POLICE BHAVAN KALABURAGI

POLICE BHAVAN KALABURAGI

08 January 2018

KALABURAGI DISTRICT CRIME REPORTS.

ಗ್ರಾಮೀಣ ಠಾಣೆ ಕಲಬುರಗಿ  : ದಿನಾಂಕ:- 08/01/2017 ರಂದು ಬೆಳಿಗ್ಗೆ 07:30 ಗಂಟಗೆ ಫಿರ್ಯಾದಿ ಶ್ರೀ ದಿಗಂಬರ ತಂದೆ ಹರಿಶ್ಚಂದ್ರ ಸಿಂದೇ ಸಾ:ಗೌರಿ ಶಂಕರ ಸೋಸೈಟಿ ಬಾಬಳಗಾಂವ ಆರ್.ಟಿ.ಓ ಆಫೀಸ ಹತ್ತಿರ ಲಾತೂರ ಮಹಾರಾಷ್ಟ್ರ ಇತನು ಪೊಲೀಸ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕಂಪ್ಯೂಟರನಲ್ಲಿ ಬೆರಳಚ್ಚು ಮಾಡಿಸಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ ನನಗೆ ಮಾಯಾ ಎಂಬ ಹೆಂಡತಿ ಇದ್ದು ಅವಳ ಹೊಟ್ಟೆಯಿಂದ ಅಶ್ವಿನಿ ಎಂಬ ಹೆಣ್ಣು ಮಗಳಿದ್ದು ಅವಳು ಅಂದಾಜು 20 ವರ್ಷಗಳ ಹಿಂದೆ ತೀರಿಕೊಂಡಿದ್ದು ತದನಂತರ  2-3 ವರ್ಷಗಳ ಮೇಲೆ ನಾನು ನಮ್ಮ ಜಾತಿಯವರೆ ಆದ ಸತ್ಯಭಾಮಾ ಎಂಬವಳೊಂದಿಗೆ ಪ್ರೀತಿಸಿದ್ದು ಅವಳಿಗೆ ಮೊದಲು ರಾಮ ಎಂಬುವನೊಂದಿಗೆ ಲಗ್ನವಾಗಿ ಶರದ ಮತ್ತು ಯುವರಾಜ ಎಂಬ ಎರಡು ಜನ ಗಂಡು ಮಕ್ಕಳಿದ್ದು ಅವಳು ಗಂಡನಿಗೆ ಬಿಟ್ಟು ನನ್ನೊಂದಿಗೆ ಈ ಮಕ್ಕಳೊಂದಿಗೆ ಉಳಿದುಕೊಂಡಿದ್ದು ಅಂದಿನಿಂದ ನಾವು ಗಂಡ ಹೆಂಡತಿಯರಾಗಿ ಮತ್ತು ಈ ಮಕ್ಕಳನ್ನು ಕೂಡಾ ನನ್ನ ಮಕ್ಕಳಂತೆ ನೋಡಿಕೊಂಡು ಬರುತ್ತಿರುತ್ತೇನೆ. ಲಾತೂರಿನ ಟಿ.ಎಂ.ಸಿ ಟ್ರಾನ್ಸಪೊರ್ಟದ ಲಾರಿ ನಂ MH-24 AB-9263 ನೆದ್ದರ ಮೇಲೆ ಡೈವರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:- 07/01/2018 ರಂದು  ಮಹಾರಾಷ್ಟ್ರದ ನಗರದ ಜಿಲ್ಲೆಯಲ್ಲಿ ಈ ಲಾರಿಯಲ್ಲಿದ್ದ ಸಿಮೆಂಟ ಲೋಡನ್ನು ಖಾಲಿ ಮಾಡಿ ಅಲ್ಲಿಂದ ಮದ್ಯಾಹ್ನದ ನಂತರ ನಾನು ಮತ್ತು ನನ್ನ ಸಾಕು ಮಗ ಯುವರಾಜ ವಯ:20 ವರ್ಷ ಇಬ್ಬರು ಅಲ್ಲಿಂದ ಬಿಟ್ಟು ಚಿತ್ತಾಪೂರದ ಸಿಮೆಂಟ ಕಾರ್ಖಾನೆಗೆ ಬರುವ ಕುರಿತು ಹೊರಟಿದ್ದು ಮಗ ಯುವರಾಜ ಇತನು ಲಾರಿಯನ್ನು ನಡೆಸಿಕೊಂಡು ಬರುತ್ತಿದ್ದು ಇಂದು ದಿನಾಂಕ:- 08/01/2018 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಕಲಬುರಗಿ-ಆಳಂದ ರೋಡಿನ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಬಂದಾಗ ಮಗನು ನನಗೆ ಎಬ್ಬಿಸಿ ಲಾರಿಯನ್ನು ನನಗೆ ನಡೆಸುವಂತೆ ಹೇಳಿದ್ದು ನಾನು ಲಾರಿಯನ್ನು ಟೋಲ ನಾಕಾ ಪಾಸ್ ಮಾಡಿ ಸ್ವಲ್ಪ ಅಂತರದಲ್ಲಿ 04:15 ಗಂಟೆ ಸುಮಾರಿಗೆ ಸಂಡಾಸ ಬರುತ್ತಿರುವುದ್ದರಿಂದ್ದ ರೋಡಿನ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ನಾನು ಸಂಡಾಸಕ್ಕೆ ರೋಡಿನ ಬದಿಯಲ್ಲಿಯೇ ಕುಳಿತುಕೊಳ್ಳುವಾಗ ಮಗನು ಲಾರಿಯಲ್ಲಿಯೇ ಮಲಗಿಕೊಂಡಿದ್ದನು. ಅಷ್ಟೋತ್ತಿಗೆ ಲಾರಿಯ ಹಿಂದುಗಡೆಯಿಂದ ಇಬ್ಬರು 30-35 ವರ್ಷದ ವಯಸ್ಸಿನ ಗಂಡು ಮಕ್ಕಳು ಬಂದವರೇ ನನಗೆ ಒಮ್ಮಲೇ ಮುಖಕ್ಕೆ ಒತ್ತಿ ಹಿಡಿದು ರೋಡಿನ ತಗ್ಗಿನಲ್ಲಿ ಕರೆದುಕೊಂಡು ಹೋಗುವಾಗ ನಾನು ಅದರಿಂದ ಭಯಗೊಂಡು ಚೀರಾಡಿದಾಗ ಈ ಶಬ್ದವನ್ನು ನನ್ನ ಮಗ ಕೇಳಿ ಲಾರಿಯಿಂದ ಇಳಿದು ನಮ್ಮ ಹತ್ತಿರ ಬಂದವನೇ ಹಾಗೆಯೇ ನಾನು ಚೀರಾಡುವಾಗ ಅವರಿಗೆ ಮಗ ಬೀಡುವಂತೆ ಒಂದು ಏಟು ಅವರಲ್ಲಿ ಒಬ್ಬನ ಮುಖಕ್ಕೆ ಹೊಡೆದಿದ್ದರಿಂದ್ದ ಅವರು ಒಮ್ಮಲೇ ನನಗೆ ಮತ್ತು ಮಗನಿಗೆ ನೂಕಿಸಿಕೊಟ್ಟಂತೆ ಮಾಡಿ ಒಬ್ಬನು ತನ್ನಲ್ಲಿರುವ ಹರಿತವಾದ ಚಾಕುವಿನಿಂದ ಮಗನ ಕುತ್ತಿಗೆಯ ಬಲಬದಿಗೆ ಜೋರಾಗಿ ಹೊಡೆದಿದ್ದರಿಂದ್ದ ಮಗನು ಚೀರಾಡುತ್ತಾ ನೆಲಕ್ಕೆ ಬಿದ್ದನು ನೋಡಲಾಗಿ ಭಾರಿ ಪ್ರಮಾಣದ ರಕ್ತಗಾಯವಾಗಿ ಕಾಲು ತಿಕ್ಕುತ್ತಿದ್ದಾಗ ಅವರಿಬ್ಬರು ಅಲ್ಲಿಂದ ಓಡಿ ಹೋದರು ಇದರಿಂದ್ದ ನಾನು ಚೀರಾಡುತ್ತಾ ಟೋಲ ನಾಕಾದ ಕಡೆಗೆ ಓಡುತ್ತಾ ಹೋಗಿ ಟೋಲ ನಾಕಾದ ಮಾನ್ಯೇಜರ್ ಹಾಗು ಇನ್ನು ಇಬ್ಬರನ್ನು ಕರೆದುಕೊಂಡು ಬರುವಷ್ಟ್ರರಲ್ಲಿ ಮಗನು ಭಾರಿ ರಕ್ತಸ್ರಾವವಾಗಿ ಕೊಲೆ ಆಗಿ ಬಿದ್ದಿದ್ದನು.ಈ ಘಟನೆಯು 04:15 ಎ.ಎಂದಿಂದ 04:20 ಎ.ಎಂದ ಸುಮಾರಿಗೆ ಸಂಭವಿಸಿರುತ್ತದೆ. ಅವರನ್ನು ಮತ್ತೆ ನೋಡಿದಲ್ಲಿ ಗುರ್ತಿಸುತ್ತೇನೆ.  ಕಾರಣ ಯಾರೋ ಇಬ್ಬರು ಗಂಡು ಮನುಷ್ಯರು ಅಂದಾಜು 30-35 ವರ್ಷ ವಯಸ್ಸಿನವರು ನನ್ನ ಹತ್ತಿರ ಬಂದು ಒತ್ತಿ ಹಿಡಿದುಕೊಂಡು ಜಗ್ಗಿಕೊಂಡು ಹೋಗುವಾಗ ಮಗನು ಬೀಡಿಸಲು ಬಂದಾಗ ಹರಿತವಾದ ಚಾಕುವಿನಿಂದ ಯಾವುದೋ ಬಲವಾದ ಉದ್ದೇಶಕ್ಕಾಗಿ ಮಗನ ಬಲಭಾಗದ ಕುತ್ತಿಗಿಗೆ ಚುಚ್ಚಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಪರಾರಿ ಆಗಿದ್ದು ಅವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ವಗೈರೇ ಫಿರ್ಯಾದಿ ಹೇಳಿಕೆ ಸಾರಾಂಶದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

07 January 2018

KALABURAGI DISTRICT CRIME REPORTS.

UÁæ«ÄÃt oÁuÉ : ದಿನಾಂಕ 06/01/2018 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ  ನಿನ್ನೆ ರಾತ್ರಿ ನನಗೆ ಹೊಡೆ ಬಡೆ ಮಾಡಿದ ವಿಷಯ ನನ್ನ ತಂದೆ, ತಾಯಿ ಅಣ್ಣಂದಿರರಿಗೆ ಪೋನ ಮಾಡಿ ತಿಳಿಸಿದಾಗ, ಇಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ಅಣ್ಣ ಹಬೀಬ, ಮಹೆಬೂಬ, ಅವರ ಗೆಳೆಯ ನವೀದ ತಂದೆ ಸಾಲಾರ ಪಟೇಲ ಇವರೊಂದಿಗೆ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಯಾಕೇ ನಮ್ಮ ತಂಗಿ ವರದಕ್ಷಿಣೆ ರೂಪದಲ್ಲಿ ಹಣ ತೆಗೆದುಕೊಂಡು ಬಾ ಅಂತಾ ಪದೇ, ಪದೇ ಯಾಕೇ ಹೊಡೆಯುತ್ತೀದ್ದಿ  ಅಂತಾ ಕೇಳಲು ಆಗ ನನ್ನ ಗಂಡ ಸಿಟ್ಟಿಗೆ ಬಂದು ನನಗೆ ಹೊಡೆಯಲು ಮೈ ಮೇಲೆ ಬಂದಾಗ ಇದನ್ನು ನೋಡಿ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಇವರು ನನಗೆ ಹೊಡೆಯುವುದನ್ನು ತಡೆಯಲು ಬಂದಾಗ ಆಗ ನನ್ನ ಗಂಡ ವಾಜೀದ ಅಲಿ ಇತನು ಮನೆಯಲ್ಲಿದ್ದ ಯಾವುದೋ ಒಂದು ಹರಿತವಾದ ಕಬ್ಬಿಣದಿಂದ ನನ್ನ ಬಲಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದರಂತೆ ಮತ್ತು ತಮ್ಮ ಮಹೆಬೂಬನಿಗೂ ಕೂಡಾ ಕೈಯಲ್ಲಿದ್ದ ಕಬ್ಬಿಣದಿಂದ  ಎಡಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ನನ್ನ ಜೊತೆಯಲ್ಲಿ ಬಂದಿದ್ದ ಗೆಳೆಯ ನವೀದ ಇತನು ಮಧ್ಯೆ ಬಂದು ಜಗಳಾ ಬಿಡಿಸಿಕೊಂಡೆನು. ನಂತರ ನನಗೆ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಹಣ ತರದೇ ಇದ್ದರೆ ಮೈಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟು ಖಲಾಷ ಮಾಡುತ್ತೇನೆ ಎಂದು ಜೀವ ಭಯ ಹಾಕಿದನು. ಆಗ ನನ್ನ ಅಣ್ಣ ಹಬೀಬ, ಮತ್ತು ಮಹೆಬೂಬ ಇವರು ನನಗೆ ತವರು ಮನೆಗೆ ಕರೆದುಕೊಂಡು ಬಂದರು. ನಂತರ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ತೋರಿಸಿಕೊಂಡು ನಂತರ ಮನೆಗೆ ಬಂದರು. ಈ ವಿಷಯದ ಬಗ್ಗೆ ಮನೆಯಲ್ಲಿ ಚರ್ಚಿಸಿಕೊಂಡು ಸಂಜೆ ಸಮಯದಲ್ಲಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಫಿರ್ಯಾದು ಅರ್ಜಿ ಮೇಲಿಂದ ಠಾಣೆ ಗುನ್ನೆ ನಂ. ನಂ.08/2018 ಕಲಂ 498(ಎ),323,324, 504, 506 ಐಪಿಸಿ ಮತ್ತು ಕಲಂ 3 ಮತ್ತು 4 ಡಿ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
gÁWÀªÉÃAzÀæ £ÀUÀgÀ oÁuÉ : ದಿನಾಂಕ:06/01/2018 ರಂದು ರಾತ್ರಿ 8.45 ಪಿ.ಎಂಕ್ಕೆ ಪಿ.ಎಸ್‌‌. ಸಾಹೇಬರು 4 ಜನ ಆರೋಪಿತರೊಂದಿಗೆ ಜ್ಞಾಪನ ಪತ್ರ ಹಾಜರ ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ 06.01.2018 ರಂದು ಸಾಯಂಕಾಲ 5 ಗಂಟೆಯಿಂದ ನಾನು ನಮ್ಮ ಠಾಣೆಯ ಶ್ರೀ ಶಿವಲಿಂಗಪ್ಪ ಹೆಚ್.ಸಿ 06, ಶ್ರೀ ಚನ್ನಮಲ್ಲಪ್ಪ 190, ಶ್ರೀ ಬಂದೇನವಾಜ ಹೆಚ್.ಸಿ 546 ಮತ್ತು ಶ್ರೀ ಶಿವಲಿಂಗ ಪಿಸಿ 1241 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಸಾಯಂಕಾಲ 6:30 ಗಂಟೆಗೆ ಡಬರಗಾಬಾದ ಕ್ರಾಸ ಹತ್ತಿರ ಇರುವ ದೇವರ ದಾಸಿಮಯ್ಯ ಬಡಾವಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ರಿಂಗ್ ರೋಡ ಪಕ್ಕದಲ್ಲಿರುವ ಚೊರ ಗುಂಬಜ್ ಹತ್ತಿರ ತಗ್ಗಿನಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡಿದ್ದು. ಅದಕ್ಕೆ ಉಭಯರು ಒಪ್ಪಿಕೊಂಡಿದ್ದು ನಂತರ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಚೋರ ಗುಬಂಜ ಪಕ್ಕದಲ್ಲಿ ಇರುವ ತಗ್ಗಿನ ಹತ್ತಿರ ಹೊಗುತ್ತಿದ್ದಂತೆ ತಗ್ಗಿನಲ್ಲಿ ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ನಂತರ ನಾವು ತಗ್ಗಿನ ಹತ್ತಿರ ಹೋಗಿ ನೋಡಲು ತಗ್ಗಿನಲ್ಲಿ 6 ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಕತ್ತಲಲ್ಲಿ ಸದರಿಯವರ ಮುಖ ಚೆಹರೆ ಹೊತ್ತಾಗದಕ್ಕೆ ನಾನು ಮತ್ತು ಸಿಬ್ಬಂದಿಯವರು ನಮ್ಮ ಹತ್ತಿರ ಇದ್ದ ಬ್ಯಾಟರಿ ಬೇಳಕು ತಗ್ಗಿನಲ್ಲಿ ಕುಳಿತವರ ಮೇಲೆ ಹಾಕಿದ್ದು ಅವರ ಮೇಲೆ ಬೇಳಕು ಬಿದ್ದಾಗ ಸದರಿಯವರು ಗಾಬರಿಗೊಂಡು ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವರ ಮೇಲೆ ದಾಳಿ ಮಾಡಿ ಅವರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು ಇನ್ನೂ ಇಬ್ಬರು ಕತ್ತಲಲ್ಲಿ ಓಡಿ ಹೋಗಿದ್ದು ಹಿಡಿದುಕೊಂಡವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಹಣಮಂತ ತಂದೆ ರಾಮಲು ಮೇಕ್ಯಾನಿಕ ವಯ: 26 ವರ್ಷ ಉ: ಟೈರ ಪಂಚರ ಅಂಗಡಿ ಜಾತಿ: ಕಬ್ಬಲಿಗೇರ ಸಾ: ದೊಡ್ಡ ಅಗಸಿ ಕೊಳಿವಾಡ ಸೇಡಂ ಅಂತ ಹೇಳಿದ್ದು. ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬತಾಯಿ ನಮೂನೆಯ ಚಾಕು ದೊರೆತಿದ್ದು. 2. ಪಾಶ್ಯಾ @ ಅಬ್ದಲು ಪಾಶ್ಯಾ  ತಂದೆ ಮಹೀಬೂಬಸಾಬ ಶೇಖ ವಯ: 26 ವರ್ಷ ಉ: ಚಾಲಕ ಜಾತಿ: ಮುಸ್ಲಿಂ ಸಾ: ಕುಕುಂದಾ ತಾ: ಸೇಡಂ ಜಿ: ಕಲಬುರಗಿ ಇತನ ಹತ್ತಿರ ಸುಮಾರ 20 ಫೀಟ್ ಪ್ಲಾಸ್ಟಿಕ ಹಗ್ಗ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೊರೆತಿದ್ದು 3. ಪ್ರಕಾಶ ತಂದೆ ಸುಭಾಷ ಪವಾರ ವಯ: 23 ವರ್ಷ ಉ: ಚಾಲಕ ಜಾತಿ: ಮರಾಠಾ(ಕಂಬಾರ) ಸಾ: ಕುಕುಂದಾ ತಾ:ಸೇಡಂ ಹಾ:ವ: ಈಶ್ವರ ನಗರ ಗಂಜ ಏರಿಯಾ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಅಂದಾಜ 200 ಗ್ರಾಂ ಕಾರದ ಪೂಡಿ ದೊರೆತಿದ್ದು ಮತ್ತು 4. ಶರಣು @ ಶರಣಪ್ಪ ತಂದೆ ರೇವಣಸಿದ್ದಪ್ಪ ಮಿನ ಹಾಬಾಳ ವಯ: 23 ವರ್ಷ ಉ: ಒಕ್ಕಲತನ ಜಾತಿ: ಕಬ್ಬಲಿಗೇರ ಸಾ: ಅಗ್ಗಿ ಬಸವೇಶ್ವರ ಕಾಲೋನಿ ಚಿಂಚೋಳ್ಳಿ ರೋಡ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಕಬ್ಬಿಣದ ತಲವಾರ ದೊರೆತಿದ್ದು ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ರಾತ್ರಿ ವೇಳೆಯಲ್ಲಿ ರಿಂಗ್ ರೋಡ ಮೇಲೆ ಸಂಚರಿಸುವ ವಾಹನ ಸವಾರರಿಗೆ ಹೆದರಿಸಿ ಅವರಿಂದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳು ಸಂಬಂದ ಹೊಂಚ್ಚುಹಾಕಿ ಕುಳಿತಿರುವ ಬಗ್ಗೆ ಮತ್ತು ಓಡಿ ಹೊದವರ ಹೆಸರು ತಮಗೆ ಗೊತ್ತಿರುವದಿಲ್ಲ ಅಂತ ತಮ್ಮ ಸ್ವ-ಖುಷಿ ಹೇಳಿಕೆ ನೀಡಿದ್ದು ಇರುತ್ತದೆ ಸದರಿಯವರ ಹತ್ತಿರ ಇದ್ದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪಂಚರ ಸಹಿ ಮಾಡಿದ ಚೀಟಿಯನ್ನು ಅಂಟಿಸಿ ನನ್ನ ತಾಬಾಕ್ಕೆ ತೆಗದುಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡು ಸದರಿ ನಾಲ್ಕು ಜನ ಆರೋಪಿತರಿಗೆ ದಸ್ತಗಿರ ಮಾಡಿಕೊಂಡು ರಾತ್ರಿ 8:45 ಗಂಟೆಗೆ ಠಾಣೆಗೆ ಹಾಜರಾಗಿದ್ದು ಸದರಿಯವರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ 06-01-2018 ರಂದು 8:15 ಪಿ ಎಮ್ ಕ್ಕೆ ಹೋನ್ನಪ್ಪ ತಂದೆ ಧರೇಪ್ಪ ಚಾಂದಕವಟೆ ಸಾ|| ಭೋಸಗಾ ಹಾ|| || ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನಿಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಒಕ್ಕಲುತನದ ಕೆಲಸ ಮಾಡಿಕೊಂಡು ಅಫಜಲಪೂರದ ಹೂಗಾರ ಪ್ಲಾಟನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ 01-01-2018 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ವಾಕಿಂಗ್ ಕುರಿತು ಅಫಜಲಪೂರ ಪಟ್ಟಣದ ನ್ಯಾಶನಲ್ ಪಂಕ್ಷನ್ ಹಾಲ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ, 1) ಹಣಮಂತ ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ ಜಮಾದಾರ ಸಾ|| ಶಿವಪೂರ ಮೂರು ಜನರು ಕೂಡಿ ನನ್ನ ಹತ್ತಿರ ಬಂದ ನನ್ನ ಮೈ ಮೇಲೆ ಏರಿ ಬಂದರು, ಆಗ ನಾನು ಸದರಿಯವರಿಗೆ ದಾರು ಕುಡಿದು ಈ ರೀತಿ ಮೈ ಮೇಲೆ ಬಿದ್ದರೆ ಹೇಗೆ ನೋಡಿಕೊಂಡು ಹೋಗಿ ಅಂತಾ ಹೇಳಿದೆನು, ಆಗ ಸದರಿ ಮೂರು ಜನರು ಬೋಸಡಿ ಮಗನೆ ನಮಗೆ ನೋಡಿಕೊಂಡು ಹೋಗು ಅಂತಾ ಹೇಳ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದರು, ಆಗ ನಾನು ಸದರಿಯವರಿಗೆ ವಿನಾಕಾರಣ ಯಾಕೆ ಬೈತಿರಿ ಅಂತಾ ಕೇಳಿದಾಗ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದರು, ನಂತರ ಶಿವಪ್ಪ ಮತ್ತು ರಾಮಣ್ಣ ಇಬ್ಬರು ಹಿಡಿದುಕೊಂಡಾಗ ಹಣಮಂತ ಜಮಾದಾರ ಈತನು ಚಪ್ಪಲಿಯಿಂದ ನನ್ನ ತಲೆಯ ಮೇಲೆ ಹೊಡೆದನು, ಮೂರು ಜನರು ಕೂಡಿ ನನಗೆ ಬೈಯುವುದು ಹೊಡೆಯುವುದು ಮಾಡುತ್ತಿದ್ದಾಗ, ಅದೆ ಸಮಯಕ್ಕೆ ಬಂದ ಸಂಗಪ್ಪ ಅಂಜುಟಗಿ ಸಾ|| ಶಿರವಾಳ ಮತ್ತು ರಾಜು ಸಾಲುಟಗಿ ಸಾ|| ಕುರುಬತಳ್ಳಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ನನಗೆ ರಂಡಿ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಮುಂದೆ ನೋಡಿಕೊಳ್ಳುತ್ತೇವೆ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದರಿಂದ ನನ್ನ ಏಡ ಕಿವಿಯ ಹತ್ತಿರ, ತಲೆಯ ಮೇಲೆ, ಹಾಗೂ ಕುತ್ತಿಗೆಗೆ ಗುಪ್ತಗಾಯಗಳು ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ವಿಷಯದ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಈಗ ತಡವಾಗಿ ದೂರು ನೀಡಲು ಬಂದಿರುತ್ತೇನೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದು ಗುಪ್ತಗಾಯ ಮತ್ತು ತರಚಿದ ಗಾಯ ಪಡಿಸಿ ಜೀವ ಬೇದರಿಕೆ ಹಾಕಿದ 1) ಹಣಮಂತ ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ ಜಮಾದಾರ ಸಾ|| ಶಿವಪೂರ ಮೂರು ಜನರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಮತ್ತು ನನ್ನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಎಂದು ಹೇಳಿಕೆ ನೀಡಿದ್ದರ ಮೇರೆಗೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ.


02 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸುಧಾರಿತ ಗಸ್ತು ಸಂ 19 ಬಡದಾಳ ಗ್ರಾಮದ ಬೀಟ್ ಸಿಬ್ಬಂದಿಯಾದ ಭಾಗಣ್ಣ ಸಿಪಿಸಿ-167 ರವರು ಬಡದಾಳ ಗ್ರಾಮದ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಊ. ಅಫಜಲಪೂರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಡದಾಳ ಗ್ರಾಮದ ದರ್ಗಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಮಹಾದೇವಪ್ಪ ಶಿರೂರ ಸಾ||ಬಡದಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2050/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 01-01-2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರದಲ್ಲಿ ಇರುವ ಪಾನ ಶ್ಯಾಪ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಬಾಟಲಿಗಳು ಮತ್ತು ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ರಾಮಚಂದ್ರಪ್ಪ ಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 525/-ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 1) 180 ಎಮ್.ಎಲ್. 4 ಇಂಪಿರಿಯಲ್ ಬ್ಲೂ ವಿಸ್ಕಿ ಬಾಟಲಗಳು ಒಂದು ಬಾಟಲಕ್ಕೆ 148 ರೂ 26 ಪೈಸೆ ಒಟ್ಟು 593 ರೂ 04 ಪೈಸೆ 2) 180 ಎಮ್.ಎಲ್. 10 ಆಪೀಸರ್ ಚೌಯಿಸ್ ವಿಸ್ಕಿ ಒಂದು ಬಾಟಲಕ್ಕೆ 82 ರೂ 85 ಪೈಸೆ ಒಟ್ಟು 828 ರೂ 50 ಪೈಸೆ 3) ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 50 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1406. 50 ಪೈಸೆ. ಹೀಗೆ ಒಟ್ಟು 2828 ರೂ 04 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 525/-ರೂ ಇದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸಾಯಂಕಾಲ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಸಾ|| ಮೈಂದರ್ಗಿ ಇವರು ನನಗೆ ಪೋನ ಮಾಡಿ ತಮ್ಮ ಮಗಳಾದ ಮಹಾಲಕ್ಷ್ಮೀ ಇವಳಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಅವಳನ್ನು ಅವಳ ಗಂಡನಾದ ಅಮರ ಮೇತ್ರೆ ಈತನು ಕಲಬುರಗಿಯ ದನ್ವಂತ್ರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೆನೆ ನೀವು ಬನ್ನಿ ಅಂತಾ ನನಗೆ ಪೋನ್ ಮಾಡಿದ್ದಾನೆ, ಈಗ ನಾನು ಮೈಂದರ್ಗಿಯಿಂದ ಮೋಟರ ಸೈಕಲ ಮೇಲೆ ಕಲಬುರಗಿಗೆ ಹೊರಟಿದ್ದೆನೆ, ನೀನು ಕಲಬುರಗಿಗೆ ಬಾ ಅಂತಾ ತಿಳಿಸಿದನು. ಆಗ ನಾನು ಈಗ ನನಗೆ ಕೆಲಸ ಇದೆ ಬೆಳಿಗ್ಗೆ ಬರುತ್ತೇನೆ ಅಂತಾ ತಿಳಿಸಿರುತ್ತೇನೆ, ಸಂಜೆ 6:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಸದರಿ ನನ್ನ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಈತನ ಮೋಬೈಲನಿಂದ ಯಾರೊ ಅಪರಿಚಿತರೊಬ್ಬರು ನನ್ನ ಮೋಬೈಲಿಗೆ ಕರೆ ಮಾಡಿ, ನಾವು ಮಾತಾಡುತ್ತಿರುವ ಮೋಬೈಲ ಫೋನಿನವರು ದುಧನಿ ಕಡೆಯಿಂದ ಸಾಯಂಕಾಲ 06:30 ಗಂಟೆಯ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾಗ ಅಫಜಲಪೂರ ದುಧನಿ ರಸ್ತೆಗೆ ಇರುವ ಮಾದಾಬಾಳ ತಾಂಡಾದ ಕ್ಯಾನಾಲಿನ ಬ್ರೀಜ್ ಹತ್ತಿರ, ಕ್ಯಾನಾಲ ರೋಡಿನ ಕಡೆಯಿಂದ ಒಂದು ಜೆ.ಸಿ.ಬಿ ಚಾಲಕ ಜೆಸಿಬಿಯನ್ನು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಮೇನ್ ರೋಡಿನ ಮೇಲೆ ಬರುತ್ತಿದ್ದ ಮೋಟರ ಸೈಕಲ ಮೇಲೆ ಬರುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದರಿಂದ, ಸದರಿ ಮೋಟರ ಸೈಕಲ ಸವಾರನು ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಸದರಿ ಮೃತ ಪಟ್ಟ ವ್ಯೆಕ್ತಿಯ ಗುರುತು ಗೊತ್ತಾಗದ ಕಾರಣ ಸದರಿ ಮೃತನ ಜೇಬಿನಿಂದ ಕೆಳಗಡೆ ಬಿದ್ದ ಮೋಬೈಲನ್ನು ತಗೆದು ನೋಡಲಾಗಿ ಮೃತನು ಕೋನೆಯದಾಗಿ ನಿಮ್ಮ ನಂಬರಗೆ ಪೋನ್ ಮಾಡಿದ್ದರಿಂದ ವಿಷಯ ತಿಳಿಸಲು ಪೋನ ಮಾಡಿರುತ್ತೇವೆ ಎಂದು ತಿಳಿಸಿದರು. ಆಗ ನಾನು ಸದರಿ ನನಗೆ ಪೋನ್ ಮಾಡಿದವರಗೆ ಸದರಿ ವ್ಯೆಕ್ತಿ ನಮ್ಮ ಮೌಸಿಯ ಮಗನಾದ ಕಲ್ಯಾಣಿ ಇರುತ್ತಾನೆ ನಾವು ಈಗಲೆ ಬರುತ್ತೇವೆ, ನಾವು ಬರುವವರೆಗೆ ಶವವನ್ನು ತಗೆಯಬೇಡಿ ಅಲ್ಲೆ ಬಿಡಿ ಎಂದು ತಿಳಿಸಿರುತ್ತೇನೆ. ನಂತರ ಸದರಿ ವಿಷಯವನ್ನು ಮೈಂದರ್ಗಿಯ ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ಎಕ್ಸಿಡೆಂಟ್ ಆದ ಜಾಗಕ್ಕೆ ಬರಲು ತಿಳಿಸಿರುತ್ತೇನೆ. ರಾತ್ರಿ 8:00 ಗಂಟೆಗೆ ಸುಮಾರಿಗೆ ಎಕ್ಸಿಡೆಂಟ ಆದ ಜಾಗಕ್ಕೆ ಬಂದು ನೋಡಲಾಗಿ, ನಮ್ಮ ಮೌಸಿಯ ಮಗನಾದ ಕಲ್ಯಾಣಿಯ ಶವ ಇದ್ದು, ಅವನ ಮುಖಕ್ಕೆ ಬಲ ಕಪಾಳಿನಿಂದ ಗದ್ದದ ಒರೆಗೆ ಭಾರಿ ರಕ್ತಗಾಯ ಹಾಗೂ  ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ನಮ್ಮ ಅಣ್ಣನು ಚಲಾಯಿಸಿಕೊಂಡು ಬರುತ್ತಿದ್ದ ಹಿರೋ ಹೊಂಡಾ ಸಿಡಿ ಡಿಲೆಕ್ಸ ಮೋಟರ ಸೈಕಲ ನಂ ಕೆಎ-32 ಟಿಆರ್-9739 ಇದ್ದು, ಡಿಕ್ಕಿ ಪಡಿಸಿದ ಜೆ.ಸಿ,ಬಿ ಸ್ಥಳದಲ್ಲೆ ಇದ್ದು, ಅದರ ಚೆಸ್ಸಿ ನಂ 5602200 ಇಂಜೆನ್ ನಂ 336/40106/0/195683 ಅಂತಾ ಇರುತ್ತದೆ. ಸದರಿ ಡಿಕ್ಕಿಪಡಿಸಿದ ಜೆ.ಸಿ.ಬಿ ಚಾಲಕನ ಬಗ್ಗೆ ವಿಚಾರಿಸಲಾಗಿ, ಜೆ.ಸಿ.ಬಿ ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಅಂತಾ ಶ್ರೀ ರವಿಕುಮಾರ ತಂದೆ ಶರಣಬಸಪ್ಪ ಯಳಸಂಗಿ ಸಾ|| ನಿಂಬರ್ಗಾ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.