POLICE BHAVAN KALABURAGI

POLICE BHAVAN KALABURAGI

26 May 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನರೋಣಾ ಠಾಣೆ : ಅಂಬಾರಾಯ ತಂದೆ ಜಗನ್ನಾಥ ಚಿಕ್ಕನಾಗಾಯಿ ಸಾ : ಲಾಡಮುಗಳಿ  ರವರು ದಿನಾಂಕ: 24/5/2018 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಶಿವಕುಮಾರ ತಂದೆ ಶಾಂತಪ್ಪ ರೇಕಳಗಿ ಇಬ್ಬರು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ನಮ್ಮ ಗ್ರಾಮದ ನಮ್ಮ ಸ್ನೇಹಿತನಾದ ಭೀಮಶ್ಯಾ ತಂದೆ ಶರಣಪ್ಪ ನಾಟೀಕಾರ ಇತನು ತನ್ನ ಮೊಟಾರ್ ಸೈಕಲ್ ನಂ: ಕೆಎ32-ಇಜೆ2028 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ವ್ಹಿ.ಕೆ ಸಲಗರ ಗ್ರಾಮಕ್ಕೆ ಹೋಗಿ ಬರೋಣಾ ನಡೆಯರಿ ಎಂದು ನನಗೆ ಮತ್ತು ಶಿವಕುಮಾರನಿಗೆ ತಿಳಿಸಿದ ಮೇರೆಗೆ ನಾವುಗಳು ಒಪ್ಪಿ ನಾವು ಇಬ್ಬರು ಅವನ ಮೋಟಾರ್ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೇವು. ಭೀಮಶ್ಯಾ ಈತನು ಮೊಟಾರ್ ಸೈಕಲ್ ಚಲಾಯಿಸುತ್ತಿದ್ದನು ವ್ಹಿ ಕೆ ಸಲಗರ ತಾಂಡಾದ ಹತ್ತಿರದಲ್ಲಿದ್ದಾಗ ಸಂಜೆ 6-30 ಗಂಟೆ ಸುಮಾರಿಗೆ ವ್ಹಿ ಕೆ ಸಲಗರ ಗ್ರಾಮದ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕನು ತನ್ನ ಅಧಿನದಲ್ಲಿಯ ಮೊಟಾರ್ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಮೂರುಜನರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಗೆ ಎದುರಿನಿದ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೂರುಜನರು ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿರುತ್ತೇವೆ, ಅಲ್ಲದೇ ನಮಗೆ ಅಪಘಾತ ಪಡಿಸಿದ ಮೋಟಾರ್ ಸೈಕಲ ಚಾಲಕ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಸಹ ಮೊಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿದನು. ನನಗೆ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ನಾನು ಕುಳಿತಿದ್ದ ಮೊಟಾರ್ ಸೈಕಲ ಚಲಾಯಿಸುತ್ತಿದ್ದ ಭೀಮಶ್ಯಾ ಈತನಿಗೆ ಎಡಗಣ್ಣಿನ ಹುಬ್ಬಿನ ಮೇಲ್ಬಾಗಕ್ಕೆ ಭಾರಿ ರಕ್ತಗಾಯವಾಗಿ ಅಸ್ವಸ್ಥನಾಗಿದ್ದನು. ಶಿವಕುರನಿಗೂ ಸಹ ಅಲ್ಲಲ್ಲಿ ಗಾಯಗಳಾಗಿದ್ದವು. ಅಪಘಾತ ಪಡಿಸಿದ ಮೊಟಾರ್ ಸೈಕಲ ನೋಡಲಾಗಿ ಕೆಎ32-ಎಸ್1456 ಅಂತಾ ಇದ್ದು  ಅದರ ಚಾಲಕನು ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಅಲ್ಲಿಯೇ ಬಿದ್ದಿದ್ದು ಚಾಲಕನ ಹೆಸರು ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನವಿನ ತಂದೆ ಅಪ್ಪಯ್ಯ ಸಾಲಿಮಠ ಇಬ್ಬರು ಸಾ||ವ್ಹಿ ಕೆ ಸಲಗರ ಎಂದು ಅವರಿಂದಲೇ ಗೊತ್ತಾಗಿರುತ್ತದೆ. ಅéಷ್ಟರಲ್ಲಿಯೇ ವ್ಹಿ ಕೆ ಸಲಗರ ಗ್ರಾಮದ ಸಂತೋಷ ಚಿತಕೋಟಿ ಎಂಬುವರು ಬಂದು ಕಲಬುರಗಿ ಕಡೆಗೆ ಬರುತ್ತಿದ್ದ ಒಂದು ಕ್ರೂಜರ ಜೀಪಿನಲ್ಲಿ ನಮಗೆ 5ಜನಕ್ಕೆ ಹಾಕಿಕೊಂಡು ಬರುವಾಗ ಮಹಾಗಾಂವ ಕ್ರಾಸ್ ದಾಟಿ ಬರುವಾಗ ಸಂಜೆ 7-45 ಗಂಟೆ ಸುಮಾರಿಗೆ ಭೀಮಶ್ಯಾ ನಾಟೀಕಾರ ಈತನು ಮೃತ ಪಟ್ಟಿರುತ್ತಾನೆ. ನಾನು (ಅಂಬರಾಯ) ಶಿವಕುಮಾರ ಮಲ್ಲಿಕಾರ್ಜುನ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ನವಿನನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾನೆ. ಭೀಮಶ್ಯಾ ಇವರ ಶವವು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದು ಇರುತ್ತದೆ. ಈ ಅಪಘಾತ ಪಡಿಸಿದ ಮೊಟಾರ್ ಸೈಕಲ ನಂ ಕೆಎ32-ಎಸ್1456 ನೇದ್ದರ ಚಾಲಕನಾದ ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಸಾ||ವ್ಹಿ ಕೆ ಸಲಗರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಬಾಬುಮಿಯಾ ತಂದೆ ಮೋದಿನಸಾಬ ಪಟವಾರಿ  ರವರು  ದಿನಾಂಕ:24/15/18 ರಂದು ಬೆಳಿಗ್ಗೆ ತಮ್ಮೂರಿನ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಲಾಲ ಅಹ್ಮದ ತಂದೆ ಬಾಬುಮಿಯಾ ಪಟವಾರಿ 2) ಜರಿನಾ ಗಂಡ ಲಾಲ್ ಅಹ್ಮದ ಪಟವಾರಿ ಸಾ: ಇಬ್ಬರು ಕಣ್ಣೂರ  ತಮ್ಮ ಹೊಲ ಸರ್ವೆೇ ನಂ. 16/5 ನೇದ್ದರ ಜಮಿನಿನಲ್ಲಿ ನೀರು ಬರುವ ವಿಷಯದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ದುಖಃಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಾಗೇಶ ತಂದೆ ಜಗದೇವಪ್ಪಾ ಸಾರಥಿ ಸಾ: ಹರಸೂರ ತಾ:ಜಿ: ಕಲಬುರಗಿ ರವರು ದಿನಾಂಕ: 24/05/2018 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಜಗದೇವಿ ಇಬ್ಬರು ನಮ್ಮ ಮನೆಯಲ್ಲಿದ್ದಾಗ 1)ಸಂತೋಷ ತಂದೆ ಜಗದೇವಪ್ಪಾ 2) ಕಾಶಿಬಾಯಿ  ಇಬ್ಬರು ಸಾ: ಹರಸೂರ ತಾ:ಜಿ: ಕಲಬುರಗಿ ರವರು ಕುಡಿಕೊಂಡು  ಖುಲ್ಲಾ ಜಾಗೆ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಬಡಿಗೆಯಿಂದ ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 May 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ಪರ್ವತರೆಡ್ಡಿ ತಂದೆ ಬಸವರೆಡ್ಡಿ ಸಾ:ನಾವದಗಿ ಇವರು ದಿನಾಂಕ 22/05/2018 ರಂದು ರಾತ್ರಿ 2-30 ಎ.ಎಂ ಕ್ಕೆ ಕಾರ ನಂ ಕೆಎ 51 ಎಂ.ಎಫ್ 2533 ನೇದ್ದರ ಚಾಲಕನಾದ  ಮಡಿವಾಳಪ್ಪನು ಜೇವರ್ಗಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಜೇವರ್ಗಿಯಿಂದ ಶಹಾಬಾದಕ್ಕೆ ಹೊಗುವಾಗ ತೊನಸಹಳ್ಳಿ ದಾಟಿ ದಾದೀಪೀರ ದರ್ಗಾದ ಹತ್ತಿರ ರಸ್ತೆಯ ಎಡಗಡೆ ಚಾಲಕನು  ಕಾರ ಪಲ್ಟಿಮಾಡಿದ್ದು,  ಅದರಲ್ಲಿದ್ದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಶಹಾಬಾದ ಆಸ್ಪತ್ರೆಗೆ ತೋರಿಸಿಕೊಂಡಿರುತ್ತೇನೆ ನಮ್ಮ ಡಸ್ಟರ ಕಾರ ಅಪಘಾತದಲ್ಲಿ ಪೂರ್ತಿ ಜಕ್ಕಂ ಆಗಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ಬಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿರಣ್ಣ ತಂದೆ ಚಂದ್ರಾಮಪ್ಪ ಪಾಟೀಲ ಸಾ: ಕೂಡಲ ಹಂಗರಗಾ ತಾ: ಆಳಂದ ರವರದು ಟಾಟಾ ಸುಮೊ ವಾಹನ ಇದ್ದು ಅದರ ನಂಬರ ಕೆಎ-32 ಬಿ-7548 ಇದ್ದು, ಸದರಿ ಟಾಟಾ ಸುಮೊ ವಾಹನವನ್ನು 2017 ರ ಡಿಸೆಂಬರ ತಿಂಗಳಲ್ಲಿ ಅಫಜಲಪೂರ ಬಿ.ಎಸ್.ಎನ್.ಎಲ್ ಕಛೇರಿಯವರಿಗೆ ಲೀಜ್ ಮೇಲೆ ಕೊಟ್ಟಿರುತ್ತೇನೆ. ಸದರಿ ಟಾಟಾ ಸುಮೋದ ಮೇಲೆ ಬಸವರಾಜ ತಂದೆ ಸಾತಲಿಂಗಪ್ಪ ಬಗಲಿ ಸಾ : ಮಾತೋಳಿ ತಾ : ಅಫಜಲಪೂರ ಈತನು ಡ್ರೈವರ ಇರುತ್ತಾನೆ. ನಮ್ಮ ವಾಹನ ಚಾಲಕ ಬಸವರಾಜನು ಬಿ.ಎಸ್.ಎನ್.ಎಲ್ ಕಛೇರಿಯವರು ತಿಳಿಸಿದ ಪ್ರಕಾರ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಟಾಟಾ ಸುಮೊವನ್ನು ಚಾಲನೆ ಮಾಡಿ ಸಂಜೆ ಟಾಟಾ ಸುಮೋವನ್ನು ತನ್ನ ಊರಾದ ಮಾತೋಳಿಗೆ ತಗೆದುಕೊಂಡು ಹೋಗಿ ತನ್ನ ಮನೆಯ ಮುಂದೆ ನಿಲ್ಲಿಸುವುದು ದಿನಂಪ್ರತಿಯ ವಾಡಿಕೆಯಾಗಿರುತ್ತದೆ.  ದಿನಾಂಕ 03-03-2018 ರಂದು 7:15 ಪಿ ಎಮ್ ಕ್ಕೆ ನಾನು ನಮ್ಮೂರಿನಲ್ಲಿದ್ದಾಗ, ಮಾತೋಳಿ ಗ್ರಾಮದ ನನಗೆ ಪರಿಚಯದವರಾದ ಮಹಾಂತಪ್ಪ ತಂದೆ ಅಲಬಣ್ಣ ಬಬಲೇಶ್ವರ ಇವರು ನನಗೆ ಪೋನ ಮಾಡಿ ನಿಮ್ಮ ಟಾಟಾ ಸುಮೊದ ಚಾಲಕನಾದ ಬಸವರಾಜ ಬಗಲಿ ಈತನು ಈಗ 7:00 ಗಂಟೆ ಸುಮಾರಿಗೆ ಟಾಟಾ ಸುಮೊವನ್ನು ತನ್ನ ಮನೆಯ ಮುಂದೆ ನಿಲ್ಲಿಸಲು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಫಜಲಪೂರಕಲಬುರಗಿ ರೋಡಿಗೆ ಇರುವ ಅಫಜಲಪೂರ ಪಟ್ಟಣದ ಬುಜುರಿ ಕಾಲೇಜ ಕ್ರಾಸ ಹತ್ತಿರ ಟಾಟಾ ಸುಮೊ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಹಿಸಿಕೊಂಡು ಹೋಗಿ, ಒಂದು ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿ ನಂತರ ಟಾಟಾ ಸುಮೊವನ್ನು ಗಿಡಕ್ಕೆ ಹೋಗಿ ಗುದ್ದಿಸಿರುತ್ತಾನೆ. ಸದರಿ ಡಿಕ್ಕಿಯಿಂದ ಅಫಜಲಪೂರ ಪಟ್ಟಣದ ಧಾನಮ್ಮ ಗಂಡ ಪ್ರಕಾಶ ಮನ್ಮಿ ಎಂಬುವವರಿಗೆ ರಕ್ತಗಾಯಗಳು ಮತ್ತು ಗುಪ್ತಗಾಯಗಳು ಆಗಿರುತ್ತವೆ. ನಿಮ್ಮ ಚಾಲಕನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ ನೀವು ಬೇಗ ಬನ್ನಿ ಎಂದು ತಿಳಿಸಿದನು. ಆಗ ನಾನು ಮತ್ತು ನನ್ನ ಮಗನಾದ ಚಂದ್ರಕಾಂತ, ಹಾಗೂ ನಮ್ಮೂರಿನ ಕಲ್ಯಾಣಿ ತಂದೆ ಮಲಕಣ್ಣ ನಗದೆ, ಬಸವರಾಜ ತಂದೆ ಈರಣ್ಣ ಬಸ್ತೆ, ಎಲ್ಲರೂ ಕೂಡಿ ಮೋಟರ ಸೈಕಲಗಳ ಮೇಲೆ ಅಫಜಲಪೂರಕ್ಕೆ ಬಂದಿರುತ್ತೇವೆ. ಆಗ ನಮ್ಮನ್ನು ಎಕ್ಸಿಡೆಂಟನ್ನು ಪ್ರತ್ಯಕ್ಷವಾಗಿ ನೋಡಿ ನನಗೆ ಪೋನ ಮಾಡಿದ ಮಹೇಶ ನಿಂಬಾಳ ಸಾ|| ಅಫಜಲಪೂರ ಈತನು ನಮ್ಮನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿರುತ್ತವೆ. ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಟಾಟಾ ಸುಮೊ ವಾಹನ ರೋಡಿನ ಪಕ್ಕದಲ್ಲಿ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ಬಾಡಿ ಜಕಂ ಆಗಿ ನಿಂತಿತ್ತು, ನಂತರ ನಾವು ಎಕ್ಸಿಡೆಂಟನಲ್ಲಿ ಗಾಯಹೊಂದಿದ ಧಾನಮ್ಮ ಮನ್ಮಿ ರವರ ಬಗ್ಗೆ ವಿಚಾರಿಸಲು, ಸದರಿ ಧಾನಮ್ಮ ಇವರನ್ನು ಅವರ ಸಂಭಂದಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 May 2018

KALABURAGI DISTRICT REPORTED CRIMES


ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಅಭಿಮಾನ್ಯತಂದೆಮೂಕಪ್ಪತೆಳಗೇರಿವಯ ಸಾ: ನರಿಬೋಳಗ್ರಾಮತಾ: ಜೇವರಗಿಜಿ; ಕಲಬುರಗಿ ನಮ್ಮೂರ ಗುರುರಾಜ ಸುಭೆದಾರ ಈತನು ಮೊದಲಿನಿಂದಲು ಚುನಾವಣೆಯಲ್ಲಿ ನಾವು ಬಿಜೆಪಿ ಪರವಾಗಿ ಓಡಾಡಿದ ವಿಷಯದಲ್ಲಿ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದು ನನ್ನ ಮೇಲೆ ದ್ವೇಶಸಾಧಿಸುತ್ತಾಬಂದಿರುತ್ತಾನೆ.ದಿನಾಂಕ 17/05/2018 ರಂದು ಸಾಯಂಕಾಲ ಸುಮಾರಿಗೆ ಬಿಜೆಪಿಯ ಶ್ರೀಯಡಿಯೂರಪ್ಪರವರುಮುಖ್ಯಮಂತ್ರಿಗಳಾಗಿಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಗುರುರಾಜ ಸುಬೇದಾರ ಇವರ ಮನೆಯ ಮುಂದಿನ ರಸ್ತೆಯಲ್ಲಿ ಪಟಾಕಿ ಹೊಡೆದಿರುತ್ತಾರೆ. ಆವಿಷಯದಲ್ಲಿ ಗುರುರಾಜ ಸುಬೇದಾರ ಇತನು ನನಗೆ ನೀಮ್ಮಹುಡುಗರುಈರೀತಿಯಾಕೆ? ಮಾಡುತ್ತಿದ್ದಾರೆಎಂದು ಬೈದಿರುತ್ತಾನೆ. ಹೀಗಿದ್ದು ದಿನಾಂಕ; 18/05/2018 ರಂದು ರಾತ್ರಿ 8-00 ಪಿಎಮ್ಸುಮಾರಿಗೆ ನಾನು ನಮ್ಮ ಅಳಿಯನಾದ ಹಣಮಂತ ತಂದೆ ಮಹಾದೇವಪ್ಪಹೊಟ್ಟೆಗೊಳ ಇವರ ಮನೆಯ ಮುಂದೆಇದ್ದಾಗ 1) ಗುರುರಾಜ ತಂದೆ ಹಣಮಂತರಾಯ ಸುಬೇದಾರ 2) ಮರೆಪ್ಪ ತಂದೆ ಶರಣಪ್ಪ ಹೊಟ್ಟೆ, ಮತ್ತು 3) ಬುಡ್ಡೆಸಾಬ ತಂದೆ ಹಾಜಿಸಾಬ ಕಡಬೂರ 4)  ನಬೀಸಾಬ ತಂದೆ ಉಸ್ಮಾನಸಾಬ ವಸ್ತಾದ 5) ಗೂಡುಸಾಬ ತಂದೆ ಉಸ್ಮಾನ ನಾಯ್ಕೊಡಿ 6) ಸಿದ್ದಪ್ಪ ತಂದೆ ಶಿವಶರಣಪ್ಪ ಏಡಿ, 7)  ಶರಣಬಸಪ್ಪ ತಂದೆ ಸಿದ್ದಪ್ಪ ಏಡಿ, 8) ನಾಗಪ್ಪ ತಂದೆ ಬಸವರಾಜ ಏಡಿ ಸಾಃ ಎಲ್ಲರೂ ನರಿಬೊಳ ಇವರೆಲ್ಲರೂ ಅಕ್ರಮಕೂಟಕಟ್ಟಿಕೊಂಡು ನನ್ನ ಹತ್ತಿರ ಬಂದುಏರಂಡಿಮಗನೆ ಅಬೀಮಾನ್ಯ ಸೂಳೆಮಗನೆ ನೀವು ಬಿಜೆಪಿ ಪರ ಓಟಹಾಕುತ್ತೀರಿ ಭೋಸಡಿ ಮಕ್ಕಳೆ ಮತ್ತು ಊರಲ್ಲಿ ಪಟಾಕಿ ಹೊಡೆಸುತಿ ರಂಡೀಮಗನೆ ಎಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ಆಗ ನಾನು ಎಲ್ಲಿ ಅವರಸಂಗಡ ಕಿರಕಿರಿ ಎಂದು ಅಲ್ಲಿಂದ ಹೊಗುತ್ತಿದ್ದಾಗ ಮರೆಪ್ಪ ಹೊಟ್ಟೆಇತನು ಬಂದು ನನಗೆ ತಡೆದು ನಿಲ್ಲಿಸಿದನು. ಸಿದ್ದಪ್ಪಏಡಿ, ಮತ್ತು ನಬೀಸಾಬ ವಸ್ತಾದ ಇವರುಏ ಬೇಡ ಜಾತಿ ಸೂಳಿ ಮಗನೆ ನೀನು ನಮಗೆ ನುಕೇಳುತ್ತಿ ಊರಲ್ಲಿ ನಿನ್ನದು ಸೊಕ್ಕುಬಹಳ ಆಗಿದೆ. ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಮತ್ತು ಗುರುರಾಜ ಸುಬೇದಾರ ಮತ್ತು ಉಳಿದವರು ಕೂಡಿ ಬೋಸಡಿ ಮಗನೆ ನೀನು ಬಿಜೆಪಿ ಪಕ್ಷದ ಕಡೆಗೆ ಓಟುಮಾಡುತ್ತಿ ಮಗನೆ ನೀನು ಇನ್ನು ಮುಂದೆ ಊರಲ್ಲಿ ಹೇಗೆ ಜೀವನಮಾಡುತ್ತಿ ನಿನಗೆ ನೋಡಿಕೊಳ್ಳುತ್ತೇವೆ ಎಂದು ಹೊಡೆಯಲು ಬಂದರು. ಆಗ ಈಘಟನೆಯನ್ನು ನೋಡಿ ನನ್ನ ಹೆಂಡತಿ ಮರೆಮ್ಮ ಗಂಡ ಅಭಿಮಾನ್ಯ ತಳಗೇರಿ ಹಾಗು ನಮ್ಮಅಣ್ಣನ ಮಗಳು ಸಾಬಮ್ಮ ಗಂಡ ಹಣಮಂತ ಹೊಟ್ಟೆ ಇವರು ಬಿಡಿಸಲು ಬಂದಾಗ ಅವರಿಗೂ ಕೂಡಾಏಬ್ಯಾಡ ಸೂಳೆಯರೆ ಇಲ್ಲಿಂದ ಹೋಗಿರಿ ಎಂದು ಅವಾಚ್ಯವಾಗಿ ಜಾತಿ ಎತ್ತಿ ಬೈದಿರುತ್ತಾರೆ. ಅಷ್ಟರಲ್ಲಿಯೇ ನಮ್ಮೂರ ಕಾಸೀಮಸಾಬ  ಕೊತವಾಲ, ಭೀಮರಾಯ ತಂದೆ ಸಾಬಣ್ಣ ಲಾಡ್ಲಾಪೂರ,  ಈಶಪ್ಪ ತಂದೆ ಬಸಪ್ಪ ದೊಡ್ಮನಿ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಗುರುರಾಜ ತಂದೆ ಹಣಮಂತರಾವ ಸುಭೆದಾರ ಸಾ: ನರಿಬೋಳ ಗ್ರಾಮ ತಾ: ಜೇವರಗಿ ಜಿ; ಕಲಬುರಗಿ ರವರು ನಮ್ಮೂರ ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ ಈತನು ಮೊದಲಿನಿಂದಲು ಚುನಾವಣೆಯಲ್ಲಿ ನಾವು ಕಾಂಗ್ರೇಸ್ ಪರವಾಗಿ ಮತದಾನ ಮಾಡಿದ ವಿಷಯವಾಗಿ ಮತ್ತು ಕಾಂಗ್ರೇಸ್ ಪರವಾಗಿ ಓಡಾಡಿದ ವಿಷಯದಲ್ಲಿ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದು ನನ್ನ ಮೇಲೆ ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ. ಮತ್ತು ದಿನಾಂಕ; 17/05/2018 ರಂದು ಸಾಯಂಕಾಲ 7-00 ಪಿಎಮ್ ಸುಮಾರಿಗೆ ನರಿಬೋಳ ಗ್ರಾಮದ ಪಂಚಾಯತಿ ಹತ್ತಿರ 01) ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ 02) ಅಭಿಮಾನ್ಯೂ ತಂದೆ ಮೂಕಪ್ಪ ತೆಳಗೇರಿ 03) ಶರಣಪ್ಪ ಚಿಕ್ಕಜೇವರಗಿ 04) ಮಲ್ಲಪ್ಪ ತಂದೆ ಮೂಕಪ್ಪ ತೆಳಗೇರಿ 05) ಮಲ್ಲಪ್ಪ ಕೊಳ್ಳುರು 06) ಸಿದ್ದಪ್ಪ ತಂದೆ ಜನ್ನಪ್ಪ ಕಿರದಳ್ಳಿ 07) ಸಾಬಣ್ಣ ತಂದೆ ಬಸಪ್ಪ ದೊಡಮನಿ 08) ಮಾರ್ತಂಡ್ ತಂದೆ ಮೂಕಪ್ಪ ತೆಳಗೇರಿ ಸಾ: ಎಲ್ಲರೂ ನರಿಬೋಳ ಗ್ರಾಮ ಇವರು ಕೂಡಿ ಬೋಸಡಿ ಮಕ್ಕಳೆ ನೀವು ಕಾಗ್ರೇಸ್ ಗೆ ಓಟು ಹಾಕುತ್ತೀರಿ ನೀವು ಊರಲ್ಲಿ ಹೇಗೆ ಸಂಸಾರ ಮಾಡುತ್ತೀರಿ ಕಬ್ಬಲಿಗೆರೆ ಎಂದು ಅವಾಚ್ಯವಾಗಿ ಬೈದು ಬಾಯಿ ತಕರಾರು ಮಾಡಿ ಚಪ್ಪಲಿಯಿಂದ ಶಿವಶರಣಪ್ಪ ಈತನಿಗೆ ಹೊಡೆದಿರುತ್ತಾರೆ. ಆಗ ನಾನು ಚುನಾವಣೆಯಲ್ಲಿ ಅವರ ಮನಸಿಗೆ ಬಂದವರಿಗೆ ಓಟು ಹಾಕುತ್ತಾರೆ ಹೋಗಲಿ ಬಿಡರಿ ಎಂದು ತಿಳಿಸಿ ಹೇಳಿ ಜಗಳ ಬಿಡಿಸಿರುತ್ತೇನೆ. ಆಗ ನನಗೆ ಕೂಡ ತಕರಾರು ಮಾಡಿರುತ್ತಾರೆ ದಿನಾಂಕ; 18/05/2018 ರಂದು ರಾತ್ರಿ 8-00 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಮನೆಯ ಮುಂದೆ 01) ಮಹಾದೇವ ತಂದೆ ಸೈಬಣ್ಣ ಲಾಡ್ಲಾಪೂರ 02) ಅಭಿಮಾನ್ಯೂ ತಂದೆ ಮೂಕಪ್ಪ ತೆಳಗೇರಿ 03) ಶರಣಪ್ಪ ಚಿಕ್ಕಜೇವರಗಿ 04) ಮಲ್ಲಪ್ಪ ತಂದೆ ಮೂಕಪ್ಪ ತೆಳಗೇರಿ 05) ಮಲ್ಲಪ್ಪ ಕೊಳ್ಳುರು 06) ಸಿದ್ದಪ್ಪ ತಂದೆ ಜನ್ನಪ್ಪ ಕಿರದಳ್ಳಿ 07) ಸಾಬಣ್ಣ ತಂದೆ ಬಸಪ್ಪ ದೊಡಮನಿ 08) ಮಾರ್ತಂಡ್ ತಂದೆ ಮೂಕಪ್ಪ ತೆಳಗೇರಿ ಸಾ: ಎಲ್ಲರೂ ನರಿಬೋಳ ಗ್ರಾಮ ಇವರೆಲ್ಲರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಬೇಡ ಜಾತಿಯವರಾದ ಅಭಿಮಾನ್ಯೂ ತೆಳಗೇರಿ ಮತ್ತು ಕುರುಬ ಜಾತಿಯವನಾದ ಸಿದ್ದಪ್ಪ ಕಿರದಳ್ಳಿ ಇವರು ಕೂಡಿ ಏ ರಂಡಿ ಮಕ್ಕಳೆ ನೀವು ಕಾಂಗ್ರೇಸಗೆ ಓಟ ಹಾಕುತ್ತೀರಿ ಭೋಸಡಿ ಮಕ್ಕಳೆ ನಿಮಗೆ ಕುಡಿಯಲು ನೀರು ಇಲ್ಲದಂತೆ ಮಾಡುತ್ತೇವೆ ಊರಲ್ಲಿ ಹೇಗೆ ಜೀವನ ಮಾಡುತ್ತೀರಿ ನಿಮಗೆ ನೋಡಿಕೊಳ್ಳುತ್ತೇವೆ. ಎಂದು ಬೈದು ನಮ್ಮ ಮನೆಯ ಮುಂದೆ ಇದ್ದ ನೀರಿನ ನಳದ ಮೇಲೆ ಕಲ್ಲು ಹಾಕಿ ಹಾಳು ಮಾಡಿರುತ್ತಾರೆ. ಆಗ ನಾನು ಕೇಳಲು ಹೋದರೆ. ಮಹಾದೇವ ಲಾಡ್ಲಾಪೂರ ಈತನು ಏ ಬೇಡ ಜಾತಿ ಸೂಳಿ ಮಗನೆ ನೀನು ಏನು ಕೇಳುತ್ತಿ ಊರಲ್ಲಿ ನಿನ್ನದು ತಿಂಡಿ ಬಾಳ ಆಗಿದೆ. ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ. ಮತ್ತು  ಮಲ್ಲಪ್ಪ ತಳಗೇರಿ ಹಾಗು ಮಾರ್ತಂಡ್ ತಳಗೇರಿ ಮತ್ತು ಉಳಿದವರು ಕೂಡಿ ಬೋಸಡಿ ಮಗನೆ ನೀನು ಕಾಂಗ್ರೇಸ್ ಪರವಾಗಿ ಓಟು ಮಾಡುತ್ತಿ ಮಗನೆ ನೀನು ಇನ್ನು ಮುಂದೆ ಊರಲ್ಲಿ ಹೇಗೆ ಜೀವನ ಮಾಡುತ್ತಿ ನಿನಗೆ ನೋಡಿಕೊಳ್ಳುತ್ತೇವೆ ಎಂದು ಬಡಿಗೆ ಮತ್ತು ಕಲ್ಲಿನಿಂದ ನನಗೆ ಹೊಡೆಯಲು ಬಂದರು. ಆಗ ಈ ಘಟನೆಯನ್ನು ನೋಡಿ ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿದ್ದ ರಾಮು ತಂದೆ ಮರೆಪ್ಪ ಹೊಟ್ಟೆ, ಮಲ್ಲಪ್ಪ ತಂದೆ ಭೀಮರಾಯ ಹುಲಕಲ್, ಮಹೇಶ ತಂದೆ ಮರೆಪ್ಪ ಮೇಲಿನ ಮನಿ ಹಾಗು ನರಸಪ್ಪ ತಂದೆ ಹಣಮಂತ ರಾವೂರ ಇವರೆಲ್ಲರು ಕೂಡಿ ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಾನು ಅವರಿಂದ ಜೀವಕ್ಕೆ ಹೆದರಿ ತಪ್ಪಿಸಿಕೊಂಡು ನಮ್ಮ ಮನೆಯಲ್ಲಿ ಓಡಿ  ಹೋಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ :  ಶ್ರೀ ಶರಣಪ್ಪ ತಂದೆ ಭೀಮಪ್ಪ ಮಾದರ ಸಾ|| ಕರನಾಳ ತಾ|| ಸಿಂದಗಿ ಹಾ|||| ಏವೂರ ತಾ|| ಸುರಪೂರ ರವರ ಅಣ್ಣತಮ್ಮಕಿಯ ಸಂಗಪ್ಪ ಮಾದರ ಮತ್ತು ಅವನ ಮಗ ಬೀರಪ್ಪ ಮಾದರ ರವರೊಂದಿಗೆ ಆಸ್ತಿ ವಿಷಯಕ್ಕೆ ಮತ್ತು ನಾನು ಸಂಗಪ್ಪನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತೇನೆ ಅಂತಾ ತಿಳಿದು ನನ್ನೊಂದಿಗೆ ತಕರಾರು ಮಾಡಿಕೊಂಡು ವೈಶಮ್ಯ ಬೆಳೆಸುತ್ತಾ ಬಂದಿರುತ್ತಾರೆ, ಆದ್ದರಿಂದ ನಾನು ಈಗ ಸುಮಾರು ವರ್ಷಗಳಿಂದ ನನ್ನ ಹೆಂಡತಿವೂರಾದ ಸುರಪೂರ ತಾಲೂಕಿನ ಏವೂರ ಗ್ರಾಮದಲ್ಲೇ ವಾಸವಾಗಿರುತ್ತೇನೆ. ನಾವು 5 ಜನ ಅಣ್ಣತಮ್ಮಂದಿರರಿದ್ದು, ಅವರೆಲ್ಲರು ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ವಾವಸವಾಗಿರುತ್ತಾರೆ. ದಿನಾಂಕ 21-05-2018 ರಂದು ನಾನು ಮತ್ತು ನನ್ನ ಗೆಳೆಯ ಗೊಲ್ಲಾಳಪ್ಪ ತಂದೆ ಮಡಿವಾಳಪ್ಪ ಮಾದರ ರವರೊಂದಿಗೆ ನನ್ನ ಮೋಟರ ಸೈಕಲ್ ನಂ ಕೆ.-28/.ಕೆ-9583 ನೇದ್ದರ ಮೇಲೆ ಏವೂರ ಗ್ರಾಮದಿಂದ ರಾಂಪೂರ ಗ್ರಾಮಕ್ಕೆ ಹೋಗುತ್ತಿದ್ದೇ, ನಾನು 12;30 ಪಿ.ಎಂ ಸುಮಾರಿಗೆ ಮಾಗಣಗೇರಾ ಗ್ರಾಮ ಅಗಸಿ ಹತ್ತಿರ ಇದ್ದಾಗ ನಮ್ಮ ಅಣ್ಣತಮ್ಮಕಿಯ ಬೀರಪ್ಪ ತಂದೆ ಸಂಗಪ್ಪ ಮಾದರ ಮತ್ತು ಅವನೊಂದಿಗೆ ಶಿವಪ್ಪ ತಂದೆ ಮಹಾದೇವಪ್ಪ ಮಾದರ ಸಾ|| ಇಬ್ಬರು ಕರನಾಳ ಗ್ರಾಮ ರವರು ತಮ್ಮ ಮೋಟರ ಸೈಕಲ್ ನಂ ಕೆ.-28/.ಕೆ-2565 ನೇದ್ದರ ಮೇಲೆ ಬಂದು ಒಮ್ಮೇಲೆ ನಮ್ಮ ಮುಂದೆ ಬಂದು ನಮಗೆ ತಡೆದರು, ಆಗ ಬೀರಪ್ಪನು ತನ್ನೊಂದಿಗೆ ತಂದ ಕಬ್ಬಿಣದ ಬಾಚಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ರಂಡಿಮಗನೆ ಶರಣ್ಯಾ ನಿನ್ನಿಂದ ನಮ್ಮ ಸಂಸಾರ ಹಾಳಾಗ್ಯಾದ, ನಿನಗ ಬಹಳ ದಿನದಿಂದ ಕಾಯುತ್ತಿದ್ದೇ, ಇವತ್ತ ಸಿಕ್ಕಿದಿ ಮಗನಾ ನಿನಗ ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಬಾಚಿಯಿಂದ ನನ್ನ ಹೆಡಕಿಗೆ ಹೊಡೆದನು ಆಗ ನಾನು ನನ್ನ ಎಡಗೈ ಅಡ್ಡ ತಂದಿದ್ದಕ್ಕೆ ನನ್ನ ಎಡಗೈ ಹಸ್ತಕ್ಕೆ ಜೋರಾಗಿ ಏಟು ಬಿದ್ದು ರಕ್ತಗಾಯವಾಯಿತು, ಶಿವಪ್ಪ ಇವನು ಸುಳಿಮಗನಿಗಿ ಬಿಡಬ್ಯಾಡ ಹೊಡೆದು ಖಲಾಸೆ ಮಾಡು ಅಂತಾ ಅಂದು ಕಾಲಿನಿಂದ ನನಗೆ ಒದ್ದನು, ಅಷ್ಟರಲ್ಲಿ ನನ್ನೊಂದಿಗೆ ಇದ್ದ ಗೊಲ್ಲಾಳಪ್ಪ ತಂದೆ ಮಡಿವಾಳಪ್ಪ ಮಾದರ ಮತ್ತು ಮಾಗಣಗೇರಾ ಗ್ರಾಮದ ಮೌನೇಶ ತಂದೆ ಶಂಕ್ರೆಪ್ಪ ದೊಡಮನಿ ಎಂಬುವರು ಹಾಗು ಇತರರು ಬಂದು ಬಡಿಸಿಕೊಂಡರು, ಇಲ್ಲದಿದ್ದರೆ ನನಗೆ ಕೋಲೆ ಮಾಡುತ್ತಿದ್ದರು. ನಂತರ ಸ್ಥಳದಲ್ಲಿ ಬಹಳಷ್ಟು ಜನ ಬರುತ್ತಿದ್ದನ್ನು ನೋಡಿ ಬೀರಪ್ಪ ಈತನು ತನ್ನ ಕೈಯಲ್ಲಿದ್ದ ಬಾಚಿಯನ್ನು ಸ್ಥಳದಲ್ಲೆ ಬಿಸಾಕಿ ತನ್ನ ಮೋಟರ ಸೈಕಲ್ ಮೇಲೆ ಇಬ್ಬರು ಕುಳಿತು ಇವತ್ತ ಉಳದಿದಿ ಮಗನಾ ಇನ್ನೊಮ್ಮೆ ಸಿಕ್ಕರ ಖಲಾಸೆ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.