಹಾಗೂ 11) ರವಿತ್ ತಂದೆ ದೇವಣ್ಣ ಗೊಲ್ಲರ ರವರು ಅತನೂರದಲ್ಲಿ ಉಳಿದಿದ್ದ ನನ್ನ ಮಾವ ಗುರಪ್ಪನ ತಮ್ಮಂದಿರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ಬಸವರಾಜ ಮತ್ತು ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಹೋಗಿರುತ್ತಾರೆ ಸಿಕ್ಕರೆ ಅವರಿಗೂ ಹೊಡೆದು ಸಾಯಿಸುತ್ತಾರೆ ಅಂತಾ ತಿಳಿಸಿದನು. ನಂತರ ನಾನು ಮತ್ತು ನನ್ನ ನೆಗೆಣಿ ಅಂಬವ್ವ ಗಂಡ ಸಿದ್ರಾಮ ಗೊಲ್ಲರ, ಹಾಗೂ ಮೈದುನರಾದ ಸೋಮಣ್ಣ ತಂದೆ ಯಲ್ಲಪ್ಪ ಗೊಲ್ಲರ, ಜಗನ್ನಾಥ ತಂದೆ ಯಲ್ಲಪ್ಪ ಗೊಲ್ಲರ, ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ, ಹಾಗೂ ನಮ್ಮ ಸಂಭಂಧಿಕರಾದ ಸಿದ್ರಾಮ ತಂದೆ ಭೀಮ ಗೊಲ್ಲರ, ಭೀಮವ್ವ ಗಂಡ ಸಿದ್ರಾಮ ಗೊಲ್ಲರ ಮತ್ತಿತರರೂ ಘಟನೆ ಜರೂಗಿದ ಸ್ಥಳಕ್ಕೆ ಹೋಗಿ ನನ್ನ ಗಂಡನ ಶವವನ್ನು ನೋಡಿರುತ್ತೇವೆ. ನನ್ನ ಗಂಡನ ಕೊಲೆ ಮಾಡಿದವರ ಮತ್ತು ನನ್ನ ತಮ್ಮ ಭೀಮಪ್ಪನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಹಾಗೂ ನನ್ನ ಮಗ ಬಸವರಾಜ ಮೈದುನರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಬೆನ್ನು ಹತ್ತಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿರೇಶ ತಂದೆ ಸೊಮಶೇಖರ ಚಿಂಚಕೊಟಿ ಸಾ: ಚಿಂಚಕೊಟಿ ಹಾ:ವ: ಶಟ್ಟಿ ಚಿತ್ರ ಮಂದಿರ ಹತ್ತಿರ ಕಲಬುರಗಿ ರವರು ಮತ್ತು  ತಮ್ಮ ವಿಕಾಸ ಅಂತ ಇಬ್ಬರು ಗಂಡು ಮಕ್ಕಳಿದ್ದು ನನ್ನ ತಮ್ಮ ಬಿ.ಇ ಓದುತ್ತಿದ್ದು, ನಮ್ಮ ತಂದೆಯಾದ ಸೊಮಶೇಖರ ಇವರು ಮಾಜಿ ಸೈನಿಕರಿದ್ದು, ಸೇವೆಯಿಂದ ನಿವೃತ್ತಿ ಹೊಂದಿದ್ದು, ನಮ್ಮ ತಂದೆ ಆಯುಧ ಲೈಸನ್ಸ್‌‌‌ ಪಡೆದುಕೊಂಡು ಒಂದು ಆಯುಧವನ್ನು ಖರಿದಿಸಿ ಎ.ಟಿ.ಎಮ್‌‌ ಗಳಿಗೆ ಹಣ ತುಂಬುವ ಸೇಕ್ವೂರ್ ಕಂಪನಿಯಲ್ಲಿ ವಾಹನಗಳ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಾಯಿಯಾದ ಬಸಮ್ಮ ಇವರು ಮನೆ ಕೆಲಸ ಮಾಡಿಕೊಂಡಿರುತ್ತಾರೆ.ನಾನು, ನನ್ನ ವ್ಯಯಕ್ತಿಕ ಖರ್ಚಿನ ಸಂಬಂದ ನಮ್ಮ ತಂದೆ ತಾಯಿಗೆ ಪದೆ ಪದೆ ಹಣ ಕೇಳುತ್ತಾ ಬಂದಿದ್ದು. ಅವರು ಹೆಚ್ಚಾಗಿ ನನಗೆ ಹಣ ಕೊಡಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಮ್ಮ ತಂದೆ ನನ್ನ ಬಗ್ಗೆ ದ್ವೇಷ ಭಾವನೆ ಬೆಳೆಯಿಸಿಕೊಂಡು ಬಂದಿದ್ದು ಇರುತ್ತದೆ. ಈಗ 3-4 ದಿವಸಗಳ ಹಿಂದೆ ನಾನು, ನನ್ನ ಗೆಳೆಯರೊಂದಿಗೆ ತುಳಜಾಪೂರಕ್ಕೆ ನಡೆದುಕೊಂಡು ಹೋಗಿ ನಿನ್ನೆ ದಿನಾಂಕ 16.10.2018 ರಂದು ಬೆಳ್ಳಿಗ್ಗೆ ಮರಳಿ ಬಂದಿದ್ದು ಇರುತ್ತದೆ. ನಾನು ತುಳಜಾಪೂರಕ್ಕೆ ಹೋಗುವ ಸಂಬಂದ ನಾನು ನನ್ನ ಗೆಳೆಯರಲ್ಲಿ ಹತ್ತು ಸಾವೀರ ರುಪಾಯಿ ಕೈಗಡ ತೆಗೆದುಕೊಂಡಿದ್ದು ನನ್ನ ಗೆಳೆಯರಿಗೆ ಹಣ ಮರಳಿ ಕೊಡುವ ಸಂಬಂದ ನಿನ್ನೆ ದಿನಾಂಕ 16.10.2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಕೆಲಸದಿಂದ ಮನೆಗೆ ಬಂದಾಗ ನಾನು ನಮ್ಮ ತಂದೆಗೆ ಹತ್ತು ಸಾವೀರ ರೂಪಾಯಿ ಕೊಡಿ ಅಂತ ಹೇಳಿದ್ದು ಆಗ ನಮ್ಮ ತಂದೆಯವರು ರಂಡಿ ಮಗನೆ ನೀನಗೆ ಎಲ್ಲಿಂದ ಹಣ ಕೊಡಲಿ ನೀನಗೆ ಯಾರು ತುಳಜಾಪೂರಕ್ಕೆ ಹೋಗು ಅಂತ ಹೇಳಿದ್ದಾರೆ ಭೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನಮ್ಮ ತಂದೆಯವರಿಗೆ ನಾನು ನನ್ನ ಗೆಳೆಯರಿಗೆ ಹಣ ಕೊಡಬೇಕಾಗಿದೆ ನನಗೆ ಹಣ ಬೇಕೆ ಬೇಕು ಅಂತ ಹೇಳಿದ್ದು ಅದೆ ವೇಳೆಗೆ ನನ್ನ ತಮ್ಮನಾದ ವಿಕಾಸ ಮತ್ತು ಅವನ ಇಬ್ಬರು ಗೆಳೆಯರು ಕೂಡಿಕೊಂಡು ನಮ್ಮ ಮನೆಗೆ ಬಂದಿದ್ದು ನಾನು ನನ್ನ ತಂದೆಯೊಂದಿಗೆ ಹಣದ ವಿಷಯವಾಗಿ ಜಗಳ ಮಾಡುವದನ್ನು ನೋಡಿ ನನ್ನ ತಮ್ಮ ಈ ರಂಡಿ ಮಗನ ಕಾಟ ಸಾಕಾಗಿ ಹೋಗಿದೆ ಇವತ್ತು ಇವನಿಗೆ ಖಲಾಸ ಮಾಡಿಯೇ ಬಿಡೊಣ ಅಂತ ಹೇಳಿ ನನ್ನ ತಮ್ಮ ಮತ್ತು ಅವನ ಗೇಳೆಯರಲ್ಲಿ ಒಬ್ಬನಾದ ರಡ್ಡಿ, ಹಾಗೂ ಇನ್ನೂಬ್ಬ ಕೂಡಿಕೊಡು ನನಗೆ ಒತ್ತಿಯಾಗಿ ಹಿಡಿದುಕೊಂಡಿದ್ದು ಅದೆ ವೇಳೆಗೆ ನಮ್ಮ ತಂದೆ ತನ್ನ ಕೆಲಸ ಸಂಬಂದ ತೆಗೆದುಕೊಂಡು ಹೋಗುತ್ತಿದ್ದ ಆಯುಧವನ್ನು ತೆಗೆದುಕೊಂಡು ಬಂದು ಈ ರಂಡಿ ಮಗನಿಗೆ ಸಾಯಿಸಿ ಬಿಡುತ್ತೆನೆ ಅಂತ ಅನ್ನುತ್ತಾ ಅವರ ಕೈಯಲಿದ್ದ ಆಯುಧ ದಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಎಡಗಾಲ ತೊಡೆಗೆ ಗುಂಡು ಹಾರಿಸಿದ್ದು ನನ್ನ ಎಡಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಆಗ ಮನೆಯಲ್ಲಿ ನಮ್ಮ ತಾಯಿ ಚಿರಾಡಲು ಪ್ರಾರಂಭಿಸಿದ್ದು ನಮ್ಮ ತಾಯಿ ಚಿರಾಡುವದನ್ನು ಕೇಳಿ ಪಕ್ಕದ ಮನೆಯ ಶಿವಶರಣಪ್ಪ ಹತ್ತರಗಾ, ಪ್ರಯಾಗಬಾಯಿ ಹಾಗೂ ಇತರರು ನಮ್ಮ ಮನೆಗೆ ಬಂದು ನೋಡಿ ನಮ್ಮ ತಂದೆಗೆ ನನ್ನ ತಮ್ಮನಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ ಸದರಿ ಸಮಯದಲ್ಲಿ ನಮ್ಮ ತಾಯಿ ಬೇಹುಸ ಆಗಿಬಿದ್ದಿದ್ದು ಯಾರೊ 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದರಿಂದ ಅಂಬುಲೇನ್ಸ ಸ್ಥಳಕ್ಕೆ ಬಂದು ನನಗೆ ನಮ್ಮ ತಾಯಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ಹಣ ಕೊಡುವ ವಿಷಯವಾಗಿ ನಮ್ಮ ತಂದೆ ಸೊಮಶೇಖರ, ನನ್ನ ತಮ್ಮ ವಿಕಾಸ ಹಾಗೂ ಅವನ ಗೇಳೆಯರು ಕೂಡಿಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಹಿಡಿದು ಕೊಂಡು ನನ್ನ ಮೇಲೆ ಪೈರ ಮಾಡಿದವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ತಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 16.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್.ಎಸ್.ಕೆ.ಮೀಲ್ ಜಿಲಾನಾಬಾದ ಸೈದಾಪೂರಿ ಹೊಟೆಲ ಹತ್ತಿರ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೈದಾಪೂರಿ ಹೊಟೇಲ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಸೈದಾಪೂರಿ ಹೊಟೇಲ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಗೌಸ @ ಮಹ್ಮದ ಗೌಸ ತಂದೆ ಮಹೀಬೂಬ ಸಾಬ ಸಾ: ಜಿಲಾನಾಬಾದ ಎಮ್.ಎಸ್.ಕೆ. ಮೀಲ ಕಲಬುರಗಿ. ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 850/- ರೂ 2 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.