POLICE BHAVAN KALABURAGI

POLICE BHAVAN KALABURAGI

06 October 2018

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಭಾರತಿಬಾಯಿ ಗಂಡ ದಿ: ಬಾಬು ಗುತ್ತೇದಾರ ಸಾ: ಬಳೂರ್ಗಿ ರವರ ಮಗನಾದ ದತ್ತು ಇತನು ಕಲಬುರಗಿಯ ತಿಮ್ಮಾಪೂರ ವೃತ್ತದಲ್ಲಿರುವ ಸ್ವಂತ ಕಟ್ಟಡದಲ್ಲಿ ವೈನಶಾಪ ಇಟ್ಟುಕೊಂಡು ಕೆಲಸ ಮಾಡುತ್ತಾ ಕಲಬುರಗಿಯ ಶಾಂತಿ ನಗರದಲ್ಲಿ ಸ್ವಂತ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿರುತ್ತಾನೆ. ಬಳೂರ್ಗಿ ಗ್ರಾಮದಲ್ಲಿ ನಾನು ನಮ್ಮ ಹೊಲ ಮನೆ ನೋಡಿಕೊಳ್ಳುತ್ತಾ ಮನೆಯಲ್ಲಿ ನಾನೋಬ್ಬಳೆ ವಾಸವಾಗಿದ್ದು ಆಗಾಗ ನನ್ನ ಮಕ್ಕಳ ಹತ್ತಿರ ಹೋಗಿ ಬರುವುದು ಮಾಡುತ್ತೆನೆ. ನನ್ನ ಮಗನಾದ ದತ್ತು ಇತನು ತನ್ನ ವ್ಯಾಪಾರಕ್ಕಾಗಿ ಈಗ ಕೆಲವು ವರ್ಷಗಳ ಹಿಂದೆ ವೈನಶಾಪ ಇದ್ದ ಕಟ್ಟಡದ ಮೇಲೆ ಕಲಬುರಗಿಯ ವಿಜಯಾ ಬ್ಯಾಂಕ ರವರಲ್ಲಿ ಸುಮಾರು 50 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಸದರಿ ಸಾಲವನ್ನು ತೀರಿಸಲಾಗದೆ ಈಗ ಕೇಲವು ದಿನಗಳಹಿಂದೆ ಕಲಬುರಗಿಯ ವಿಜಯಾ ಬ್ಯಾಂಕನ ಅಧಿಕಾರಿಗಳು ಸಾಲ ಮರುಪಾವತಿ ಮಾಡಿ ಇಲ್ಲವಾದರೆ ನಿಮ್ಮ ಅಂಗಡಿಯನ್ನು ಹರಾಜು ಮಾಡುತ್ತೇವೆ ಅಂತಾ  ನೋಟಿಸ ನೀಡಿರುತ್ತಾರೆ. ಸದರಿ ನೋಟಿಸ್‍ ನೀಡಿದ ವಿಷಯ ನನ್ನ ಮಗ ನನಗೆ ತಿಳಿಸಿದರಿಂದ ನಾನು ಚಿಂತೆ ಮಾಡಬೇಡಾ ಕೇಲವು ವರ್ಷಗಳಿಂದ ಹೊಲದ ಆದಾಯದಲ್ಲಿ ನಾನು ಚಿನ್ನಾಭರಣಗಳನ್ನು ಖರೀದಿ ಮಾಡಿ ಇಟ್ಟಿರುತ್ತೇನೆ, ಅವುಗಳನ್ನು ಮಾರಿ ಹಾಗೂ ಉಳಿದ ಹಣವನ್ನು ಹೇಗದಾರು ಮಾಡಿ ಕೂಡಿಸಿ ಸಾಲ ತೀರಿಸೊಣಾ ಅಂತಾ ನನ್ನ ಮಗನಿಗೆ ಹೇಳಿರುತ್ತೇನೆ. ನನ್ನ ಹತ್ತಿರ ಇದ್ದ ಒಟ್ಟು 28 ತೋಲೆ (280 ಗ್ರಾಂ) ಬಂಗಾರದ ಆಭರಣಗಳನ್ನು ಬಳೂರ್ಗಿ ಗ್ರಾಮದ ನನ್ನ ಮನೆಯ ಟ್ರಜರಿಯಲ್ಲಿಯೇ ಇಟ್ಟಿರುತ್ತೇನೆ. ನನ್ನ ಗಂಡನ ಪುಣ್ಯ ತಿಥಿ ಇರುವುದರಿಂದ ನಾನು & ನನ್ನ ಮಗ ದತ್ತು ಹಾಗೂ ಮೊಮ್ಮಕ್ಕಳು ಕೂಡಿ ಕಾಶಿಗೆ ಹೋಗಲು ದಿನಾಂಕ: 28-09-2018 ರಂದು ನಾನು ಬಳೂರ್ಗಿಯಿಂದ ಕಲಬುರಗಿಗೆ ಹೊಗಿ ಅಲ್ಲಿಂದ ಎಲ್ಲರೂ ಕೂಡಿ ಕಾಶಿಗೆ ಹೋಗಿರುತ್ತೇವೆ ಹೋಗುವಾಗ ನನ್ನ ಹತ್ತಿರವಿದ್ದ ಚಿನ್ನಾಭರಣಗಳನ್ನು ಬಳೂರ್ಗಿ ಗ್ರಾಮದ ನನ್ನ ಮನೆಯ ಟ್ರಜರಿಯಲ್ಲಿಯೇ ಇಟ್ಟು ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತೇನೆ.  ದಿನಾಂಕ 05-10-2018 ರಂದು ನಾನು ಕಲಬುರಗಿಯ ನನ್ನ ಮಗನ ಮನೆಯಲ್ಲಿದ್ದಾಗ ನಮ್ಮ ಮೈದುನನಾದ ಅಶೋಕ ತಂದೆ ವೇಂಕಯ್ಯಾ ಗುತ್ತೇದಾರ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ: 04-10-2018 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ನಾನು ನಂದಿ ಬಸವೇಶ್ವರ ಜಾತ್ರೆಯ ಪುರಾಣ ಮುಗಿಸಿ ಮನೆಗೆ ಬರುತ್ತಿದ್ದಾಗ ಮನೆಯ ಬಾಗಿಲಿಗೆ ಕೀಲಿಯಿದ್ದು ಇಂದು ಬೆಳಿಗ್ಗೆ ನೋಡಲಾಗಿ ಮನೆಯ ಬಾಗಿಲು ತೆರೆದಿತ್ತು ನೀವು ಬಂದಿರ ಬಹುದೆಂದು ತಿಳಿದುಕೊಂಡು ಸುಮ್ಮನಿದ್ದು ಎಷ್ಟೋತ್ತಾದರು ನೀವು ಮನೆಯಿಂದ ಹೊರಗೆ ಬರದೆಯಿದ್ದರಿಂದ ಮನೆಯ ಬಾಗಿಲ ಹತ್ತಿರ ಹೋಗಿ ನೋಡಿದಾಗ ನಿಮ್ಮ ಮನೆಯ ತಲಬಾಗಿಲಿನ ಕೊಂಡಿ ಕತ್ತರಿಸಿದ್ದು ನೋಡಿ ಕೂಗಿದಾಗ ನೀವು ಇಲ್ಲದೇ ಇರುವುದನ್ನು ನೋಡಿ ನಿಮಗೆ ಪೋನ ಹಚ್ಚಿದ್ದೆನೆ ಬಹುಶಃ ನಿಮ್ಮ ಮನೆ ಕಳ್ಳತನವಾಗಿರ ಬಹುದು ನೀವು ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಗ ಸೊಸೆ ಹಾಗೂ ನನ್ನ ಮೊಮ್ಮಕ್ಕಳು ಎಲ್ಲರೂ ಕೂಡಿ ಬಳೂರ್ಗಿಗೆ ಬಂದು ನಮ್ಮ ಮನೆಯನ್ನು ನೋಡಲಾಗಿ ನಮ್ಮ ಮನೆಯ ತೋಲಬಾಗಿಲ ಕೀಲಿಯನ್ನು ಕೊಂಡಿ ಸಮೇತ ಕತ್ತಿರಿಸಿದ್ದು ಹಾಗೂ ಒಳಕೋಣೆಯ ಬಾಗಿಲ ಕೀಲಿಯನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ ನಗದು ಹಣ ಬಂಗಾರದ ಹೀಗೆ ಒಟ್ಟು ಅ:ಕಿ: 8,90,000/- ರೂಪಾಯಿ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಫಜಲಪೂರ ಠಾಣೆ : ಶ್ರೀಮತಿ ಶಿ ಸುನಿತಾ ಗಂಡ ಗೌರೀಶ ಮಲ್ಲಿನಾಥ ಸಾ|| ಲಿಂಬಿತೋಟ ಅಫಜಲಪೂರ ರವರು ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ನನ್ನ ಮಗನನ್ನು ಕರೆದುಕೊಂಡು ಹಾಸ್ಟೇಲಿಗೆ ಹೋಗಿರುತ್ತೇನೆ. ಹೋಗುವಾಗ ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಹೋಗಿರುತ್ತೇನೆ. ನಮ್ಮ ಮನೆಗೆ ಎರಡು ಬಾಗಿಲುಗಳು ಇರುತ್ತವೆ. ನಾನು ಹಾಸ್ಟೇಲಿನಿಂದ ಮರಳಿ ರಾತ್ರಿ 11:00 ಗಂಟೆಗೆ ಮನೆಗೆ ಬಂದು ನೋಡಲಾಗಿ ಯಾರೊ ಕಳ್ಳರು ನನ್ನ ಮನೆಯ ಹಿಂದಿನ ಬಾಗಿಲದ ಕೊಂಡಿಯನ್ನು ಮುರಿದು ತಗೆದು ನನ್ನ ಮನೆಯ ಒಳ ಕೋಣೆಯ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಅಕಿ-75,000/- ರೂ ಇವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಸದರಿ ಕಳ್ಳತನ ನಿನ್ನೆ ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆಯಿಂದ ರಾತ್ರಿ 11:00 ಗಂಟೆಯ ಮದ್ಯದ ಅವದಿಯಲ್ಲಿ ನಡೆದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 October 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-10-2018 ರಂದು  ಗೌರ (ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗೌರ (ಬಿ) ಗ್ರಾಮಕ್ಕೆ ಹೋಗಿ, ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಸೈಬಣ್ಣ ಬಡದಾಳ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1380/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 01-10-2018 ರಂದು ರಾತ್ರಿ ಹವಳಗಾ ಗ್ರಾಮದ ಭೀಮಾ ನದಿಯಲ್ಲಿ ಅನದಿಕೃತವಾಗಿ ಟಿಪ್ಪರಗಳಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದಿದೆ ದಾಳಿ ಮಾಡಿಕೊಂಡು ಬರಲು ಆದೇಶಿಸಿದ ಮೇರೆಗೆ, ನಾನು ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಮಾರ್ಗದರ್ಶನದಂತೆ ದಾಳಿ ಮಾಡುವ ಕುರಿತು ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹವಳಗಾ ಗ್ರಾಮದ ನದಿಯ ಕಡೆಗೆ ಹೋಗುತ್ತಿದ್ದಾಗ ಹವಳಗಾ ಗ್ರಾಮದ ಹೊರವಲಯದಲ್ಲಿರುವ ಬಸವಣ್ಣ ದೆವರ ಕಟ್ಟೆಯ ಹತ್ತಿರ ಎದುರುಗಡೆಯಿಂದ ವಾಹನಗಳು ಬರುತ್ತಿದ್ದು, ಸದರಿ ವಾಹನಗಳನ್ನು ನಿಲ್ಲಿಸುವಂತೆ ನಾವು ಕೈ ಸೂಚನೆ ಕೊಟ್ಟಾಗ ಎದುರುಗಡೆಯಿಂದ ಎರಡು ಟಿಪ್ಪರಗಳು ಬರುತ್ತಿದ್ದು, ಸದರಿ ಟಿಪ್ಪರಗಳ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರಗಳನ್ನು ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದರು, ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲಾಗಿ ಎರಡು ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದವು. ಸದರಿ ಟಿಪ್ಪರಗಳ ನಂ 1) ಟಿಪ್ಪರ ನಂ ಕೆಎ-32 ಸಿ-9010 ಟಿಪ್ಪರ ಅಕಿ 10,00,000/-ರೂ. ಸದರಿ ಟಿಪ್ಪರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 15,000/- ರೂ ಆಗಬಹುದು. 2) ಟಿಪ್ಪರ ನಂ ಕೆಎ-32 ಸಿ-7150 ಟಿಪ್ಪರ ಅಕಿ 10,00,000/-ರೂ. ಸದರಿ ಟಿಪ್ಪರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 15,000/- ರೂ ಆಗಬಹುದು. ನಂತರ ಸದರಿ ಟಿಪ್ಪರಗಳನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-09-2018 ರಂದು ರಾತ್ರಿ ನನ್ನ ಮಗನಾದ ಹೃಷಿಕೇಶ ಇತನು ಯಮಹಾ ಆರ ಎಕ್ಸ-100 ಮೋಟಾರ ಸೈಕಲ ನಂಬರ ಎಪಿ-09-ಇ-4940 ನೇದ್ದನ್ನು ಚಲಾಯಿಸಿಕೊಂಡು ಕೋಠಾರಿ ಭವನ ಸಿಟಿ ಬಸ್ಸ ನಿಲ್ದಾಣ ಕಡೆಯಿಂದ ವೆಂಕಟೇಶ್ವರ ನಗರ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ಎಸ ಕೋಠಾರಿ ಭವನದ ಹಿಂದುಗಡೆ ಬರುವ ಸೌಂಧರ್ಯ ಬ್ಯೂಟಿ ಪಾರ್ಲರ ಎದುರಿನ ರೋಡ ಮೇಲೆ ಒಮ್ಮಲೆ ಕಟ್ ಹೊಡೆದು ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ಅಪಘಾತ ಮಾಡಿ ಭಾರಿಗಾಯಹೊಂದಿದ್ದು ಹೃಷಿಕೇಶ ಇತನಿಗೆ ಸತ್ಯ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಬಲವಂತ ಇನ್ಸಟೂಟ ಆಫ್ ನ್ಯೂರೋ ಸರ್ಜರಿ ಇನಟೇನ್ಸಿವ ಟ್ರಾಮಾ ಕೇರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಡಾ|| ಮೋಹನರಾವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 29/09/18 ರಂದು ರಾಷ್ಟ್ರೀಯ ಹೇದ್ದಾರಿ 218 ಫಿರೋಜಾಬಾದ ದರ್ಗಾ ಹತ್ತಿರ ನಮ್ಮ ಕಾರ ನಂ ಕೆಎ 28 ಎನ್ 6540 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿ ಕಡೆಗೆ ಹೋಗುವಾಗ  ಯಾವುದೋ ಒಂದು ಬಾರಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಹಿಂದೆ  ಡಿಕ್ಕಿಪಡಿಸಿದ್ದರಿಂದ ಸದರಿ ಕಾರು ಜಖಂಗೊಂಡಿರುತ್ತದೆ ಅಂತಾ ಶ್ರೀ ಸಮೀರ ತಂದೆ ಶ್ಯಾಮರಾವ ಕುಲಕರ್ಣಿ ಸಾ: ಮ ನಂ 20 ಪದ್ಮಾವತಿ ನಿವಾಸ ರಾಘವೇಂದ್ರ ಕಾಲನಿ ಬಾಗಲಕೋಟ ರಸ್ತೆ ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ 11:00 ಪಿ.ಎಮ್ ದಿಂದ ದಿ: 01-10-2018 ರಂದು 07:00 ಎ.ಎಮ್ ಮಧ್ಯದ ಅವಧಿಯಲ್ಲಿ ಕರಜಗಿ ಗ್ರಾಮ ಹತ್ತಿರ ಇರುವ ದಾಬಾದಲ್ಲಿ ಇರುವ ಒಂದು ಎಲ್.ಇ.ಡಿ. ಟಿ.ವಿ ಅಕಿ- 50,000/-, ಒಂದು ನೀರು ಎತ್ತುವ ಮೋಟಾರ ಅಕಿ-5000/- ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ದಾಬಾದ ಹೊರಗಡೆ ಬಾಗಿಲು ಹತ್ತಿರ ಒಂದು ಮಚ್ಚು ಬಿದ್ದಿರುತ್ತದೆ. ನಾನೊಬ್ಬ ರಾಜಕೀಯ ಪಕ್ಷದ ಕಾರ್ಯಕರ್ತನಿದ್ದು ನಾಯಕನಾಗಿ ಗ್ರಾಮದಲ್ಲಿ ಭಾರಿ ಜನ ಬೆಂಬಪಡೆದು ಕೆಲವ ದಿನಗಳಲ್ಲಿ ಜನಮನ್ನಣೆ ಗಳೆಸಿರುತ್ತೇನೆ. ಎದುರಾಳಿಗಳು ಮತ್ತು ನನ್ನ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ಕೃತ್ಯ ಮಾಡಿರುತ್ತಾರೋ ಹೇಗೊ ಎಂಬ ಬಗ್ಗೆ ಗೊತ್ತಾಗಿರುವುದಿಲ್ಲಾ ಈಗ ಎರಡು ವರ್ಷಗಳ ಹಿಂದ ನನ್ನ ಮೋಟಾರ ಸೈಕಲ ಸಹ ಕಳ್ಳತನವಾಗಿರುತ್ತದೆ. ಅಂತಾ ಶ್ರೀ ಬೀಮಾಶಂಕರ ತಂದೆ ಸಾಯಬಣ್ಣ ಹೊನಕೇರಿ ಸಾ: ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಹುಣಚಪ್ಪ ತಂದೆ ಮಹಾಂತಪ್ಪ ಪೂಜಾರಿ ಸಾ. ಫರಹತಾಬಾದ ತಾ: ಜಿ:  ಕಲಬುರಗಿ ರವರು  ದಿನಾಂಕ 01/10/18 ರಂದು ಬೆಳಿಗ್ಗೆ ಎತ್ತಿನ ಬಂಡಿ ತಗೆದುಕೊಂಡು ಹೊಲಕ್ಕೆ ಹೋಗಿ ನಮ್ಮ ಹೊಲದ ಬಂದಾರಿಯ ಮೇಲಿನ ಗಿಡ ತುಂಡು ಮಾಡಿ ಬಂಡಿಯಲ್ಲಿ ಹಾಕಿಕೊಂಡು ನಮ್ಮ ಹೊಲದ ಬಂದಾರಿಯ ಮುಖಾಂತರ ಮನೆಗೆ ಬರುವಾಗ ಪಕ್ಕದ ಹೊಲದ  1) ಶಿವಣ್ಣ ಪೂಜಾರಿ 2) ಯಲ್ಲಪ್ಪ,  3) ನಾಗಪ್ಪ, 4) ಮಲ್ಲೇಶಪ್ಪ, 5) ಭಾಗೇಶ,  6) ನೀಲಮ್ಮ, 7) ಸರುಬಾಯಿ, 8) ಪದ್ಮಾ, 9) ಶಾಂತಾಬಾಯಿ  ಸಾ: ಎಲ್ಲರೂ ಫರಹತಾಬಾದ ಗ್ರಾಮದವರು ಕೂಡಿಕೊಂಡು ಬಂದು ಈ ಸೂಳೆ ಮುಗನದು ಬಹಳ ನಡಿದಿದೆ ಇವನಿಗೆ ಮುಗಿಸಿ ಬಿಡೋಣ ಅಂತಾ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಗಳಿಂದ ತಲೆಯ ಮೇಲೆ ಜೋರಾಗಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 October 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಕರಜಗಿ ಕ್ರಾಸ (ಸೋನ್ನ ಕ್ರಾಸ) ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NHM2TAE1323 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NMHB03774 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಟ್ರ್ಯಾಕ್ಟರಗಳೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಹೊಸ ಊರಿನ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದುದನ್ನು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU1820 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ KA-32 TA-5946. ಇಂಜೆನ್ ನಂಬರ NNHY01037 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : 30-09-2018 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಕ್ರಾಸ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಕರಜಗಿ ರೋಡಿನ ಕೆಡೆಗೆ ಸ್ಪೀಡಾಗಿ ನಡೆಸಿಕೊಂಡು ಹೊಗುತ್ತಿದ್ದರು. ಆಗ ನಾವು ಸದರಿ ಟ್ಯಾಕ್ಟರಗಳಿಗೆ ಚೇಜ್ ಮಾಡುತ್ತಿದ್ದಾಗ, ಟ್ಯಾಕ್ಟರ ಚಾಲಕರು ಟ್ಯಾಕ್ರಗಳನ್ನು ಬಳೂಂಡಗಿ ಕ್ರಾಸ ಹತ್ತಿರ ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU3835 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ NNHY07891 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ  ದೇವಣಗಾಂವ ಬ್ರೀಜ ಹತ್ತಿರ ಹೋಗುತ್ತಿದ್ದಂತೆ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅದಕ್ಕೆ ಇನ್ನೊಂದು ಟ್ಯಾಕ್ಟರ ಇಂಜೆನ್ ಹಚ್ಚಿ ಎರಡು ಇಂಜೆನಗಳಿಂದ ನದಿಯ ದಡ ಏರಿಸುತ್ತಿದ್ದರು. ಸದರಿಯವರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಅಲ್ಲೆ ಬಿಟ್ಟು ಓಡಿ ಹೋದರು. ನಂತರ ಅಲ್ಲಿದ್ದ ಬಾತ್ಮಿದಾರರಿಗೆ ವಿಚಾರಿಸಲಾಗಿ, ಮರಳು ತುಂಬಿದ ಟ್ಯಾಕ್ಟರಗಳು ನದಿಯ ದಡ ಏರಲು ಕಷ್ಟವಾಗುತ್ತಿದ್ದರಿಂದ ಒಂದೋಂದು ಟ್ರೈಲಿಗೆ ಎರಡೆರಡು ಇಂಜೆನಗಳನ್ನು ಹಚ್ಚಿ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತಂದು ಮೇಲಿನಿಂದ ಒಂದೆ ಇಂಜೆನ್ ಮೂಖಾಂತರ ತಗೆದುಕೊಂಡು ಹೊಗುತ್ತಿದ್ದಾರೆ. ಸದರಿ ಟ್ಯಾಕ್ಟರ ಇಂಜೆನ್ ನನ್ನು ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸುತ್ತಿದ್ದಾರೆ ಅಂತಾ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಒಂದು ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರ 1) ಜಾನಡೀರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ PY3029T211682 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸಿದ ಸ್ವರಾಜ ಕಂಪನಿಯ ಟ್ಯಾಕ್ಟರ ನಂ 2) ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ 47-3030STK14433 ಅಕಿ  4,00,000/-ರೂ. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಮರಳು ಸಾಗಾಣಿಕೆ ಮಾಡಲು ಬಳಸಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಸಿದ್ರಾಮಪ್ಪ ಹೊಸಮನಿ ಸಾ|| ಶಿವೂರ ಇವರು ಮಗಳು ಮತ್ತು ಅಳಿಯ ಇವರೊಂದಿಗೆ ವಾಸವಾಗಿರುತ್ತೇನೆ. ನನಗೆ ಗಂಡು ಮಕ್ಕಳು ಇಲ್ಲದ ಕಾರಣ ನನ್ನ ಮಗಳಾದ ಸಾವಿತ್ರಿ ಮತ್ತು ಅವಳ ಗಂಡನಾದ ಬಸವಂತಪ್ಪ ಇಬ್ಬರೂ ನನ್ನ ಹತ್ತಿರವೆ ಇದ್ದು ನನ್ನ ಹೆಸರಿನಲ್ಲಿದ್ದ ಶಿವೂರ ಸೀಮಾಂತರದ ಸರ್ವೆ 14/1 ನೇದ್ದರ 9 ಎಕರೆ 25 ಗುಂಟೆ ಜಮೀನಿನಲ್ಲಿ ಒಕ್ಕಲುತನದ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಹೊಲದ ಬಾಜು ಮನೋಹರ ತಂದೆ ಶರಣಪ್ಪ ಲಾಳಸಂಗಿ ಈತನ ಹೊಲ ಇರುತ್ತದೆ. ನಾನು ನನ್ನ ಹೊಲದ ಬಾಂದಾರಿಗೆ ನನ್ನ ಹೊಲದಲ್ಲಿ 30 ಸಾಗುವಾನಿ ಗಿಡಗಳನ್ನು ಹಚ್ಚಿರುತ್ತೇನೆ.  ದಿನಾಂಕ 29-09-2018 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ಹೊಲ ನೊಡಬೆಕೆಂದು ನನ್ನ ಹೊಲಕ್ಕೆ ಹೊದಾಗ ನನ್ನ ಹೊಲದಲ್ಲಿನ ಸಾಗುವಾನಿ ಗಿಡಗಳಲ್ಲಿ ಒಂದು ಗಿಡ ಗಾಳಿ ಮಳೆಗೆ ನಮ್ಮ ಬಾಜು ಹೊಲದ ಮನೋಹರ ಲಾಳಸಂಗಿ ಇವರ ಹೊಲದಲ್ಲಿ ಒಂದು ಗಿಡ ಬಿದ್ದಿತ್ತು. ಸದರಿ ಗಿಡವನ್ನು ನಾನು ಮತ್ತು ನನ್ನ ಮಗಳಾದ ಸಾವಿತ್ರಿ ಹಾಗೂ ನನ್ನ ಅಳಿಯ ಬಸವಂತಪ್ಪ ಮೂರು ಜನರು ಕೂಡಿ ನೊಡುತ್ತಿದ್ದಾಗ   ನಮ್ಮ ಬಾಜು ಹೊಲದ 1) ಮನೋಹರ ತಂದೆ ಶರಣಪ್ಪ ಲಾಳಸಂಗಿ 2) ಹಣಮಂತ ತಂದೆ ಶರಣಪ್ಪ ಲಾಳಸಂಗಿ 3) ಸರೂಬಾಯಿ ಗಂಡ ಮನೋಹರ ಲಾಳಸಂಗಿ ಸಾ|| ಮೂರು ಜನರು ಶಿವೂರ ಗ್ರಾಮ ಇವರು ನಮ್ಮ ಹತ್ತಿರ ಬಂದು ನನಗೆ ಬೋಸಡಿ ಮಕ್ಕಳ್ಯಾ ನಮ್ಮ ಹೊಲದಲ್ಲಿ ಯಾಕ ಗಿಡ ಬೀಳಸಿ ಬೆಳೆ ಹಾಳು ಮಾಡಿರಿ ಎಂದು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಮಳೆ ಗಾಳಿಗೆ ಬಿದ್ದಿದೆ ನಾವೇನು ಬೇಕು ಅಂತಾ ಬೀಳಿಸಿಲ್ಲ ಈಗ ತಗೆಯುತ್ತೇವೆ ಎಂದು ಹೇಳಿ ತಗೆಯಲು ಹೋದಾಗ ಮನೋಹರ ಈತನು ಈಗೇನು ತಗಿತಿರಿ ಬೋಸಡಿ ಮಕ್ಕಳ್ಯಾ ನಿಮ್ಮ ಸೊಕ್ಕ ಬಾಳ ಆಗ್ಯಾದ ಬಂದಾರಿ ಎಲ್ಲಾ ಹಾಳ ಮಾಡಿಬಿಟ್ಟಿರಿ ಎಂದು ಬೈಯುತ್ತಿದ್ದನು. ಆಗ ನಾವು ಯಾಕ ಬೈತಿ ಅಂತಾ ಕೇಳಿದ್ದಕ್ಕೆ ಮೂರು ಜನರೂ ಕೂಡಿ ನನ್ನ ಮೈ ಮೇಲೆ ಏರಿ ಬಂದು ನನ್ನ ಮೈ ಮೇಲಿನ ಅಂಗಿ ಹಿಡಿದು ಮನೋಹರ ಈತನು ಕೈಯಿಂದ ಹೊಡೆದನು. ಹಣಮಂತ ಈತನು ಅಲ್ಲೆ ಬಿದ್ದ ಒಂದು ಕಟ್ಟಿಗೆ ತಗೆದುಕೊಂಡು ನನ್ನ ತಲೆಗೆ ಹೊಡೆದನು. ಆಗ ನನ್ನ ಮಗಳು ಸಾವಿತ್ರಿ ಹಾಗೂ ನನ್ನ ಅಳಿಯ ಬಿಡಿಸಲು ಬಂದಾಗ ನನ್ನ ಅಳಿಯನಿಗೆ ತಳ್ಳಿ, ನನ್ನ ಮಗಳಿಗೆ ಸರೂಬಾಯಿ ಇವಳು ಕೈಯಿಂದ ಹೊಡೆದು ನೆಲಕ್ಕೆ ಕೆಡವಿರುತ್ತಾಳೆ. ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನನ್ನ ಅಳಿಯ ಬಸವಂತಪ್ಪ ಹಾಗೂ ಜಗಳದ ಬಾಯಿ ಸಪ್ಪಳ ಕೇಳಿ ಬಂದ ನನ್ನ ಅಣ್ಣನ ಮಗ ಭಗವಂತ್ರಾಯ ಹೊಸಮನಿ ಇವರು ಬಂದು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಗೀರಿಶ ಹಣಗುಜಿ ಸಾ:ಬೆಳಮಗಿ ಗ್ರಾಮ ಇವರು ತಮ್ಮೂರು ಸೀಮಾಂತರದ ಸರ್ವೆ ನಂ:341 ವಿಸ್ತೀರ್ಣ 4 ಎಕರೆ 30 ಗುಂಟೆ ಜಮೀನಿದ್ದು ನಾನು ಮತ್ತು ನನ್ನ ಕುಟುಂಬದವರು ಸದರಿ ಜಮೀನನ್ನು ಉಳಿಮೆಮಾಡಿ ಉಪಭೋಗ ಮಾಡುತ್ತಿದ್ದು  ಸದರಿ ಜಮೀನು ಬಿಟ್ಟು ನಮಗೆ ಉಪ  ಜೀವನ ಮಾಡಲು ಯಾವುದೇ ತರಹದ ಸಾಧನೆ ಇಲ್ಲ. ಹೀಗಾಗಿ ಸದರಿಯವರು ಹೊಲ ಕಬಳಿಸುವ ಉದ್ದೇಶ ಇಟ್ಟಿಕೊಂಡು ಹಾಣಾದಿಯಿಂದ ಹೋಗಿ ಬರಲು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶಮಾಡಿ ತೊಂದರೆ ಮಾಡುತ್ತಿದ್ದಾರೆ, ಹಾಗೂ ನನ್ನ ಹೊಲದಲ್ಲಿದ್ದ ಬೋರವೆಲ್ ಮೋಟಾರದ ವೈಯರನ್ನು ಕಟ್ಟ್ ಮಾಡುವುದು ಪೈಪ್ ಒಡೆಯುವುದು ಮಾಡಿ ನನಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಇದರಿಂದ ನಾನು ಹತಶಾಯನಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡು ಬೆಳಮಗಿ ಗ್ರಾಮ ಬಿಟ್ಟು ಓಡಿ ಹೋಗುವಂತೆ ವರ್ತಿಸುತ್ತಿದ್ದಾರೆ. ಹಾಗೂ ಕವಿರಾಜ ಎಂಬವನು ಮಗನಾ ಪೊಲೀಸ್ ಸ್ಟೇಷನ ಹೋಗಿದಿ ಈಗ ಹೋಗಿನೋಡಿ ನಿನಗ ಖಲಾಸ ಮಾಡಿ ಹೋಗುತ್ತೇವೆ ಎಂದು ಜೀವದ ಬೇದರಿಕೆ ಹಾಕಿ ಇಲ್ಲ ಸಲ್ಲದ ಸುಳ್ಳು ಆರೋಪ ಹೊರಿಸುವ ಒಳಸಂಚು ನೀರುಪಿಸುತ್ತಿದ್ದಾರೆ.  ದಿನಾಂಕ:30/07/2018  ರಂದು  ಕವಿರಾಜ ಎಂಬುವನು ನನ್ನ ಮೇಲೆ ಹಲ್ಲೆ ಮಾಡಿದ್ದು, ಅದಕ್ಕೆ ಅರುಣಕುಮಾರ ಎಂಬುವನು ಪ್ರಚೋದನೆ ನೀಡಿದನು ಆಗ ನಾನು ನರೋಣಾ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿ  ನೀಡಿರುತ್ತೇನೆ. ತದನಂತರ ನಾನು ಭಯದ ಕಾರಣ ಗ್ರಾಮಕ್ಕೆ ಹೋಗಿರುವುದಿಲ್ಲ. ತದನಂತರ  ದಿನಾಂಕ: 07/08/2018 ರಂದು ಸರ್ಕಲ್ ಇನ್ಸಪೆಕ್ಟರ್ ಆಳಂದಕ್ಕೆ ಹೋಗಿ ಫಿರ್ಯಾದಿ  ನೀಡಿದಾಗ ಸರ್ಕಲ್ ಸಾಹೇಬರು ಸದಿಯವನಿಗೆ ಕರೆಸಿ ತಾಕಿತು ಮಾಡಿ ಪಾಬಂದಿ ಬರೆದುಕೊಂಡು ನನ್ನ ತಂಟೆ ತಕರಾರಿಗೆ ಬರದಂತೆ ಬರೆದಿಕೊಂಡಿರುತ್ತಾರೆ. ನಂತರ ದಿನಾಂಕ:29/09/2018 ರಂದು ನಾನು ಅರುಣಕುಮಾರನಿಗೆ ನಿಮ್ಮ ಅಣ್ಣ ಸದರಿ ವರ್ತನೆ ಬಿಟ್ಟಿರುವುದಿಲ್ಲ ಭಯಹಾಕುತ್ತಾನೆಂದು ಹೇಳಿದಾಗ ಏ ಬೋಸಡಿ ಮಗನಾ ನಿಂದು ಹೆಚ್ಚಾಯಿತು ನಿನಗೆ ಹೊಡದೆ ಪೊಲೀಸ್ ಠಾಣೆಗೆ ಹೋಗುತ್ತೇವೆಂದು ಕವಿರಾಜನಿಗೆ ಹೊಡಿರೋ ಮಗನಿಗೆ ಅಂತಾ ಹೇಳಿರುತ್ತಾನೆ. ಆಗ ನನ್ನ ಪಕ್ಕದಲ್ಲಿದ್ದ ನಮ್ಮ ಅಣ್ಣ ಬಸವರಾಜ ತಂದೆ ಸಿದ್ರಾಮಪ್ಪಾ ಹಣಗುಜಿ ನನ್ನ ಹೆಂಡತಿಯಾದ ಶ್ರೀಮತಿ.ನಾಗಮ್ಮ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಸರ್ ಕವಿರಾಜ ಹಾಗೂ ಅರುಣಕುಮಾರ ತನ್ನ ಹಣಬಲ ತೋಳ ಬಲ ಉಳ್ಳವರಾಗಿದ್ದು ನನ್ನ ಮೇಲೆ ಪದೇ ಪದೇ ಹಲ್ಲೇ ಮಾಡುವುದು ಭಯಹುಟ್ಟಿಸುವುದು ಮಾಡುತ್ತಿದ್ದಾರೆ. ಇವರ ಭಯ ಹಾಗೂ ಕಾಟಕ್ಕೆ ಅಂಜಿ ನನ್ನ ಜಮೀನು ಬೇರೆಯವರಿಗೆ ಪಾಲದ ರೂಪದಲ್ಲಿ ಹಚ್ಚಿದರು ಕೂಡ ಅವರಿಗೆ ಕೂಡ ಭಯ ಹುಟ್ಟಿಸಿ ಹೊಲ ಬಿಡಿಸಿರುತ್ತಾರೆ.  ಅಂಥಾ ಸಲ್ಲಿಸಿದ ದುರು ಸಾರಂಸದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.